ಡಾನ್ಸ್​ ಕರ್ನಾಟಕ ಡಾನ್ಸ್​ ರಿಯಾಲಿಟಿ ಷೋನಲ್ಲಿ ಸೀತಾರಾಮ ಸಿಹಿ ವೇದಿಕೆಗೆ ಇಳಿದಿದ್ದು, ದೊಡ್ಡವರಿಗೆ ಟಫ್​ ಕಾಂಪಿಟೇಷನ್​ ಕೊಡ್ತಾಳಾ?   

ಸದ್ಯ ಸೀತಾರಾಮ ಸೀರಿಯಲ್​ನಲ್ಲಿ ಸೀತಾ ಮತ್ತು ರಾಮ ಮದುವೆಯಾಗಿ ಸರಸ ಸಲ್ಲಾಪದಲ್ಲಿ ತೊಡಗಿದ್ದರೆ, ಸಿಹಿಯ ಸ್ಥಿತಿ ಯಾರಿಗೂ ಬೇಡವಾಗಿದೆ. ಭಾರ್ಗವಿ ಮತ್ತು ಆಕೆಯ ಮಗ ಇಬ್ಬರೂ ಸೇರಿ ಸಿಹಿಗೆ ಇನ್ನಿಲ್ಲದ ಟಾರ್ಚರ್​ ಕೊಡುತ್ತಿದ್ದಾರೆ. ಸೀತಾ ಮತ್ತು ರಾಮ ಪ್ರೀತಿಯಿಂದ ಒಟ್ಟಾಗಿ ಇರಬೇಕು ಎಂದರೆ ನೀನು ದೂರವಾಗಬೇಕು ಎಂದು ಭಾರ್ಗವಿ ಚಿಕ್ಕಿ ಸಿಹಿಯ ತಲೆಯಲ್ಲಿ ತುಂಬುತ್ತಲೇ ಇದ್ದಾಳೆ. ಸ್ವಂತ ಮಗಳಿಗಿಂತಲೂ ಪ್ರೀತಿಯ ಧಾರೆಯೇ ಹರಿಸುತ್ತಿದ್ದಾನೆ ರಾಮ್​, ಇನ್ನು ಅಮ್ಮ ಸೀತಾಳೋ ಕೇಳುವುದೇ ಬೇಡ... ಅವಳಲ್ಲಿ ಜೀವ ಇಟ್ಟುಕೊಂಡಿದ್ದಾಳೆ. ಆದರೆ ಸಿಹಿ ಮಾತ್ರ ಭಾರ್ಗವಿಯಿಂದಾಗಿ ಜರ್ಜರಿತಳಾಗಿ ಹೋಗಿದ್ದಾಳೆ. ಇನ್ನು ಮಗನೋ ಆಕೆಯ ಪ್ರಾಣಕ್ಕೇ ಸಂಚಕಾರ ತರುತ್ತಿದ್ದಾನೆ.

