ಜೀ ಕನ್ನಡದಲ್ಲಿ ಪ್ರಸಾರವಾಗ್ತೀರೋ ಸೀತಾರಾಮ ಧಾರಾವಾಹಿ ಒಂದು ವಾರದಲ್ಲಿ 7.5 ರೇಟಿಂಗ್ ಪಡೆದುಕೊಂಡಿದೆ. ಈ ಖುಷಿಯನ್ನು ನಟಿ ವೈಷ್ಣವಿ ಗೌಡ್ ರೀಲ್ಸ್ ಮೂಲಕ ಹಂಚಿಕೊಂಡಿದ್ದಾರೆ.
ಜೀ ಕನ್ನಡ (Zee Kannada) ಚಾನೆಲ್ನಲ್ಲಿ ಬಹು ಸದ್ದು ಮಾಡಿದ್ದ ಸೀತಾರಾಮ ಧಾರಾವಾಹಿ ಶುರುವಾಗಿ ಒಂದು ವಾರವಾಗಿದೆ. ಈ ಧಾರಾವಾಹಿ ಯಾವಾಗ ಶುರುವಾಗುತ್ತದೆ ಎಂದು ಕಾತರದಿಂದ ಕಾದು ಕುಳಿತವರಿಗೆ ಗುಡ್ ನ್ಯೂಸ್ ಕೊಟ್ಟಿದ್ದ ತಂಡ, ಧಾರಾವಾಹಿಯನ್ನು ಇದೇ 17ರಿಂದ ಶುರು ಮಾಡಿದೆ. ಸೀತೆಯ ಪಾತ್ರದಲ್ಲಿ ಅಗ್ನಿಸಾಕ್ಷಿ ಖ್ಯಾತಿಯ ಸನ್ನಿಧಿ ಅರ್ಥಾತ್ ವೈಷ್ಣವಿ ಗೌಡ ಕಾಣಿಸಿಕೊಂಡಿದ್ದರೆ, ರಾಮನ ಪಾತ್ರದಲ್ಲಿ ಮಂಗಳಗೌರಿ ಧಾರಾವಾಹಿ ಖ್ಯಾತಿಯ ಗಗನ್ ಚಿನ್ನಪ್ಪ ಮಿಂಚುತ್ತಿದ್ದಾರೆ. ಗಂಡನಿಂದ ದೂರ ಆಗಿರುವ ಸೀತಾಗೆ ಸಿಹಿ ಎಂಬ ಪುಟ್ಟ ಮಗಳಿದ್ದಾಳೆ. ಗಂಡ ಮಾಡಿದ ಸಾಲದ ಜೊತೆಗೆ ಶುಗರ್ ಕಾಯಿಲೆ ಇರುವ ಮಗಳನ್ನು ಸೀತಾ ಸಾಕಬೇಕಿದೆ. ಇನ್ನೊಂದು ಕಡೆ ಚಿಕ್ಕಮ್ಮ ಭಾರ್ಗವಿಯ ಮೋಸ, ಕುತಂತ್ರ ಅರಿಯದೆ ನಾಯಕ ರಾಮ್ ಜೀವನ ನಡೆಸುತ್ತಿದ್ದಾನೆ. ಒಮ್ಮೆ ಪ್ರೀತಿ ಕಳೆದುಕೊಂಡಿರುವ ರಾಮ್ ಮತ್ತೆ ಪ್ರೀತಿ ಹುಡುಕಿಕೊಳ್ಳುತ್ತಾನಾ? ಸಿಹಿ ಸೀತಾ-ರಾಮ್‌ರನ್ನು ಒಂದು ಮಾಡುತ್ತಾಳಾ ಎನ್ನುವುದು ಈ ಧಾರಾವಾಹಿಯ ತಿರುಳು.
