ಹಾಟ್ ಫೋಟೋ ಪೋಸ್ಟ್ ಮಾಡಿ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ ನಟಿ ಜ್ಯೋತಿ ರೈ
ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿರುವ ಕನ್ನಡತಿ ಜ್ಯೋತಿ ರೈ ಪ್ರಸ್ತುತ ವೈಯಕ್ತಿಕ ಕಾರಣದಿಂದ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಮದುವೆಯಾಗಿ ಒಂದು ಮಗುವಿದ್ದರೂ ಇವರ ಸೌಂದರ್ಯ ದಿನೇ ದಿನೇ ಹೆಚ್ಚುತ್ತಲೇ ಇದೆ. ಇತ್ತೀಚೆಗೆ ಇವರು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಸಖತ್ ಬೋಲ್ಡ್ ಆಗಿರುವ ಫೋಟೋಗಳನ್ನೇ ಹಾಕುತ್ತಿದ್ದು, ಅಭಿಮಾನಿಗಳ ಹೃದಯ ಬೆಚ್ಚಗೆ ಮಾಡುತ್ತಿದ್ದಾರೆ ಈ ನಟಿ...
Jyothi rai
ಇತ್ತೀಚೆಗೆ ಸಖತ್ ಹಾಟ್ ಎನಿಸುವ ಹಲವು ಫೋಟೋಗಳನ್ನು ಪೋಸ್ಟ್ ಮಾಡಿರುವ ನಟಿ ಜ್ಯೋತಿ ರೈ ಅವುಗಳಿಗೆ ಯಾರು ಕಾಮೆಂಟ್ ಮಾಡಲಾಗದಂತೆ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ.
Jyothi rai
ತೆಲುಗಿನಲ್ಲಿ ಪ್ರಿಟಿ ಗರ್ಲ್ ಎಂಬ ವೆಬ್ ಸಿರೀಸ್ನಲ್ಲಿ ಜ್ಯೋತಿ ರೈ ನಟಿಸುತ್ತಿದ್ದು, ಆ ಸೀರೀಸ್ಗೆ ಸಂಬಂಧಿಸಿದ ಪೋಟೋಗಳಿವು ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
Jyothi rai
ಅಪರಾಧ ಹಿನ್ನೆಲೆಯ ಕತೆ ಹೊಂದಿರುವ ವೆಬ್ ಸಿರೀಸ್ ಇದಾಗಿದ್ದು, ಇಂಗ್ಲೀಷ್ ಹಾಗೂ ಹಿಂದಿ ಭಾಷೆಯಲ್ಲೂ ಇದು ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ.
Jyothi rai
ತೆಲುಗು ಸೀರಿಯಲ್ಗಳಲ್ಲಿ ನಟಿಸುವ ಮೂಲಕ ತೆಲುಗು ನಾಡಲ್ಲಿ ಮನೆ ಮಾತಾಗಿರುವ ಜ್ಯೋತಿ ರೈ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದು, ಈಗ ವೆಬ್ ಸಿರೀಸ್ ಮೂಲಕ ಬೇರೆ ಭಾಷೆಗಳಲ್ಲೂ ಹಲ್ಚಲ್ ಸೃಷ್ಟಿಸಲು ಮುಂದಾಗಿದ್ದಾರೆ ಜ್ಯೋತಿ ರೈ
Jyothi rai
ಕನ್ನಡಿಗರಿಗೆ ಚಿರಪರಿಚಿತರಾಗಿರುವ ಜ್ಯೋತಿ ರೈ ಕನ್ನಡದ ಹೊಂಗನಸು ಧಾರವಾಹಿಯಲ್ಲೂ ನಟಿಸಿದ್ದರು. ಇತ್ತೀಚೆಗೆ ವೈಯಕ್ತಿಕ ಕಾರಣಕ್ಕೆ ಇವರು ಹೆಚ್ಚು ಸುದ್ದಿಯಲ್ಲಿದ್ದರು.