 ಸೀತಾರಾಮ ಸೀರಿಯಲ್​ನಲ್ಲಿ ಭಾರ್ಗವಿ ಜೊತೆ ಸಿಹಿ ಸೆಣಸಾಟಕ್ಕಿಳಿದಿದ್ದರೆ, ಡಾನ್ಸ್​ ಕರ್ನಾಟಕ ಡಾನ್ಸ್​ ಷೋನಲ್ಲಿ ಹಲವಾರು ದೊಡ್ಡ ಸ್ಪರ್ಧಿಗಳ ಜೊತೆ ಕಾಣಿಸಿಕೊಂಡಿದ್ದಾಳೆ. ಇದಾಗಲೇ ಈಕೆ ಡಾನ್ಸ್​ ಮಾಡಲು ಆರಂಭಿಸಿದ್ದು, ಅದರ ಪ್ರೊಮೋ ರಿಲೀಸ್​ ಆಗಿದೆ. ಇದರಲ್ಲಿ ಸಿಹಿ ಕ್ಯೂಟ್​ ಆಗಿ ಡಾನ್ಸ್​ ಮಾಡಿರುವುದನ್ನು ನೋಡಬಹುದು. ಇದಾಗಲೇ ಆರ್ಯವರ್ಧನ್​ ಗುರೂಜಿ, ಪ್ರಥಮ್​, ಪುಟ್ಟಕ್ಕನ ಮಕ್ಕಳು ಕಂಠಿ, ಸಹನಾ, ಅಮೃತಧಾರೆ ಜೀವನ್​, ಸೀತಾರಾಮ ಪ್ರಿಯಾ ಸೇರಿದಂತೆ ಹಲವು ಕಿರುತೆರೆ ಕಲಾವಿದರು ವೇದಿಕೆ ಹಂಚಿಕೊಂಡಿದ್ದು, ಇದೀಗ ಸಿಹಿಯ ಡಾನ್ಸ್​ ವಿಡಿಯೋ ಕೂಡ ರಿಲೀಸ್​ ಆಗಿದೆ. ಪುಟಾಣಿ ಸಿಹಿ ಈ ಎಲ್ಲಾ ಸ್ಪರ್ಧಿಗಳಿಗೆ ಟಫ್​ ಕಾಂಪಿಟೀಟರ್​ ಆಗ್ತಾಳಾ ಎನ್ನುವುದು ಈಗಿರುವ ಪ್ರಶ್ನೆ.

DKD- ಸೀತಾರಾಮ ಪ್ರಿಯಾ, ಪುಟ್ಟಕ್ಕನ ಮಗಳು ಸಹನಾ ಈ ಪರಿ ಡಾನ್ಸಾ? ಜಡ್ಜ್​ಗಳು ಸುಸ್ತೋ ಸುಸ್ತು!

ಅಷ್ಟಕ್ಕೂ, ರಿಯಾಲಿಟಿ ಷೋಗಳಲ್ಲಿ ಸಕತ್​ ಕಾಂಪಿಟೇಷನ್​ ಇರುವ ಹಿನ್ನೆಲೆಯಲ್ಲಿ, ವಾಹಿನಿಗಳು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತವೆ. ವೀಕ್ಷಕರನ್ನು ಸೆರೆಹಿಡಿದು ಟಿಆರ್​ಪಿ ಗಿಟ್ಟಿಸಿಕೊಳ್ಳುವುದು ಎಂದರೆ ಅಷ್ಟು ಸುಲಭದ ಮಾತಲ್ಲ. ಇದೇ ಕಾರಣಕ್ಕೆ, ಹೊಸ ಹೊಸ ಪ್ರಯೋಗಗಳು ಅನಿವಾರ್ಯವಾಗಿದೆ. ಅದೇ ರೀತಿ ಈ ಬಾರಿಯ ಡಾನ್ಸ್​ ಕರ್ನಾಟಕ ಡಾನ್ಸ್​ನಲ್ಲಿ ವಿಭಿನ್ನ ಪ್ರಯೋಗ ಮಾಡಲಾಗುತ್ತಿದೆ. ನಿನ್ನೆ ಅಂದರೆ ಜುಲೈ 20ರಿಂದ ಜೀ ಕನ್ನಡದಲ್ಲಿ ಈ ಷೋ ಆರಂಭವಾಗಿದೆ. ಹೆಚ್ಚಾಗಿ ಕಿರುತೆರೆ ಕಲಾವಿದರನ್ನು ಈ ಬಾರಿ ಡಾನ್ಸ್​ ಲೋಕಕ್ಕೆ ಆಹ್ವಾನಿಸಲಾಗಿದೆ. ಆದರೆ ಕುತೂಹಲದ ಸಂಗತಿ ಎಂದರೆ, ಇವರ್ಯಾರೂ ನೃತ್ಯ ಕ್ಷೇತ್ರದಲ್ಲಿ ಅಷ್ಟು ಎಕ್ಸ್​ಪರ್ಟ್​ ಇಲ್ಲದವರು. ಅವರನ್ನು ಈ ಕಾಂಪಿಟೇಷನ್​ನಲ್ಲಿ ಸ್ಪರ್ಧಿಗಳನ್ನಾಗಿ ಮಾಡಲಾಗಿದೆ. ಅಂದಹಾಗೆ, ಜೀ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ಡಾನ್ಸ್​ ಕರ್ನಾಟಕ ಡಾನ್ಸ್​ ಇದಾಗಲೇ ಏಳು ಸೀಸನ್​ಗಳನ್ನು ಮುಗಿಸಿದೆ. 

