ಸಿಹಿಯ ಅಪ್ಪ-ಅಮ್ಮ ಯಾರು ಎಂದು ತಿಳಿದ ಮೇಲೆ ಕಂಗಾಲಾಗಿದ್ದ ಸೀತಾಳ ಮೊಗದಲ್ಲೀಗ ನಗು. ಇದಕ್ಕೆ ಕಾರಣವೇನು? 

ವರ್ಷದಿಂದ ಕಾಯುತ್ತಿದ್ದ ಸಿಹಿಯ ಜನ್ಮರಹಸ್ಯ ಕೊನೆಗೂ ತಿಳಿದುಬಿಟ್ಟಿದೆ. ಮೇಘಶ್ಯಾಮ್​ ಸಿಹಿಯ ಅಪ್ಪ ಎನ್ನುವ ವಿಷಯ ರಿವೀಲ್​ ಆಗಿದೆ. ಸಿಹಿ ಸೀತಾಳ ಮಗಳು ಅಲ್ಲ ಎನ್ನುವುದು ಇದಾಗಲೇ ತಿಳಿದಿದ್ದರೂ, ಆಕೆ ಬಾಡಿಗೆ ತಾಯಿ, ಜನ್ಮ ಕೊಟ್ಟ ತಾಯಿ. ಆದರೆ ಕಾನೂನಿನ ಪ್ರಕಾರ ತಾಯಿಯಲ್ಲ. ಅದೇ ಇನ್ನೊಂದೆಡೆ, ಡಾ.ಮೇಘಶ್ಯಾಮಗೆ ತಮ್ಮ ಮಗಳು ಬದುಕಿರುವ ಸತ್ಯ ತಿಳಿದಿದೆ. ಸಿಹಿಯ ಮೇಲೆ ಆತನಿಗೆ ಇನ್ನಿಲ್ಲದ ಪ್ರೀತಿ. ಆದರೆ ಅವಳೇ ತನ್ನ ಮಗಳು ಎನ್ನುವ ಸತ್ಯ ಗೊತ್ತಿಲ್ಲ. ಆದರೆ ಸೀತಾಳಿಗೆ ವಿಷಯ ಗೊತ್ತಾಗಿ ಕಂಗಾಲಾಗಿ ಹೋಗಿದ್ದಾಳೆ. ಇದರ ನಡುವೆಯೇ ಶಾಲಿನಿ ನಾವು ಬಾಡಿಗೆ ತಾಯಿಯ ಮೋಸಕ್ಕೆ ಒಳಗಾಗಿ ನಮ್ಮ ಮಗಳನ್ನು ಕಳೆದುಕೊಂಡಿದ್ದೇವೆ ಎಂದು ಭಾರ್ಗವಿ ಮುಂದೆ ಹೇಳಿದ್ದಾಳೆ. ಅವಳು ಸೀತಾಳ ಮುಖದಲ್ಲಿ ಆಗುತ್ತಿದ್ದ ಬದಲಾವಣೆ ಗಮನಿಸಿ, ಸಿಹಿಯೇ ಅವರ ಮಗು ಎನ್ನುವ ಅನುಮಾನ ಶುರುವಾಗಿದೆ. 

