ಶ್ರೀರಸ್ತು ಶುಭಮಸ್ತು ಮತ್ತು ಅಮೃತಧಾರೆ ಸೀರಿಯಲ್​ಗಳನ್ನು ಹೋಲಿಕೆ ಮಾಡಿ ಕೆಲವೊಂದು ವಾದ-ಪ್ರತಿವಾದಗಳು ಸೋಷಿಯಲ್​ ಮೀಡಿಯಾದಲ್ಲಿ ನಡೆಯುತ್ತಿದೆ.  ಏನದು? 

ಅಮೃತಧಾರೆ ಸೀರಿಯಲ್​ನಲ್ಲಿ ಇದೀಗ ಮಾಧವ್​ ಮತ್ತು ಗೌತಮ್​ ಅವರ ಮೊದಲ ರಾತ್ರಿಯ ಸಂಭ್ರಮ ನಡೆಯುತ್ತಿದೆ. ಸೀರಿಯಲ್​ ಪ್ರೇಮಿಗಳು ಬಹು ನಿರೀಕ್ಷೆಯಿಂದ ಇದ್ದ ಈ ದಿನ ಕೊನೆಗೂ ಬಂದಿದೆ. ಇವರಿಬ್ಬರನ್ನೂ ದೂರ ದೂರ ಮಾಡಲು, ಜೊತೆಯಾಗಿ ಇರಲು ಬಿಡದಂತೆ ಮಾಡಲು ಅತ್ತೆ ಶಕುಂತಲಾ ದೇವಿ ಮಾಡಿರುವ ಸರ್ಕಸ್​ಗಳೆಲ್ಲಾವೂ ವ್ಯರ್ಥವಾಗಿದೆ. ಕೊನೆಗೂ ಜೋಡಿ ಒಂದಾಗಿದೆ. ಈ ಸಮಯದಲ್ಲಿ, ಇವರಿಬ್ಬರ ಮಧುರ ಮಿಲನದ ಕುರಿತು ಕೆಲವು ಕಂತುಗಳಲ್ಲಿ ತೋರಿಸಲಾಗಿದೆ. ಬೆಡ್​ರೂಂ ದೃಶ್ಯಗಳು, ಫಸ್ಟ್​ನೈಟ್​ ಡೆಕೋರೇಷನ್​, ಇಬ್ಬರೂ ಕಣ್ಣಲ್ಲಿ ಕಣ್ಣಿಟ್ಟು ನೋಡುವುದು, ಆ ಮಧುರ ಮಾತುಗಳು, ಸಮೀಪ ಬರುವ ಚಿತ್ರಣ... ಹೀಗೆ ಮೊದಲ ಬಾರಿಯ ಮಿಲನದ ಸಂದರ್ಭದಲ್ಲಿ ಗಂಡು-ಹೆಣ್ಣುಗಳು ಪರಸ್ಪರ ಆಕರ್ಷಣೀಯವಾಗಿ ಮಾತನಾಡುವುದು ಎಲ್ಲವನ್ನೂ ಇಲ್ಲಿ ತೋರಿಸಲಾಗಿದೆ. ಅಶ್ಲೀಲತೆಯ ಸೋಕಿಲ್ಲದೇ ಅತಿ ಸುಂದರವಾಗಿ ಇಲ್ಲಿ ಸುಂದರವಾಗಿ ಈ ಚಿತ್ರಣವನ್ನು ಕಟ್ಟಿಕೊಡಲಾಗಿದೆ.

