ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ ಮತ್ತು ತಾಯಿ ಹೇಮಾ ರಮೇಶ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ನಿವೇದಿತಾ ಡಿವೋರ್ಸ್ ಬಳಿಕ ದೇಹ ಪ್ರದರ್ಶನದ ರೀಲ್ಸ್‌ಗಳಿಂದ ಸುದ್ದಿಯಲ್ಲಿದ್ದರೆ, ಹೇಮಾ ಡಬ್‌ಸ್ಮ್ಯಾಷ್‌ಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಮಗಳ ಜೀವನದ ಬಗ್ಗೆ ಗಮನ ಹರಿಸುವಂತೆ ನೆಟ್ಟಿಗರು ಹೇಮಾ ಅವರಿಗೆ ಸಲಹೆ ನೀಡಿದ್ದಾರೆ. ಇವರಿಬ್ಬರ ಡ್ರೆಸ್ಸಿಂಗ್ ಸೆನ್ಸ್ ಕೂಡ ಚರ್ಚೆಯಲ್ಲಿದೆ.

ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಅವರಂತೂ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಫೇಮಸ್​. ಡಿವೋರ್ಸ್​ ಬಳಿಕವಂತೂ ಧಾರಾಳವಾಗಿ ದೇಹ ಪ್ರದರ್ಶನ ಮಾಡುತ್ತಲೇ ರೀಲ್ಸ್​ ಮಾಡುತ್ತಿರುವ ನಿವೇದಿತಾ ಒಂದೆಡೆಯಾದರೆ, ಸೌಂದರ್ಯದಲ್ಲಿ ಮಗಳಿಗೇ ಸ್ಪರ್ಧೆ ಒಡ್ಡುತ್ತಾ ಇರೋರು ನಿವೇದಿತಾ ಅಮ್ಮ ಹೇಮಾ ರಮೇಶ್​. ಬಿಗ್​ಬಾಸ್​ 5ರ ಸಮಯದಲ್ಲಿ ನಿವೇದಿತಾ ಗೌಡ ಜೊತೆ ಹೇಮಾ ಅವರೂ ಎಲ್ಲರ ಗಮನ ಸೆಳೆದಿದ್ದರು. ಇವರು ನೋಡಲು ಕೂಡ ಸುಮಾರಾಗಿ ಒಂದೇ ರೀತಿಯಿದ್ದು ಅಕ್ಕ ತಂಗಿಯಂತೆ ಕಾಣಿಸುತ್ತಾರೆ. ಮಗಳು ನಿವೇದಿತಾರಂತೆ ತಾಯಿ ಹೇಮಾ ಕೂಡ ಸಕತ್​ ಡ್ರೆಸ್ಸಿಂಗ್ ಸೆನ್ಸ್​ ಹೊಂದಿದ್ದಾರೆ. ಅವರೂ ಮೇಕ್​ ಓವರ್​ ಮಾಡಿಕೊಂಡು ಬಿಟ್ಟರಂತೂ ನಿವೇದಿತಾ ಅಮ್ಮ ಎನ್ನಲು ಸಾಧ್ಯವೇ ಇಲ್ಲ. ಅದೇ ರೀತಿ ಮೇಕಪ್​ ಮಾಡಿಕೊಂಡು ಅವರು ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿ ಮೂಡಿಸುವುದೂ ಇದೆ. ನಿವೇದಿತಾ ಅವರ ಮೈ ಕಟ್ಟುನ್ನೇ ತಾಯಿಯೂ ಹೊಂದಿರುವುದರಿಂದ ಮಗಳಿಗೆ ಕಾಪಿಟೇಷನ್​ ನೀಡುತ್ತಿದ್ದಾರೆ ಎಂದೇ ಎಲ್ಲರೂ ಅಂದುಕೊಳ್ಳುತ್ತಾರೆ. 

