ಸೀತಾರಾಮ ಸೀರಿಯಲ್​ ತಂಡದ ಕಲಾವಿದರ  ಕತ್ತಲು-ಬೆಳಕಿನಾಟ ಮಾಡುವ ರೀಲ್ಸ್​ ಶೇರ್​ ಮಾಡಿದ್ದರೆ ಫ್ಯಾನ್ಸ್​ ಹೀಗೆಲ್ಲಾ ಹೇಳೋದಾ?  

ಸೀತಾರಾಮ ಸೀರಿಯಲ್​ ಇದೀಗ ಇಂಟರೆಸ್ಟಿಂಗ್​ ಘಟ್ಟಕ್ಕೆ ಬಂದು ತಲುಪಿದೆ. ಸೀತಾಳ ಮದ್ವೆದಿನ ಬಂದೇ ಬಿಟ್ಟಿದೆ. ಸೀತಾ ಹಾಗೂ ಆಕೆಯ ಮಗಳು ಸಿಹಿಯ ಮೇಲೆ ಜೀವವನ್ನೇ ಇಟ್ಟಿರುವ ರಾಮ್, ಸೀತಾಳಿಗೂ ಪ್ರೀತಿಯನ್ನು ತಿಳಿಸದೇ, ಮನಸ್ಸಿನಲ್ಲಿಯೇ ಪ್ರೀತಿಯನ್ನು ಅದುಮಿಟ್ಟುಕೊಂಡು ಸೀತಾಳ ಮದುವೆಯನ್ನೂ ನೋಡಲು ಮನಸ್ಸು ಮಾಡದೇ ಭಾರವಾರ ಮನಸ್ಸಿನಿಂದ ವಿದೇಶಕ್ಕೆ ತೆರಳಿದ್ದಾನೆ. ಕೊನೆ ಕ್ಷಣದಲ್ಲಿ ಏನಾದರೂ ಮ್ಯಾಜಿಕ್‌ ಆಗಿ ಸೀತಾ-ರಾಮ ಒಂದಾಗಬಹುದು ಎಂದುಕೊಂಡಿದ್ದೆ ಅಂದ ಅಶೋಕ್‌ನಿಗೆ ಇದೇನು ಸಿನಿಮಾನೇ ಹಾಗಾಗಲು ಎಂದು ರಾಮ್‌ ಹೇಳಿದ್ದಾನೆ. ಅದೇ ಇನ್ನೊಂದೆಡೆ, ಸೀತಾಳನ್ನು ಮದುವೆಯಾಗ ಹೊರಟಿರುವ ರುದ್ರಪ್ರತಾಪ್‌ ಸೀತಾಳ ಜೊತೆ ಮದ್ವೆಯಾಗುತ್ತಿದ್ದಂತೆಯೇ ಸಿಹಿಯನ್ನು ಅನಾಥಾಶ್ರಮಕ್ಕೆ ಸೇರಿಸುವ ಪ್ಲ್ಯಾನ್‌ ಮಾಡಿದ್ದಾನೆ. ಇದನ್ನು ಸಿಹಿ ಕೇಳಿಸಿಕೊಂಡು ಕಣ್ಣೀರಾಗಿದ್ದಾಳೆ. 

ಸೀತಾಳ ಮದ್ವೆ ರುದ್ರಪ್ರತಾಪ್‌ ಜೊತೆ ಆಗಿಬಿಡತ್ತಾ? ಸಿಹಿ ಅನಾಥಾಶ್ರಮಕ್ಕೆ ಸೇರ್ತಾಳಾ? ತಾನು ಕೇಳಿದ ವಿಷಯವನ್ನು ಮದುವೆಗೂ ಮುನ್ನ ಸಿಹಿ ಅಮ್ಮ ಸೀತಾಳಿಗೆ ಹೇಳ್ತಾಳಾ? ಈ ವಿಷಯವನ್ನು ರಾಮ್‌ಗೆ ತಿಳಿಸಲು ಸಿಹಿ ಫೋನ್‌ ಮಾಡಿದ್ರೂ ಅದನ್ನು ಆತ ಪಿಕ್‌ ಮಾಡಲಿಲ್ಲ. ಕೊನೆ ಕ್ಷಣದಲ್ಲಾದರೂ ಆತ ಫೋನ್‌ ಪಿಕ್‌ ಮಾಡಿ ಓಡೋಡಿ ಬರ್ತಾನಾ? ಸಿನಿಮಾದಲ್ಲಿ ಆಗುವಂತೆ ರಾಮನನ್ನು ಸೀತಾ ಮದ್ವೆಯಾಗ್ತಾಳಾ ಎನ್ನುವ ಪ್ರಶ್ನೆ ಸೀತಾರಾಮ ಸೀರಿಯಲ್‌ ಪ್ರಿಯರನ್ನು ಕಾಡುತ್ತಿದ್ದು, ಇದೀಗ ರಾಮ್​ ಆಗಮನವಾಗಿದೆ. ಸೀತಾರಾಮ ಒಂದಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. 

