ಫೆಬ್ರವರಿ 28 ರಿಂದ ಮೂರು ದಿನ ನಡೆದ ಹಂಪಿ ಉತ್ಸವದಲ್ಲಿ ಸೀತಾರಾಮ ಧಾರಾವಾಹಿಯ ಸೀತೆ ವೈಷ್ಣವಿ ಗೌಡ ಅವರ ನೃತ್ಯ ವಿವಾದಕ್ಕೆ ಕಾರಣವಾಗಿದೆ. ಸಾಂಸ್ಕೃತಿಕ ವೇದಿಕೆಯಲ್ಲಿ "ಎಕ್ಕಾ ರಾಜಾ ರಾಣಿ" ಹಾಡಿಗೆ ನೃತ್ಯ ಮಾಡಿದ್ದಕ್ಕೆ ಸಾರ್ವಜನಿಕರು ಟೀಕಿಸಿದ್ದಾರೆ. ಈ ನೃತ್ಯ ನಾಡಿನ ಸಂಸ್ಕೃತಿಗೆ ಅವಮಾನವೆಂದೂ ಹಲವರು ಅಭಿಪ್ರಾಯಪಟ್ಟಿದ್ದಾರೆ. ವೈಷ್ಣವಿ ಗೌಡ ಕಿರುತೆರೆಯಲ್ಲಿ ಜನಪ್ರಿಯ ನಟಿ ಮತ್ತು ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ.

ಫೆಬ್ರವರಿ 28ರಿಂದ ಮೂರು ದಿನಗಳವರೆಗೆ ನಡೆದ ಹಂಪಿ ಉತ್ಸವಕ್ಕೆ ಇದಾಗಲೇ ತೆರೆ ಬಿದ್ದಾಗಿದೆ. ಆದರೆ ಅಲ್ಲಿಯ ಕೆಲವು ವಿಡಿಯೋಗಳು ಈಗ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿವೆ. ಹಂಪಿ ಉತ್ಸವ ಎಂದರೆ ಅದು ನಮ್ಮ ನಾಡಿನ ಸಂಸ್ಕೃತಿಯನ್ನು ತೋರಿಸುವ ಉತ್ಸವ. ಕರ್ನಾಟಕದ ಜಾನಪದ ನೃತ್ಯಗಳು ಮತ್ತು ಜಾನಪದ ಸಂಗೀತದ ಶ್ರೀಮಂತಿಕೆಯನ್ನು ಪ್ರದರ್ಶಿಸುವ ಅದ್ಭುತ ವೇದಿಕೆ ಇದು. ಕದಂಬೋತ್ಸವ, ಕರಾವಳಿ ಉತ್ಸವ... ಹೀಗೆ ಕೆಲವು ಉತ್ಸವಗಳನ್ನು ಪ್ರತಿವರ್ಷ ಆಚರಿಸುತ್ತಾ ಬಂದಿರುವ ಹಿಂದಿನ ಉದ್ದೇಶವೂ ಅದೇ ಆಗಿದೆ. ಆದರೆ ಇಂಥ ಉತ್ಸವಗಳು ಬರಬರುತ್ತಾ ಬೇರೆಯದ್ದೇ ರೂಪ ಪಡೆಯುತ್ತಿರುವ ಬಗ್ಗೆ ಇದಾಗಲೇ ಹಲವರು ಆಕ್ಷೇಪ ವ್ಯಕ್ತಪಡಿಸುತ್ತಿರುವುದೂ ಇದೆ. ಡಾನ್ಸ್​, ಸಂಗೀತದ ಹೆಸರಿನಲ್ಲಿ ಬೇರೆಯದ್ದೇ ರೀತಿಯ ವರ್ತನೆ ಮಾಡುತ್ತಿರುವ ಬಗ್ಗೆ ಸೋಷಿಯಲ್​ ಮೀಡಿಯಾಗಳಲ್ಲಿಯೂ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.

ಇದೀಗ ಹಂಪಿ ಉತ್ಸವದಲ್ಲಿ ಸೀತಾರಾಮ ಸೀತೆಯ ಪಾತ್ರಧಾರಿ ನಟಿ ವೈಷ್ಣವಿ ಗೌಡ ಅವರು, ಎಕ್ಕಾ ರಾಜಾ ರಾಣಿ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಇದಕ್ಕೂ ಮುನ್ನ ವೇದಿಕೆಯ ಮೇಲೆ ಅವರನ್ನು ಶಾರದೆಯ ವರಪುತ್ರಿ ಎಂದೆಲ್ಲಾ ಬಣ್ಣಿಸಲಾಯಿತು. ಅವರ ಅದ್ಭುತ ನಟನೆ, ನಟನಾ ಕೌಶಲ್ಯಗಳ ಶ್ಲಾಘನೆ ಮಾಡಲಾಯಿತು. ಆದರೆ ಬಳಿಕ ಅವರು ಈ ಹಾಡಿಗೆ ನೃತ್ಯ ಮಾಡಿರುವ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಸೋಷಿಯಲ್​ ಮೀಡಿಯಾದಲ್ಲಿ ಟೀಕೆಗಳ ಸುರಿಮಳೆಯೇ ಆಗುತ್ತಿದೆ. ಆದರೆ, ಆಯೋಜಕರು ಕಾರ್ಯಕ್ರಮದ ಈ ಭಾಗವನ್ನು ಅಗಲಿದ ಪುನೀತ್ ರಾಜ್‌ಕುಮಾರ್ ನೆನಪಲ್ಲಿ ಆಯೋಜಿಸಿದ್ದು, ಆ ಹಾಡಿಗೆ ಹೀಗೆಯೇ ಡ್ಯಾನ್ಸ್ ಮಾಡೋದು ಅನಿವಾರ್ಯವಾಗಿತ್ತು ಎಂಬುದ ಆಯೋಜಕರು ಹೇಳುತ್ತಿದ್ದಾರೆ. ಕಲಾವಿದನಿಗೆ ಮನೋರಂಜಿಸುವುದಷ್ಟೇ ಮುಖ್ಯ. ಹಾಡಿಗೆ ತಕ್ಕಂತೆ ಸ್ಟೆಪ್ ಹಾಕಿದ್ದು, ಆದಕ್ಯಾಕೆ ವಿರೋಧ ಎನ್ನುವುದು ಕಲಾವಿದರ ಅನಿಸಿಕೆ.

