ಕನ್ನಡದ ಪಾರು ಧಾರಾವಾಹಿ ನಟಿ ಮಾನ್ಸಿ ಜೋಶಿ ಇತ್ತೀಚೆಗೆ ವಿವಾಹವಾಗಿದ್ದು, ಅವರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಚಿನ್ನದ ಸೀರೆಯಲ್ಲಿ ಮಾನ್ಸಿ ಅದ್ಭುತವಾಗಿ ಕಾಣುತ್ತಿದ್ದು, ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
ಕನ್ನಡದ ಪಾರು ಧಾರಾವಾಹಿ ನಟಿ ಮಾನ್ಸಿ ಜೋಶಿ ಇದೀಗ ಕನ್ನಡಕ್ಕಿಂತ ಪರಭಾಷೆ ಧಾರಾವಾಹಿಗಳಲ್ಲಿಯೇ ಭಾರೀ ಫೇಮಸ್ ಆಗಿದ್ದಾರೆ. ಹೀಗಾಗಿ, ಅವರು ಕಳೆದ ತಿಂಗಳು ಮದುವೆ ಮಾಡಿಕೊಂಡಿದ್ದ ವೇಳೆ ಮೂರ್ನಾಲ್ಕು ಭಾಷೆಗಳ ಧಾರಾವಾಹಿ ನಟ-ನಟಿಯರು ಬಂದು ಮದುವೆ ಸಂಭ್ರದಮದಲ್ಲಿ ಭಾಗವಹಿಸಿದ್ದರು. ಎಲ್ಲರೂ ಮಾನ್ಸಿಯ ಮದುವೆ ಫೋಟೋಗಳನ್ನು ಹಂಚಿಕೊಂಡು ಶುಭ ಕೋರಿದ್ದರು. ಆದರೆ, ಇದೀಗ ಮಾನ್ಸಿ ಜೋಶಿಯೇ ತಮ್ಮ ಮದುವೆ ಫೋಟೋಗಳನ್ನು ನಿನ್ನೆ ಶೇರ್ ಮಾಡಿಕೊಂಡಿದ್ದು, ಇದರಲ್ಲಿ ಚಿನ್ನದ ಸೀರೆಯನ್ನುಟ್ಟಿರುವುದು ಕಂಡುಬಂದಿದೆ. ಇದನ್ನು ನೋಡಿದವರಿಗೆ ಮಾನ್ಸಿ ಧಾರಾವಾಹೊ ನಟಿಯೋ ಅಥವಾ ಅರಮನೆಯ ಮಹಾರಾಣಿಯೋ ಎಂಬಂತೆ ಕಂಗೊಳಿಸಿದ್ದಾರೆ.
ಧಾರಾವಾಹಿ ನಟಿ ಮನ್ಸಿ ಜೋಶಿ ಮದುವೆಯ ಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಫೆಬ್ರವರಿ 16 ರಂದು ಮನ್ಸಿ ಮತ್ತು ಇಂಜಿನಿಯರ್ ರಾಘವ ಅವರ ವಿವಾಹ ನೆರವೇರಿತು. ಚಿನ್ನದ ಬಣ್ಣದ ಸೀರೆಯಲ್ಲಿ ಕನಿಷ್ಠ ಆಭರಣಗಳನ್ನು ಧರಿಸಿ ಮನ್ಸಿ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದಾರೆ. ಬಿಳಿ ಬಣ್ಣದಲ್ಲಿ ಕೆಂಪು ಬಾರ್ಡರ್ ಇರುವ ಮುಂಡು ಧರಿಸಿ ರಾಘವ ಸಾಂಪ್ರದಾಯಿಕವಾಗಿ ಬಂದಿದ್ದಾರೆ. ಇದೀಗ ಅವರ ಫೋಟೋಗಳಿಗೆ ಭಾರೀ ಮೆಚ್ಚಿಗೆ ವ್ಯಕ್ತವಾಗಿವೆ. ಕನ್ನಡದ ಪಾರು ಸೀರಿಯಲ್‌ನಲ್ಲಿ ನಟಿಸಿದ ಮಾನ್ಸಿ ಇವರೇನಾ ಎಂದು ಬಾಯು ಮೇಲೆ ಬೆರಳಿಟ್ಟು ನೋಡುವಂತೆ ಕಾಣಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಫೋಟೋ ಮತ್ತು ವಿಡಿಯೋಗೆ ಟ್ಯಾಗ್ ಲೈನ್ ಕುಡ ಬರೆದುಕೊಂಡಿದ್ದಾರೆ. ಅದರಲ್ಲಿ 'ಇದು ಎಲ್ಲಾ ಹುಡುಗಿಯರ ಕನಸಾಗಿರಬಹುದು. ನನ್ನ ಕನಸು ನನಸಾದ ದಿನ ಇದು' ಎಂದು ಮದುವೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಜೀವನದ ಹೊಸ ಆರಂಭಕ್ಕೆ ಶುಭ ಹಾರೈಸಿ ಮಾನಸಿ ಅವರ ವಿವಾಹದ ವೀಡಿಯೊ ಮತ್ತು ಚಿತ್ರಗಳ ಕಾಮೆಂಟ್ ಬಾಕ್ಸ್‌ನಲ್ಲಿ ತುಂಬು ಹೃದಯದ ಹಾರೈಕೆಗಳು ಬರುತ್ತಿವೆ.
