Asianet Suvarna News Asianet Suvarna News

ವಿಶ್ಚದ ಎಲ್ಲಾ ಧರ್ಮದಲ್ಲೂ ಕಲಿಯುಗದ ಅಂತ್ಯದ ಉಲ್ಲೇಖ, ಬೌದ್ಧಧರ್ಮದಲ್ಲಿ ಕಲ್ಕಿಯ ಜನನ!

ಹಿಂದೂ ಪುರಾಣದಲ್ಲಿ ಮಾತ್ರವಲ್ಲ ಪ್ರಪಂಚದ ಬೇರೆ ಬೇರೆ ಯಾವುದೇ ಧರ್ಮವನ್ನು ತೆಗೆದುಕೊಂಡರೂ ಅದರಲ್ಲಿ ಕಲಿಯುಗದ ಅಂತ್ಯದ ಬಗ್ಗೆ ಉಲ್ಲೇಖವಿದೆ. ಕಲ್ಕಿ ಎಲ್ಲಿ ಹುಟ್ಟುತ್ತಾನೆ ಇಲ್ಲಿದೆ ಉಲ್ಲೇಖ.

world religious many book mentioned Kali Yuga and kalki birth gow
Author
First Published Jun 16, 2024, 7:49 PM IST

ಪುರಾಣಗಳ ಪ್ರಕಾರ ನಾಲ್ಕು ಯುಗಗಳು. ಸತ್ಯಯುಗ, ತ್ರೇತಾಯುಗ, ದ್ವಾಪರ ಯುಗ ಮತ್ತು ಕಲಿಯುಗ. ನಾವೀಗ ಕಲಿಯುಗದಲ್ಲಿ ಜೀವಿಸುತ್ತಿದ್ದೇವೆ. ಕಲಿಯುಗದ ಅಂತ್ಯದ ಬಗ್ಗೆ ಹಿಂದೂ ಪುರಾಣದಲ್ಲಿ ಮಾತ್ರವಲ್ಲ ಪ್ರಪಂಚದ ಬೇರೆ ಬೇರೆ ಯಾವುದೇ ಧರ್ಮವನ್ನು ತೆಗೆದುಕೊಂಡರೂ ಅದರಲ್ಲಿ ಕಲಿಯುಗದ ಅಂತ್ಯದ ಬಗ್ಗೆ ಉಲ್ಲೇಖವಿದೆ.  ಹಿಂದೂ ಧರ್ಮದಲ್ಲಿ ಕಲ್ಕಿ ಅವತಾರ ಎತ್ತಿದ ಬಳಿಕ ಕಲಿಯುಗದ ಅಂತ್ಯ ಎಂಬ ಉಲ್ಲೇಖವಿದೆ. ಆದರೆ ಇತರ ಧರ್ಮಗಳಲ್ಲಿ ಬೇರೆ ರೀತಿಯ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಆದರೆ ಕಲಿಯುಗದ ಅಂತ್ಯ ಈ ರೀತಿಯಲ್ಲೇ ಇರುತ್ತದೆ ಎಂದು ಸರ್ವಧರ್ಮದಲ್ಲಿ ಉಲ್ಲೇಖವಿದೆ.

ಕ್ರೈಸ್ತ ಧರ್ಮದಲ್ಲಿ ಕಲಿಯುಗದ ಅಂತ್ಯಕ್ಕೆ ಓರ್ವ ಹಾರ್ಸ್ ಮ್ಯಾನ್ (ಕುದುರೆಯಲ್ಲಿ ಮನುಷ್ಯ) ಬರುತ್ತಾನೆ ಎಂಬ ಉಲ್ಲೇಖ ಮತ್ತು ನಂಬಿಕೆ ಇದೆ. ಹಿಂದೂ ಧರ್ಮದ ಪ್ರಕಾರ ಕೂಡ ಕಲ್ಕಿ ಬಿಳಿಯ ಕುದರೆಯ ಮೇಲೆ ಬರ್ತಾನೆ. ಕುದರೆ ಆತನ ವಾಹನವಾಗಿರುತ್ತದೆ. ಆ ಕುದರೆಯ ಹೆಸರು ದೇವದತ್ತ.