ಇದಕ್ಕಾಗಿಯೇ ಸೀತಾ ಮತ್ತು ಸಿಹಿಯ ಸಂಬಂಧದ ಬಗ್ಗೆ ಇದೀಗ ಸೀರಿಯಲ್​ ಪ್ರೇಮಿಗಳಲ್ಲಿ ಆತಂಕ ಶುರುವಾಗಿದೆ. ಸೀತಾ ಮತ್ತು ಸಿಹಿಗೂ ಇರುವ ಸಂಬಂಧ ತಾಯಿ-ಮಗಳದ್ದೇ ಆಗಿದ್ದರೂ ಅವರು ಕಾನೂನಿನ ದೃಷ್ಟಿಯಲ್ಲಿ ತಾಯಿ-ಮಗಳು ಅಲ್ಲ. ಸೀತಾ ತನ್ನ ಗರ್ಭದಲ್ಲಿ ಈ ಮಗುವನ್ನು ಇಟ್ಟು ಒಂಬತ್ತು ತಿಂಗಳು ಹೊತ್ತು ಹೆತ್ತಿದ್ದರೂ ಆಕೆ ಬಾಡಿಗೆ ತಾಯಿ ಮಾತ್ರ! ಕಣ್ಣು ಅರಿಯದಿದ್ದರೂ ಕರುಳು ಅರಿಯುತ್ತದೆ ಎನ್ನುವ ಹಾಗೆ ಸಿಹಿ ಮತ್ತು ಡಾ.ಮೇಘಶ್ಯಾಮ್​ ನಡುವೆ ಪ್ರೀತಿ ಹೆಚ್ಚಾಗುತ್ತಿದೆ. ಮೇಘಶ್ಯಾಮ್​ಗೂ ಸಿಹಿಯನ್ನು ಘಳಿಗೆ ಬಿಟ್ಟಿರಲಾಗದ ಸ್ಥಿತಿ. ಶಾಲಿನಿಗೆ ಸಿಹಿಯನ್ನು ಕಂಡರೆ ಆಗದಿದ್ದರೂ, ಅವಳು ತೋರುವ ಪ್ರೀತಿಗೆ ಒಮ್ಮೊಮ್ಮೆ ಸೋತು ಹೋಗಿದ್ದು ಇದೆ. ಅನಿವಾರ್ಯವಾಗಿ ಅವರಿಬ್ಬರಿಗೂ ಸೀತಾಳ ಮನೆಯಲ್ಲಿ ಉಳಿದುಕೊಳ್ಳುವ ಸ್ಥಿತಿ ಬಂದಿದೆ. ಅಪ್ಪ ಮತ್ತು ಮಗಳ ನಡುವೆ ಬಾಂಡಿಂಗ್​ ಹೆಚ್ಚಾಗುತ್ತಿದೆ. ಮೇಘಶ್ಯಾಮ್​ ಅಂತೂ ಸಿಹಿಯನ್ನು ತನ್ನ ಮಗಳಂತೆಯೇ ನೋಡುತ್ತಿದ್ದಾನೆ. 

ಸೀತಾರಾಮ ಸೀತಾಳ ಬಾಡಿ ಶೇವಿಂಗ್​, ಬಾಡಿ ಮಸಾಜ್​ ವಿಡಿಯೋ ವೈರಲ್​: ಸುಸ್ತಾದ ಫ್ಯಾನ್ಸ್​!