ಇದೀಗ ಹೇಮಾ ಅವರು ಅಮೃತಧಾರೆ ಭೂಮಿಕಾ ಸೀರಿಯಲ್​ನಲ್ಲಿ ಹೇಳಿರುವ ಡೈಲಾಗ್​ನ ಡಬ್​ಸ್ಮ್ಯಾಷ್​ ಮಾಡಿದ್ದಾರೆ. ನಾನು ನಿಮ್ಮಷ್ಟು ದುಡ್ಡು ನೋಡದೇ ಇರಬಹುದು ಅತ್ತೆ... ಎಂದು ಭೂಮಿಕಾ ತನ್ನ ಅತ್ತೆ ಶಕುಂತಲಾ ದೇವಿಗೆ ಹೇಳಿರುವ ಡೈಲಾಗ್​ ಅನ್ನು ರೀಲ್ಸ್​ ಮಾಡಿದ್ದಾರೆ ನಿವೇದಿತಾ ಅಮ್ಮ ಹೇಮಾ. ಸೌಂದರ್ಯದಲ್ಲಿ ಮಾತ್ರವಲ್ಲದೇ ಆ್ಯಕ್ಟಿಂಗ್​ನಲ್ಲಿಯೂ ಇವರು ಸೂಪರ್​. ಆದರೆ, ಮಗಳ ಲೈಫ್​ ಚೆನ್ನಾಗಿದ್ದರೆ ಅಭಿಮಾನಿಗಳಿಗೆ ಬೇಸರ ಆಗುತ್ತಿರಲಿಲ್ಲವೇನೋ. ಆದರೆ, ಇದೀಗ ಹೇಮಾ ಅವರಿಗೆ ನೆಟ್ಟಿಗರು ಬುದ್ಧಿಮಾತು ಹೇಳಲು ಶುರು ಮಾಡಿದ್ದಾರೆ. ಕೆಲವರು ಪಾಸಿಟಿವ್​ ಕಮೆಂಟ್​ ಹಾಕುತ್ತಿದ್ದರೆ, ಮತ್ತೆ ಕೆಲವರು ನೆಗೆಟಿವ್​ ಹಾಕುತ್ತಿದ್ದಾರೆ. ಮಗಳ ಲೈಫ್​ ಸರಿ ಮಾಡೋದು ಬಿಟ್ಟು ನೀವೇ ಹೀಗೆ ರೀಲ್ಸ್ ಮಾಡ್ತಾ ಕುಳಿತರೆ, ಅಲ್ಲಿ ಮಗಳು ಹೇಗೆ ವೇಷ ಹಾಕಿಕೊಂಡಿರೋದರ ಬಗ್ಗೆ ಗಮನ ಹರಿಸೋದು ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ. 

ಶೆಡ್​ಗೆ ಬರಬೇಕಿಲ್ಲ.. ಇಲ್ಲೇ ಫಿನಿಷ್! ಕೆಟ್ಟ ಕಮೆಂಟ್​ ಮಾಡೋರಿಗೆ ನಿವೇದಿತಾ ಕೊಟ್ರಾ ಎಚ್ಚರಿಕೆ- ಹಾಗಂತ ಬಿಡ್ತಾರಾ?


