Asianet Suvarna News Asianet Suvarna News

ಮನೋಕಾಮನೆ ಈಡೇರಬೇಕೆಂದರೆ 3,6,9ರ ಟಿಪ್ಸ್​ ಫಾಲೋ ಮಾಡಿ: ಸೀತಾರಾಮ ವೈಷ್ಣವಿ ಗೌಡ ಸಲಹೆ

 ಮನೋಕಾಮನೆ ಈಡೇರಬೇಕೆಂದರೆ 3,6,9ರ ಟಿಪ್ಸ್​ ಫಾಲೋ ಮಾಡಿ ಎನ್ನುವ ಮೂಲಕ ಸೀತಾರಾಮ ಸೀತೆ ವೈಷ್ಣವಿ ಗೌಡ ಈ ಸಲಹೆ ನೀಡಿದ್ದಾರೆ ನೋಡಿ... 
 

Seeta Rama Seeta Vaishnavi Gowda about 3 6 9 tips for fulfillment of desires suc
Author
First Published Jun 12, 2024, 4:42 PM IST

ಸೀತಾರಾಮ ಸೀರಿಯಲ್​ ಸೀತಾ ಉರ್ಫ್​ ವೈಷ್ಣವಿ ಗೌಡ ಅವರು ಸೀರಿಯಲ್​ನ ಬಿಜಿ ಷೆಡ್ಯೂಲ್​ ನಡುವೆಯೂ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಬಗೆಬಗೆ ರೀಲ್ಸ್​ ಮೂಲಕ ಅಭಿಮಾನಿಗಳನ್ನು ರಂಜಿಸುವುದು ಒಂದೆಡೆಯಾದರೆ ಯೂಟ್ಯೂಬ್​ ಚಾನೆಲ್​ನಲ್ಲಿ ಥಹರೇವಾರಿ ವಿಷಯಗಳ ಬಗ್ಗೆ ತಿಳಿಸಿಕೊಡುತ್ತಾರೆ. ಯೋಗ, ಆಧ್ಯಾತ್ಮ, ಅಡುಗೆ, ಕೈರುಚಿ, ಸೀತಾರಾಮ ಸೀರಿಯಲ್​ ಶೂಟಿಂಗ್​... ಹೀಗೆ ಭಿನ್ನ ವಿಷಯಗಳ ಮಾಹಿತಿ ನೀಡುತ್ತಾರೆ. ಇದೀಗ ನಾವು ಅಂದುಕೊಂಡದ್ದೆಲ್ಲಾ ನೆರವೇರಬೇಕು ಎಂದರೆ ಏನು ಮಾಡಬೇಕು ಎಂಬ ಬಗ್ಗೆ ನಟಿ ಹೇಳಿದ್ದಾರೆ. ಮನಸ್ಸಿನಲ್ಲಿ ಅಂದುಕೊಂಡದ್ದೆಲ್ಲಾ ನೆರವೇರಬೇಕು ಎಂದರೆ ಏನು ಮಾಡಬೇಕು ಎನ್ನುವ ಬಗ್ಗೆ ನೀವು ಸಾಕಷ್ಟು ವಿಡಿಯೋಗಳನ್ನು ನೋಡಿರಬಹುದು. ಯೂಟ್ಯೂಬ್​ ಸೇರಿದಂತೆ ಸೋಷಿಯಲ್​ ಮೀಡಿಯಾಗಳಲ್ಲಿ ಈ ರೀತಿಯ ವಿಡಿಯೋಗಳಿಗಂತೂ ಬರವೇ ಇಲ್ಲ. ಕೆಲವರು ತುಂಬಾ ಸ್ಟಡಿ ಮಾಡಿ  ಈ ಬಗ್ಗೆ ಹೇಳುವುದು ಉಂಟು. ಇನ್ನು ಕೆಲವರು ಲೈಕ್ಸ್​, ವ್ಯೂವ್ಸ್​ ಗೋಸ್ಕರ ಏನೇನೋ ಟಿಪ್ಸ್​ ಕೊಡುವುದು ಉಂಟು. 

