ನಟ ರಕ್ಷಕ್ ಬುಲೆಟ್‌ಗೆ ಬೆಟ್ಟಿಂಗ್ ಆ್ಯಪ್ ಪ್ರಮೋಷನ್ ಆಫರ್ ಬಂದಿದ್ದು, ಅದನ್ನು ತಿರಸ್ಕರಿಸಿದ್ದಾರೆ. ಜನರನ್ನು ತಪ್ಪು ದಾರಿಗೆಳೆಯಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಈ ವಿಡಿಯೋದಲ್ಲಿ ಮಾತನಾಡಿರುವ ವ್ಯಕ್ತಿ ಬೆಟ್ಟಿಂಗ್ ಅಪ್ಲಿಕೇಶನ್‌ನ ಪ್ರತಿನಿಧಿ ಅನ್ನೋದೇ ಅನುಮಾನ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಗುರುಶಿಷ್ಯರು ಅನ್ನೋ ಸಿನಿಮಾದಲ್ಲಿ ಒಂದು ಚಿಕ್ಕ ಪಾತ್ರದಲ್ಲಿ ನಟಿಸಿದ್ದ ರಕ್ಷಕ್ ಬುಲೆಟ್ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ತಮ್ಮ ಭರ್ಜರಿ ಡೈಲಾಗ್‌ಗಳಿಂದಲೇ ಫೇಮಸ್. ಆ ಮೂಲಕ 10ನೇ ಆವೃತ್ತಿಯ ಬಿಗ್‌ಬಾಸ್ ಶೋನಲ್ಲೂ ಸ್ಪರ್ಧೆ ಮಾಡಿದ್ದರು. ಅಲ್ಲಿ ಕೆಲವೊಂದಿಷ್ಟು ವಾರ ಡೈಲಾಗ್‌ಗಳ ಮೇಲೆ ಡೈಲಾಗ್ ಹೊಡೆದಿದ್ದ ಹಿರಿಯ ಹಾಸ್ಯ ಕಲಾವಿದ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಈಗ ಎಂಟರ್‌ಟೇನ್‌ಮೆಂಟ್ ಚಾನೆಲ್‌ಗಳ ಹಾಟ್ ಫೇವರಿಟ್. ಸಾಕಷ್ಟು ಶೋಗಳಲ್ಲಿ ಅವರು ಭಾಗಹಿಸಿರುವ ಅವರು ಸದ್ಯ ಸಿನಿಮಾದಲ್ಲಿ ಹೀರೋ ಆಗುವ ಹಾದಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿವ ಅವರು ಮಾಡಿರುವ ಪ್ರತಿ ವಿಡಿಯೋಗೂ ಟೀಕೆಗಳು ಬರೋದು ಸಾಮಾನ್ಯ. ಅದಕ್ಕೆ ಕಾರಣ ಅವರ ಬಿಲ್ಡಪ್. ಸರಿಯಾಗಿ ಒಂದು ಸಿನಿಮಾ ಮಾಡಿಲ್ಲವಾದರೂ ಇಷ್ಟಲ್ಲಾ ಬಿಲ್ಡಪ್ ಬೇಕಾ ಎನ್ನುವ ರಕ್ಷಕ್‌ಗೆ ಈಗ ಅದೇ ಸೋಶಿಯಲ್ ಮೀಡಿಯಾ ಮಂದಿ ಶಹಬ್ಬಾಸ್ ಎಂದಿದ್ದಾರೆ.
ಇತ್ತೀಚೆಗೆ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳಲ್ಲಿ ಸೀರಿಯಲ್‌ಗಳ ನಟ-ನಟಿಯರು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಅಗ್ನಿಸಾಕ್ಷಿ, ಸೀತಾರಾಮ ಸೀರಿಯಲ್‌ನಿಂದ ಫೇಮಸ್ ಆಗಿುವ ನಟಿ ವೈಷ್ಣವಿ ಗೌಡ ಕೂಡ ಇತ್ತೀಚೆಗೆ ಆನ್‌ಲೈನ್ ರಮ್ಮಿ ಅಪ್ಲಿಕೇಶನ್‌ಅನ್ನು ಪ್ರಮೋಟ್ ಮಾಡಿ ಟೀಕೆಗೆ ಗುರಿಯಾಗಿದ್ದಾರೆ.
