ʼಸೀತಾರಾಮʼ ಧಾರಾವಾಹಿ ನಟಿ ವೈಷ್ಣವಿ ಗೌಡ ಅವರು ಕೆಂಪು ಬಣ್ಣದ ಡ್ರೆಸ್‌ ಧರಿಸಿ ಮುದ್ದು ಮುದ್ದಾಗಿ ಡ್ಯಾನ್ಸ್‌ ಮಾಡಿದ್ದಾರೆ. ಈ ವಿಡಿಯೋಕ್ಕೆ ಒಳ್ಳೆಯ ಮೆಚ್ಚುಗೆ ಸಿಗುತ್ತಿದೆ.  

ಕೆಂಪು, ಬಿಳಿ ಬಣ್ಣದ ಡ್ರೆಸ್‌ ಧರಿಸಿ ವೈಷ್ಣವಿ ಗೌಡ ಮುದ್ದು ಮುದ್ದಾಗಿ ಡ್ಯಾನ್ಸ್‌ ಮಾಡಿದ್ದಾರೆ. ಕೆಂಪು ಬಣ್ಣದ ಉಡುಗೆಯಲ್ಲಿ ಅವರ ನೃತ್ಯ ವೀಕ್ಷಕರ ಮನಸ್ಸು ಗೆದ್ದಿವೆ. ಹೌದು, ʼಸೀತಾರಾಮʼ ಧಾರಾವಾಹಿ ನಟಿ ವೈಷ್ಣವಿ ಗೌಡ ಅವರು ಸೋಶಿಯಲ್‌ ಮೀಡಿಯಾದಲ್ಲಿ ಹೊಸ ಡ್ಯಾನ್ಸ್‌ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

ಡ್ಯಾನ್ಸ್‌ ಮೂಲಕ ಮನಗೆದ್ರು! 
ವೈಷ್ಣವಿ ಗೌಡ ಅವರು ಚಿಕ್ಕ ವಯಸ್ಸಿನಿಂದಲೂ ನೃತ್ಯ ಮಾಡುತ್ತಿದ್ದಾರೆ. ಡ್ಯಾನ್ಸ್‌ನ ಸಾಕಷ್ಟು ಪ್ರಕಾರಗಳು ಅವರಿಗೆ ಗೊತ್ತಿವೆ. ಈಗಾಗಲೇ ರಿಯಾಲಿಟಿ ಶೋಗಳಲ್ಲಿ, ಅನೇಕ ವೇದಿಕೆಗಳಲ್ಲಿ ವೈಷ್ಣವಿ ಗೌಡ ಅವರು ಡ್ಯಾನ್ಸ್‌ ಮಾಡಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಆಗಿರುವ ಅವರು ಆಗಾಗ ಡ್ಯಾನ್ಸ್‌ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

View post on Instagram

ವೈಷ್ಣವಿ ಗೌಡ ಅವರು ಯುಟ್ಯೂಬ್‌ ಚಾನೆಲ್‌ ಆರಂಭಿಸಿದ್ದು, ಅಲ್ಲಿಯೂ ಆಕ್ಟಿವ್‌ ಆಗಿದ್ದಾರೆ. ಸೀತಾರಾಮ ಧಾರಾವಾಹಿ, ಫಿಟ್‌ನೆಸ್, ಯೋಗ, ಸೌಂದರ್ಯ ಪಾಲನೆ ಬಗ್ಗೆ ಅವರು ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ. 

ವೈಷ್ಣವಿ ಗೌಡ ನೋಡಿ ಕಲಿತುಕೊಳ್ಳಿ..Betting App ಮೇಲೆ ಬುಲೆಟ್‌ ಸವಾರಿ, 'ದುಡಿದ್ರೆ ನೀಯತ್ತಾಗಿ ದುಡಿಬೇಕು' ಎಂದ ರಕ್ಷಕ್‌

ʼಸೀತಾರಾಮʼ ಸೀತಮ್ಮ..!
ʼಸೀತಾರಾಮʼ ಧಾರಾವಾಹಿಯಲ್ಲಿ ಸೀತಾ ಪಾತ್ರದಲ್ಲಿ ವೈಷ್ಣವಿ ಗೌಡ ನಟಿಸುತ್ತಿದ್ದಾರೆ. ಸರೋಗಸಿ ಮದರ್‌ ಪಾತ್ರದಲ್ಲಿ ಸೀತಾ ಕಾಣಿಸಿಕೊಂಡಿದ್ದಾರೆ. ಮಗಳು ಸಿಹಿ ಸತ್ತಮೇಲೆ ಸೀತಾ ಮಾನಸಿಕ ಆರೋಗ್ಯ ಹಾಳಾಗಿತ್ತು. ಈಗ ಸುಬ್ಬಿ ಸಿಹಿಯಾಗಿ ಆಗಮಿಸಿದ್ದು, ಸೀತಾ ಆರೋಗ್ಯ ಸರಿಹೋಗಿದೆ. ಮನೆಗೆ ಬಂದಿರೋದು ಸುಬ್ಬಿ ಎನ್ನೋ ವಿಷಯ ಅವಳಿಗೆ ಇನ್ನೂ ಅರ್ಥ ಆಗಿಲ್ಲ. ಮುಂದಿನ ದಿನಗಳಲ್ಲಿ ಈ ಧಾರಾವಾಹಿ ಕಥೆ ಹೇಗೆ ಸಾಗಲಿದೆ ಎಂದು ಕಾದು ನೋಡಬೇಕಿದೆ.

