ಮಾನ್ಯಳ ಉಸಿರು ಶಕುಂತಲಾ ಕೈಯಲ್ಲೋ, ಭೂಮಿಕಾ ಪೂಜೆಯಲ್ಲೊ? ಕುತೂಹಲ ಘಟ್ಟದಲ್ಲಿ ಅಮೃತಧಾರೆ

ಮಾನ್ಯಳನ್ನು ಸಾಯಿಸಲು ಶಕುಂತಲಾ ಆಸ್ಪತ್ರೆಗೆ ಬಂದಿದ್ದಾಳೆ. ಅವಳನ್ನು ಹೇಗಾದರೂ ಬದುಕಿಸಪ್ಪಾ ಎಂದು ಭೂಮಿಕಾ ದೇವರ ಮೊರೆ ಹೋಗಿದ್ದಾಳೆ. ಮುಂದೇನು?
 

Shakuntala come to the hospital to kill Manya Bhoomika prayed to God to save suc

ಅಮೃತಧಾರೆ ಸೀರಿಯಲ್​ನಲ್ಲಿ ಮಾನ್ಯ ಎನ್ನುವ ಕ್ಯಾರೆಕ್ಟರ್​ ಎಂಟ್ರಿ ಆಗಿದೆ. ಈಕೆ ಯಾರು, ಏನು, ಎತ್ತ ಎನ್ನುವುದು ಸಸ್ಪೆನ್ಸ್​ ಆಗಿಯೇ ಉಳಿದಿದೆ. ಈಕೆ ಗೌತಮ್​ನ ಮಾಜಿ ಪ್ರೇಯಸಿ ಎಂದೇ ಅಂದುಕೊಳ್ಳಲಾಗುತ್ತಿದೆ. ಆದರೆ ಈಕೆಯ ಅಸಲಿಯತ್ತು ಏನು ಎನ್ನುವುದು ಇನ್ನು ತಿಳಿಯಬೇಕಿದೆ. ಆದರೆ ಶಕುಂತಲಾ ಈಕೆಯನ್ನು ಸಾಯಿಸಲು ಹೊರಟಿಸುವುದು ಏಕೆ ಎನ್ನುವುದು ಗೊತ್ತಿಲ್ಲ. ಗೌತಮ್​ ಕೂಡ ಮಾನ್ಯಳನ್ನು ನೋಡಿ ಶಾಕ್​ ಆಗಿದ್ದಾನೆ. ಆದರೆ ಭೂಮಿಕಾಗೆ ಇದೇನೂ ಗೊತ್ತಿಲ್ಲ. ಶಕುಂತಲಾ ಕೂಡಿ ಹಾಕಿರೋ ಮಾನ್ಯ ತಪ್ಪಿಸಿಕೊಂಡು ಬಂದಿದ್ದಾಳೆ. ಬಂದು ಗೌತಮ್​ನ ಕಾರಿಗೆ ಡಿಕ್ಕಿ ಹೊಡೆದಿದ್ದಾಳೆ. ಭೂಮಿಕಾ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾಳೆ. ಆಕೆಗೆ ಪ್ರಜ್ಞೆ  ಬರುವ ಒಳಗೆ ಆಸ್ಪತ್ರೆಯಿಂದ ಜಾಗ ಖಾಲಿ ಮಾಡಬೇಕು ಎಂದುಕೊಂಡ ಗೌತಮ್​ ಆಕೆಗೆ ಹೆದರಿ ಹೋಗಿದ್ದಾನೆ. ನಡೆದಿರುವ ಘಟನೆಯನ್ನು ಶಕುಂತಲಾಗೆ ಹೇಳಿದ್ದಾನೆ. ಒಂದು ವೇಳೆ ಆಕೆಗೆ ಪ್ರಜ್ಞೆ ಬಂದರೆ ತಮ್ಮ ಪ್ರಜ್ಞೆ ತಪ್ಪುವುದು ಗ್ಯಾರೆಂಟಿ ಅಂದಿದ್ದಾಳೆ ಶಕುಂತಲಾ.