ಜನರು ಇಂಥ ವಿಡಿಯೋಗಳನ್ನು ಹೆಚ್ಚು ನೋಡುವ ಕಾರಣ, ಅದನ್ನೇ ಬಂಡವಾಳ ಮಾಡಿಕೊಂಡು ಏನೇನೋ ಹೇಳುವುದು ಉಂಟು. ಆದರೆ ಜ್ಯೋತಿಷಿ, ಭವಿಷ್ಯ, ಮ್ಯಾನಿಫೆಸ್ಟೇಷನ್​ ಎನ್ನುವುದು ಸುಳ್ಳಲ್ಲ ಎನ್ನುವುದು ಕೂಡ ಸಾಬೀತಾಗಿದೆ. ಕೆಲವರಿಗೆ ಕೆಲವೊಂದು ವಿಷಯಗಳು ಮೂಢನಂಬಿಕೆ ಎನ್ನಿಸಬಹುದು. ಇಂದಿನ ಕಾಲಕ್ಕೆ ಇವೆಲ್ಲಾ ಅಪ್ರಸ್ತುತ ಎಂದೂ ಎನ್ನಿಸಬಹುದು. ಆದರೆ ತಲೆತಲಾಂತರಗಳಿಂದ ನಮ್ಮ ಮುತ್ತಜ್ಜ ಹಾಗೂ ಅವರ ಹಿರಿಯ ತಲೆಗಳಿಂದ ಬಂದಿರುವ ಅದೆಷ್ಟೋ ಶಾಸ್ತ್ರಗಳು, ನಂಬಿಕೆಗಳು ಇಂದಿಗೂ ಪ್ರಸ್ತುತ. ಇದನ್ನು ನಂಬುವುದು ಬಿಡುವುದು ಅವರವರಿಗೆ ಬಿಟ್ಟ ವಿಷಯ. ಕೆಲವರು ಇಂಥ ಸಂಪ್ರದಾಯಗಳನ್ನು ನಂಬಿ ತಮಗೆ ಆಗಿರುವ ಅನುಭವಗಳನ್ನು ಹಂಚಿಕೊಂಡರೆ, ಮತ್ತೆ ಕೆಲವರು ಇವೆಲ್ಲಾ ಓಬಿರಾಯನ ಕಾಲದ್ದು, ಇಂದಿನ ಕಾಲಕ್ಕೆ ಅಪ್ರಸ್ತುತ ಎಂದು ಹೇಳುವುದು ಉಂಟು.

ನೆಗೆಟಿವ್​ ಎನರ್ಜಿ ಸುಳಿಯಬಾರದೆ? ಪಲಾವ್​ ಎಲೆಯ ಟಿಪ್ಸ್​ ಹೇಳಿದ ನಟಿ ವೈಷ್ಣವಿ ​...

ಅದೇನೇ ಇರಲಿ. ಎಲ್ಲವೂ ಅವರವರ ನಂಬಿಕೆಗೆ ಬಿಟ್ಟಿದ್ದು. ಇದೀಗ ಸೀತಾರಾಮ ಸೀರಿಯಲ್​ ಖ್ಯಾತಿಯ ಸೀತಾ ವೈಷ್ಣವಿ ಗೌಡ ಅವರು, 3, 6, 9ರ  ಟಿಪ್ಸ್​ ನೀಡಿದ್ದಾರೆ. ಅಂದುಕೊಂಡದ್ದು ಆಗಬೇಕು ಎಂದರೆ ಏನು ಮಾಡಬೇಕು ಎಂಬ ಬಗ್ಗೆ ಅವರು ಹೇಳಿದ್ದಾರೆ. ಮ್ಯಾನಿಫೆಸ್ಟೇಷನ್​ಗಾಗಿ ಒಂದು ಪುಸ್ತಕ ಇಟ್ಟುಕೊಳ್ಳುವಂತೆ ಹೇಳಿದ ನಟಿ, ಅದರಲ್ಲಿ ನಿಮಗೆ ಏನು ಆಗಬೇಕಿದೆಯೋ ಅದನ್ನು ಬೆಳಿಗ್ಗೆ ಮೂರು ಬಾರಿ, ಮಧ್ಯಾಹ್ನ ಆರು ಬಾರಿ ಮತ್ತು ರಾತ್ರಿ 9 ಬಾರಿ ಬರೆಯಬೇಕು. ಹೀಗೆ ಬರೆಯುವಾಗ ಒಂದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅದೇನೆಂದರೆ, ನನಗೆ ಹೀಗೆ ಆಗಬೇಕು ಎಂದು ಬರೆಯಬಾರದು, ಬದಲಿಗೆ ಹೀಗೆ ಆಗಿ ಹೋಗಿದೆ ಎನ್ನುವ ರೀತಿಯಲ್ಲಿ ಬರೆದರೆ ಶೀಘ್ರದಲ್ಲಿ ಆಸೆ ಈಡೇರುತ್ತದೆ ಎಂದಿದ್ದಾರೆ.