ತನ್ನದೇ ಎಂಜಲಿನಿಂದ ಗ್ರಾಹಕನ ಮುಖಕ್ಕೆ ಮಸಾಜ್ ಮಾಡಿದ ಕ್ಷೌರಿಕ!

ಬಿಳಿ ಕುದುರೆ ವಾಹನ: ಕಲಿಯುಗದಲ್ಲಿ ಧರ್ಮ, ದಯೆ, ಸತ್ಯ ಮೊದಲಾದ ಗುಣಗಳು ಅಳಿದು ಅಧರ್ಮವೇ ಹೆಚ್ಚಾಗಿ ಪಾಪ ಕರ್ಮಗಳು ತುಂಬಿ ತುಳುಕುತ್ತಿರುವಾಗ ವಿಷ್ಣು ತನ್ನ 10 ನೇ ಅವತಾರವನ್ನು ತಾಳಿ ಕಲ್ಕಿಯಾಗಿ ಅವತರಿಸಿ ಕುದುರೆಯನ್ನು ವಾಹನವನ್ನಾಗಿಸಿ ಖಡ್ಗ ಹಿಡಿದು ಹೊರಟು ಅನಾಗರಿಕ ಜನರನ್ನು ಸಂಹರಿಸಿ ಕಲಿಯುಗವನ್ನು ಕೊನೆಗೊಳಿಸಿ ಜಗತ್ತಿನಲ್ಲಿ ಧರ್ಮಸಂರಕ್ಷಣೆ ಮಾಡಿ ಸತ್ಯ, ಧರ್ಮ,ನ್ಯಾಯಗಳ ಕೃತಯುಗ ಅಂದರೆ ಸತ್ಯಯುಗವನ್ನು ಸ್ಥಾಪಿಸುತ್ತಾನೆ ಎಂಬ ನಂಬಿಕೆ ಇದೆ.

ಬಲಗಾಲನ್ನು ಇಟ್ಟಾಗ ಭೂಮಿಯಲ್ಲಿ ಪ್ರವಾಹ: ಕಲ್ಕಿ ಮೊದಲಿಗೆ  ಈ ಭೂಮಂಡಲದ ಮೇಲೆ ರಭಸವಾಗಿ ಬಲಗಾಲನ್ನು ಇಡುತ್ತಾನೆ. ಆಗ ಈ ಭೂಮಿಯನ್ನು ಹಿಡಿದಿಟ್ಟುಕೊಂಡಿರುವ ಕೂರ್ಮ ಇನ್ನೂ ಪಾತಾಳ ಲೋಕಕ್ಕೆ ಕುಸಿಯುತ್ತದೆ. ಆಗ ಭೂಮಿಯ ಮೇಲೆ ನೀರಿನ ಮಟ್ಟ ಹೆಚ್ಚಾಗಿ ಪ್ರವಾಹ ಉಂಟಾಗುತ್ತದೆ. ಅಲ್ಲಿಂದ ಕಲಿಯುಗದ ಅಂತ್ಯದ ಆರಂಭವಾಗುತ್ತದೆ.

ಬೌದ್ಧಧರ್ಮದಲ್ಲಿ ಜನನ: ಕಲ್ಕಿ ಬಂದ ನಂತರದ ಕಲಿಯುಗದಲ್ಲಿ ಏನೆಲ್ಲ ಬೆಳವಣಿಗೆ ನಡೆಯುತ್ತದೆ ಎಂಬ ಬಗ್ಗೆ ಸಂಪೂರ್ಣ ಉಲ್ಲೇಖವಿದೆ. ಕಲ್ಕಿ ಹುಟ್ಟುವುದು ಬೌದ್ಧಧರ್ಮದಲ್ಲಿ ಶಾಂಭಲಾ ಅನ್ನುವ ರಾಜ್ಯದಲ್ಲಿ ವೈಷಾಖ ಪೂರ್ಣಿಮೆಯ ಹದಿನೆರಡು ದಿನ ಕಳೆದ ಬಳಿಕ ವಿಷ್ಣುಯಶಸ್ ಮತ್ತು ಸುಮತಿ ಎಂಬ ಬ್ರಾಹ್ಮಣ ದಂಪತಿಯ ಸುಗರ್ಭದಲ್ಲಿ ಕಲ್ಕಿಯ ಜನನವಾಗುತ್ತದೆ. ಚಿಕ್ಕ ವಯಸ್ಸಿನಲ್ಲೇ ವೇದ ಪುರಾಣವನ್ನು ಬಲ್ಲವನಾದ ಕಲ್ಕಿ 64 ವಿದ್ಯೆಗಳನ್ನು ಬಲ್ಲವನಾಗಿರುತ್ತಾರೆ.

