ಪ್ರೀತಿಯಲ್ಲಿ ಮೈಮರೆತ ಆರ್ಯವರ್ಧನ್ ಗುರೂಜಿ! ವೇದಿಕೆ ಮೇಲೆ ಡಿಸ್ಕೊ ಡಾನ್ಸ್ ಹೀಗಿತ್ತು ನೋಡಿ...
ಡಾನ್ಸ್ ಕರ್ನಾಟಕ ಡಾನ್ಸ್ ಷೋನಲ್ಲಿ ಆರ್ಯವರ್ಧನ್ ಗುರೂಜಿ ಡಿಸ್ಕೋ ಡಾನ್ಸ್ ಮಾಡಿ ಪ್ರೀತಿಯಲ್ಲಿ ಮರೆತಿದ್ದಾರೆ. ಇದರ ಪ್ರೊಮೋ ಬಿಡುಗಡೆ ಮಾಡಲಾಗಿದೆ.
ಗುರೂಜಿ ಎನಿಸಿಕೊಂಡವರು ವೇದಿಕೆಯ ಮೇಲೆ ಡಿಸ್ಕೊ ಡಾನ್ಸ್ ಮಾಡಿದ್ರೆ ಹೇಗಿರುತ್ತೆ ಎನ್ನುವ ಕುತೂಹಲ ಇರೋರಿಗೆ ಈ ವಾರದ ಡಾನ್ಸ್ ಕರ್ನಾಟಕ ಡಾನ್ಸ್ನಲ್ಲಿ ಉತ್ತರ ಸಿಕ್ಕಿದೆ! ಪ್ರೀತಿಯಲ್ಲಿ ಮೈಮರೆತ ಆರ್ಯವರ್ಧನ್ ಗುರೂಜಿ, ಪ್ರೀತಿಯೇ ನನ್ನುಸಿರು ಹಾಡಿಗೆ ಸಹ ಸ್ಪರ್ಧಿ ಜೊತೆ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಇದಾಗಲೇ ಬಿಗ್ಬಾಸ್ನಲ್ಲಿ ಸ್ಪರ್ಧಿಸಿದ್ದ ಆರ್ಯವರ್ಧನ್ ಅವರು, ನಂಬರ್ ಎಂದ್ರೆ ನಾನು, ನಾನೆಂದ್ರೆ ನಂಬರ್ ಎನ್ನುತ್ತಲೇ ಫೇಮಸ್ ಆದವರು. ಸಂಖ್ಯಾಶಾಸ್ತ್ರದ ಮೂಲಕ ನಂಬರ್‌ನಿಂದಲೇ ಭವಿಷ್ಯ ನುಡಿಯುವ ಗುರೂಜಿ ‘ಬಿಗ್ ಬಾಸ್ ಕನ್ನಡ ಓಟಿಟಿ 1’ ಹಾಗೂ ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮಗಳಲ್ಲಿ ಸ್ಪರ್ಧಿಸಿ ಹೆಸರು ಮಾಡಿದ್ದರು. ಬಿಗ್‌ಬಾಸ್ ಮನೆಯಲ್ಲಿಯೂ ‘ನಾನು ಅಂದ್ರೆ ನಂಬರ್.. ನಂಬರ್ ಅಂದ್ರೆ ನಾನು’ ಎನ್ನುತ್ತಲೇ ಆಡಿದ್ದರು. ಅಲ್ಲಿಯೂ ಪ್ರತಿ ಸಲ ನಂಬರ್ ನೋಡುತ್ತಲೇ ಭವಿಷ್ಯ ನುಡಿಯುತ್ತಿದ್ದರು. ಬಿಗ್‌ಬಾಸ್‌ಗೆ ಹೋಗಿ ಬಂದ ಮೇಲೆ ಸಹಜವಾಗಿ ಇವರ ವರ್ಚಸ್ಸು ಹೆಚ್ಚಾಗಿದೆ. ಸಂಖ್ಯಾಶಾಸ್ತ್ರ ಹೇಳಿ ಫೇಮಸ್ ಆಗಿರುವುದಕ್ಕಿಂತಲೂ ಹೆಚ್ಚಾಗಿ, ಬಿಗ್‌ಬಾಸ್ ಇವರಿಗೆ ಹೆಸರು ತಂದುಕೊಟ್ಟಿದೆ. ಬಿಗ್ ಮನೆಯಲ್ಲಿದ್ದಾಗಲೇ ಇವರು ತಮಗೆ ತೋಚಿದ್ದನ್ನೆಲ್ಲಾ ಹೇಳಿ, ಹೇಗೆ ಬೇಕೋ ಹಾಗೆ ಡೈಲಾಗ್ ಹೊಡೆದು ಎಡವಟ್ಟು ಮಾಡಿಕೊಳ್ಳುತ್ತಿರುವುದೂ ಇದೆ.