ಒಂದೇ ಸೀರೆಯನ್ನು ಹೇಗೆಲ್ಲಾ ಧರಿಸ್ಬೋದು? ಸೀತಾರಾಮ ಸೀತಾ ಹೇಳಿಕೊಟ್ಟರು ಹಲವು ಬಗೆ... ವಿಡಿಯೋ ವೈರಲ್

ವೈಷ್ಣವಿ ಗೌಡ ಅವರು ಅದ್ಭುತ ನೃತ್ಯಗಾತಿ ಕೂಡ ಹೌದು. ಶಾಸ್ತ್ರೀಯ ನೃತ್ಯದಲ್ಲಿಯೂ ಸೈ ಎನಿಸಿರುವ ವೈಷ್ಣವಿ ಗೌಡ ಬೇರೆ ರೀತಿಯಲ್ಲಿಯೇ ವೀಕ್ಷಕರನ್ನು ಮನೋರಂಜಿಸಬಹುದಿತ್ತು ಎನ್ನುವುದು ಕೆಲವು ಅಭಿಪ್ರಾಯ. ಒಟ್ಟಿನಲ್ಲಿ ಕಲಾವಿದೆಯಾಗಿ ವೈಣ್ಣವಿ ಡ್ಯಾನ್ಸಿಗೆ ಅಪಾರ್ಥ ಕಲ್ಪಿಸೋದು ಬೇಡ ಎನ್ನೋದು ಕಲಾದವಿದರ ಅನಿಸಿಕೆ. 

ಇನ್ನು ವೈಷ್ಣವಿ ಅವರ ಕುರಿತು ಹೇಳುವುದಾದರೆ, ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಇವರು ಪರಿಚಯವಿದ್ದರು. ಅಗ್ನಿಸಾಕ್ಷಿ ಸೀರಿಯಲ್​ನ ಸನ್ನಿಧಿ ಮೂಲಕ ಸಕತ್​ ಫೇಮಸ್​ ಆಗಿದ್ದ ನಟಿ ಈಗ ಸೀತಾರಾಮದ ಸೀತೆಯಾಗಿ ಮನೆ ಮಾತಾಗಿದ್ದಾರೆ. ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. ಅಷ್ಟೇ ಅಲ್ಲದೇ, ಹಲವು ಉತ್ಪನ್ನಗಳ ರಾಯಭಾರಿಯೂ ಹೌದು. ಜೀ ಕನ್ನಡದ `ದೇವಿ' ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.ನಂತರ `ಪುನರ್‌ವಿವಾಹ'ದಲ್ಲಿ ನಟಿಸಿ `ಅಗ್ನಸಾಕ್ಷಿ' ಸೀರಿಯಲ್‌ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದಿದ್ದಾರೆ. `ಗಿರಿಗಿಟ್ಲೆ' ಚಿತ್ರದ ಮೂಲಕ ನಾಯಕಿಯಾಗಿದ್ದಾರೆ. `ಭರ್ಜರಿ ಕಾಮಿಡಿ' ಎಂಬ ರಿಯಾಲಿಟಿ ಷೋ ನಿರೂಪಣೆ ಕೂಡ ಮಾಡಿದ್ದಾರೆ. `ಕುಣಿಯೋಣ ಬಾರ' ಡ್ಯಾನ್ಸ್ ರಿಯಾಲಿಟಿ ಷೋ ಆಗೂ ಬಿಗ್​ಬಾಸ್​ ಸೀಸನ್​ 8ನಲ್ಲಿ ಭಾಗವಹಿಸಿದ್ದಾರೆ.

ನನ್ನ ಸಕ್ಸಸ್​ಗೆ ಕಾರಣ ಪಲಾವ್​ ಎಲೆ: ಯಶಸ್ಸಿನ ಗುಟ್ಟು ತಿಳಿಸಿಕೊಟ್ಟ ಸೀತಾರಾಮ ನಟಿ ವೈಷ್ಣವಿ ಗೌಡ- ವಿಡಿಯೋ ವೈರಲ್​

View post on Instagram