ಇದೇ ಕಾರಣಕ್ಕೆ ಆಸ್ಪತ್ರೆಗೆ ಧಾವಿಸಿದ್ದಾಳೆ. ಅಲ್ಲಿ ಭೂಮಿಕಾ ಮಾನ್ಯಳ ಆರೈಕೆಯಲ್ಲಿ ತೊಡಗಿದ್ದಾಳೆ. ಆಕೆ ತಮ್ಮ ಕಾರಿಗೆ ಅಡ್ಡ ಬಂದು ಪ್ರಜ್ಞೆ ತಪ್ಪಿರುವ ಆತಂಕ ಭೂಮಿಕಾಗೆ. ಆದರೆ ಅಲ್ಲಿಗೆ ಬಂದ ಶಕುಂತಲಾ ಆಸ್ಪತ್ರೆಯಲ್ಲಿಯೇ ಮಾನ್ಯಳನ್ನು ಸಾಯಿಸಲು ಹೊರಟಿದ್ದಾಳೆ. ಇದೇ ಕಾರಣಕ್ಕೆ ಭೂಮಿಕಾಗೆ ಮನೆಗೆ ಹೋಗುವಂತೆ ಹೇಳಿದ್ದಾಳೆ. ಒಲ್ಲದ ಮನಸ್ಸಿನಿಂದ ಭೂಮಿಕಾ ಮನೆಗೆ ಬಂದಿದ್ದಾಳೆ. ಭೂಮಿಕಾ ಇರುವಾಗ ನೀನು ಹೇಗೆ ಬದುಕಿ ಬರುತ್ತಿ ನೋಡೋಣ ಎಂದಿದ್ದಾಳೆ ಶಕುಂತಲಾ. ಹೇಗಾದರೂ ಮಾಡಿ ಆಸ್ಪತ್ರೆಯಲ್ಲಿಯೇ ಮುಗಿಸುವ ಸ್ಕೆಚ್​ ಹಾಕಿದ್ದಾಳೆ.

'ಯೋಧ' ನಟ ಸಿದ್ಧಾರ್ಥ್ ಮಲ್ಹೋತ್ರಾ ಮೇಲೆ ವಿಮಾನದಲ್ಲಿಯೇ ಭಾರಿ ಹಲ್ಲೆ: ವೈರಲ್​ ವಿಡಿಯೋಗೆ ಫ್ಯಾನ್ಸ್​ ಶಾಕ್​!

ಅದೇ ಇನ್ನೊಂದೆಡೆ ಭೂಮಿಕಾ ಮಾನ್ಯಳ ಹೆಸರಿನಲ್ಲಿ ಪೂಜೆ ಸಲ್ಲಿಸುತ್ತಿದ್ದಾಳೆ. ಅವಳನ್ನು ಕಾಪಾಡಪ್ಪಾ ದೇವರೇ ಎನ್ನುತ್ತಿದ್ದಾಳೆ. ಒಂದೆಡೆ ಮಾನ್ಯಳ ಉಸಿರು ನಿಲ್ಲಿಸಲು ಶಕುಂತಲಾ ಪಣತೊಟ್ಟಿದ್ದರೆ, ಇನ್ನೊಂದೆಡೆ, ಭೂಮಿಕಾ ದೇವರಲ್ಲಿ ಹರಕೆ ಹೊತ್ತಿದ್ದಾಳೆ. ಮುಂದೇನಾಗುತ್ತದೆ ಎನ್ನುವುದು ಈಗಿರುವ ಕುತೂಹಲ. ಇದು ಸೀರಿಯಲ್​ ಆಗಿರುವ ಕಾರಣ, ಮಾನ್ಯ ಸಾಯುವುದಿಲ್ಲ ಎನ್ನುವುದು ದಿಟವೇ. ಆದರೂ ಆಕೆ ಯಾರು? ಶಕುಂತಲಾ ಕೂಡಿ ಹಾಕಿದ್ದು ಯಾಕೆ? ಗೌತಮ್​ ಅವಳನ್ನು ನೋಡಿ ಶಾಕ್​ ಆಗಿದ್ದು ಏಕೆ ಎಂಬೆಲ್ಲಾ ಪ್ರಶ್ನೆಗ ಹಂತಹಂತವಾಗಿ ಉತ್ತರ ಸಿಗಬೇಕಿದೆ. 