ಇನ್ನು ಮಗಳು ಸಿಹಿ ತನ್ನ ಕೈತಪ್ಪಿ ಹೋಗುತ್ತಾಳೆ ಎನ್ನುವ ಭಯದಲ್ಲಿ ಇರುವ ಸೀತಾಳ ಮೊಗದಲ್ಲಿ ಈಗ ಹರ್ಷ ತುಂಬಿ ತುಳುಕಾಡುತ್ತಿದೆ. ಅದೂ ಎಲ್ಲಾ ರಹಸ್ಯ ಗೊತ್ತಿರೋ ಡಾಕ್ಟರ್​ ಅನಂತ ಲಕ್ಷ್ಮಿಯ ಮುಂದೆ. ಏನಿದು ಟ್ವಿಸ್ಟ್​? ಇದರ ಹೊಸ ಪ್ರೊಮೋ ಬಿಡುಗಡೆಯಾಗಿದೆ. ಅತ್ತ ರಾಮ್​, ಮೇಘಶ್ಯಾಮ್​ನ ಮಗಳನ್ನು ಹುಡುಕುವ ಪಣ ತೊಟ್ಟಿದ್ದರೆ, ಇತ್ತ ಸೀತಾಳಿಗೆ ಇನ್ನೊಂದು ಸತ್ಯ ತಿಳಿದಿದೆ. ಅದೇನೆಂದರೆ, ಶಾಲಿನಿ ಮೇಘಶ್ಯಾಮ್​ ಬಳಿ ಮಾತನಾಡುತ್ತಾ, ಮಗು ಸತ್ತು ಹೋಗಿದೆ ಎಂದು ಹೇಳಿದ್ದು, ಆ ಬಾಡಿಗೆ ತಾಯಿಯಲ್ಲ, ಬದಲಿಗೆ ನಾನೇ. ನೀನು ದೂರದ ದೇಶಕ್ಕೆ ಹೋಗಿದ್ದರಿಂದ ಆ ಮಗುವನ್ನು ನಾನೊಬ್ಬಳೇ ಹೇಗೆ ಸಾಕುವುದು ತಿಳಿಯದೇ ಹೆದರಿ ಮಗು ಸತ್ತು ಹೋಗಿದೆ ಎಂದು ಸುಳ್ಳು ಹೇಳಿದ್ದೆ ಎಂದಿದ್ದಾಳೆ. ಆಮೇಲೆ ಆ ಘಟನೆ ನಡೆದ ದಿನದ ಬಗ್ಗೆ ಹೇಳುತ್ತಿದ್ದಂತೆಯೇ, ಸೀತಾ ಅದನ್ನು ಕೇಳಿಸಿಕೊಂಡಿದ್ದಾಳೆ. ಸಿಹಿ ಹುಟ್ಟಿದ ದಿನ ಕೂಡ ಅದೇ ಆಗಿದ್ದ ಕಾರಣ, ಇವರೇ ಸಿಹಿಯ ಅಪ್ಪ-ಅಮ್ಮ ಎನ್ನುವ ಸತ್ಯ ಗೊತ್ತಾಗಿದೆ.

ಕೂಡಲೇ ಡಾಕ್ಟರ್​ ಅನಂತಲಕ್ಷ್ಮಿ ಅವರ ಬಳಿಗೆ ಹೋಗಿ ಹುಟ್ಟಿದ ಕೂಡಲೇ ಸತ್ತುಹೋಯಿತು ಎಂದು ಸುಳ್ಳು ಹೇಳುವ ಅಮ್ಮ ನಿಜವಾದ ಅಮ್ಮ ಅಲ್ಲ ಅಲ್ವಾ? ನಾನೇ ಸಿಹಿಯ ನಿಜವಾದ ಅಮ್ಮ ಎಂದು ನಡೆದಿರುವ ವಿಷಯವನ್ನು ತಿಳಿಸಿದ್ದಾಳೆ. ಇದನ್ನು ಕೇಳಿ ವೈದ್ಯೆಯ ಮನಸ್ಸು ಕರಗಿದೆ. ನಿಜವನ್ನು ಹೇಳುವುದಿಲ್ಲ ಎಂದಿದ್ದಾಳೆ. ಇದನ್ನು ಕೇಳಿ ಸೀತಾಳಿಗೆ ಖುಷಿಯಾಗಿ ಬಿಟ್ಟಿದೆ. ಇದನ್ನು ರಾಮ್​ ಬಂದರೂ ಸತ್ಯ ಗೊತ್ತಾಗುವುದಿಲ್ಲ ಎನ್ನುವುದು ಅವಳ ಅನಿಸಿಕೆ. ಆದರೆ ಇವಳ ಹಿಂದೆ ಬಿದ್ದಿರೋ ಭಾರ್ಗವಿ ಕಥೆ ಏನು? ಸೀತಾ-ಸಿಹಿಯ ಸತ್ಯ ಗೊತ್ತಾಗುವುದು ಯಾವಾಗ ಎನ್ನುವುದು ಈಗಿರುವ ಕುತೂಹಲ.

ಮದ್ವೆ- ಮಕ್ಕಳು ಬಗ್ಗೆ ನಟಿ ವೈಷ್ಣವಿ ಬೋಲ್ಡ್​ ಮಾತು: ನಾಚಿ ನೀರಾದ ರಾಮ್​ ಪಾತ್ರಧಾರಿ ಗಗನ್!