ಬೆಳಗಾವಿಯಲ್ಲಿ ಭ್ರೂಣ ಹತ್ಯೆ ಗ್ಯಾಂಗ್‌, ನಕಲಿ ವೈದ್ಯನ ಫಾರ್ಮ್ ಹೌಸ್‌ನಲ್ಲಿ ಹೂತಿಟ್ಟ ಭ್ರೂಣಗಳು ವಶಕ್ಕೆ

ಕಲ್ಕಿಯ ಗುರು: ವಿಷ್ಣುವಿನ 10 ನೇ ಅವತಾರಿಯಾದ ಕಲ್ಕಿಯ ಗುರು  ವಿಷ್ಣುವಿನ 6 ನೇ ಅವತಾರಿಯಾದ ಪರಶುರಾಮನಾಗಿರುತ್ತಾನೆ. ಪರಶುರಾಮನ ಬಳಿಕ ಕಲ್ಕಿ ಶಸ್ತ್ರಾಸ್ತ್ರಗಳನ್ನು ಅಧ್ಯಯನ ಮಾಡುತ್ತಾನೆ. ನಂತರ ಶಿವನ ಬಗ್ಗೆ ತಪಸ್ಸು ಮಾಡಿ ಕಲ್ಕಿಯ ತಪಸ್ಸಿಗೆ ಮೆಚ್ಚಿದ ಶಿವ ದೇವದತ್ತ ಎಂಬ ಕುದರೆ ಮತ್ತು ವಜ್ರವೈಢೂರ್ಯದಿಂದ ಕೂಡಿದ ಕತ್ತಿಯನ್ನು ನೀಡುತ್ತಾನೆ. ಇದರ ಜೊತೆಗೆ ಒಂದು ಶುಕ (ಗಿಣಿ) ವನ್ನು ನೀಡುತ್ತಾನೆ. ಇದು ಭೂತ, ಭವಿಷ್ಯ, ವರ್ತಮಾನಗಳನ್ನು ಬಲ್ಲ ಶುಕವಾಗಿರುತ್ತದೆ.

ಕಲ್ಕಿಯ ಮದುವೆ: ಕಲ್ಕಿ ಯಾರನ್ನು ಮದುವೆಯಾಗುತ್ತಾನೆ ಎಂಬ ಬಗ್ಗೆ ಕೂಡ ಪುರಾಣದಲ್ಲಿ ಉಲ್ಲೇಖವಿದೆ. ಸಿಂಹಳ ದೇಶದ ರಾಜ ಬೃಹದೃತ ಮತ್ತು ಆತನ ಪತ್ನಿ ಕೌಮುಡಿಗೆ ಹುಟ್ಟು ಮಗಳು ಪದ್ಮಾ ಕಲ್ಕಿಯ ಮೊದಲ ಹೆಂಡತಿಯಾದರೆ, ರಾಣಿ ಶಶಿಧ್ವಜ ಮತ್ತು ಸುಶಾಂತನ ಮಗಳಾದ ರಮಾ ಕಲ್ಕಿಯ ಎರಡನೇ ಹೆಂಡತಿ. ಇಲ್ಲಿ ಗಮನಿಸಬೇಕಾದ ಅಂಶ ಸಿಂಹಳ ಎಂದರೆ ಶ್ರೀಲಂಕಾ ದ್ವೀಪ. ಅಲ್ಲಿಯ ರಾಜಕುಮಾರಿಯನ್ನೇ ಮದುವೆಯಾಗುತ್ತಾನಾ? ಇರಬಹುದು ಎಂಬುದು ನಂಬಿಕೆ. 

