ಜೀ ಕನ್ನಡದ ಸೀತಾರಾಮ ಧಾರವಾಹಿಯಲ್ಲಿ ಸೀತಾ ಪಾತ್ರದಲ್ಲಿ ಮಿಂಚುತ್ತಿರುವ ಕಿರುತೆರೆ ನಟಿ ವೈಷ್ಣವಿ ಗೌಡ ಅವರ ಡೀಪ್ ಫೇಕ್ ಫೋಟೋವನ್ನು ವೈರಲ್ ಮಾಡಲಾಗಿದೆ.

ಬೆಂಗಳೂರು (ಜೂ.17): ಜೀ ಕನ್ನಡದ ಪ್ರಸಿದ್ಧ ಧಾರವಾಹಿಗಳಲ್ಲಿ ಒಂದಾದ ಸೀತಾರಾಮದಲ್ಲಿ ಮಿಂಚುತ್ತಿರುವ ಕಿರುತೆರೆ ನಟಿ ವೈಷ್ಣವಿ ಗೌಡ ಅವರ ಡೀಪ್ ಫೇಕ್ ಫೋಟೋವನ್ನು ವೈರಲ್ ಮಾಡಲಾಗಿದೆ. ಸೀತಾ ಪಾತ್ರದಲ್ಲಿ ಮಿಂಚುತ್ತಿರುವ ವೈಷ್ಣವಿ ಅವರು ಈ ಹಿಂದೆ ಧರಿಸಿದ್ದ ಕೆಂಪು ಬಣ್ಣದ ಗೌನ್ ನನ್ನು ಎಡಿಟ್‌ ಮಾಡಿರುವ ಕಿಡಿಗೇಡಿಗಳು ಫೋಟೋವನ್ನು ಹರಿಬಿಟ್ಟಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಾನೂ ಪೊಲೀಸ್ ಆಗಿದ್ದವನು ಯಾರೂ ಕಾನೂನಿಗಿಂತ ದೊಡ್ಡರಲ್ಲ: ಬಿಸಿ ಪಾಟೀಲ್

ಕಳೆದ ಅಕ್ಟೋಬರ್ 2023 ರಲ್ಲಿ ಜೀ ಕನ್ನಡದ ಜೀ ಕುಟುಂಬ ಅವಾರ್ಡ್ ಸಮಯದಲ್ಲಿ ವೈಷ್ಣವಿ ಗೌಡ ಕೆಂಪು ಬಣ್ಣದ ಗೌನ್ ಧರಿಸಿದ್ದರು. ಈ ವೇಳೆ ಅದೇ ಡ್ರೆಸ್ ನಲ್ಲಿ ಫೋಟೋ ಶೂಟ್‌ ಮಾಡಿಸಿಕೊಂಡು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಾಕಿಕೊಂಡಿದ್ದರು. ಇದೀಗ ಇದೇ ಫೋಟೋವನ್ನು ಎಡಿಟ್ ಮಾಡಿರುವ ಕಿಡಿಗೇಡಿಗಳು ವೈಷ್ಣವಿ ಗೌಡ ಎಂಬ ಫೇಕ್‌ ಪೇಸ್ ಬುಕ್‌ ಪೇಜ್ ಕ್ರಿಯೇಟ್‌ ಮಾಡಿ ಎಕ್ಸ್‌ಪೋಸ್‌ ಆಗಿ ಬಟ್ಟೆ ಹಾಕಿರುವಂತೆ ಬಿಂಬಿಸಿದ್ದಾರೆ.

ಆದರೆ ಈ ಫೋಟೋಗೆ ನಿಜಾಂಶ ತಿಳಿಯದೆ ಕೆಲವರು ಕಮೆಂಟ್‌ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ದಯವಿಟ್ಟು ಇತರ ಫೋಟೋಗಳನ್ನು ಹಾಕಬೇಡಿ ನಿಮ್ಮ ಮೇಲೆ ಗೌರವ ಜನಗಳಿಗೆ ಇದೆ ಇದನ್ನು ಕಾಪಾಡಿಕೊಳ್ಳಿ. ಮೇಡಂ ಸೀತಾರಾಮ ಸಿರಿಯಲ್ ನಿಂದ ನಿಮಗೆ ಒಂದು ಒಳ್ಳೆ ಗೌರವ ಬಂದಿದೆ ಇಂತ ಬಟ್ಟೆ ಧರಿಸಿ ಅಂತಹ ಒಳ್ಳೆ ಪಾತ್ರ ಮಾಡುತ್ತಿರುವ ನಿಮ್ಮ ನಡತೆಗೆ ಭಂಗ ತಂದುಕೊಳ್ಳಬೇಡಿ. ಕರ್ನಾಟಕದ ಸಂಸ್ಕೃತಿಯ ಬಗ್ಗೆ ಮಾದರಿ ಹೆಣ್ಣಾಗಿ ಬದುಕೋದು ಕಲೀರಿ ಎಂದೆಲ್ಲ ಕಮೆಂಟ್‌ ಮಾಡಿದ್ದಾರೆ. ಆದರೆ ಇದು ಡೀಪ್ ಫೇಕ್ ಅನ್ನೋದು ಗೊತ್ತಿಲ್ಲದೆ ಜನ ಕಮೆಂಟ್‌ ಮಾಡಿದ್ದಾರೆ.

ವಿಶ್ಚದ ಎಲ್ಲಾ ಧರ್ಮದಲ್ಲೂ ಕಲ್ಕಿಯ ಉಲ್ಲೇಖ, ಹಿಂದೂ ಕ್ರೈಸ್ತ ಬೌದ್ಧ ಧರ್ಮದಲ್ಲಿರುವಂತೆ ಕಲಿಯುಗದ ಕೊನೆ ಹೀಗಿದೆ

ಈ ಫೋಟೋ ನೋಡಿರುವ ವೈಷ್ಣವಿ ಗೌಡ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೀತಾರಾಮ ಧಾರವಾಹಿ ನಟನೆ ಬಳಿಕ ಆಕೆ ಸೀತಮ್ಮ ಎಂದೇ ಫೇಮಸ್‌. ಅಂತಹ ಅದ್ಭುತ ನಟಿಯನ್ನು ಈ ರೀತಿ ಕೆಟ್ಟದಾಗಿ ಬಿಂಬಿಸಿ ಒಂದು ಹೆಣ್ಣಿನ ಮಾನಹರಣ ಮಾಡಿದಂತೆ ಎಂದು ಹಲವರು ಅಸಮಾಧಾನ ಹೊರಹಾಕಿದ್ದಾರೆ. ಈ ಸುದ್ದಿಯಲ್ಲಿ ನಮೂದಿಸಲಾಗಿರುವ ಫೋಟೋದಲ್ಲಿ ಬಲಗಡೆ ಇರುವುದು ವೈಷ್ಣವಿ ಅವರ ವರಿಜಿನಲ್ ಫೋಟೋವಾಗಿದೆ. ಇದನ್ನು ಎಡಿಟ್‌ ಮಾಡಿರುವ ಫೇಕ್ ಫೋಟೋ ಎಡಭಾಗದ್ದಾಗಿದೆ.

ಈ ಹಿಂದೆ ಕೂಡ ಹಲವು ನಟಿಯರ ಡೀಪ್ ಫೇಕ್ ವಿಡಿಯೋಗಳನ್ನು ಕಿಡಿಗೇಡಿಗಳು ವೈರಲ್ ಮಾಡಿದ್ದರು. ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋವನ್ನು ವೈರಲ್ ಮಾಡಲಾಗಿತ್ತು.