ಸೀತಾರಾಮ (SeetaRama) ಧಾರಾವಾಹಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ವರ್ಷದ ಹಿಂದೆಯೇ ತೆರೆ ಮೇಲೆ ಬರಬೇಕಿದ್ದ ಸೀತಾರಾಮದ ಪ್ರೋಮೋ ರಿಲೀಸ್ ಆದಾಗಲೇ ಸಕತ್ ವೈರಲ್ ಆಗಿತ್ತು. ಇದೀಗ ಧಾರಾವಾಹಿಯೂ ತುಂಬಾ ಚೆನ್ನಾಗಿ ಓಡುತ್ತಿದೆ. ಈ ಒಂದು ವಾರದಲ್ಲಿ ಸೀತಾ ರಾಮ ಸೀರಿಯಲ್ 7.5 ರೇಟಿಂಗ್ ಪಡೆದುಕೊಂಡಿದೆ. ಹೊಸ ಕಥೆ, ಹೊಸ ಕಾನ್ಸೆಪ್ಟ್ ಅನ್ನು ಜನರು ಮೆಚ್ಚಿಕೊಂಡಿದ್ದಾರೆ. ಅದರಲ್ಲಿಯೂ ಪುಟಾಣಿ ಸಿಹಿಯ ಆ್ಯಕ್ಟಿಂಗ್ಗೆ ಜನರು ಮನಸೋತಿದ್ದಾರೆ. ಈ ಪಾಪುಗೆ ಶುಗರ್ ಇದೆ. ಈಕೆ ಶುಗರ್‌ಗೆ ಪ್ರತಿದಿನ ಇಂಜೆಕ್ಷನ್ (Injection) ತಗೋಬೇಕು. ಅಳುವ ಅಮ್ಮನಿಗೆ ಈ ಪುಟಾಣಿಯೇ ಅಮ್ಮನನ್ನು ಸಮಾಧಾನ ಮಾಡುತ್ತಾಳೆ. ಇದು ಪ್ರೇಕ್ಷಕರಿಗೂ ಕಣ್ಣೀರು ತರಿಸುವಂತಿದೆ. ಅಷ್ಟು ಅದ್ಭುತವಾಗಿ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಲಾಗಿದೆ.
ಸೀತಾರಾಮ ಸೀರಿಯಲ್‌ನ ಸಿಹಿ ಮುದ್ದು ರೀತು ಸಿಂಗ್ ಕನ್ನಡದವಳಲ್ಲ, ಭಾಷೆ ಕಲಿತಿದ್ದು ಹೇಗೆ?
ಇದೀಗ ನಟಿ ವೈಷ್ಣವಿ ಗೌಡ (Vaishnavi Gowda) ಅವರು ಈ ಧಾರಾವಾಹಿಯ ಕುರಿತು ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇದಾಗಲೇ ಹೇಳಿದಂತೆ ಸೀರಿಯಲ್ಗೆ 7.5 ರೇಟಿಂಗ್ ಬಂದಿದ್ದು, ಇದರ ಖುಷಿಯನ್ನು ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇಡೀ ತಂಡದ ಜೊತೆಯಲ್ಲಿ ರೀಲ್ಸ್ ಮಾಡಿದ್ದಾರೆ. ಓಪನಿಂಗ್ ವಾರದಲ್ಲಿ 7.5 ರೇಟಿಂಗ್ ಪಡೆದ ಖುಷಿಯಲ್ಲಿ ನಮ್ಮ ಹ್ಯಾಪಿ ಡ್ಯಾನ್ಸ್ ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ತಕಿಟ ತಕಿಟ ಹಾಡಿಗೆ ತಂಡ ಹೆಜ್ಜೆ ಹಾಕಿದೆ. ಈ ರೀಲ್ಸ್ಗೆ ಜನರು ಮೆಚ್ಚುಗೆಯ ಮಹಾಪೂರ ಹರಿಸುತ್ತಿದ್ದಾರೆ.
