ಇನ್ನೂ ಮದ್ವೆನೇ ಆಗ್ಲಿಲ್ಲ ಕಣ್ರೋ... ಫಸ್ಟ್ನೈಟ್ ಶುರು ಮಾಡಿಕೊಂಡುಬಿಟ್ರಾ ಎನ್ನೋದಾ ಫ್ಯಾನ್ಸ್!
ಸೀತಾ ರಾಮರ ಮದುವೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಪ್ರೀತಿಯ ಅಮಲಿನಲ್ಲಿ ತೇಲಿ ಹೋಗಿರೋ ಜೋಡಿಯನ್ನು ನೋಡಿ ಅಭಿಮಾನಿಗಳು ಏನೆಲ್ಲಾ ಹೇಳಿದ್ರು ನೋಡಿ...
ಸೀತಾ ರಾಮನ ಮದುವೆಗೆ ಎಲ್ಲರ ಅಂಕಿತ ಬಿದ್ದಾಗಿದೆ. ಏನೋ ತಂತ್ರಗಾರಿಕೆ ಹೆಣೆಯುತ್ತಿದ್ದಾಳೆ ಚಿಕ್ಕಮ್ಮ ಭಾರ್ಗವಿ. ಆದರೂ ಏನೋ ಕುತಂತ್ರದಿಂದಲೇ ಸೀತಾ ಮತ್ತು ರಾಮ್ನನ್ನು ಒಂದುಮಾಡುವ ಹಾಗೆ ಸದ್ಯ ಮಾಡಿದ್ದಾಳೆ. ಪ್ರಿಯಾ ಮತ್ತು ಅಶೋಕ್ ಮದ್ವೆ ಅತ್ತ ಭರ್ಜರಿಯಾಗಿ ನಡೆಯುತ್ತಿರುವ ನಡುವೆಯೇ ಇತ್ತ ರಾಮ್‌ನ ಮದುವೆಯನ್ನೂ ನಿರ್ಧಾರ ಮಾಡುವೆ ಎಂದಿದ್ದ ಚಿಕ್ಕಮ್ಮ ಭಾರ್ಗವಿ ಚಾಂದನಿ ಬದಲು ಸೀತಾಳನ್ನೇ ಸೆಲೆಕ್ಟ್ ಮಾಡಿದ್ದಾಳೆ! ತನ್ನ ಹೆಸರನ್ನು ಹೇಳುತ್ತಾಳೆ ಎಂದು ಖುಷಿಪಟ್ಟಿದ್ದ ಚಾಂದನಿಗೆ ಇಂಗು ತಿಂದ ಮಂಗನ ಅನುಭವ. ಅದೇ ವೇಳೆ ತಾತ ಕೂಡ ನಾನು ರಾಮ್‌ನ ಮದುಮಗಳನ್ನು ನಿರ್ಧಾರ ಮಾಡಿರುವುದಾಗಿ ಹೇಳಿದ್ದ. ಆದರೆ ಭಾರ್ಗವಿ ಸೀತಾಳ ಹೆಸರನ್ನು ಹೇಳುತ್ತಿದ್ದಂತೆಯೇ ತಾತ ಕೂಡ ಖುಷಿಯಿಂದ ಸೀತಾಳನ್ನು ಒಪ್ಪಿಕೊಂಡಿದ್ದಾನೆ.
ಇಷ್ಟಾಗುತ್ತಿದ್ದಂತೆಯೇ ಸೀತಾ ಮತ್ತು ರಾಮ್ ಲವ್ಸ್ಟೋರಿ ಮತ್ತೆ ಶುರುವಾಗಿದೆ. ಹೂವಿನ ಹಾಸಿಗೆಯ ಮೇಲೆ ಇಬ್ಬರೂ ರೊಮ್ಯಾನ್ಸ್ ಮಾಡುತ್ತಿದ್ದಾರೆ. ಪ್ರೀತಿಯಲ್ಲಿ ತೇಲಿ ಹೋಗಿದ್ದಾರೆ. ಇದರ ಪ್ರೊಮೋ ನೋಡಿದ ಅಭಿಮಾನಿಗಳು ಅಯ್ಯೋ ಕಣ್ರೋ ಇಬ್ಬರ ಮದ್ವೆ ಫಿಕ್ಸ್ ಆಗಿದೆ ಅಷ್ಟೇ. ಫಸ್ಟ್ನೈಟೇ ಶುರುವಿಟ್ಟುಕೊಂಡು ಬಿಟ್ರಾ ಎಂದು ತಮಾಷೆ ಮಾಡುತ್ತಿದ್ದಾರೆ. ಆದರೂ ನಿಮ್ಮ ಜೋಡಿ ನೋಡೋಕೆ ಚೆಂದ ಎನ್ನುತ್ತಿದ್ದಾರೆ ಇನ್ನು ಕೆಲವರು. ಅದೇನೇ ಇದ್ದರೂ ಇಬ್ಬರೂ ಪ್ರೀತಿಯಲ್ಲಿ ತೇಲಿಹೋಗಿದ್ದಾರೆ. ಇಬ್ಬರ ನಡುವೆ ಹುಸಿ ಮುನಿಸು ಕೂಡ ಶುರುವಾಗಿದೆ.
