Asianet Suvarna News Asianet Suvarna News

ಬಿಗ್ ಬಾಸ್‌ ಮನೆಯಲ್ಲಿ ಅಕ್ಕ ಶಿಲ್ಪಾ ಶೆಟ್ಟಿ ಧ್ವನಿ ಕೇಳಿ ಬಿಕ್ಕಿಬಿಕ್ಕಿ ಅತ್ತ ಶಮಿತಾ ಶೆಟ್ಟಿ!

ಸಹೋದರಿ ಇಲ್ಲದೇ ರಕ್ಷಾ ಬಂಧನ ಆಚರಿಸಿದ ಶಿಲ್ಪಾ ಶೆಟ್ಟಿ. ವಿಡಿಯೋ ಕಾಲ್‌ ನೋಡಿ ಭಾವುಕರಾದ ಶಮಿತಾ, ಕುಟುಂಬದ ಸಮಸ್ಯೆಗಳನ್ನು ನೆನಪಿಸಿಕೊಂಡ ಕಣ್ಣೀರಿಟ್ಟ ನಟಿ. 

Shilpa Shetty sends a video message for Shamita shetty on Raksha Bandhan bigg boss vcs
Author
Bangalore, First Published Aug 23, 2021, 12:05 PM IST
  • Facebook
  • Twitter
  • Whatsapp

ಅಶ್ಲೀಲ ಸಿನಿಮಾ ಚಿತ್ರೀಕರಣದಲ್ಲಿ ಉದ್ಯಮಿ ರಾಜ್‌ ಕುಂದ್ರಾ ಹೆಸರು ಕೇಳಿ ಬರುತ್ತಿದ್ದಂತೆ, ಮುಂಬೈ ಪೊಲೀಸರು ಅವರನ್ನು ಬಂಧಿಸಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ಕುಟುಂಬದವರ ಮೇಲೆ ಜನರಿಗಿದ್ದ ಒಳ್ಳೇ ಅಭಿಪ್ರಾಯವೇ ಬದಲಾಗಿದೆ. ಕಳೆದ ಒಂದು ತಿಂಗಳಿನಿಂದ ಪೊಲೀಸರ ವಶದಲ್ಲಿದ್ದಾರೆ ರಾಜ್. ಜೀವನ ಸಾಗಲೇ ಬೇಕೆಂದು ಶಿಲ್ಪಾ ಡ್ಯಾನ್ಸ್ ರಿಯಾಲಿಟಿ ಶೋ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಹಾಗೂ ಶಮಿತಾ ಶೆಟ್ಟಿ ಓಟಿಟಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. 

ಕರಣ್ ಜೋಹಾರ್‌ ಲೂಸರ್‌ ಎಂದ ಸುಯ್ಯಶ್ ರೈ; 'ಸಿನಿಮಾ ಮಾಡು, ಬಿಗ್ ಬಾಸ್ ಅಲ್ಲ'!

ಆಗಸ್ಟ್‌ 22ರಂದು ದೇಶದ್ಯಾಂತ ರಕ್ಷಾ ಬಂಧನ ಆಚರಿಸಲಾಗಿದೆ. ಬಿಗ್‌ಬಾಸ್‌ ಮನೆಯಲ್ಲಿರುವ ಶಮಿತಾಗೆ ಶಿಲ್ಪಾ ವಿಡಿಯೋ ಕಾಲ್ ಮಾಡುವ ಮೂಲಕ ಶುಭ ಹಾರೈಸಿದ್ದಾರೆ. ಅಕ್ಕನ ಮಾತುಗಳನ್ನು ಕೇಳಿ ಶಮಿತಾ ಭಾವುಕರಾಗಿದ್ದಾರೆ. ಮನೆಯಲ್ಲಿರುವ ಸದಸ್ಯರು ಎಷ್ಟೇ ಸಮಾಧಾನ ಮಾಡಿದರೂ, ಬಿಕ್ಕಿಬಿಕ್ಕಿ ಅತ್ತಿದ್ದಾರೆ.

