ಭಕ್ತ ಮಾರ್ಕಂಡೇಯನಾಗಿ ಪುಟಾಣಿ ಸಿಹಿ! ಸೀತಮ್ಮನ ವಠಾರದಲ್ಲಿ ಡ್ರಾಮಾ ಜ್ಯೂನಿಯರ್ಸ್
ಸೀತಾರಾಮ ಸೀರಿಯಲ್ ಸಿಹಿ ಭಕ್ತ ಮಾರ್ಕಂಡೇಯನಾಗಿ ಕಾಣಿಸಿಕೊಂಡಿದ್ದಾಳೆ. ಸೀತಮ್ಮನ ವಠಾರದಲ್ಲಿ ನಡೆದ ಶೂಟಿಂಗ್ ಪ್ರೊಮೋ ಬಿಡುಗಡೆಯಾಗಿದೆ.
ಸೀತಾರಾಮ ಸೀರಿಯಲ್ನಲ್ಲಿ ಹೈಲೈಟ್ ಆಗಿರೋದು ಪುಟಾಣಿ ಸಿಹಿ. ಈಕೆಯ ನಿಜವಾದ ಹೆಸರು ರೀತು ಸಿಂಗ್. ನೇಪಾಳದಳ ಈ ಪುಟಾಣಿ, ತಾಯಿ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಕನ್ನಡವನ್ನು ಕಲಿತು ಇದೀಗ ಸೀತಾರಾಮ ಸೀರಿಯಲ್ನಲ್ಲಿ ಮುದ್ದುಮುದ್ದಾಗಿ ಮಾತನಾಡುತ್ತಲೇ ವೀಕ್ಷಕರನ್ನು ಹಿಡಿದಿಟ್ಟುಕೊಂಡಿದ್ದಾಳೆ. ಈ ಸೀರಿಯಲ್ನ ಕಥೆಗಿಂತಲೂ ವೀಕ್ಷಕರಿಗೆ ಹೆಚ್ಚು ಇಷ್ಟವಾಗ್ತಿರೋದು ಈಕೆಯೇ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಯಾವುದೇ ಕ್ಯಾರೆಕ್ಟರ್ ಕೊಟ್ಟರೂ ಅಷ್ಟೇ ಖುಷಿಯಿಂದ, ಅಷ್ಟೇ ಮುದ್ದಾಗಿ, ಸೊಗಸಾಗಿ ನಿಭಾಯಿಸುತ್ತಾಳೆ ರಿತು ಸಿಂಗ್. ಸೀತಾರಾಮ ಸೀರಿಯಲ್ ಇದಕ್ಕೆ ಸಾಕ್ಷಿ. ತುಂಟಾಟ, ಮುದ್ದಾಟ, ಹಠಮಾರಿಯಂಥ ಕ್ಯಾರೆಕ್ಟರ್ ಜೊತೆ ರಾಮ್ ಆಸ್ಪತ್ರೆಯಲ್ಲಿ ಇದ್ದ ಸಂದರ್ಭದಲ್ಲಿ ಈಕೆ ಮಾಡಿದ ಆ್ಯಕ್ಟಿಂಗ್ಗೆ ಹಲವು ವೀಕ್ಷಕರು ಕಣ್ಣೀರಾದದ್ದೂ ಸುಳ್ಳಲ್ಲ, ಅಂಥ ಅದ್ಭುತ ಅಭಿನಯ ಈಕೆಯದ್ದು.