ಇನ್ನು, ಹೇಮಾ ಅವರ ಪತಿ ಅಂದರೆ ನಿವೇದಿತಾ ಅವರ ತಂದೆ ಉದ್ಯಮಿಯಾಗಿದ್ದು ಇವರ ಹೆಸರು ಲಕ್ಷ್ಮಣ್​. ನಿವೇದಿತಾ ಬಾರ್ಬಿ ಡಾಲ್​ನಂತೆ ಕಂಗೊಳಿಸಿದರೆ ಅವರ ಅಮ್ಮ ಕೂಡ ತುಂಬಾ ಸುಂದರವಾಗಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಅಮ್ಮನ ಸೌಂದರ್ಯವೇ ಮಗಳಿಗೂ ಬಂದಿದೆ ಎಂದು ಹಲವರು ಹಾಡಿ ಹೊಗಳುತ್ತಿದ್ದಾರೆ. ಅಂದಹಾಗೆ ನಿವೇದಿತಾ ಅವರು, ನಿವೇದಿತಾ ಗೌಡ ಹೆಚ್ಚಾಗಿ ತಮ್ಮ ತಾಯಿಯ ಜೊತೆಗೆ ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಾರೆ. ತಾಯಿಯ ಜೊತೆ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ. ಇನ್ನು ನಿವೇದಿತಾ ಅವರ ಬಗ್ಗೆ ಹೇಳುವುದಾದರೆ, ಚಂದನ್ ಮತ್ತು ನಿವೇದಿತಾ ಮದುವೆಯಾದದ್ದು 2020ರಲ್ಲಿ 26ರಂದು. ಮೈಸೂರಿನಲ್ಲಿ ಈ ಜೋಡಿ ವಿವಾಹ ಅದ್ದೂರಿಯಾಗಿ ನೆರವೇರಿದೆ. ಸಾಕಷ್ಟು ಸಿನಿಮಾ ತಾರೆಯರು ಕೂಡ ಇವರ ಮದುವೆ ಸಾಕ್ಷಿ ಆಗಿದ್ದರು.

ಇನ್ನು ನಿವೇದಿತಾ ಬಗ್ಗಂತೂ ಹೇಳುವುದೇ ಬೇಡ. ಬಾರ್ಬಿ ಡಾಲ್​ ಎಂದೇ ಫೇಮಸ್​ ಆದವರು ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಇದ್ದಾರೆ. ಸದಾ ರೀಲ್ಸ್​ ಮಾಡುತ್ತಲೇ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಅಪಾರ ಅಭಿಮಾನಿ ಬಳಗ ಹೊಂದಿರುವ ನಿವೇದಿತಾ ಗೌಡ (Niveditha Gowda) ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ (Chandan Shetty) ಅವರನ್ನು ಮದುವೆಯಾಗಿ ಲೈಫ್​ ಎಂಜಾಯ್​ ಮಾಡುತ್ತಿರುವ ನಡುವೆಯೇ ಶಾಕ್​ ಕೊಟ್ಟವರು. ಬಳಕುವ ಬಳ್ಳಿಯಂತೆ ಇರುವ ನಿವೇದಿತಾ ದೇಹಕ್ಕೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿದ್ದಾರೆಯೇ ಎನ್ನುವಷ್ಟರ ಮಟ್ಟಿಗೆ ದೇಹ ಪ್ರದರ್ಶನ ಮಾಡುತ್ತಿದ್ದಾರೆ. ಇದು ವಯಸ್ಸು ಇರುವವರೆಗೆ ಚೆಂದ, ಆಮೇಲೆ ಮಗಳ ಲೈಫ್​ ಏನು ಅಂತ ಗೊತ್ತಿದ್ಯಾ ಎಂದು ಹೇಮಾ ಅವರನ್ನು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಸದ್ಯ ನಿವೇದಿತಾ ಅಂತೂ ಯಾವ ಕಮೆಂಟ್​ಗೂ ಡೋಂಟ್​ ಕೇರ್​. ಆಕೆಯಂತೆಯೇ ಅಮ್ಮನೂ ಕೂಡ. ಅಷ್ಟಕ್ಕೂ ನೂಲಿನಂತೆಯೇ ಸೀರೆ ಅಲ್ಲವೆ ಎನ್ನುವುದು ಕೆಲವರ ಪ್ರಶ್ನೆ. 

ನೈಟೆಲ್ಲಾ ನಿದ್ದೆನೇ ಮಾಡಿಲ್ಲ ಎಂದ ನಿವೇದಿತಾ ಗಂಡಸ್ರಿಗೆ ಹೀಗೆ ಕೊಡೋದಾ ಓಪನ್​ ಚಾಲೆಂಜ್​? ಎಲ್ಲರೂ ಕಕ್ಕಾಬಿಕ್ಕಿ...

View post on Instagram