ಒಂದು ಸೀರಿಯಲ್​ನಲ್ಲಿ ಇಂಥ ದೃಶ್ಯವನ್ನು ತೋರಿಸುವುದು ಅನಿವಾರ್ಯ ಕೂಡ ಹೌದು. ಟಿಆರ್​ಪಿಗೋಸ್ಕರವಾಗಿಯಾದರೂ ಇದನ್ನು ತೋರಿಸಲೇಬೇಕು. ಇದನ್ನು ಜನರು ಎಷ್ಟರ ಮಟ್ಟಿಗೆ ಇಷ್ಟಪಟ್ಟುಕೊಂಡಿದ್ದಾರೆ ಎಂದರೆ, ಇವರ ಫಸ್ಟ್​ನೈಟ್​ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ದಾಖಲೆಯ ಪ್ರಮಾಣದಲ್ಲಿ ವೀಕ್ಷಣೆ ಕೂಡ ಆಗಿದೆ. ಹಾಗೆಂದು ಇಲ್ಲಿ ಅತಿಯಾಗಿ ಯಾವುದನ್ನೂ ತೋರಿಸಿಲ್ಲ ಎನ್ನುವುದು ಅಷ್ಟೇ ನಿಜ. ಆದರೆ ಇದೇ ವೇಳೆ, ಇಂಥದ್ದೆಲ್ಲಾ ಒಂದು ಸೀರಿಯಲ್​ನಲ್ಲಿ ಬೇಕಿತ್ತಾ ಎನ್ನುವ ವಾದವೂ ನಡೆಯುತ್ತಿದೆ. ಈ ಜೋಡಿಯ ಮಾತುಕತೆ ಹಾಸ್ಯಾಸ್ಪದ ಎನ್ನುವಂತಿದೆ ಎನ್ನುವ ಮಾತುಗಳೂ ಕೇಳಿ ಬರುತ್ತಿದ್ದು, ಶ್ರೀರಸ್ತು ಶುಭಮಸ್ತುವಿನ ಉದಾಹರಣೆಯನ್ನು ತೆಗೆದುಕೊಂಡು ಅಮೃತಧಾರೆ ಸೀರಿಯಲ್​ನ್ನು ಕಂಪೇರ್​ ಮಾಡಲಾಗುತ್ತಿದೆ.

ಆ ಕಣ್ಣೋಟಕ್ಕೆ ಕರಗಿಹೋದ ಫ್ಯಾನ್ಸ್​! ಸದ್ಯ ಫಸ್ಟ್​ನೈಟ್​ನಲ್ಲೂ ಕೋಟು ಧರಿಸಿಲ್ಲ ಅನ್ನೋದೇ ಸಮಾಧಾನ ಅಂತಿದ್ದಾರೆ!

 ಶ್ರೀರಸ್ತು ಶುಭಮಸ್ತುವಿನಲ್ಲಿ ತುಳಸಿ ಮತ್ತು ಮಾಧವ್​ ಪ್ರೀತಿ ಬಲು ಚೆನ್ನ. ಅಲ್ಲಿ ದೈಹಿಕ ಕಾಮನೆ ಇಲ್ಲ, ಲೈಂಗಿಕತೆಗೆ ಹಾತೊರೆಯುವುದಿಲ್ಲ. ಅಲ್ಲಿರುವುದು ಸ್ವಚ್ಛಂದ ಪ್ರೇಮ. ಅಂಥದ್ದೇ ಪ್ರೀತಿಯೇ ಚೆಂದ, ಆದರೆ ಅಮೃತಧಾರೆಯಲ್ಲಿ ಅತಿಯಾಗಿ ಲೈಂಗಿಕತೆಗೆ ಹಾತೊರೆಯುವುದನ್ನು ತೋರಿಸಲಾಗಿದೆ ಎನ್ನುವುದಾಗಿ ಕೆಲವರು ಹೇಳುತ್ತಿದ್ದಾರೆ. ಈ ಬಗ್ಗೆ ವಾದ-ಪ್ರತಿವಾದಗಳೂ ಶುರುವಾಗಿದೆ. 