Shilpa Shetty sends a video message for Shamita shetty on Raksha Bandhan bigg boss vcs

ವಿಡಿಯೋ ಕಾಲ್‌ನಲ್ಲಿ ಮಾತನಾಡಿದ ಶಿಲ್ಪಾ, ಹಳೆಯ ವಿಚಾರಗಳನ್ನು ತಲೆಯಿಂದ ತೆಗೆದು ಹಾಕಿ, ಹೊಸ ಆಟ ಶುರು ಮಾಡುವಂತೆ ಸಲಹೆ ನೀಡುತ್ತಾರೆ. ತಾಯಿ ಆರೋಗ್ಯವಾಗಿದ್ದಾರೆ. ಯಾವುದೇ ಸಮಸ್ಯೆಯಿ.ಲ್ಲ ಆಕೆಯನ್ನು ನಾನು ನೋಡಿಕೊಳ್ಳುತ್ತೇನೆ, ನೀನು ನಿಶ್ಚಿಂತೆಯಿಂದ ಆಟವಾಡು, ಎಂದು ಶೆಲ್ಪಾ ಹೇಳಿದ್ದಾರೆ. ಶಿಲ್ಪಾ ಮುಖ ನೋಡುತ್ತಿದ್ದಂತೆ ಶಿಮಿತಾ ಭಾವುಕರಾಗಿದ್ದಾರೆ ಹಾಗೂ ಬಿಕ್ಕಿಬಿಕ್ಕಿ ಅತ್ತಿದ್ದಾರೆ. 

ಶಿಲ್ಪಾ ಕರೆ ಮಾಡುವ ಮುನ್ನ ನಿಶಾಂತ್ ಮತ್ತು ಶಮಿತಾಗೆ ದೊಡ್ಡ ಜಗಳವಾಗಿತ್ತು. ತಮ್ಮ ಕುಟುಂಬದ ವಿಚಾರಗಳನ್ನು ಹಿಡಿದುಕೊಂಡು, ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ, ಎಂದು ಅತ್ತಿದ್ದರು. ಅಲ್ಲದೇ ಶಮಿತಾ ಪ್ರತಿ ಸಲವೂ ಜಗಳ ಮಾಡುವಾಗ ಕೆಟ್ಟ ಪದಗಳನ್ನು ಬಳಸುತ್ತಾರೆ. ಈ ಗುಣದಿಂದ ಮನೆಯ ಇನ್ನಿತರೆ ಸದಸ್ಯರು ಆಕೆಯನ್ನು ದೂರ ಇಟ್ಟಿದ್ದಾರೆ. ಜೋಡಿ ಟಾಸ್ಕ್‌ ನಡೆಯುತ್ತಿರುವ ಕಾರಣ ಶಮಿತಾ-ರಾಕೇಶ್ ಜೋಡಿಯಾಗಿದ್ದಾರೆ. 'ನೀನು ಎಲ್ಲರೊಟ್ಟಿಗೆ ಚೆನ್ನಾಗಿ ಇರಬೇಕು ಎನ್ನುವ ಕಾರಣ ನಾನು ಇಂಥ ಜನರ ಜೊತೆ ಸ್ನೇಹ ಮಾಡಬೇಕಾ? ನೀನು ಜಗಳ ಮಾಡಬೇಡ ಅಂತ ಹೇಳಿದೆ. ನಾನು ಒಪ್ಪಿಕೊಂಡೆ. ಆದರೆ ಇವರ ಮಾತುಗಳನ್ನು ಕೇಳಿಕೊಂಡು ಸುಮ್ಮನೆ ಇರುವುದಕ್ಕೆ ನನಗೆ ಆಗುವುದಿಲ್ಲ. ನಿನ್ನಂತೆ ನಾನು ಎಲ್ಲರೊಟ್ಟಿಗೆ ಸ್ನೇಹ ಮಾಡುವುದಕ್ಕೆ ಅಗುವುದಿಲ್ಲ. ನಾನು ಮನೆಗೆ ಹೋಗಬೇಕು ಫ್ಯಾಮಿಲಿ ಜೊತೆ ಇರಬೇಕು. ನನ್ನ ಕುಟುಂಬ ಕಷ್ಟದ ದಿನಗಳನ್ನು ಎದುರಿಸುತ್ತಿದ್ದರೂ, ನಾನು ಇಲ್ಲಿಗೆ ಬಂದೆ. ಇವೆಲ್ಲಾ ನನಗೆ ಸಾಕಾಗಿದೆ,' ಎಂದು ಶಮಿತಾ ಹೇಳುತ್ತಾರೆ.

Follow Us:
Download App:
  • android
  • ios