ಸೊಂಟದ ಭಾಗ ಜೀರೋಸೈಜ್, ಉಳಿದ ಭಾಗ ದೊಡ್ಡದಾಗಿಸಲು ಶಸ್ತ್ರಚಿಕಿತ್ಸೆ: ನಟಿ ಪ್ರಿಯಾಮಣಿ ಹೇಳಿದ್ದೇನು?
ಇನ್ನು ಸೀತಾ ಮತ್ತು ರಾಮ್‌ರನ್ನು ಚಿಕ್ಕಮ್ಮ ಭಾರ್ಗವಿ ಮತ್ತೆ ಎಲ್ಲಿ ದೂರ ಮಾಡುವಳೋ ಎನ್ನುವ ನೋವು ಅಭಿಮಾನಿಗಳದ್ದು. ಏಕೆಂದರೆ ಸೀತಾ ಮತ್ತು ರಾಮ್ ಒಂದಾಗುವುದು ಭಾರ್ಗವಿಗೆ ಇಷ್ಟವಿಲ್ಲ. ಅವಳದ್ದು ಏನಿದ್ದರೂ ಚಾಂದನಿ ಪಾರ್ಟಿ. ಇದರ ನಡುವೆಯೇ, ಚಾಂದನಿ ಸೀತಾಗೆ ಷರತ್ತು ಕೂಡ ಹಾಕಿದ್ದಳು. ಸೀತಾ-ರಾಮ ಒಂದಾಗುವುದನ್ನು ಚಾಂದನಿಗೆ ನೋಡಲು ಆಗುತ್ತಿಲ್ಲ. ಸೀತಾ ಸಿಕ್ಕಾಗಲೆಲ್ಲಾ ಪದೇ ಪದೇ ಹಂಗಿಸುತ್ತಲೇ ಇರುತ್ತಾಳೆ.
ರಾಮ್ ತನಗೆ ಸಿಗುವುದಿಲ್ಲ ಎಂದು ತಿಳಿದರೂ ಸೀತಾಳನ್ನು ಹೇಗಾದರೂ ಮಾಡಿ ರಾಮ್ನಿಂದ ದೂರ ಮಾಡುವ ಯೋಚನೆ ಅವಳದ್ದು. ಅದಕ್ಕೆ ತಕ್ಕಂತೆ ಚಿಕ್ಕಮ್ಮ ಭಾರ್ಗವಿ ಕುತಂತ್ರ ಬೇರೆ. ಪ್ರಿಯಾ ಮತ್ತು ಅಶೋಕ್ ಮದುವೆ ಮುಗಿಯುವುದರೊಳಗೆ ಅವರಿಬ್ಬರನ್ನೂ ಬೇರೆ ಮಾಡುತ್ತೇನೆ ಎಂದಿದ್ದಾಳೆ ಭಾರ್ಗವಿ. ಇದನದ್ನೇ ನಂಬಿಕೊಂಡಿದ್ದಾಳೆ ಚಾಂದನಿ. ಈ ಮಧ್ಯೆಯೇ ಸೀತಾಳಿಗೆ ರಾಮ್ ಕೊಡಿಸಿರೋ ಸೀರೆ ಮೇಲೆ ಚಾಂದನಿ ಕಣ್ಣು ಬಿದ್ದಿದೆ. ಅದನ್ನು ತನ್ನದು ಮಾಡಿಕೊಳ್ಳಬೇಕು ಎಂದುಕೊಂಡಿದ್ದಳು. ಅದು ಸಾಧ್ಯವಾಗಿರಲಿಲ್ಲ. ಅದಕ್ಕೆ ರಾಮ್ ಕೊಡಿಸಿದ ಸೀರೆ ನಿನಗೆ ಸಿಕ್ಕಿದೆ, ಆದರೆ ರಾಮ್ ಸಿಗಲ್ಲ ಎಂದಿದ್ದಳು. ಆದರೆ ಎಲ್ಲವೂ ಉಲ್ಟಾ ಆಗಿದೆ. ಚಿಕ್ಕಮನಿಗೆ ಚಾಂದನಿ ಇಷ್ಟವಿಲ್ಲದಿದ್ದರೂ ಸೀತಾ ಮತ್ತು ರಾಮ್‌ರನ್ನು ದೂರ ಮಾಡುವುದು ಮಾತ್ರ ಬೇಕಿದೆ. ಇದರ ನಡುವೆಯೇ ಇಬ್ಬರ ಮದುವೆಗೆ ಒಪ್ಪಿಕೊಂಡಿದ್ದಾಳೆ. ಮುಂದೇನಾಗುತ್ತದೆ ಎನ್ನುವುದು ಈಗಿರುವ ಪ್ರಶ್ನೆ.
ಮಲೈಕಾ ಅರೋರಾ ಹೊಟೆಲ್‌ನಲ್ಲಿ ಡ್ರೆಸ್ ಸರಿಪಡಿಸಿಕೊಳ್ತಿರೋ ಖಾಸಗಿ ವಿಡಿಯೋ ಲೀಕ್: ಫ್ಯಾನ್ಸ್ ಗರಂ