Actress Vaishnavi Gowda: ಸೀತಾರಾಮ ಧಾರಾವಾಹಿ ನಟಿ ವೈಷ್ಣವಿ ಗೌಡ ಅವರು ಮದುವೆಯಾದರೂ ಕೂಡ ತಾಳಿ ಹಾಕ್ತಿಲ್ಲ ಎಂದು ಕೆಲವರು ಆರೋಪ ಮಾಡಿದ್ದರು. ಇದಕ್ಕೆ ವೈಷ್ಣವಿ ಗೌಡ ಉತ್ತರ ಕೊಟ್ಟಿದ್ದಾರೆ. 

Actress Vaishnavi Gowda: ನಟಿ ವೈಷ್ಣವಿ ಗೌಡ ಅವರು ಮದುವೆಯಾಗಿ ಒಂದು ತಿಂಗಳು ಆಗುತ್ತ ಬಂತು. ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮದುವೆಯಾದ ನಟಿ ವೈಷ್ಣವಿ ಗೌಡ ಅವರು ಪತಿಯ ಜೊತೆಗೆ ಹನಿಮೂನ್‌ಗೆ ಹೋಗಿದ್ದರು. ಈಗ ಅವರು ತಮ್ಮ ಯುಟ್ಯೂಬ್‌ ಚಾನೆಲ್‌ನಲ್ಲಿ ಜನರ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ.

ತಾಳಿ ಹಾಕುವ ಪದ್ಧತಿ ಇಲ್ಲ!

“ನಮ್ಮ ಸಂಪ್ರದಾಯಕ್ಕೆ ಗೌರವ ಕೊಡೋದಿಲ್ವಾ? ತಾಳಿ ಬೇಡ ಅಂದ್ರೆ ಯಾಕೆ ಮದುವೆ ಆದ್ರಿ ಅಂತ ಕೆಲವರು ಕೇಳಿದ್ದಾರೆ. ಹುಡುಗನ ಮನೆಯಲ್ಲಿ ಯಾವ ಪದ್ಧತಿ ಇದೆಯೋ ಅದನ್ನೇ ಹುಡುಗಿ ಕೂಡ ಅನುಸರಿಸುತ್ತಾಳೆ. ಅದೇ ಪದ್ಧತಿ ರೂಢಿಯಲ್ಲಿದೆ. ಹೀಗಾಗಿ ಹುಡುಗನ ಪದ್ಧತಿಯಂತೆ ನಮ್ಮ ಮದುವೆ ಆಯ್ತು. ತಾಳಿ ಹಾಕಿಲ್ಲ ಅಂತ ಕೆಲವರು ಕೇಳಿದ್ದೀರಾ. ನನ್ನ ಅತ್ತೆ ಕೂಡ ಇದುವರೆಗೂ ತಾಳಿ ಹಾಕಿಲ್ಲ. ತಾಳಿ ಹಾಕುವ ಪದ್ಧತಿ ನಮ್ಮಲ್ಲಿ ಇಲ್ಲ” ಎಂದು ವೈಷ್ಣವಿ ಗೌಡ ಹೇಳಿದ್ದಾರೆ.

ಮದುವೆ ಆಗಿದೆ ಅಂತ ಹೇಗೆ ಗೊತ್ತಾಗತ್ತೆ?

“ತಾಳಿ ಹಾಕೋದು ಅವರ ಪದ್ಧತಿಯಲ್ಲಿ ಇಲ್ಲ, ಅದು ನಮಗೆ ಮುಖ್ಯ ಅಲ್ಲ ಎಂದರು. ಮೂಗು ಚುಚ್ಚಿಸಿರಬೇಕು, ಕೈಯಲ್ಲಿ ಗಾಜಿನ ಬಳೆ ಇರಬೇಕು, ಕೈಯಲ್ಲಿ ಒಂದು ದಾರ ಇರಬೇಕು, ಕಾಲುಂಗುರ ಹಾಕಿರಬೇಕು. ನಮ್ಮ ಸಂಪ್ರದಾಯ, ಸಂಸ್ಕೃತಿ ಬಗ್ಗೆ ನನಗೆ ಗೌರವವಿದೆ. ಆದರೆ ಅವರ ಮನೆಯಲ್ಲಿ ಈ ಪದ್ಧತಿ ಇಲ್ಲ ಎಂದು ಹಾಕುತ್ತಿಲ್ಲ ಅಷ್ಟೇ” ಎಂದು ವೈಷ್ಣವಿ ಗೌಡ ಹೇಳಿದ್ದಾರೆ.