ಆಫರ್‌ ರಿಜೆಕ್ಟ್‌ ಮಾಡಿದ್ದ ರಕ್ಷಕ್‌ ! 
ಕೆಲ ದಿನಗಳ ಹಿಂದೆ ವೈಷ್ಣವಿ ಗೌಡ ಅವರು ಜಂಗ್ಲಿ ರಮ್ಮಿ ಪ್ರಚಾರ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದರು. ಜನರು ನಿಂದಿಸುತ್ತಾರೆ ಎನ್ನುವ ಕಾರಣಕ್ಕೆ ಅವರು ಈ ವಿಡಿಯೋದ ಕಾಮೆಂಟ್‌ ಸೆಕ್ಷನ್‌ ಆಫ್‌ ಮಾಡಿದ್ದರು. ಹೀಗಿದ್ದರೂ ಕೂಡ ಇವರ ಈ ನಡೆಗೆ ವ್ಯಾಪಕ ಟೀಕೆ ಸಿಕ್ಕಿತ್ತು. ಅಂದಹಾಗೆ ಬುಲೆಟ್‌ ರಕ್ಷಕ್‌ ಅವರು ರಮ್ಮಿ ಆಪ್‌ ಪ್ರಚಾರ ಮಾಡೋದಿಲ್ಲ ಎಂದು ಹೇಳಿದ್ದರು. 

ಸೀರಿಯಲ್​ಗಳಲ್ಲಿ ಮಿಂಚುವ ಆಸೆನಾ? ಖ್ಯಾತ ನಿರ್ದೇಶಕ ಆರೂರು ಜಗದೀಶ್​ರಿಂದ ಆಹ್ವಾನ- ಡಿಟೇಲ್ಸ್​ ಇಲ್ಲಿದೆ...

ರಕ್ಷಕ್‌ ಬುಲೆಟ್‌ ಅವರಿಗೆ ಒಂದು ಫೋನ್‌ ಕಾಲ್‌ ಬರುತ್ತದೆ. ಆಗ ಅವರು ಲೌಡ್‌ ಸ್ಪೀಕರ್‌ ಆನ್‌ ಮಾಡಿ ಮಾತನಾಡ್ತಾರೆ. “ಬೆಟ್ಟಿಂಗ್ ಆ್ಯಪ್‌ ಪ್ರಚಾರ ಮಾಡಿ ಜನರನ್ನು ತಪ್ಪು ದಾರಿಗೆ ಎಳೆಯೋದು ಬೇಡ. ನಾನು ಹೇಳಿದೆ ಅಂತ ಬೆಟ್ಟಿಂಗ್ ಆ್ಯಪ್‌ಗೆ ದುಡ್ಡು ಹಾಕಿ ಯಾರೋ ದುಡ್ಡು ಕಳೆದುಕೊಳ್ತಾರೆ. ಅಮೇಲೆ ಅವನು ನನಗೆ ಬೈಕೊಳ್ತಾನೆ. ಬೆಟ್ಟಿಂಗ್ ಆ್ಯಪ್‌ ಪ್ರಚಾರ ಮಾಡಿದಾಗ ಅಲ್ಲಿ ನನ್ನ ಮುಖ ಕಾಣುತ್ತದೆ. ಎಲ್ಲರಿಗೂ 1 ರೂಪಾಯಿಯೂ ದೊಡ್ಡದೇ, 10 ರೂಪಾಯಿನೂ ದೊಡ್ಡದೇ. ಈ ರೀತಿ ಆ್ಯಪ್‌ ಪ್ರಚಾರ ಮಾಡಿಕೊಂಡು, ನೂರಲ್ಲ, ಕೋಟಿ ರೂಪಾಯಿ ಬಂದ್ರೂ ಅದು ನನಗೆ ಬೇಡ” ಎಂದು ರಕ್ಷಕ್‌ ಬುಲೆಟ್‌ ಅವರು ಹೇಳಿದ್ದರು.