Asianet Suvarna News Asianet Suvarna News

ಶ್ರೀರಸ್ತು ಶುಭಮಸ್ತು ಪೂರ್ಣಿ- ಅಮೃತಧಾರೆ ಜೀವಾ ಈ ಪರಿ ರೊಮಾನ್ಸಾ? ಫ್ಯಾನ್ಸ್​ಗೆ ಮಗುವಿನದ್ದೇ ಚಿಂತೆ!

ಶ್ರೀರಸ್ತು ಶುಭಮಸ್ತು ಪೂರ್ಣಿ- ಅಮೃತಧಾರೆ ಜೀವಾ ಭಿಗೆ ಭಿಗೆ ರಾತೋ ಮೇಗೆ ಪ್ರೇಮದ ಕಿಚ್ಚು ಹೊತ್ತಿಸಿದ್ದಾರೆ. ಈ ವಿಡಿಯೋ ನೋಡಿ ಉಫ್​ ಅಂತಿದ್ದಾರೆ ಫ್ಯಾನ್ಸ್​.
 

Sheerastu Shubhamastu Poorni- Amrutadhare Jeevan reels on Bhige Bhige Ratho Me suc
Author
First Published Aug 14, 2024, 11:52 AM IST | Last Updated Aug 14, 2024, 11:52 AM IST

ಈಕೆ ಶ್ರೀರಸ್ತು- ಶುಭಮಸ್ತು ಸೀರಿಯಲ್​ ಆದರ್ಶ ಸೊಸೆ ಪೂರ್ಣಿ. ಆತ ಅಮೃತಧಾರೆಯ ಆದರ್ಶ ಪತಿ ಜೀವನ್​. ಇವರಿಬ್ಬರೂ ಇದೀಗ ಪ್ರೇಮದ ಕಿಚ್ಚು ಹೊತ್ತಿಸಿದ್ದಾರೆ! ಹೌದು. ಪೂರ್ಣಿ ಮತ್ತು ಜೀವನ್​ ಸೀರಿಯಲ್​ಗಳಲ್ಲಿ ಬೇರೆ ಬೇರೆಯವರ ಪತಿ ಮತ್ತು ಪತ್ನಿ. ಆದರೆ ರಿಯಲ್​ ಲೈಫ್​ನಲ್ಲಿ ಇವರಿಬ್ಬರೂ ದಂಪತಿ. ಅಷ್ಟಕ್ಕೂ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು ಶುಭಮಸ್ತು ಸೀರಿಯಲ್‌ನಲ್ಲಿ ಪೂರ್ಣಿ ಪಾತ್ರಧಾರಿಯ ನಟನೆ ಹಾಗೂ ಪಾತ್ರ ಎಲ್ಲರಿಗೂ ಅಚ್ಚುಮೆಚ್ಚು. ಅನಾಥೆ ಎನ್ನುವ ಕಾರಣಕ್ಕೆ ತಾತ್ಸಾರಕ್ಕೆ ಒಳಗಾಗಿರುವ ಈಕೆಯ ನಿಜ ತಂದೆ-ತಾಯಿ ಸಿಗುವ ಹೊತ್ತು ಬಂದಿದೆ. ಈಕೆ ತನ್ನ ಅತ್ತೆ ತುಳಸಿಗೆ  ತೋರುವ ಪ್ರೀತಿಗೆ ಪ್ರೇಕ್ಷಕರು ತಲೆದೂಗಿದ್ದಾರೆ. ಇದ್ದರೆ ಇಂಥ ಸೊಸೆ ಇರಬೇಕು ಎನ್ನುತ್ತಿದ್ದಾರೆ. ಸದಾ ಗಂಭೀರವಾಗಿ, ಗಂಟು ಮುಖ ಮಾಡಿಕೊಂಡಿರುವ ಪತಿ ಅವಿಯನ್ನೂ ಬದಲಿಸಿ, ಆತನಲ್ಲಿ ಪ್ರೇಮದ ಧಾರೆಯನ್ನೇ ಸುರಿಸಿದ್ದಾಳೆ ಪೂರ್ಣಿ. ಅದೇ ಇನ್ನೊಂದೆಡೆ ಜೀವನ್​. ಜೀವಾ ಎಂದು ಅಮೃತಧಾರೆಯಲ್ಲಿ ಕರೆಸಿಕೊಳ್ಳುವ ಈತ, ತನ್ನ ತಂಗಿಗೆ ಆಕೆ ಪ್ರೀತಿಸುವ ಹುಡುಗನ ಜೊತೆ ಮದುವೆ ಮಾಡಲು ಮನೆಯವರೆಲ್ಲರ ವೈರತ್ವ ಕಟ್ಟಿಕೊಳ್ಳುತ್ತಿದ್ದಾನೆ. ಮಾಡರ್ನ್​ ಹುಡುಗಿಯನ್ನು ಮದುವೆಯಾಗಿರೋ ಈ ಸಂಪ್ರದಾಯ ಕುಟುಂಬದ ಜೀವಾ, ಆಕೆಯನ್ನು ಚೆನ್ನಾಗಿ ಇಟ್ಟುಕೊಳ್ಳಲು ಹೆಣಗಾಡುವ ಕ್ಯಾರೆಕ್ಟರ್​ನವ. 