ಬಹುತೇಕ ಧಾರಾವಾಹಿಗಳು ಆರಂಭದಲ್ಲಿ ಚೆನ್ನಾಗಿ ಮೂಡಿಬಂದು ಕೊನೆಕೊನೆಗೆ ಬೋರ್ ಹೊಡೆಸುತ್ತವೆ. ರೇಟಿಂಗ್ ಕಳೆದುಕೊಳ್ಳುತ್ತವೆ. ಈ ಧಾರಾವಾಹಿ (Serial) ಹಾಗೆ ಆಗದಿರಲಿ ಎಂದು ಹಲವರು ಆಶಿಸಿದ್ದಾರೆ. ವೈಷ್ಣವಿಯವರ ನಟನೆಯ ಕುರಿತು ಹಲವರು ಅಭಿನಂದನೆ ಸಲ್ಲಿಸುತ್ತಿದ್ದರೆ, ಪುಟಾಣಿ ಸಿಹಿಯ ಆ್ಯಕ್ಟಿಂಗ್ಗೆ ಹಲವು ಪ್ರೇಕ್ಷಕರು ಮನಸೋತಿರುವುದಾಗಿ ತಿಳಿಸಿದ್ದಾರೆ. ಅಂದಹಾಗೆ ಈ ಪಾತ್ರಕ್ಕೆ ಬಣ್ಣ ಹಚ್ಚಿರೋ ಪುಟಾಣಿ ಸಿಹಿ ಇಲ್ಲಿಯವಳಲ್ಲ, ನೇಪಾಳದವಳು. ಇವರ ಪಟ್ಟ ಫ್ಯಾಮಿಲಿ ಈಗ ಬೆಂಗಳೂರಲ್ಲಿ ವಾಸವಾಗಿದ್ದರೂ ಇವರ ಮೂಲ ಮನೆ ಇರೋದು ನೇಪಾಳದಲ್ಲಿ. ಇಷ್ಟಕ್ಕೂ ಸಿಹಿಯಾಗಿ ಈಕೆ ಸೀತಾರಾಮ ಪ್ರೊಮೋದಲ್ಲಿ ಕಾಣಿಸಿಕೊಂಡಾಗ ಈ ಮಗುವನ್ನ ಎಲ್ಲೋ ನೋಡಿದ್ದಾವಲ್ಲಾ ಅಂದುಕೊಂಡರು ಒಂದಿಷ್ಟು ಪ್ರೇಕ್ಷಕರು. ಮರುಕ್ಷಣ ಅವರಿಗೆ ಹೊಳೆದ ಹೆಸರೇ ರಿತು ಸಿಂಗ್.
ಸಂಸಾರವೆಂದ್ರೆ ವ್ಯವಹಾರವಲ್ಲ, ಪ್ರೀತಿ, ವಿಶ್ವಾಸ ತುಂಬಿರಬೇಕು: ಲಕ್ಷ್ಮಿ ಬಾರಮ್ಮಾ ಹೇಳಿದ ಜೀವನ ಪಾಠ!
ಜೀ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ಡ್ರಾಮಾ ಜ್ಯೂನಿಯರ್ಸ್‌ನಲ್ಲಿ ರಿತೂ ಸಿಂಗ್ ಕನ್ನಡಿಗರ ಗಮನ ಸೆಳೆದಿದ್ದಳು. ರವಿಚಂದ್ರನ್ ಅವರನ್ನು ಬಹಳ ಬಹಳ ಇಷ್ಟಪಡ್ತಿದ್ದ ಈ ಪುಟಾಣಿ ಈಗ ಸೀತಾರಾಮದ ಕೇಂದ್ರಬಿಂದು. ಇನ್ನೂ 5 ವರ್ಷ ತುಂಬದ ಈ ಪುಟ್ಟ ಪೋರಿ ನಟನೆಗೆ, ಮುದ್ದು ಮುದ್ದಾದ ಮಾತಿಗೆ ವೀಕ್ಷಕರು ಮನ ಸೋತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಸಿಹಿ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಾಯಿ ಬಳಿ ದೃಷ್ಟಿ ತೆಗೆಸಿಕೋ ಎಂದು ಕೂಡ ಹೇಳಿದ್ದಾರೆ.