‌ಪತಿಯ ಜೊತೆಗೆ ಟ್ರಿಪ್

ನಟಿ ವೈಷ್ಣವಿ ಗೌಡ ಅವರು ಅನುಕೂಲ್‌ ಮಿಶ್ರಾ ಜೊತೆಗಿನ ಟ್ರಿಪ್‌ನಲ್ಲಿ ಒಂದಷ್ಟು ಸ್ಥಳಗಳಿಗೆ ಭೇಟಿ ಕೊಟ್ಟಿದ್ದಾರಂತೆ, ಅಷ್ಟೇ ಅಲ್ಲದೆ ಕುಲದೇವತೆಯ ದರ್ಶನ ಮಾಡಿದ್ದಾರೆ. ಇನ್ನು ಪತಿಯ ಜೊತೆಗೆ ಅವರು ಮಾಲ್‌ಗೆ ಹೋಗಿ ಒಂದಷ್ಟು ಬಟ್ಟೆಗಳನ್ನು ಖರೀದಿ ಮಾಡಿದ್ದಾರಂತೆ. ಇನ್ನು ಟ್ರಿಪ್‌ ಫೋಟೋಗಳನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅರೇಂಜ್‌ ಮ್ಯಾರೇಜ್‌

ಮೆಟ್ರಿಮೋನಿಯಲ್ಲಿ ವೈಷ್ಣವಿ ಗೌಡ ಹಾಗೂ ಅನುಕೂಲ್‌ ಮಿಶ್ರಾ ಪರಿಚಯ ಆಗಿದೆ. ಒಂದು ವರ್ಷದ ಹಿಂದೆಯೇ ಇವರ ಮದುವೆ ಫಿಕ್ಸ್‌ ಆಗಿತ್ತು. ಈ ವರ್ಷ ಈ ಜೋಡಿ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡು, ಮದುವೆ ಆಗಿದ್ದಾರೆ. ಅನುಕೂಲ್‌ ಮಿಶ್ರಾ ಅವರು ಇಂಡಿಯನ್‌ ಆರ್ಮಿಯಲ್ಲಿ ಲೆಫ್ಟಿನೆಂಟ್‌ ಆಗಿ ಕೆಲಸ ಮಾಡುತ್ತಿದ್ದಾರೆ. ವೈಷ್ಣವಿ ಗೌಡ ನಟಿಯಾದರೆ, ಅನುಕೂಲ್‌ ಅವರು ಆರ್ಮಿಯಲ್ಲಿದ್ದಾರೆ.

ಅನುಕೂಲ್‌ ಮಿಶ್ರಾ ಅವರು ಉತ್ತರಾಖಂಡದವರು. ಹೀಗಾಗಿ ಮಧ್ಯರಾತ್ರಿ ಈ ಜೋಡಿ ಮದುವೆ ಆಗಿತ್ತು. ಈ ಮದುವೆಯಲ್ಲಿ ಸೀತಾರಾಮ ಧಾರಾವಾಹಿ, ಅಗ್ನಿಸಾಕ್ಷಿ ಧಾರಾವಾಹಿ ಕಲಾವಿದರು ಸೇರಿದಂತೆ ಸಾಕಷ್ಟು ಕಿರುತೆರೆಯ ಗಣ್ಯರು ಆಗಮಿಸಿದ್ದರು. ಒಟ್ಟಿನಲ್ಲಿ ಅದ್ದೂರಿಯಾಗಿ ವೈಷ್ಣವಿ ಮದುವೆಯಾಗಿದ್ದರು.

ಮತ್ತೆ ನಟಿಸ್ತಾರಾ?

ಅನುಕೂಲ್‌ ಮಿಶ್ರಾ ಅವರು ಬೆಂಗಳೂರಿನಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ವೈಷ್ಣವಿ ಗೌಡ ಕೂಡ ಇಲ್ಲಿಯೇ ಇರಲಿದ್ದಾರೆ. ಅಂದಹಾಗೆ ಮದುವೆ ಬಳಿಕವೂ ವೈಷ್ಣವಿ ಗೌಡ ಅವರು ನಟಿಸಲಿದ್ದಾರಂತೆ. ಅವರಂತೂ ಒಳ್ಳೆಯ ಪಾತ್ರದ ನಿರೀಕ್ಷೆಯಲ್ಲಿದ್ದಾರೆ.

YouTube video player