ಇದನ್ನೂ ಓದಿ: ಕಿರುತೆರೆ ನಟಿ ಮಾನ್ಸಿ ಜೋಶಿ ಕನ್ನಡಕ್ಕಿಂತ ತಮಿಳು ಧಾರಾವಾಹಿಯಲ್ಲೇ ಭಾರೀ ಫೇಮಸ್!
ಕನ್ನಡದಲ್ಲಿ ಮಾನ್ಸಿ ಜೋಶಿ ಅವರು ಕನ್ನಡದಲ್ಲಿ ಪಾರು ಧಾರಾವಾಹಿಯಲ್ಲಿ ಖಳನಟಿಯಾಗಿದ್ದರು. ಆದರೆ, ಇದೀಗ ಮಲೆಯಾಳಂ ಭಾಷೆಯ ಏಷ್ಯಾನೆಟ್‌ನಲ್ಲಿ ಪ್ರಸಾರವಾಗುವ 'ಚಂದ್ರಿಕಯಿಲ್ ಅಲಿಯುನ್ನ ಚಂದ್ರಕಾಂತಂ' ಧಾರಾವಾಹಿಯ ಮೂಲಕ ಕೇರಳದಲ್ಲಿಯೂ ಪರಿಚಿತರಾಗಿದ್ದಾರೆ. ಮಲಯಾಳಿ ಅಲ್ಲದಿದ್ದರೂ, ಮನ್ಸಿಯನ್ನು ಕಿರುತೆರೆ ಪ್ರೇಕ್ಷಕರು ಈಗಾಗಲೇ ಮೆಚ್ಚಿಕೊಂಡಿದ್ದಾರೆ. ಧಾರಾವಾಹಿಯ ಮತ್ತು ವೈಯಕ್ತಿಕ ಜೀವನದ ವಿಶೇಷಗಳನ್ನು ಮನ್ಸಿ ತಮ್ಮ ವ್ಲಾಗ್ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಈ ಹಿಂದೆ ಮಾನ್ಸಿ ಹಂಚಿಕೊಂಡಿದ್ದ ಸೇವ್ ದ ಡೇಟ್, ಮದುವೆಯ ವೀಡಿಯೊಗಳು ಸಹ ಗಮನ ಸೆಳೆದಿದ್ದವು.
ಮದುವೆಯ ಬಗ್ಗೆ ಮಾತನಾಡಿದ ಮಾನ್ಸಿ, ರಿಸ್ಕ್ ತೆಗೆದುಕೊಳ್ಳಲು ರಾಘವ ಸಿದ್ಧರಾದರು ಎಂದಿದ್ದರು. ರಾಘವನಂತಹ ಜೀವನ ಸಂಗಾತಿ ಸಿಕ್ಕಿದ್ದಕ್ಕೆ ತಾನು ಸಂತೋಷವಾಗಿದ್ದೇನೆ. ಹುಟ್ಟುಹಬ್ಬದ ಸ್ವಲ್ಪ ಮುಂಚೆ ರಾಘವ ಮಾನಸಿಗೆ ಪ್ರಪೋಸ್ ಮಾಡಿದ್ದರು. ಸಿನಿಮೀಯ ಶೈಲಿಯಲ್ಲಿ ಪ್ರಪೋಸಲ್ ಇತ್ತು. ಆ ಕ್ಷಣಕ್ಕಾಗಿ ನಾನು ಕಾಯುತ್ತಿದ್ದೆ ಎಂದು ಮಾನ್ಸಿ ಹೇಳಿದ್ದರು. ತಾನು ಬಹಳ ಆಸೆಯಿಂದ ಧಾರಾವಾಹಿ ಕ್ಷೇತ್ರಕ್ಕೆ ಬಂದಿದ್ದೇನೆ ಎಂದು ಮಾನ್ಸಿ ಹೇಳಿಕೊಂಡಿದ್ದರು. ಇನ್ನು ಮಲೆಯಾಳಂ ಧಾರಾವಾಹಿಯಲ್ಲಿ ಈಗಾಗಲೇ ನಟಿಸುತ್ತಿದ್ದ ಒಬ್ಬ ಪಾತ್ರಧಾರಿಗೆ ಬದಲಿ ನಟಿಯಾಗಿ ಬಂದರೂ, ಶೀಘ್ರದಲ್ಲೇ ಪ್ರೇಕ್ಷಕರು ಮಾನ್ಸಿಯನ್ನು ತೆರೆದ ಹೃದಯದಿಂದ ಸ್ವೀಕರಿಸಿದರು.
ಇದನ್ನೂ ಓದಿ: ಕಿರುತೆರೆ ನಟಿ ಮಾನ್ಸಿ ಜೋಶಿ ಅರಿಶಿಣ ಶಾಸ್ತ್ರದಲ್ಲಿ ಬಿಗ್ ಬಾಸ್ ಮೋಕ್ಷಿತಾ; ಜನರಿಗೆ ಫುಲ್ ಕನ್ಫ್ಯೂಷನ್...