ಈಗ ಅದೇ ರೀತಿ ಬೆಟ್ಟಿಂಗ್ ಆ್ಯಪ್‌ವೊಂದು ಪ್ರಮೋಷನ್‌ಗಾಗಿ ರಕ್ಷ್ ಬುಲೆಟ್‌ರನ್ನು ಸಂಪರ್ಕಿಸಿದೆ. ಆದರೆ, ರಕ್ಷಕ್ ಬುಲೆಟ್ ಅನ್ನು ಸಾರಸಗಟಾಗಿ ತಿರಸ್ಕರಿಸಿದ್ದಾರೆ. ಆದರೆ, ರಕ್ಷಕ್‌ಗೆ ಇಂಥ ಆಫರ್ ಬಂದಿರೋದು ನಿಜವೋ? ಸುಳ್ಳೋ ಅನ್ನೋದು ಗೊತ್ತಿಲ್ಲ. ಮೊಬೈಲ್‌ನಲ್ಲಿ ಕರೆ ಮಾಡಿದ್ದಾಗ, ಲೌಡ್ ಸ್ಪೀಕರ್‌ನಲ್ಲಿ ರಕ್ಷಕ್ ಮಾತನಾಡುತ್ತಿರುವ ವಿಡಿಯೋ ಇದಾಗಿದೆ. ಇದನ್ನು ವಿಡಿಯೋ ಮಾಡಿಕೊಂಡು ರಕ್ಷಕ್ ಪೋಸ್ಟ್ ಮಾಡಿದ್ದಾರೆ.
ಈ ವೇಳೆ ಮಾತನಾಡಿರುವ ರಕ್ಷಕ್ ಬುಲೆಟ್, "ಯಾವುದೋ ಬೆಟ್ಟಿಂಗ್ ಆ್ಯಪ್ ಪ್ರಮೋಟ್ ಮಾಡಿ ಜನರನ್ನು ತಪ್ಪು ದಾರಿಗೆ ಎಳೆಯುವುದು ಬೇಡ. ನಾನು ಹೇಳಿದೆ ಅಂತ ಬೆಟ್ಟಿಂಗ್ ಆ್ಯಪ್‌ಗೆ ಯಾರೋ ಒಬ್ಬ ನೂರು ರೂಪಾಯಿ ಹಾಕಿ, ಕಳೆದುಕೊಳ್ಳುತ್ತಾನೆ. ಆನಂತರ ನನ್ನನ್ನೇ ಆತ ಬೈಯ್ದುಕೊಳ್ಳುವುದು. ಯಾಕೆಂದರೆ, ಬೆಟ್ಟಿಂಗ್ ಆ್ಯಪ್ ಪ್ರಮೋಟ್ ಮಾಡಿದಾಗ ನನ್ನ ಮುಖವೇ ಅಲ್ಲಿ ಕಾಣಿಸುತ್ತದೆ. ಪ್ರತಿಯೊಬ್ಬರಿಗೂ 1 ರೂಪಾಯಿನೂ ದೊಡ್ಡದೇ, 10 ರೂಪಾಯಿನೂ ದೊಡ್ಡದೇ. ಈ ರೀತಿ ಬೆಟ್ಟಿಂಗ್ ಆ್ಯಪ್ ಪ್ರಮೋಟ್ ಮಾಡಿ, ನೂರಲ್ಲ, ಕೋಟಿ ರೂಪಾಯಿ ಬರುತ್ತದೆ ಅಂದರೂ ನನಗೆ ಅದು ಬೇಡ" ಎಂದು ಹೇಳಿದ್ದಾರೆ.