ಗೌತಮ್​ ಮತ್ತು ಭೂಮಿಕಾ ಒಂದಾಗುವ ಹೊತ್ತಿನಲ್ಲಿ ಈ ಅವಘಡ ಸಂಭವಿಸಿರುವುದು ಅಮೃತಧಾರೆ ಅಭಿಮಾನಿಗಳಿಗೆ ಬೇಸರ ತರಿಸಿದೆ.  ಹೇಗಾದರೂ ಮಾಡಿ ಭೂಮಿಕಾಗೆ ಪ್ರೀತಿ ನಿವೇದನೆ ಮಾಡಿಕೊಳ್ಳುವ ಮನಸ್ಸು ಮಾಡಿದ್ದ ಗೌತಮ್​. ಇದೇ ಕಾರಣಕ್ಕೆ ಭೂಮಿಕಾಳನ್ನು ಕರೆದುಕೊಂಡು ಗಾರ್ಡನ್​ಗೆ ಹೋಗಿದ್ದ. ಮುಂದೇನು ಮಾಡುವುದೋ ತಿಳಿಯದೇ  ಗೆಳೆಯ ಆನಂದ್​ಗೆ ಕಾಲ್​ ಮಾಡಿದ್ದ.  ಅತ್ತ ಭೂಮಿಕಾ ಅಂತೂ ತನ್ನ ಪ್ರೀತಿಯನ್ನು ಪತಿಗೆ ಹೇಗೆ ತಿಳಿಸಬೇಕು ಎನ್ನುವುದನ್ನು ತಿಳಿಯದೇ ಕಸಿವಿಸಿಯಲ್ಲಿಯೇ ಇದ್ದಾಳೆ. ಅವಳು ಪ್ರೀತಿಯನ್ನು ತಿಳಿಸಲು ಎಷ್ಟೇ ಪ್ರಯತ್ನ ಮಾಡಿದರೂ ಅದು ಪೆದ್ದು ಗೌತಮ್​ಗೆ ಗೊತ್ತೇ ಆಗುತ್ತಿಲ್ಲ. ಸ್ನೇಹಿತ ಆನಂದ್​, ಗೌತಮ್​ಗೆ ಚಾಲೆಂಜ್​ ಕೊಟ್ಟಿದ್ದ. ಪತ್ನಿಗೆ ಕಿಸ್​ ಮಾಡ್ಲೇಬೇಕು ಎನ್ನುವ ಚಾಲೆಂಜ್​ ಇದಾಗಿತ್ತು. ಇಲ್ಲದಿದ್ದರೆ ಪಾರ್ಟಿಯಲ್ಲಿ ಕುಡಿದ ವಿಷಯವನ್ನು ಅಜ್ಜಿಗೆ ತಿಳಿಸುವುದಾಗಿ ಹೇಳಿದ್ದ. ಗೌತಮ್​ಗೆ ಬೇರೆ ದಾರಿಯೇ ಇರಲಿಲ್ಲ. ಪತ್ನಿಗೆ ಕಿಸ್​ ಕೊಡಲೇಬೇಕು ಎಂದು ಹೋಗಿದ್ದ. ಅಷ್ಟರಲ್ಲಿಯೇ ಭೂಮಿಕಾ ಸಮೀಪ ಹಲ್ಲಿ ಬಂದು ಇನ್ನೇನು ಇಬ್ಬರೂ ಒಂದಾಗುತ್ತಾರೆ ಎಂದೇ ಹೇಳಲಾಗಿತ್ತು. ಆದರೆ ಮಾನ್ಯಳ ಎಂಟ್ರಿಯಾಗಿದೆ. 

ದಯವಿಟ್ಟು ಫೇಕ್​ನ್ಯೂಸ್​ ಹರಡಬೇಡಿ ಎಂದು 'ಕರಿಮಣಿ ಮಾಲಿಕ' ವಿಕ್ಕಿ ಮನವಿ: ಆದ್ರೆ ಅಲ್ಲಾಗಿದ್ದೇ ಬೇರೆ!

 

Latest Videos
Follow Us:
Download App:
  • android
  • ios