ಇದೀಗ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಡ್ರಾಮಾ ಜ್ಯೂನಿಯರ್ಸ್ ರಿಯಾಲಿಟಿ ಷೋ ಅನ್ನು ಸೀತಾರಾಮ ಸೀರಿಯಲ್ನ ಸೀತಮ್ಮನ ವಠಾರದಲ್ಲಿ ಚಿತ್ರೀಕರಿಸಲಾಗಿದೆ. ಕಿರುತೆರೆ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಬೇಕು ಎಂದರೆ, ಸೀರಿಯಲ್ ಹಾಗೂ ರಿಯಾಲಿಟಿ ಷೋಗಳಲ್ಲಿ ವಿಭಿನ್ನ ಪ್ರಯೋಗಗಳನ್ನು ಮಾಡುವುದು ಇಂದಿನ ಅನಿವಾರ್ಯವೇ ಹೌದು. ಹತ್ತಾರು ಚಾನೆಲ್ಗಳು, ನೂರಾರು ಸೀರಿಯಲ್ಗಳು, ರಿಯಾಲಿಟಿ ಷೋಗಳ ನಡುವೆ ಜನರನ್ನು ಹಿಡಿದಿಟ್ಟುಕೊಳ್ಳುವುದು ಸುಲಭದ ಮಾತಲ್ಲ. ಇದೇ ಕಾರಣಕ್ಕೆ ಎಲ್ಲಾ ಚಾನೆಲ್ಗಳು ಹೊಸ ಹೊಸ ಪ್ರಯೋಗ ಮಾಡುತ್ತಲೇ ಇರುತ್ತವೆ. ಇದೀಗ ಡ್ರಾಮಾ ಜ್ಯೂನಿಯರ್ಸ್ ತಂಡದಿಂದ ಭಕ್ತ ಮಾರ್ಕಂಡೇಯ ನಾಟಕವನ್ನು ಮಕ್ಕಳಿಂದ ಮಾಡಲಾಗಿದೆ. ಇದರ ಪ್ರೊಮೋ ಬಿಡುಗಡೆಯಾಗಿದೆ.
ಸಿಹಿಯ ನಟನೆಗೆ ಕಣ್ಣೀರು ಹಾಕಿದ ಫ್ಯಾನ್ಸ್: ನಿನಗೆ ನೀನೇ ಸಾಟಿ ಕಂದಾ ಎಂದ ಅಭಿಮಾನಿಗಳು
ಸೀತಾರಾಮನ ವಠಾರದಲ್ಲಿ ಈ ಷೋ ಶೂಟಿಂಗ್ ನಡೆದಿದೆ. ಅದರಲ್ಲಿ ಪುಟಾಣಿ ಸಿಹಿ ಮಾರ್ಕಂಡೇಯನಾಗಿ ನಟಿಸಿದ್ದಾಳೆ. ಅಷ್ಟಕ್ಕೂ ಈ ಪೋರಿ ಸೀತಾರಾಮ ಸೀರಿಯಲ್‌ಗೆ ಆಯ್ಕೆ ಆದದ್ದು ಕೂಡ ಡ್ರಾಮಾ ಜ್ಯೂನಿಯರ್ಸ್‌ನಿಂದಲೇ ಅದರಲ್ಲಿ ಈಕೆಯ ಪರ್ಫಾಮೆನ್ಸ್ ನೋಡಿ ಜನರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದರಿಂದಲೇ ರೀತುಗೆ ಸೀತಾರಾಮದಲ್ಲಿ ಸಿಹಿ ಪಾತ್ರ ಸಿಕ್ಕಿದೆ. ಸಿಕ್ಕ ಅವಕಾಶವನ್ನು ಮಾತ್ರ ಈ ಪುಟಾಣಿ ಚೆನ್ನಾಗಿ ಬಳಸಿಕೊಂಡಿದ್ದಾಳೆ. ಪಾತ್ರಕ್ಕೆ ಜೀವ ತುಂಬಿದ್ದು ಮಾತ್ರ ಅಲ್ಲ ಆಕೆಯಿಂದಲೇ ಸೀರಿಯಲ್ ಗೆಲ್ಲುತ್ತಿದೆ ಅನ್ನುವಷ್ಟರ ಮಟ್ಟಿಗೆ ಕನ್ನಡಿಗರಿಗೆ ಮೋಡಿ ಮಾಡಿದ್ದಾಳೆ. ಇದೀಗ ಭಕ್ತ ಮಾರ್ಕಂಡೇಯನಾಗಿಯೂ ಸಕತ್ ಪರ್ಫಾಮೆನ್ಸ್ ನೀಡಿದ್ದು, ಅದರ ಪ್ರೊಮೋ ನೋಡಿ ನೆಟ್ಟಿಗರು ಭೇಷ್ ಭೇಷ್ ಎನ್ನುತ್ತಿದ್ದಾರೆ.