ಅಂದಹಾಗೆ ಪೂರ್ಣಿಯ ನಿಜವಾದ ಹೆಸರು ಲಾವಣ್ಯ ಭಾರಧ್ವಾಜ್​. ಜೀವಾನ ನಿಜವಾದ ಹೆಸರು  ಶಶಿ ಹೆಗ್ಡೆ. ಶಶಿ ಹಾಗೂ ಲಾವಣ್ಯ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಇತ್ತೀಚೆಗೆ  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಅದ ಜೋಡಿ ನಂಬರ್‌ 1 ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ವೇದಿಕೆಯ ಮೇಲೆ ಪ್ರೇಮದ ಕಿಚ್ಚು ಹೊತ್ತಿಸಿದ್ದವರು. ಲಾವಣ್ಯ ಅವರು ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದು, ಆಗಾಗ್ಗೆ ಹಲವಾರು ರೀಲ್ಸ್​ಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಪತಿ ಶಶಿ ಜೊತೆ ಡಾನ್ಸ್​ ಮಾಡಿದ್ದು, ಪ್ರೇಮದ ಧಾರೆ ಹರಿಸಿದ್ದಾರೆ. ಭಿಗಿ ಭಿಗಿ ರಾತೋ ಮೇಲೆ ಹಾಡಿಗೆ ರೀಲ್ಸ್​ ಮಾಡಿದ್ದಾರೆ. ಅಷ್ಟಕ್ಕೂ ಶಶಿ ಹೆಗ್ಡೆ ಅವರು ಸದ್ಯ ಡಾನ್ಸ್​ ಕರ್ನಾಟಕ ಡಾನ್ಸ್​ ವೇದಿಕೆಯಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ಡಾನ್ಸ್​ ಅಷ್ಟಾಗಿ ಗೊತ್ತಿಲ್ಲದಿದ್ದರೂ ಎಲ್ಲರ ಮನ ಗೆಲ್ಲುತ್ತಿದ್ದಾರೆ ಶಶಿ. 

ಸೇಮ್​-ಟು-ಸೇಮ್​ ಡ್ರೆಸ್​ನಲ್ಲಿ ಮಿಂಚಿದ ಸೀತಾ- ಶ್ರಾವಣಿ! ಇವರಿಬ್ಬರ ಸಂಬಂಧವಾದ್ರೂ ಏನು?
 