ಅದರೊಂದಿಗೆ ಮತ್ತೊಂದು ಖಡಕ್ ಮಾತನಾಡಿರುವ ರಕ್ಷಕ್ "ದುಡಿದ್ರೆ ನಿಯತ್ತಾಗಿ ದುಡಿಬೇಕು. ಅದು ಬಿಟ್ಟು ಜನರನ್ನು ತಪ್ಪು ದಾರಿಗೆಳೆದು ದುಡಿಯೋದು ಬೇಡ' ಎಂದು ಹೇಳಿದ್ದಾರೆ. ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಮೋಟ್ ಮಾಡಿ, ಮಾಡಿ ಅಂತ ನನಗೆ ಈ ರೀತಿ ಕರೆಗಳು ಬಹಳ ಬರುತ್ತದೆ. ಹಾಗೇನಾದರೂ ನಾನು ಪ್ರಮೋಟ್ ಮಾಡಿದ್ದೇ ಆದಲ್ಲಿ, ಜನರು ದುಡ್ಡು ಕಳೆದುಕೊಂಡಾಗ, ಆ ತಪ್ಪು ನನ್ನ ಮೇಲೆ ಬರುತ್ತದೆ. ಹಾಗಾಗಿ, ನಾನು ಯಾವುದೇ ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಮೋಟ್ ಮಾಡಲ್ಲ ಎಂದು ವಿಡಿಯೋದ ಕೊನೆಯಲ್ಲಿ ಹೇಳಿದ್ದಾರೆ.
ಸೀರಿಯಲ್‌ನಲ್ಲಿ ಅತ್ತೆ-ಅಳಿಯ, ನಿಜ ಜೀವನದಲ್ಲಿ ಗಂಡ-ಹೆಂಡ್ತಿ, ಮಕ್ಕಳಿಲ್ಲ ಅನ್ನೋದೇ ಕೊರಗು!
ಇನ್ನು ಇದಕ್ಕೆ ಕಾಮೆಂಟ್ ಮಾಡಿರುವ ಹಲವರು, ಈ ವಿಡಿಯೋದಲ್ಲಿ ಮಾತನಾಡಿರುವ ವ್ಯಕ್ತಿ ಬೆಟ್ಟಿಂಗ್ ಅಪ್ಲಿಕೇಶನ್‌ನ ಪ್ರತಿನಿಧಿ ಅನ್ನೋದೇ ಅನುಮಾನ ಎಂದಿದ್ದಾರೆ. 'ಒಂದೇ ಒಂದು ಸಿನಿಮಾ ಮಾಡಿ ಅದ್ರಲ್ಲಿ ನೀನು ಹೀರೊ ಆಗಿ ಆ ಸಿನಿಮಾ ಏನಾದ್ರು ಬ್ಲಾಕ್ ಬಸ್ಟರ್ ಆಗಬುಟ್ರೆ ನಿನ್ನ ಹೆಂಗಲ ಸಹಿಸ್ಕೊಳ್ಳೋದು... ಆ ಬೆಟ್ಟಿಂಗ್ ಪ್ರಮೋಷನ್ ಮಾಡಕ್ಕೆ ನಿನಗೆ ಅಪ್ರೂಚ್ ಮಾಡವ್ನಲ್ಲ (ಒಂದ್ ವೇಳೆ ನಿಜ್ವಾಗ್ಲೂ ಮಾಡಿದ್ರೆ )ಅವ್ನು ಮೆಚ್ಬೇಕು' ಎಂದು ಒಬ್ಬರು ಬರೆದಿದ್ದಾರೆ. ಇನ್ನೂ ಕೆಲವರು ಆತ ಅದೇನೇ ಮಾಡಲಿ, ಒಳ್ಳೆಯ ನಿರ್ಧಾರ ಮಾಡಿದ್ದಾನೆ ಎಂದಿದ್ದಾರೆ.
ಕಾಮೆಂಟ್ ಸೆಕ್ಷನ್ ಆಫ್; ವಿವಾದಾತ್ಮಕ ವಿಡಿಯೋ ಹಂಚಿಕೊಂಡ Seetha Raama Serial ನಟಿ ವೈಷ್ಣವಿ ಗೌಡ!