ಅಷ್ಟಕ್ಕೂ ಸೀತಾರಾಮ ಸೀರಿಯಲ್ಗೂ ಸಿಹಿ ಬಾಳಿಗೂ ಸಾಮ್ಯತೆ ಇದೆ. ಹೌದು. ಸೀತಾರಾಮ ಸೀರಿಯಲ್ ರೀತಿಯಲ್ಲಿಯೇ ಈಕೆಯ ನಿಜ ಜೀವನದ ಕೂಡ ಇದೆ. ಸೀತಾರಾಮ ಸೀರಿಯಲ್ನಲ್ಲಿ ಈಕೆಗೆ ಅಪ್ಪ ಇಲ್ಲ. ಅಮ್ಮನೇ ಸರ್ವಸ್ವ. ಅದೇ ರೀತಿ ರಿತು ರಿಯಲ್ ಲೈಫ್ ಸ್ಟೋರಿ ಕೂಡ. ಇದರ ಬಗ್ಗೆ ಖುದ್ದು ಅವರ ಅಮ್ಮನೇ ಹೇಳಿಕೊಂಡಿದ್ದರು. ಅದೇನೆಂದರೆ, ರಿತು ರಿಯಲ್ ಅಪ್ಪ ದೂರ ಆಗಿದ್ದಾರೆ. ಈಕೆಯ ರಿಯಲ್ ಲೈಫ್ನಲ್ಲಿಯೂ ಅಮ್ಮನೇ ಎಲ್ಲಾ. ಪತಿಯಿಂದ ದೂರವಾಗಿರುವ ರಿತು ಅಮ್ಮ, ಒಬ್ಬಂಟಿಯಾಗಿ ಮಗಳನ್ನು ಸಾಕುತ್ತಿದ್ದಾರೆ. ಡ್ರಾಮಾ ಜ್ಯೂನಿಯರ್ಸ್ ವೇದಿಕೆಯಲ್ಲಿ ಈ ವಿಷಯವನ್ನು ಈಕೆಯ ಅಮ್ಮ ಹೇಳಿದಾಗ, ತೀರ್ಪುಗಾರರಾಗಿದ್ದ ರವಿಚಂದ್ರನ್ ಭಾವುಕರಾಗಿದ್ದರು. ಹೋದವರು ಹೋಗಲಿ ಬಿಟ್ಟೋದವನು ಬಿಟ್ಟೋದ. ಗಂಡ ಇಲ್ಲ ಅಂತ ಅಳಬಾರದು. ಗಂಡ ಬಿಟ್ಟು ಹೋಗಿದ್ದಕ್ಕೆ ಇವತ್ತು ನಿಮ್ಮ ಮಗು ಇಷ್ಟೊಂದು ಪ್ರತಿಭಾವಂತೆ ಆಗಿರೋದು. ರಿತು ತುಂಬ ಪ್ರೌಢಿಮೆ ಇರುವ ಗೊಂಬೆ ಎಂದಿದ್ದರು. ಇದಂತೂ ಅಕ್ಷರಶಃ ಸತ್ಯ, ಈಕೆ ಗೊಂಬೆಯೇ.
ಸಿಹಿಗಿಂದು ಹುಟ್ಟುಹಬ್ಬದ ಸಂಭ್ರಮ: ರಿಯಲ್ ಲೈಫ್ನಲ್ಲೂ ನೋವುಂಡ ಪುಟಾಣಿಯ ವಿಶೇಷ ವಿಡಿಯೋ ರಿಲೀಸ್