ಅಮ್ಮನ ಕೈಯಲ್ಲಿ ಸಿಕ್ಕಿಬಿದ್ದ ಸೀತಾಗೆ ಈ ಶಿಕ್ಷೆ! ನಿಂಗಿದು ಬೇಕಿತ್ತಾ ಮಗಳೇ ಎಂದ ಫ್ಯಾನ್ಸ್...
ಅಮ್ಮನನ್ನು ಔಟಿಂಗ್ಗೆ ಕರೆದುಕೊಂಡು ಹೋಗುವ ಪ್ಲ್ಯಾನ್ ಮಾಡಿರೋ ಸೀತಾ ಅರ್ಥಾತ್ ವೈಷ್ಣವಿ ಗೌಡ ಅವರಿಗೆ ಈ ಶಿಕ್ಷೆ ಸಿಕ್ಕಿದೆ!
ಸೀತಾರಾಮ ಸೀತಾ ಸದ್ಯ ಸೀರಿಯಲ್ನಲ್ಲಿ ಮದುವೆ ಸಂಭ್ರಮದಲ್ಲಿ ಇದ್ದರೆ ರಿಯಲ್ ಲೈಫ್ನಲ್ಲಿ ರೀಲ್ಸ್ ಮಾಡುವುದಲ್ಲಿ ಬಿಜಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿರೋ ಸೀತಾರ ನಿಜವಾದ ಹೆಸರು ವೈಷ್ಣವಿ ಗೌಡ. ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್ ಆ್ಯಕ್ಟೀವ್ ಆಗಿರೋ ವೈಷ್ಣವಿ ಅವರು ಆಗಾಗ್ಗೆ ಹಲವಾರು ರೀಲ್ಸ್, ವಿಡಿಯೋ, ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಅವರು ತಮ್ಮ ತಾಯಿಯ ಜೊತೆಗಿರುವ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಇದರಲ್ಲಿ ವೈಷ್ಣವಿ ತಮ್ಮ ತಾಯಿಯನ್ನು ಔಟಿಂಗ್ಗೆ ಕರೆದುಕೊಂಡು ಹೋಗುವ ಪ್ಲ್ಯಾನ್ ಮಾಡ್ತಾರೆ. ಆಗ ಮನೆಕೆಲಸದಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡ್ತಿರೋದು ಎಂದು ತಿಳಿದು ಮನೆಗುಡಿಸುವ ಕೆಲಸ ಅವರಿಗೆ ಕೊಡಲಾಗುತ್ತದೆ. ನಿಂಗಿತ್ತು ಬೇಕಿತ್ತಾ ಮಗನೇ ಹಿನ್ನೆಲೆ ದನಿಯಲ್ಲಿ ವೈಷ್ಣವಿ ಅವರು ಈ ರೀಲ್ಸ್ ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಹಲವಾರು ಮಂದಿ ಕಮೆಂಟ್ಸ್ ಮಾಡುತ್ತಿದ್ದು, ಅಮ್ಮನ ಮುಂದೆ ಮಕ್ಕಳ ಆಟ ನಡೆಯೋದಿಲ್ಲ ಎಂದಿದ್ದಾರೆ. ಇನ್ನು ಕೆಲವರು ಅಮ್ಮ ಕೂಡ ನಿಮ್ಮ ಹಾಗೆ ಕ್ಯೂಟ್ ಎನ್ನುತ್ತಿದ್ದಾರೆ.
ಸೀತಾರಾಮ ಸೀತಾ ವೈಷ್ಣವಿಯ ಅಮ್ಮ ವಕೀಲೆಯಾಗಿ ಒಂದು ವರ್ಷ! ಕುತೂಹಲದ ಮಾಹಿತಿ ಇಲ್ಲಿದೆ...