ಶಾಂಭಲಾ ಎಲ್ಲಿದೆ: ಸಂಸ್ಕೃತದಲ್ಲಿ ಶಾಂಭಲಾ  ಎಂದರೆ  ಶಾಂತಿ ನೆಲೆಸಿರುವ ಸ್ಥಳ . ಹಿಂದೂಗಳ ‘ಕಾಲಚಕ್ರ ತಂತ್ರ’, ‘ವಿಷ್ಣು ಪುರಾಣ’ ಮತ್ತು ಬೌದ್ಧರ ‘ಜಾಂಗ್ ಜುಂಗ್’ ಎಂಬ ಗ್ರಂಥಗಳಲ್ಲಿ ಶಾಂಭಲಾ ನಗರದ ಉಲ್ಲೇಖವಿದೆ. ಅಧರ್ಮದಲ್ಲಿರುವರಿಗೆ  ಈ ಜಾಗ ಕಾಣಿಸುವುದೇ ಇಲ್ಲವಂತೆ. 

ಗ್ರಂಥದಲ್ಲಿ ಉಲ್ಲೇಖ ಮಾಡಿರುವ ಪ್ರಕಾರ ನುರಿತರು ಅಧ್ಯಯನ ಮಾಡಿ ಶಾಂಭಲಾ ಎಲ್ಲಿದೆ ಎಂಬ ಬಗ್ಗೆ ಊಹಿಸಿದ್ದು, ಹಿಮಾಚಲ ಪ್ರದೇಶ/ಪಾಕಿಸ್ತಾನದ ಸಟ್ಲೇಜ್ ಕಣಿವೆಯಲ್ಲಿದೆ ಎಂದು ಕೆಲವರು ಹೇಳಿದರೆ, ಸೈಬೀರಿಯಾದ ಕಣಿವೆಯಲ್ಲಿದೆ ಎಂದು ಇನ್ನು ಕೆಲವರು ಹೇಳಿದ್ದಾರೆ. ಮಲೇಷ್ಯಾದ ಪರ್ವತ ಪ್ರದೇಶದಲ್ಲಿದೆ ಎಂದು ಕೆಲವರು ಹೇಳುತ್ತಾರೆ. ಟಿಬೆಟ್‌ ನಲ್ಲಿದೆ ಎಂದು ಕೆಲವರು ಹೇಳುತ್ತಾರೆ. ಆದರೆ ಟಿಬೆಟ್‌ನಲ್ಲಿರುವ ಬಗ್ಗೆ ಬಹಳ ಜನ ನಂಬುತ್ತಾರೆ ಏಕೆಂದರೆ ಇಲ್ಲಿನ ಶಾಂಗ್ರಿಲಾ ರಹಸ್ಯ ಕಣಿವೆಯಲ್ಲಿ  ಶಾಂಭಲಾ ಇದೆ ಎಂದು ನಂಬುತ್ತಾರೆ. ಇದು ಟಿಬೆಟ್‌ ಮತ್ತು ಅರುಣಾಚಲ ಪ್ರದೇಶದ ಗಡಿಯಲ್ಲಿ ಇದೆ.

ಇನ್ನು ಕೈಲಾಸ ಪರ್ವತದಲ್ಲಿದೆ ಎಂದು ಬಲವಾಗಿ ನಂಬಲಾಗಿದೆ. ಅದಕ್ಕಾಗಿ ಅಲ್ಲಿಗೆ ನಮಗ್ಯಾರಿಗೂ ತಲುಪಲು ಸಾಧ್ಯವಾಗುವುದಿಲ್ಲ. ಇನ್ನು ಮ್ಯಾಕ್ಲಿಯೋಡ್ ಗಂಜ್ ಭಾರತದ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿದೆ ಇದು ಕೂಡ  ಒಂದು ಕಣಿವೆ ಪ್ರದೇಶವಾಗಿದೆ. ಉತ್ತರ ಭಾರತದಲ್ಲಿ ಕಲ್ಕಿಯ ಜನನವಾಗಬಹುದು ಎಂಬುದು ಬಲವಾದ ನಂಬಿಕೆಯಾಗಿದೆ. ಮತ್ತೊಂದು ಆಶ್ಚರ್ಯಕರ ಸಂಗತಿ ಎಂದರೆ ಕೆಲ ಉಲ್ಲೇಖಗಳ ಪ್ರಕಾರ ಶಾಂಭಲಾ ಇರುವುದು ಬರ್ಮುಡಾ ಟ್ರಯಾಂಗಲ್‌ ನಲ್ಲಿ ಎನ್ನಲಾಗಿದೆ. 