ಮೂರು, ಆರು ಅಥವಾ 9 ದಿನ ಇದನ್ನು ಮಾಡಬೇಕು. ಕೆಲವರಿಗೆ ಇಷ್ಟರಲ್ಲಿಯೇ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಒಂದು ವೇಳೆ ಈ ದಿನದಲ್ಲಿ ಆಗದೇ ಹೋದರೆ ಸಾಧ್ಯವಾದಷ್ಟು ದಿನ ಅಂದರೆ ಮನೋಕಾಮನೆ ಈಡೇರುವಷ್ಟು ದಿನ ಇದನ್ನು ಬರೆಯಬೇಕು ಎಂದು ನಟಿ ಹೇಳಿದ್ದು, ಇದರಿಂದ ತಮಗೂ ಸಾಕಷ್ಟು ಉಪಯೋಗ ಆಗಿರುವುದಾಗಿ ಹೇಳಿಕೊಂಡಿದ್ದಾರೆ. ಈ ಹಿಂದೆ ಕೂಡ ನಟಿ ಪಾಲಾವಿನ ಎಲೆಯ ಬಗ್ಗೆ ತಿಳಿಸಿಕೊಟ್ಟಿದ್ದರು. ಬೇ ಲೀಫ್​ ಎಂದು ಇಂಗ್ಲಿಷ್​ನಲ್ಲಿ ಕರೆಯಲಾಗುತ್ತದೆ. ಅದರ ಮೇಲೆ ತನಗೆ ಏನು ಆಗಬೇಕು ಎನ್ನುವ ವಿಷ್​ಗಳನ್ನು ಬರೆದು, ಒಂದು ಪ್ಲೇಟ್​ನಲ್ಲಿ ಅವುಗಳಿಗೆ ಬೆಂಕಿ ಹಚ್ಚಿ ಬೂದಿ ಮಾಡಿ, ಅದನ್ನು ಗಾಳಿಯಲ್ಲಿ ಬಿಡುವಂತೆ ಹೇಳಿದ್ದರು. ಇದರಿಂದ ಯಾವುದೋ ರೂಪದಲ್ಲಿ ವಿಷ್​ ನೆರವೇರುವುದಾಗಿ ಹೇಳಿದ್ದರು. . ಇದರ ಜೊತೆಗೆ ಉಗುರುಬೆಚ್ಚಗಿನ ನೀರಿನಲ್ಲಿ ಕಲ್ಲು ಉಪ್ಪು ಹಾಕಿಕೊಂಡು ಒಂದು ಬಕೆಟ್​ನಲ್ಲಿ ಸ್ವಲ್ಪ ಸಮಯ ಕಾಲನ್ನು ಹಾಕಿ ಕುಳಿತುಕೊಂಡರೆ ನೆಗೆಟಿವ್​ ಎನರ್ಜಿ ಹೋಗುವುದಾಗಿ ತಿಳಿಸಿದ್ದರು. 

ಸೌಂದರ್ಯ ಸ್ಪರ್ಧೆ ಕಿರೀಟ ಮಾರಾಟಕ್ಕಿದೆ! ಬ್ಯೂಟಿ ಸ್ಪರ್ಧೆಯ ಶಾಕಿಂಗ್ ವಿಷ್ಯ ರಿವೀಲ್​ ಮಾಡಿದ ​ಮಿಸಸ್​ ವರ್ಲ್ಡ್​

Latest Videos
Follow Us:
Download App:
  • android
  • ios