 ಈ ಜೋಡಿಯ ಮದುವೆ ಕೂಡ ತುಂಬಾ ಇಂಟರೆಸ್ಟಿಂಗ್​ ಆಗಿದೆ. ಇವರಿಬ್ಬರ ಲವ್ ಸ್ಟೋರಿ ಸ್ಟಾರ್ಟ್ ಆಗಿದ್ದೇ ಸೀರಿಯಲ್ ಸೆಟ್ ನಲ್ಲಿ (serial set). ಶಶಿ ಮತ್ತು ಲಾವಣ್ಯ ಇಬ್ಬರು ರಾಜಾ ರಾಣಿ ಸೀರಿಯಲ್​ನಲ್ಲಿ ನಟಿಸುತ್ತಿದ್ದರು. ಈ ಸೀರಿಯಲ್ ನಲ್ಲಿ ಇಬ್ಬರು ಅಣ್ಣ - ತಂಗಿಯಾಗಿ ನಟಿಸಿದ್ದರು. ಲಾವಣ್ಯ ಅವರು ಶಶಿ ಅವರನ್ನು ಬ್ರೋ ಎಂದೇ ಕರೆಯುತ್ತಿದ್ದರು. ‘ರಾಜಾ ರಾಣಿ’ ಮೂಲಕವೇ ಶಶಿ ಹೆಗ್ಡೆ ಮತ್ತು ಲಾವಣ್ಯ ಅವರಿಗೆ ಪರಿಚಯವಾಯಿತು. ಪರಿಚಯ ಸ್ನೇಹಕ್ಕೆ ತಿರುಗಿತು. ಆತ್ಮೀಯ ಸ್ನೇಹಿತರಾಗಿದ್ದ ಶಶಿ ಹೆಗ್ಡೆ ಮತ್ತು ಲಾವಣ್ಯ ಮಧ್ಯೆ ಪ್ರೀತಿ ಚಿಗುರಿತು. ವರ್ಷಗಳಿಂದ ಪ್ರೀತಿಸುತ್ತಿದ್ದ ಶಶಿ ಹೆಗ್ಡೆ ಮತ್ತು ಲಾವಣ್ಯ ಕುಟುಂಬಸ್ಥರನ್ನು ಒಪ್ಪಿಸಿ ಮದ್ವೆನೂ ಆಗಿದ್ದಾರೆ. 

ಮದುವೆಯಾಗಿ ವರ್ಷದ ಬಳಿಕ ಈ ಜೋಡಿ ಕಳೆದ ತಿಂಗಳಷ್ಟೇ ಮನಾಲಿಗೆ ಹೋಗಿ ಪ್ರವಾಸ ಮಾಡಿದ್ದು, ಅದರ ವಿಡಿಯೋ ಶೇರ್​  ಮಾಡಿಕೊಂಡಿದ್ದರು. ಲಾವಣ್ಯ ಕುರಿತು ಹೇಳುವುದಾದರೆ, ರಿಯಾಲಿಟಿ ಷೋ ಒಂದರಲ್ಲಿ ಇವರ ತಂದೆ,  ಲಾವಣ್ಯ ಹುಟ್ಟಿದ ಬಗ್ಗೆ ತಿಳಿಸಿದ್ದರು.  ತಮ್ಮ ಪತ್ನಿ ಗರ್ಭಿಣಿಯಾಗಿದ್ದಾಗ ಅಂದರೆ ಲಾವಣ್ಯ ಹೊಟ್ಟೆಯಲ್ಲಿ ಇದ್ದಾಗ ಆಗಿನ ಸ್ಥಿತಿಯಲ್ಲಿ ಮಗು ಹುಟ್ಟುವುದು ಬೇಡವಾಗಿತ್ತು. ಅದಕ್ಕಾಗಿ ಪರಂಗಿ ಕಾಯಿ ತಿನ್ನಬೇಕೆಂದು ಆರೇಳು ಕಿಲೋಮೀಟರ್‌ ಪರಂಗಿ ಕಾಯಿ ಹುಡುಕಿ ಹೊರಟಿದ್ದು, ಕೊನೆಗೆ ಅದು ಸಿಗದೇ ಇದ್ದುದ ಬಗ್ಗೆ ತಿಳಿಸಿದ್ದರು! ಹನಿಮೂನ್​ ಆಸೆಯೂ ನೆರವೇರಿದ್ದರಿಂದ ಬೇಗ ಮಗು ಮಾಡಿಕೊಳ್ಳಿ ಅಂತ ಕೆಲವು ಅಭಿಮಾನಿಗಳು ದಂಪತಿಗೆ ಸಲಹೆ ಕೊಟ್ಟಿದ್ದಾರೆ! ಬೇಗ ಮಗು ಮಾಡಿಕೊಂಡಷ್ಟು ಒಳ್ಳೆಯದು ಎಂದು ಇನ್ನು ಕೆಲವರು ಹೇಳುವ ಮೂಲಕ, ಮಗುವಿನ ಚಿಂತೆ ವ್ಯಕ್ತಪಡಿಸುತ್ತಿದ್ದಾರೆ. 

ರಾಜ್​ ಅಭಿಮಾನಿಯಂತ ಹುಡುಗಿನ ನೋಡದೇ ಮದ್ವೆಯಾದೆ: ಲವ್​ಸ್ಟೋರಿಗೆ ಅಪ್ಪು ಭಾವುಕ- ಹಳೆ ವಿಡಿಯೋ ವೈರಲ್​

 

Latest Videos
Follow Us:
Download App:
  • android
  • ios