'ಯೋಧ' ನಟ ಸಿದ್ಧಾರ್ಥ್ ಮಲ್ಹೋತ್ರಾ ಮೇಲೆ ವಿಮಾನದಲ್ಲಿಯೇ ಭಾರಿ ಹಲ್ಲೆ ನಡೆದಿದ್ದು, ಇದರ ವಿಡಿಯೋ ವೈರಲ್ ಆಗಿದೆ. ವೈರಲ್ ವಿಡಿಯೋಗೆ ಫ್ಯಾನ್ಸ್ ಶಾಕ್ ಆಗಿದ್ದು, ನಿಜವಾಗಿಯೂ ನಡೆದದ್ದೇನು?
ನಟ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಅವರ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳನ್ನು ಆತಂಕಕ್ಕೆ ತಳ್ಳಿದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ನಟನ ಮೇಲೆ ವಿಮಾನದ ಟಾಯ್ಲೆಟ್ ರೂಮ್‌ನಲ್ಲಿ ಹಲ್ಲೆ ನಡೆಸುವುದನ್ನು ನೋಡಬಹುದಾಗಿದೆ. ಅವರ ನಟನೆಯ ‘ಯೋಧ’ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿದ್ದು, ಇದರ ಬೆನ್ನಲ್ಲೇ ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಇವರ ಮೇಲೆ ಹಲ್ಲೆ ನಡೆಸಿರುವುದು ಯಾರು, ಏಕೆ ಎಂಬ ಬಗ್ಗೆ ಸಾಕಷ್ಟು ಚರ್ಚೆಯೂ ನಡೆಯುತ್ತಿದೆ. ಅದೇ ಇನ್ನೊಂದೆಡೆ, ‘ಯೋಧ’ ಸಿನಿಮಾ ಸಿನಿಮಾ ವಿಮರ್ಶೆಯಲ್ಲಿ ಮೆಚ್ಚುಗೆ ಪಡೆದಿತ್ತು. ಇದರ ಹೊರತಾಗಿಯೂ ಚಿತ್ರ ಭಾರಿ ಗಳಿಕೆ ಮಾಡುತ್ತಿಲ್ಲ.
ಸಿದ್ಧಾರ್ಥ್ ಮಲ್ಹೋತ್ರಾ ‘ಯೋಧ’ ಸಿನಿಮಾದಲ್ಲಿ ಸೇನಾಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಯೋತ್ಪಾದಕರು ಹೈಜಾಕ್ ಮಾಡಿದ ವಿಮಾನದಿಂದ ಪ್ರಯಾಣಿಕರನ್ನು ರಕ್ಷಿಸುತ್ತಾರೆ. ಚಿತ್ರದಲ್ಲಿನ ನಟನ ಪಾತ್ರವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಚಿತ್ರದ ಟ್ರೇಲರ್ ಕೂಡ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಆದರೆ ಸಿನಿಮಾ ಮಾತ್ರ ಅಂದುಕೊಂಡಷ್ಟು ಗಳಿಸುತ್ತಿಲ್ಲ. ಮೂರು ದಿನದಲ್ಲಿ ಕೇವಲ 13 ಕೋಟಿ ರೂಪಾಯಿ ಗಳಿಸಿದ್ದು, ಇದರಿಂದ ಚಿತ್ರ ತಂಡಕ್ಕೆ ನಿರಾಸೆಯೂ ಆಗಿದೆ. ಆದರೆ ಚಿತ್ರದ ಬದಲು ಇದೀಗ ಹಲ್ಲೆಯ ವಿಡಿಯೋ ಸಕತ್ ಸೌಂಡ್ ಮಾಡುತ್ತಿದೆ.