ಆದರೆ ವಾಸ್ತವದಲ್ಲಿ ಶ್ರೀರಸ್ತು ಶುಭಮಸ್ತುವಿನಲ್ಲಿ ಮನಸು ಮನಸುಗಳ ಸಮ್ಮಿಲನ... ಎನ್ನುವ ಟೈಟಲ್​ ಸಾಂಗ್​ ಇದೆ. ಹೌದು. ಇಲ್ಲಿ ಇಬ್ಬರೂ ಅಜ್ಜ-ಅಜ್ಜಿಯಾಗುವ ಕಾಲ. ಇಬ್ಬರಿಗೂ ಬೇರೆ ಬೇರೆ ಮದುವೆಗಳಿಂದ ಹುಟ್ಟಿದ ಮಕ್ಕಳೂ ಮದುವೆಯಾಗಿದ್ದಾರೆ. ಹಾಗೆಂದು ವಯಸ್ಸಿನ ಮಾತ್ರಕ್ಕೆ ಲೈಂಗಿಕಾಸಕ್ತಿ ಬೇಡವೆಂದೇನಲ್ಲ. ಆದರೆ ಈ ವಯಸ್ಸಿನಲ್ಲಿ ಅವರಿಗೆ ಬೇಕಿರುವುದು ಲೈಂಗಿಕತೆಗಿಂತಲೂ ಮಿಗಿಲಾಗಿ ಪರಸ್ಪರ ಪ್ರೀತಿಸುವ ಒಂದು ಮನಸ್ಸು ಅಷ್ಟೇ. ಮನಸ್ಸಿನ ಸಮ್ಮಿಲನವೇ ಈ ವಯಸ್ಸಿನಲ್ಲಿ ಅವರಿಗೆ ಬೇಕಿರುವುದು. ದೈಹಿಕ ಕಾಮನೆಗಳು ಇಂಥ ವಯಸ್ಸಿನಲ್ಲಿ ಹುಟ್ಟುವುದು ಬಲು ಕಡಿಮೆ. ಅದೂ ಈ ರೀತಿಯ ಮದುವೆಗಳಲ್ಲಿ. ಆದರೆ ಅಮೃತಧಾರೆಯಲ್ಲಿ ಹಾಗಲ್ಲವಲ್ಲ. ಇಬ್ಬರಿಗೂ ಮದುವೆಯ ವಯಸ್ಸು ಮೀರಿದ ಮೇಲೆ ಮದುವೆಯಾಗಿದ್ದರೂ ದೈಹಿಕ ಕಾಮನೆಗಳನ್ನು ಮೀರಿದ ವಯಸ್ಸಲ್ಲವದು. ಇಬ್ಬರಿಗೂ ಮೊದಲ ಮದುವೆ. ಇಬ್ಬರಿಗೂ ಮಕ್ಕಳು, ಸಂಸಾರ ಎಲ್ಲವೂ ಆಗಬೇಕಿದೆ. ಇಂಥ ಸಂದರ್ಭದಲ್ಲಿ ಕೇವಲ ಮನಸ್ಸು ಮನಸ್ಸುಗಳ ಮಿಲನ ಆದ್ರೆ ಸಾಕಾಗಲ್ವಲ್ಲಾ ಎಂದು ಸೀರಿಯಲ್​ ಪ್ರಿಯರು ಸೋಷಿಯಲ್​ ಮೀಡಿಯಾಗಳಲ್ಲಿ ಚರ್ಚೆ ಶುರುವಿಟ್ಟುಕೊಂಡಿದ್ದಾರೆ. ಒಟ್ಟಿನಲ್ಲಿ ಸೀರಿಯಲ್​ಗಳಲ್ಲಿ ತೋರಿಸುವ ಕಥೆಗಳು ಹೀಗೆಲ್ಲಾ ಚರ್ಚೆಗೆ ಬರುತ್ತಿವೆ. 

ನಗುನಗುತ್ತಲೇ ಶಾಕ್​ ಕೊಟ್ಟ ಸೊಸೆ ಭೂಮಿಕಾ! ಇದೆಲ್ಲಾ ಬೇಕಿತ್ತಾ ಅತ್ತೆ ಕೇಳ್ತಿದ್ದಾರೆ ಫ್ಯಾನ್ಸ್​