ಕರ್ನಾಟಕ ಮೂಲೆಮೂಲೆಯಲ್ಲಿ ಇರುವ ಪ್ರತಿಭೆಗಳನ್ನು ಗುರುತಿಸಿ, ಅವರನ್ನು ಒಂದೇ ವೇದಿಕೆಯ ಮೇಲೆ ನರ್ತಿಸುವಂತೆ ಮಾಡುವ ಷೋ ಇದೆ. ಆದರೆ ಒಂದೇ ವ್ಯತ್ಯಾಸ ಎಂದರೆ ಇಲ್ಲಿ ಬರುವ ಸ್ಪರ್ಧಿಗಳು ಬಣ್ಣದ ಲೋಕದಲ್ಲಿ ಗುರುತಿಸಿಕೊಂಡವರೇ ಹೆಚ್ಚು. ಕಿರುತೆರೆ, ಹಿರಿತೆರೆ ಸೇರಿದಂತೆ ಸೋಷಿಯಲ್​ ಮೀಡಿಯಾಗಳಲ್ಲಿ ಸಕತ್​ ಸೌಂಡ್​ ಮಾಡುತ್ತಿರುವವರನ್ನು ಇದರಲ್ಲಿ ಆಯ್ಕೆ ಮಾಡಲಾಗುತ್ತದೆ. ಅಂದಹಾಗೆ ಈ ಷೋನಲ್ಲಿ ಈ ಬಾರಿ ಆರ್ಯವರ್ಧನ್​ ಗುರೂಜಿ, ಒಳ್ಳೆ ಹುಡುಗ ಎಂದೇ ಹಾಕಿಕೊಳ್ಳುವ ಪ್ರಥಮ್​, ಪುಟ್ಟಕ್ಕನ ಮಕ್ಕಳು ಕಂಠಿ ಅಂದರೆ ಧನುಷ್​, ಇದೇ ಸೀರಿಯಲ್​ನ ಸಹನಾ ಅಂದರೆ ಅಕ್ಷರ, ಸೀತಾರಾಮ ಸೀರಿಯಲ್​ ಖ್ಯಾತಿಯ ಪ್ರಿಯಾ ಅಂದರೆ ಮೇಘನಾ ಶಂಕರಪ್ಪ, ಗಗನ, ರೆಮೊ, ವಿಶ್ವ, ಅಮೃತಧಾರೆ ಜೀವನ್ ಅರ್ಥಾತ್​ ಶಶಿ ಹೆಗ್ಡೆ​ ಮುಂತಾದವರು ಈ ಷೋನಲ್ಲಿ ಸ್ಪರ್ಧಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಬಹುವಾಗಿ ಎಲ್ಲರ ಗಮನ ಸೆಳೆಯುತ್ತಿರುವುದು ಸೀತಾರಾಮ ಸೀರಿಯಲ್ ಸಿಹಿ ಅಂದರೆ ರೀತು ಸಿಂಗ್​.

ಪ್ರೀತಿಯಲ್ಲಿ ಮೈಮರೆತ ಆರ್ಯವರ್ಧನ್​ ಗುರೂಜಿ! ವೇದಿಕೆ ಮೇಲೆ ಡಿಸ್ಕೊ ಡಾನ್ಸ್​ ಹೀಗಿತ್ತು ನೋಡಿ...