ಸೀತಾರಾಮ ಸೀರಿಯಲ್​ ಸೆಟ್ ಹೇಗಿದೆ? ಶೂಟಿಂಗ್​ ಹೇಗೆ ಮಾಡ್ತಾರೆ? ವಿಡಿಯೋ ಮೂಲಕ ವೈಷ್ಣವಿ ಮಾಹಿತಿ

ಇದರ ನಡುವೆಯೇ, ಸೀತಾರಾಮ ತಂಡ ಕತ್ತಲು-ಬೆಳಕಿನಾಟ ವಿಡಿಯೋ ಶೇರ್​ ಮಾಡಿದೆ ಜೀ ಕನ್ನಡ ವಾಹಿನಿ. ಅದರಲ್ಲಿ ಸೀತಾ ಮತ್ತು ರಾಮ ಹಾಗೂ ಪ್ರಿಯಾ ಮತ್ತು ಅಶೋಕ್​ ಜೋಡಿ ಭರ್ಜರಿ ಸ್ಟೆಪ್​ ಹಾಕಿವೆ. ಕುತೂಹಲ ಎನಿಸುವ ಈ ಡ್ಯಾನ್ಸ್​ ಮೋಡಿ ಮಾಡುತ್ತಿರುವುದಾಗಿ ಅಭಿಮಾನಿಗಳು ಕಮೆಂಟ್​ನಲ್ಲಿ ಹೇಳುತ್ತಿದ್ದಾರೆ. ಸೀತಾ ಮತ್ತು ರಾಮನ ಮದುವೆ ಯಾವಾಗ ಆಗುತ್ತದೆಯೋ ಎಂದು ಕಾಯುತ್ತಿರುವ ಸೀತಾರಾಮ ಸೀರಿಯಲ್​ ಫ್ಯಾನ್ಸ್, ರಾಮ್​ ಅವ್ರೇ ಸೀತಾಂಗೆ ಇಲ್ಲೇ ತಾಳಿ ಕಟ್ಟಿಬಿಡಿ. ಸಮಸ್ಯೆನೇ ಇರಲ್ಲ ಅಂತಿದ್ದಾರೆ. ಇಲ್ಲಿ ತಾಳಿ ಕಟ್ಟಿಬಿಟ್ಟರೆ ಸೀರಿಯಲ್​ನಲ್ಲಿ ಇನ್ನೇನು ಮಾಡ್ತಾರೆ ಎಂದು ಕೆಲವರು ರಿಪ್ಲೈ ಮಾಡಿದ್ದರೆ, ಅಲ್ಲಿ ಬೇಕಿದ್ರೆ ಹನಿಮೂನ್​ ಮಾಡಲಿ ಎಂದು ಕಾಲೆಳೆಯುತ್ತಿದ್ದಾರೆ. ಒಟ್ಟಿನಲ್ಲಿ ಸೀತಾ-ರಾಮ ಯಾವಾಗ ಮದ್ವೆಯಾಗುತ್ತಾರೋ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. 

ಕೆಲ ದಿನಗಳ ಹಿಂದೆಷ್ಟೇ ಸೀತಾ ಪಾತ್ರಧಾರಿ ವೈಷ್ಣವಿ ಆರ್​.ಬಿ.ಗೌಡ ಅವರು ಸೀತಾರಾಮ ಸೀರಿಯಲ್​ ಸೆಟ್​ ಕುರಿತು ಮಾಹಿತಿ ನೀಡಿದ್ದರು. ಮನೆಗಿಂತ ಸೆಟ್​ನಲ್ಲಿ ಹೆಚ್ಚು ಹೊತ್ತು ಶೂಟಿಂಗ್​ ಸೆಟ್​ನಲ್ಲಿ ಇರುವುದರಿಂದ ಇದು ನಮ್ಮ ಸೆಕೆಂಡ್​ ಮನೆ ಆಗಿದೆ. ಶೂಟಿಂಗ್​ ಸಮಯದಲ್ಲಿ ಥೇಟ್​ ವಠಾರ ಹಾಗೂ ಮನೆಯ ಚಿತ್ರವಣವನ್ನು ಇಲ್ಲಿ ಮಾಡಲಾಗಿದೆ ಎಂದು ಅವರು ಸೆಟ್​ ಹೇಗಿದೆ ಎಂಬ ಮಾಹಿತಿ ನೀಡಿದ್ದರು. ಮನೆಯಲ್ಲಿ ಏನೇನು ಇರುತ್ತದೆಯೋ ಅವೆಲ್ಲವನ್ನೂ ಸೆಟ್​ನಲ್ಲಿ ನೈಜತೆ ಇರುವಂತೆ ಬಿಂಬಿಸಲಾಗಿದೆ ಎಂಬ ಬಗ್ಗೆ ಸಂಪೂರ್ಣ ವಿವರಣೆ ನೀಡಿರುವ ನಟಿ, ಮನೆಯೂ ಈ ಸೀರಿಯಲ್​ನ ಒಂದು ಪಾತ್ರವೇ ಆಗಿರುವ ಕಾರಣ, ನಟ-ನಟಿಯರಂತೆ ಇದಕ್ಕೂ ಅಷ್ಟೇ ಪ್ರಾಮುಖ್ಯತೆ ಇದೆ ಎಂದಿದ್ದರು. ಇನ್ನು ಮನೆಯ ಒಳಗಡೆ ಏನೆಲ್ಲಾ ಇದೆ ಎಂಬುದನ್ನು ಮುಂದಿನ ವಿಡಿಯೋದಲ್ಲಿ ತೋರಿಸುವುದಾಗಿ ಹೇಳಿದ್ದು, ಅದಕ್ಕಾಗಿ ಫ್ಯಾನ್ಸ್​ ಕಾಯುತ್ತಿದ್ದಾರೆ.

2023ರಲ್ಲಿ ಗೂಗಲ್​ನಲ್ಲಿ ಅತಿ ಹೆಚ್ಚು ಹುಡುಕಿದ್ದೇ ಈಕೆಯನ್ನು! ಎಲ್ಲಾ ಕ್ಷೇತ್ರಗಳ ಸೆಲೆಬ್ರಿಟಿಗಳನ್ನು ಹಿಂದಿಕ್ಕಿದ ಚೆಲುವೆ ಯಾರು?

View post on Instagram