ದಿವ್ಯಾ ಅಗರ್ವಾಲ್‌ ಜೊತೆ ವಾದಕ್ಕಿಳಿದ ನಿರೂಪಕ ಕರಣ್ ಜೋಹಾರ್. ಕರಣ್ ನೀನು ಲೂಸರ್ ಎಂದರು ಸುಯ್ಯಶ್. 

ಓಟಿಟಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ರಿಯಾಲಿಟಿ ಶೋ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಅದರಲ್ಲೂ ನಿರೂಪಕ ಕರಣ್ ಜೋಹಾರ್, ನಟ ಸಲ್ಮಾನ್ ಖಾನ್‌ ಅವರನ್ನು ಇಮಿಟೇಟ್ ಮಾಡುತ್ತಿರುವುದು ಪ್ರತಿಯೊಬ್ಬ ವೀಕ್ಷಕರಿಗೂ ಎದ್ದು ಕಾಣುತ್ತಿದೆ. ಅಲ್ಲದೇ ಮನೆಯೊಳಗಿರುವ ಸ್ಪರ್ಧಿಗಳ ಜೊತೆ ಕರಣ್ ವರ್ತಿಸುತ್ತಿರುವ ರೀತಿಗೆ ನೆಟ್ಟಿಗರು ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ. 

ಸ್ಪೈಡರ್ ವುಮನ್ ಆದ ರಾಖಿ ಸಾವಂತ್: ಇದೆಂಥಾ ವೇಷ ?

ವಾರದ ನಾಮಿನೇಷನ್‌ ನಡೆಯುವ ಸಮಯದಲ್ಲಿ ಸ್ಪರ್ಧಿ ದಿವ್ಯಾ ಅಗರ್ವಾಲ್ ಅವಕಾಶ ಸಿಕ್ಕಿರೆ ಕರಣ್‌ ಅವರನ್ನು ನೇರವಾಗಿ ನಾಮಿನೇಟ್ ಮಾಡುವೆ ಎಂದು ತಮಾಷೆಗೆ ಹೇಳಿದ್ದಾರೆ. ಈ ವಿಚಾರವನ್ನು ವೀಕೆಂಡ್ ಮಾತುಕತೆಯಲ್ಲಿ ತೆಗೆದ ಕರಣ್ 'ಬಿಗ್ ಬಾಸ್ ಮನೆಯೊಳಗೆ ನನ್ನ ಹೆಸರು ಬಳಸುವಂತಿಲ್ಲ. ನಾನು ಇಲ್ಲಿ ಹೋಸ್ಟ್. ನೀನು ಅಲ್ಲಿ ಸ್ಪರ್ಧಿ. ನನ್ನ ನಿನ್ನ ನಡುವೆ ವ್ಯತ್ಯಾಸವಿದೆ, ಅದನ್ನು ಮರೆಯಬೇಡ, ನೀನು ನನ್ನ ಜೊತೆ ಬಿಗ್ ಬಾಸ್ ಆಟವಾಡಲು ಬರಬೇಡ,' ಎಂದು ಜೋರಾದ ಧ್ವನಿಯಲ್ಲಿ ಮಾತನಾಡಿದ್ದಾರೆ. ದಿವ್ಯಾ ಹೇಳಿದ್ದ ರೀತಿಯನ್ನು ತಪ್ಪಾಗಿ ಸ್ವೀಕಾರ ಮಾಡಿದ ಕರಣ್‌ಗೆ ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತಾಳೆ .ಆದರೆ ಕರಣ್ ದಿವ್ಯಾ ಮಾತನ್ನು ಕೇಳಲೂ ಸಿದ್ದ ಇರಲಿಲ್ಲ. 

ಶಿಲ್ಪಾ ಶೆಟ್ಟಿ ತಂಗಿ ಶಮಿತಾಗೆ 'ಅಮ್ಮನಷ್ಟು ವಯಸ್ಸು' ಎಂದು ಹಂಗಿಸಿದ ನಟಿ?

ಈ ಎಪಿಸೋಡ್‌ನ ವೀಕ್ಷಿಸುತ್ತಿದ್ದ ಬಿಗ್‌ಬಾಸ್ ಸೀಸನ್ 9ರ ಸ್ಪರ್ಧಿ ಸುಯ್ಯಶ್ ರೈ ಇನ್‌ಸ್ಟಾಗ್ರಾಂನಲ್ಲಿ ಎಪಿಸೋಡ್ ಫೋಟೋ ಹಂಚಿಕೊಂಡು ಕರಣ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. 'ಡಿಯರ್ ಕರಣ್ ಜೋಹಾರ್, ದಯವಿಟ್ಟು ನನ್ನ ಮುಂದೆ ಬಾ ನಾನು ನಿನ್ನ ಬಬಲ್ ಬ್ಲಾಸ್ಟ್ ಮಾಡುವೆ. ನೀನು ಸಲ್ಮಾನ್ ಖಾನ್ ಅಲ್ಲ, ಎಂಬುವುದು ಮರೆಯಬೇಡ. ಸ್ವಲ್ಪ ಸೆನ್ಸ್ ಇಟ್ಕೊಂಡು ಮಾತನಾಡು. ಕರಣ್ ಜೋಹಾರ್ ಇಷ್ಟೊಂದು ದೊಡ್ಡ ಲೂಸರ್‌ ಎಂದು ನನಗೆ ತಿಳಿದಿರಲಿಲ್ಲ. ಬೇರೆಯವರು ನಿಮ್ಮೊಂದಿಗೆ ಸರಿಯಾಗಿ ಮಾತನಾಡಬೇಕು ಅಂದ್ರೆ, ಮೊದಲು ನೀವು ನಿಮ್ಮ ಧ್ವನಿಯನ್ನು ನೋಡಿಕೊಳ್ಳಿ. ಕರೆಕ್ಟ್ ಆಗಿ ಮಾತನಾಡುವುದನ್ನು ಕಲಿಯಿರಿ. ಸುಖಾ ಸುಮ್ಮನೆ ನಿಮ್ಮ ಬೆರಳನ್ನು ದಿವ್ಯಾಗೆ ಪಾಯಿಂಟ್ ಮಾಡಬೇಡಿ. ಇವೆಲ್ಲಾ ನೀನು ಬಕೆಟ್ ಹಿಡಿಯುತ್ತಿರುವ ಶಮಿತಾ ಶೆಟ್ಟಿ ಜೊತೆ ಮಾಡಿಕೋ. ನೀನು ಸಿನಿಮಾ ಮಾಡು ಬಿಗ್‌ಬಾಸ್ ಅಲ್ಲ,' ಎಂದು ಖಡಕ್ ಆಗಿಯೇ ಟಾಂಗ್ ನೀಡಿದ್ದಾರೆ.