ರೇಣುಕಾಸ್ವಾಮಿ ಕೊಲೆ ಪ್ರಕರಣ: ನಾನೂ ಪೊಲೀಸ್ ಆಗಿದ್ದವನು ಯಾರೂ ಕಾನೂನಿಗಿಂತ ದೊಡ್ಡರಲ್ಲ: ಬಿಸಿ ಪಾಟೀಲ್
ನಾನು ಕೃಷಿ ಸಚಿವನಾಗಿದ್ದಾಗ ಪ್ರಸಿದ್ಧ ನಟ ಆಗಿರೋ ಕಾರಣ ರೈತರಿಗೆ ಶಕ್ತಿ ತುಂಬೋಕೆ ಅಂತ ದರ್ಶನ್‌ರನ್ನು ರಾಯಭಾರಿ ಮಾಡಿದ್ವಿ. ಯಾರೂ ಕಾನೂನಿಗಿಂತ ದೊಡ್ಡವರಿಲ್ಲ ಎಂದ ಬಿಸಿ ಪಾಟೀಲ್ ಹೇಳಿದ್ದಾರೆ.
ಹಾವೇರಿ (ಜೂ.17): ಇಡೀ ದೇಶವನ್ನೇ ಬೆಚ್ಚಿಬೀಳಿಸಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಮತ್ತು ಗ್ಯಾಂಗ್ ನ ಕೃತ್ಯದ ಬಗ್ಗೆ ದಿನಕ್ಕೊಂದು ಸುದ್ದಿಗಳು ಬರುತ್ತಿದೆ. ಇದೀಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಮಾಜಿ ಸಚಿವ, ನಟ ಬಿ.ಸಿ ಪಾಟೀಲ್ ಹೇಳಿಕೆ ನೀಡಿದ್ದಾರೆ.
ಶೀನಾ ಬೋರಾ ಕೇಸ್‌ಗೆ ಟ್ವಿಸ್ಟ್, ಪ್ರಮುಖ ಸಾಕ್ಷ್ಯವಾಗಿದ್ದ ಮೂಳೆಗಳು ನಾಪತ್ತೆ!
ನಾನು ಕೃಷಿ ಸಚಿವನಿದ್ದಾಗ ದರ್ಶನ್ ಕೃಷಿ ಇಲಾಖೆ ರಾಯಭಾರಿ ಆಗಿದ್ದರು. ಆಗ ಅವರು ಈ ರೀತಿಯ ಕೃತ್ಯದಲ್ಲಿ ಭಾಗಿಯಾಗಿರಲಿಲ್ಲ. ಪ್ರಸಿದ್ಧ ನಟ ಆಗಿರೋ ಕಾರಣ ರೈತರಿಗೆ ಶಕ್ತಿ ತುಂಬೋಕೆ ಅಂತ ರಾಯಭಾರಿ ಮಾಡಿದ್ವಿ. ರೇಣುಕಾಸ್ವಾಮಿ ಹತ್ಯೆ ದುರದೃಷ್ಟಕರ. ಇದು ಕ್ಷಮಿಸಲಾಗದ ಕೃತ್ಯ. ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು. ಯಾರೂ ಕಾನೂನಿಗಿಂತ ದೊಡ್ಡವರಿಲ್ಲ. ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಬೇಕು ಎಂದಿದ್ದಾರೆ.
ಹುಟ್ಟೂರು ಪೊನ್ನಂಪೇಟೆಯಲ್ಲಿ ನಟ ದರ್ಶನ್ ಕ್ರೌರ್ಯ, ಹೋಂ ಸ್ಟೇಯಲ್ಲಿ ಕೆಲಸದಾಕೆಗೆ ಸಿಗರೇಟ್‌ನಿಂದ ಸುಟ್ಟು ಹಲ್ಲೆ!
ದರ್ಶನ್ ಬ್ಯಾನ್ ಮಾಡುವ ವಿಚಾರದಲ್ಲಿ ಮಾತನಾಡಿದ ಅವರು, ಅಪರಾಧ ಪ್ರೂವ್ ಆದರೆ ಬ್ಯಾನ್ ಎಂದು ಹೇಳಿದ್ದಾರೆ. ಈ ಪ್ರಕರಣದ ನಿಷ್ಪಕ್ಷಪಾತ ಶಿಕ್ಷೆ ಆಗಬೇಕು. ಈಗ ದರ್ಶನ್ ಆರೋಪಿ, ಅಪರಾಧಿ ಅಂತ ಪ್ರೂವ್ ಆದರೆ ಬ್ಯಾನ್ ಬಗ್ಗೆ ನಿರ್ಧಾರ ಮಾಡಬಹುದು ಎಂದರು.
ದರ್ಶನ್ ನನ್ನು ಈ ಕೇಸ್‌ನಲ್ಲಿ ಸೇಪ್ ಮಾಡಲು ಕೆಲ ರಾಜಕಾರಣಿಗಳಿಂದ ತೆರೆ ಮರೆಯ ಕಸರತ್ತು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಬಿಸಿ ಪಾಟೀಲ್, ಹಾಗೆ ಮಾಡಲು ಆಗಲ್ಲ. ನಾನೂ ಕೂಡಾ ಪೊಲೀಸ್ ಆಗಿದ್ದವನು. ತನಿಖೆ ಬಗ್ಗೆ ಪೊಲೀಸ್ ಅಧಿಕಾರಿಗಳು ತೀರ್ಮಾನ ಮಾಡ್ತಾರೆ. ಯಾರು ಪ್ರಭಾವ ಬೀರ್ತಾ ಇದಾರೆ ಅಂತ ನನಗೆ ಮಾಹಿತಿ ಇಲ್ಲ. ದರ್ಶನ್ ನನಗೆ ಕಲಾವಿದನಾಗಿ ಗೊತ್ತು. ಅವರ ಸಂಪೂರ್ಣ ವಿವರ ನನಗೆ ಗೊತ್ತಿಲ್ಲ. ಅವರ ಬಳಿ ಯಾರ್ಯಾರು ಇದ್ರು ಗೊತ್ತಿಲ್ಲ ಎಂದು ಬಿ.ಸಿ ಪಾಟೀಲ್ ಹೇಳಿಕೆ ನೀಡಿದ್ದಾರೆ.