ಇದೀಗ ಆರ್ಯವರ್ಧನ್ ಗುರೂಜಿ ಡಾನ್ಸ್ ಕರ್ನಾಟಕ ಡಾನ್ಸ್ ಷೋನಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಪರ್ಧಿ ಸುಚಿತ್ರಾ ಅವರ ಜೊತೆ ಮಾತ್ರವಲ್ಲದೇ ತೀರ್ಪುಗಾರರಾಗಿರುವ ನಟ ರಕ್ಷಿತಾ ಜೊತೆಗೂ ಡಾನ್ಸ್ ಮಾಡಿದ್ದಾರೆ ಗುರೂಜಿ. ಅಂದಹಾಗೆ, ಜೀ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ಡಾನ್ಸ್ ಕರ್ನಾಟಕ ಡಾನ್ಸ್ ಇದಾಗಲೇ ಏಳು ಸೀಸನ್ಗಳನ್ನು ಮುಗಿಸಿದೆ. ಕರ್ನಾಟಕ ಮೂಲೆಮೂಲೆಯಲ್ಲಿ ಇರುವ ಪ್ರತಿಭೆಗಳನ್ನು ಗುರುತಿಸಿ, ಅವರನ್ನು ಒಂದೇ ವೇದಿಕೆಯ ಮೇಲೆ ನರ್ತಿಸುವಂತೆ ಮಾಡುವ ಷೋ ಇದೆ. ಆದರೆ ಒಂದೇ ವ್ಯತ್ಯಾಸ ಎಂದರೆ ಇಲ್ಲಿ ಬರುವ ಸ್ಪರ್ಧಿಗಳು ಬಣ್ಣದ ಲೋಕದಲ್ಲಿ ಗುರುತಿಸಿಕೊಂಡವರೇ ಹೆಚ್ಚು. ಕಿರುತೆರೆ, ಹಿರಿತೆರೆ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ಸೌಂಡ್ ಮಾಡುತ್ತಿರುವವರನ್ನು ಇದರಲ್ಲಿ ಆಯ್ಕೆ ಮಾಡಲಾಗುತ್ತದೆ. ಈ ಬಾರಿಯ ಡಾನ್ಸ್ ಕರ್ನಾಟಕ ಡಾನ್ಸ್ನಲ್ಲಿ ವಿಭಿನ್ನ ಪ್ರಯೋಗ ಮಾಡಲಾಗುತ್ತಿದೆ. ಹೆಚ್ಚಾಗಿ ಕಿರುತೆರೆ ಕಲಾವಿದರನ್ನು ಈ ಬಾರಿ ಡಾನ್ಸ್ ಲೋಕಕ್ಕೆ ಆಹ್ವಾನಿಸಲಾಗಿದೆ. ಆದರೆ ಕುತೂಹಲದ ಸಂಗತಿ ಎಂದರೆ, ಇವರ್ಯಾರೂ ನೃತ್ಯ ಕ್ಷೇತ್ರದಲ್ಲಿ ಅಷ್ಟು ಎಕ್ಸ್ಪರ್ಟ್ ಇಲ್ಲದವರು.