ಅಂದಹಾಗೆ ವೈಷ್ಣವಿ ಅವರ ತಾಯಿಯ ಹೆಸರು ಭಾನು ರವಿಕುಮಾರ್. ಅವರು ವೃತ್ತಿಯಲ್ಲಿ ವಕೀಲೆ. ಕುತೂಹಲದ ವಿಷಯ ಏನೆಂದರೆ, ಕಳೆದ ವರ್ಷವಷ್ಟೇ ಅಂದರೆ 2023ರ ಮೇ ತಿಂಗಳಿನಲ್ಲಿ ವೈಷ್ಣವಿ ಅವರ ತಾಯಿ ವಕೀಲೆಯಾಗಿದ್ದಾರೆ. ಈ ಕುರಿತು ಕಳೆದ ವರ್ಷ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ವೈಷ್ಣವಿ ಅವರು ಬರೆದುಕೊಂಡು ಅಮ್ಮನಿಗೆ ಶುಭಾಶಯ ಕೋರಿದ್ದರು. ಕಪ್ಪು ಕೋಟ್ ಧರಿಸಿದ್ದ ತಾಯಿಯ ಜೊತೆ ಫೋಟೋ ಶೇರ್ ಮಾಡಿಕೊಂಡಿದ್ದ ನಟಿ, ಮನೆಯಲ್ಲಿ ಈಗ ಅಡ್ವೊಕೇಟ್ ಇದ್ದಾರೆ. ವಯಸ್ಸು ಅನ್ನೋದು ಒಂದು ಸಂಖ್ಯೆ ಅಷ್ಟೇ ಅಂತ ನೀವು ನನಗೆ ಯಾವಾಗಲೂ ಹೇಳುತ್ತಿದ್ದೀರಿ. ಈ ವಯಸ್ಸಿನಲ್ಲಿ ನೀವು ಮಾಡಿದ ಈ ಸಾಧನೆ ನೋಡಿ ನನಗೆ ಹೆಮ್ಮೆ ಆಗುತ್ತಿದೆ. ನಮ್ಮೆಲ್ಲರಿಗೆ ಸ್ಪೂರ್ತಿಯಾಗಿರುವುದಕ್ಕೆ ನಿಮಗೆ ಧನ್ಯವಾದಗಳು ಎಂದಿದ್ದರು. ಇದೀಗ ಅಮ್ಮ ವಕೀಲೆಯಾಗಿ ವರ್ಷದ ಬಳಿಕ ಮತ್ತೊಮ್ಮೆ ಅಮ್ಮನ ಜೊತೆ ಚಿಕ್ಕ ವಿಡಿಯೋ ಶೇರ್ ಮಾಡಿಕೊಂಡಿದ್ದು, ಇದಕ್ಕೆ ಥಹರೇವಾರಿ ಕಮೆಂಟ್ಸ್ ಬರುತ್ತಿವೆ.
ತಾಯಿಯ ಕುರಿತು ವೈಷ್ಣವಿ ಅವರು ಕುತೂಹಲದ ವಿಷಯವೊಂದನ್ನು ಹೇಳಿಕೊಂಡಿದ್ದರು. ಅದೇನೆಂದರೆ, ವೈಷ್ಣವಿ ಅವರ ತಾಯಿ ಇದ್ದಕ್ಕಿದ್ದಂತೆ ತೂಕ ಇಳಿಸಿಕೊಂಡ ವಿಚಾರ ದೊಡ್ಡ ಸುದ್ದಿ ಆಗಿತ್ತು. ನನ್ನ ತಾಯಿ ಯೋಗ ಮಾಡಿ ತೂಕ ಇಳಿಸಿಕೊಂಡಿದ್ದಾರೆ ಎಂದು ಹೇಳಿದ್ದರು ವೈಷ್ಣವಿ. ನಮ್ಮ ತಾಯಿ ಯಾವಾಗಲೂ ನಮಗೆ ಸ್ಫೂರ್ತಿ ನೀಡುತ್ತಾರೆ. ನಮಗೆ ಸ್ಫೂರ್ತಿ ನೀಡಿದ್ದಕ್ಕಾಗಿ ಧನ್ಯವಾದಗಳು ಎಂದು ವೈಷ್ಣವಿ ಅವರು ಭಾನು ಅವರಿಗೆ ಹೇಳುತ್ತಿರುತ್ತಾರೆ. ಇದೀಗ ತಾವು ಕೂಡ ಯೋಗ, ಧ್ಯಾನ, ಮ್ಯಾನುಫೆಸ್ಟೇಷನ್ ಇತ್ಯಾದಿಗಳ ಕುರಿತು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ನಟಿ ಹೇಳುತ್ತಿರುತ್ತಾರೆ. ಈ ಹಿಂದೆ ಬಿಗ್ಬಾಸ್ಗೆ ಹೋಗಿದ್ದಾಗ ವೈಷ್ಣವಿ ಅವರು ತಮ್ಮ ಅಮ್ಮನ ಬಗ್ಗೆ ಹೇಳಿಕೊಂಡಿದ್ದರು. ನನಗೆ ಅಮ್ಮ ಎಂದ್ರೆ ತುಂಬಾ ಪ್ರೀತಿ. ಅಮ್ಮ ಮಕ್ಕಳಿಗೆ ಪ್ರೀತಿಯ ಜೊತೆಗೆ ತುಂಬಾ ಸ್ಟ್ರಿಕ್ಟ್ ಆಗಿ ಸಹ ಬೆಳೆಸಿದ್ದಾರೆ ಎಂದಿದ್ದರು. ನನ್ನ ಎಲ್ಲಾ ಕಾರ್ಯಗಳಿಗೂ ಅಮ್ಮ ಸದಾ ಬೆಂಬಲವಾಗಿ ನಿಲ್ಲುತ್ತಾರೆ. ಅಮ್ಮನ ಬೆಂಬಲ ಇದ್ರೆ ಏನು ಬೇಕಾದ್ರೂ ಮಾಡಬಹುದು ಎನ್ನುವುದು ವೈಷ್ಣವಿ ಅವರ ಮಾತು.
ರಾಮ ಕರಿಮಣಿ ಕಟ್ಟಾಗೋಯ್ತು! ಆದರೂ ಸೀತೆಯ ಬದುಕಲ್ಲಿ ಮತ್ತೆ ಬರ ಸಿಡಿಲು- ಯಾರೀ ಹೊಸ ಲೇಡಿ?