ಮತ್ತೆ ಸತ್ಯಯುಗ ಆರಂಭ: ಯಾವಾಗ ಅಧರ್ಮದಲ್ಲಿರುವ ಕಲಿಯನ್ನು ಸೋಲಿಸಿ ಶಾಂಭಾಲ ದೇಶಕ್ಕೆ ಹಿಂತಿರುಗಿತ್ತಾನೋ ಅಲ್ಲಿಗೆ ಕಲಿಯುಗ ಅಂತ್ಯವಾಗಲಿದೆ. ಅಲ್ಲಿಂದ ಮತ್ತೆ ಸತ್ಯಯುಗ ಆರಂಭವಾಗಲಿದೆ ಎಂಬ ನಂಬಿಕೆ ಇದೆ. ಈ ಸತ್ಯಯುಗದಲ್ಲಿ ಬೇರೆ ಬೇರೆ ದೇಶದಲ್ಲಿ , ಬೇರೆ ಬೇರೆ ರಾಜ್ಯಗಳಲ್ಲಿ ಧರ್ಮವನ್ನು ಕಾಪಾಡುತ್ತಾ  ಬಂದ ರಾಜರುಗಳಿಗೆ ರಾಜ್ಯವನ್ನು ಕೊಟ್ಟು  ತಾನೂ ಕೂಡ ಶಾಂಭಾಲ ದೇಶಕ್ಕೆ ಹೋಗಿ ಅಲ್ಲಿ 1 ಸಾವಿರ ವರ್ಷಗಳ ಕಾಲ ರಾಜ್ಯಾಡಳಿತ ಮಾಡುತ್ತಾನೆ ಅದು ಸತ್ಯಯುಗದಲ್ಲಿ ಎಂಬ ನಂಬಿಕೆ ಇದೆ. ಕಲಿಯುಗದಿಂದ ಕೆಲವೇ ಕೆಲವು ಜನರಿಗೆ ಸತ್ಯಯುಗಕ್ಕೆ ಹೋಗುವ ಅವಕಾಶವಿದೆ.  1 ಸಾವಿರ ವರ್ಷಗಳ ನಂತರ ದೇವಾನು ದೇವತೆಗಳು ಕಲ್ಕಿಯ ಬಳಿ ಬಂದು ನಿನ್ನ ಅವತಾರ ಸಂಪೂರ್ಣಗೊಂಡಿದೆ ಎಂದು ತಿಳಿಸಿದ ದಿನ ತನ್ನ ರಾಜ್ಯಭಾರವನ್ನು ಮುಕ್ತಾಯಗೊಳಿಸಿ ತನ್ನ ಇಬ್ಬರು ಪತ್ನಿಯರ ಜೊತೆ ವೈಕುಂಠಕ್ಕೆ ತೆರಳುತ್ತಾನೆ. ಜಗತ್ತಿನ ಎಲ್ಲಾ ಧರ್ಮದಲ್ಲಿ ಉಲ್ಲೇಖ ಇರುವಂತೆ ಕಲಿಯುಗದ ಅಂತ್ಯದ ಕಥೆ ಇದು. ಇಲ್ಲಿಯವರೆಗೆ ಕಲಿಯುಗ 5,530 ವರ್ಷಗಳು ಕಳೆದಿವೆ. ಕಲಿಯುಗದ ಒಟ್ಟು ಅವಧಿ  4 ಲಕ್ಷ 32 ಸಾವಿರ ವರ್ಷಗಳು. ಈಗ ಇರುವುದು ಕಲಿಯುಗದ ಮೊದಲ ಹಂತ. 

Latest Videos
Follow Us:
Download App:
  • android
  • ios