ಬಂಧನದ ಭೀತಿಯಿಂದ ನಟಿ ಜಯಪ್ರದಾ ಸದ್ಯ ನಿರಾಳ: ಶಿಕ್ಷೆ ಅಮಾನತುಗೊಳಿಸಿದ ಸುಪ್ರೀಂಕೋರ್ಟ್
ಈ ವಿಡಿಯೋದಲ್ಲಿ ವಿಮಾನದ ಶೌಚಾಲಯದಲ್ಲಿ ಸಿದ್ದಾರ್ಥ್ ಮೇಲೆ ಕೆಲವರು ಹಲ್ಲೆ ಮಾಡುತ್ತಿರುವುದನ್ನು ಕಾಣಬಹುದು. ಆದರೆ ನಿಜಕ್ಕೂ ಇದು ಹಲ್ಲೆ ಅಲ್ಲ. ಅರ್ಥಾತ್ ಇಲ್ಲಿ ನಡೆಯುತ್ತಿರುವುದು ಹಲ್ಲೆಯೇ ನಿಜ. ಆದರೆ ಇದು ನಿಜವಾದ ಹಲ್ಲೆ ಅಲ್ಲ. ಅಷ್ಟಕ್ಕೂ ಇದು ‘ಯೋಧ’ ಸಿನಿಮಾದ ಒಂದು ಸನ್ನಿವೇಶ ಅಷ್ಟೇ. ಸ್ವತಃ ಸಿದ್ದಾರ್ಥ್ ಅವರೇ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಇದನ್ನು ಶೇರ್ ಮಾಡಿಕೊಂಡಿದ್ದಾರೆ. ಟ್ವಿಟರ್ನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ. ‘ನಾನು ಈ ಹಿಂದೆ ಹಲವು ಬಾರಿ ಸಾಹಸ ದೃಶ್ಯಗಳನ್ನು ಮಾಡಿದ್ದೇನೆ. ಆದರೆ ಮೊದಲ ಬಾರಿಗೆ ಟಾಯ್ಲೆಟ್ನಲ್ಲಿ ಸಾಹಸ ದೃಶ್ಯವನ್ನು ಶೂಟ್ ಮಾಡಿದ್ದೇನೆ. ಎದುರಿಗಿದ್ದ ವ್ಯಕ್ತಿ ಎತ್ತರವಾಗಿದ್ದ. ಹಾಗಾಗಿ ಈ ದೃಶ್ಯ ಶೂಟ್ ಮಾಡಲು ಕಷ್ಟಪಡುತ್ತಿದ್ದೆ’ ಎಂದು ಅವರು ಹೇಳಿದ್ದಾರೆ.
ಅಷ್ಟಕ್ಕೂ ಯೋಧ ಸಿನಿಮಾ ಅಷ್ಟಾಗಿ ಗಳಿಕೆ ಮಾಡದೇ ಇರಲು ಕಾರಣ, ಸೈತಾನ್ ಚಿತ್ರ. ಇದು ಯೋಧದ ಸಮಯದಲ್ಲಿಯೇ ಬಿಡುಗಡೆಯಾಗಿದೆ. ಅಂದರೆ ಸೈತಾನ್ ಮಾರ್ಚ್ 18ಕ್ಕೆ ಬಿಡುಗಡೆಯಾಗಿದೆ. ಇದರಿಂದ ಯೋಧ ಚಿತ್ರಕ್ಕೆ ಪೆಟ್ಟು ಬೀಳುತ್ತಿದೆ ಎನ್ನಲಾಗುತ್ತಿದೆ. ಅಂದಹಾಗೆ, ಯೋಧ ಸಿನಿಮಾದಲ್ಲಿ ದಿಶಾ ಪಟಾನಿ ಮತ್ತು ರಾಶಿ ಖನ್ನಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸಾಹಸಭರಿತ ಥ್ರಿಲ್ಲರ್ ಚಿತ್ರದಲ್ಲಿ ಯೋಧಾ ಟಾಸ್ಕ್ ಫೋರ್ಸ್ ಎಂಬ ಘಟಕದ ಕಮಾಂಡಿಂಗ್ ಅಧಿಕಾರಿ ಅರುಣ್ ಕತ್ಯಾಲ್ ಅವರ ರಕ್ಷಣಾ ಕಾರ್ಯಾಚರಣೆಯ ಕಥೆ ಹೊಂದಿದೆ. ಈ ಚಿತ್ರವನ್ನು ಹಿರೂ ಯಶ್ ಜೋಹರ್, ಕರಣ್ ಜೋಹರ್, ಅಪೂರ್ವ ಮೆಹ್ತಾ ಮತ್ತು ಶಶಾಂಕ್ ಖೈತಾನ್ ನಿರ್ಮಿಸಿದ್ದಾರೆ.
ಓರಗಿತ್ತಿಯರಾಗಲು ರೆಡಿಯಾಗಿರೋ ಸಾರಾ ಅಲಿ ಖಾನ್, ಜಾಹ್ನವಿ ಕಪೂರ್ ವರ್ಕ್ಔಟ್ಗೆ ಫ್ಯಾನ್ಸ್ ಫಿದಾ!