Jyothi rai
ಮದುವೆಯಾಗಿ 10 ವರ್ಷದ ಮಗನನ್ನು ಹೊಂದಿರುವ ಇವರು ಪತಿಯಿಂದ ವಿಚ್ಛೇದನ ಪಡೆದಿದ್ದು, ತಮ್ಮ ಹೆಸರಿನ ಹಿಂದೆ ತೆಲುಗು ಯುವ ನಿರ್ದೇಶಕ ಸುಕು ಪೂರ್ವಜ್ ಹೆಸರನ್ನು ಜೋಡಿಸಿಕೊಂಡಿದ್ದಾರೆ. ಹೀಗಾಗಿ ಇವರಿಬ್ಬರು ಮದುವೆಯಾಗಿದ್ದಾರೆ ಎಂಬ ಊಹಾಪೋಹಾ ಹಬ್ಬಿದೆ.
Jyothi rai
ಆದರೆ ಜ್ಯೋತಿ ರೈ ಆಗಲಿ ನಿರ್ದೇಶಕ ಸುಕು ಪೂರ್ವಜ್ ಆಗಲಿ ಈ ವಿಚಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಜ್ಯೋತಿ ರೈ ಸದ್ಯ ತೆಲುಗಿನಲ್ಲಿ 'ಗುಪ್ಪೆದಂಥ ಮನಸು' ಎನ್ನುವ ಧಾರಾವಾಹಿ ಮೂಲಕ ತೆಲುಗು ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ.
Jyothi rai
ಕನ್ನಡದ ಜೊತೆಗೆ ಜ್ಯೋತಿ ತೆಲುಗು ಕಿರುತೆರೆಯಲ್ಲೂ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಅವರು ತೆಲುಗು ನಿರ್ದೇಶಕನ ಜೊತೆಯೇ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿತ್ತು.
Jyothi rai
ಸುಕು ಮತ್ತು ಜ್ಯೋತಿ ಇಬ್ಬರೂ ಒಟ್ಟಿಗೆ ಸಿನಿಮಾ ಕೂಡ ಮಾಡಿದ್ದಾರೆ. ಶೂಟಿಂಗ್ ಸಮಯದಲ್ಲಿ ಇಬ್ಬರ ನಡುವೆ ಲವ್ ಆಗಿದೆ ಎನ್ನಲಾಗಿದ್ದು, ಸುಕು ಪೂರ್ವಜ್ ಜೊತೆಗಿರುವ ಪೋಟೋಗಳನ್ನು ಕೂಡ ಹೆಚ್ಚೆಚ್ಚು ಇನ್ಸ್ಟಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ ಜ್ಯೋತಿ ರೈ.
Jyothi rai
ನಟಿ ಜ್ಯೋತಿ ರೈ ಕನ್ನಡದಲ್ಲಿ ಅನೇಕ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿನು ಬಳಂಜ ಅವರ 'ಬಂದೇ ಬರತಾವ ಕಾಲ' ಎಂಬ ಧಾರಾವಾಹಿ ಮೂಲಕ ಜ್ಯೋತಿ ರೈ ಮೊದಲ ಬಾರಿಗೆ ಕನ್ನಡ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಬಳಿಕ ಜ್ಯೋತಿ ಬ್ಯಾಕ್ ಟು ಬ್ಯಾಕ್ ಧಾರಾವಾಹಿಗಳಲ್ಲಿ ನಟಿಸಿದರು. ಜೋಗುಳ, ಕಿನ್ನರಿ, ಕಸ್ತೂರಿ ನಿವಾಸ, ಜೋ ಜೋ ಲಾಲಿ, ಗೆಜ್ಜೆಪೂಜೆ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಧಾರಾವಾಹಿ ಜೊತೆಗೆ ಸಿನಿಮಾಗಳಲ್ಲೂ ನಟಿಸಿದ್ದಾರೆ.