ರಾಜಾ ರಾಣಿ ಷೋನಲ್ಲಿ ದಿಢೀರ್ ಕೆಳಕ್ಕೆ ಬಿದ್ದ ಸ್ಪರ್ಧಿ: ದಿಗ್ಭ್ರಮೆಯಿಂದ ಕೂಗಿಕೊಂಡ ತೀರ್ಪುಗಾರರು
ಈ ಷೋನಲ್ಲಿ ಈ ಬಾರಿ ಆರ್ಯವರ್ಧನ್ ಗುರೂಜಿ, ಒಳ್ಳೆ ಹುಡುಗ ಎಂದೇ ಹಾಕಿಕೊಳ್ಳುವ ಪ್ರಥಮ್, ಪುಟ್ಟಕ್ಕನ ಮಕ್ಕಳು ಕಂಠಿ ಅಂದರೆ ಧನುಷ್, ಇದೇ ಸೀರಿಯಲ್ನ ಸಹನಾ ಅಂದರೆ ಅಕ್ಷರ, ಸೀತಾರಾಮ ಸೀರಿಯಲ್ ಖ್ಯಾತಿಯ ಪ್ರಿಯಾ ಅಂದರೆ ಮೇಘನಾ ಶಂಕರಪ್ಪ, ಗಗನ, ರೆಮೊ, ವಿಶ್ವ, ಅಮೃತಧಾರೆ ಜೀವನ್ ಅರ್ಥಾತ್ ಶಶಿ ಹೆಗ್ಡೆ ಮುಂತಾದವರು ಈ ಷೋನಲ್ಲಿ ಸ್ಪರ್ಧಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಬಹುವಾಗಿ ಎಲ್ಲರ ಗಮನ ಸೆಳೆಯುತ್ತಿರುವುದು ಸೀತಾರಾಮ ಸೀರಿಯಲ್ ಸಿಹಿ ಅಂದರೆ ರೀತು ಸಿಂಗ್. ಈಗ ಆರ್ಯವರ್ಧನ್ ಗುರೂಜಿ ನಂಬರ್ ಎನ್ನುವ ಡೈಲಾಗ್ ಹೇಳುತ್ತಲೇ ದುಡ್ಡು ಬರಬೇಕಾದ್ರೆ 24 ನಂಬರ್ ಫಾಲೋ ಮಾಡಿ ಎನ್ನುತ್ತ, ವಿಷ್ಣುವರ್ಧನ ಹಾಡಿಗೆ ಸ್ಟೆಪ್ ಹಾಕಿದ್ದಾರೆ.
ಷೋನಲ್ಲಿ ನಟರಾದ ಶಿವರಾಜ್ ಕುಮಾರ್, ರಕ್ಷಿತಾ, ವಿಜಯ್ ರಾಘವೇಂದ್ರ ತೀರ್ಪುಗಾರರಾಗಿ ಆಗಮಿಸಿದ್ದು, ಆರ್ಯವರ್ಧನ್ ಗುರೂಜಿ ಡಾನ್ಸ್‌ಗೆ ಭೇಷ್ ಭೇಷ್ ಎನ್ನುತ್ತಿದ್ದಾರೆ. ಗುರೂಜಿ ಎನ್ನಿಸಿಕೊಂಡವರು ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ಕೆಲವರು ಅಪಸ್ವರ ಎತ್ತಿದ್ದರೆ, ಗುರೂಜಿ ಫ್ಯಾನ್ಸ್ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
ಹೈ ಫೈ ಮೊಟ್ಟೆ ಫ್ರೈ ಮಾಡುತ್ತಲೇ ಬದುಕಿನ ಬಹು ದೊಡ್ಡ ನಿರ್ಧಾರ ತಿಳಿಸಿದ ಚಂದನ್ ಶೆಟ್ಟಿ!