Asianet Suvarna News Asianet Suvarna News

ಮಹಾಭಾರತ ಕಥೆ ಕುರಿತ ಗೊಂದಲಕ್ಕೆ ಇಲ್ಲಿದೆ ಉತ್ತರ..! ಮಹಾಭಾರತದ ಸೀಕ್ರೆಟ್‌ಗಳಿವು

  • 'ಮಹಾಭಾರತದ ರಹಸ್ಯಗಳು' (Secrets of Mahabharatha)ಎಂಬ ವಿಶೇಷ ಸರಣಿ ಕಾರ್ಯಕ್ರಮ
  • ಮಹಾಭಾರತ(Mahabharat) ಕುರಿತ ಅನೇಕ ಅಸ್ಪಷ್ಟತೆಗಳಿಗೆ, ನಮ್ಮ ಗೊಂದಲಗಳಿಗೆ ಸೂಕ್ತ ಉತ್ತರ
Secrets of Mahabharatha Gaurish Akki Studio series YouTube programme dpl
Author
Bangalore, First Published Oct 28, 2021, 10:28 AM IST

ಮಹಾಭಾರತ‌(Mahabharat) ಯಾರಿಗೆ ತಾನೆ ಗೊತ್ತಿಲ್ಲ? ಮಹಾಭಾರತ ಕಥೆ- ಓದುವ ಮೂಲಕವೊ, ಕೇಳಿ ತಿಳಿದೊ, ಸಿನಿಮಾ ಅಥವಾ ಧಾರಾವಾಹಿಗಳ ಮೂಲಕವೊ ಹೀಗೆ ಅನೇಕ ಮೂಲಗಳಿಂದ ನಮಗೆ ದಕ್ಕಿರಬಹುದು. ಆದರೆ ಇಲ್ಲಿ ಉದ್ಭವಿಸುವ ಪ್ರಶ್ನೆ- ನಾವು ತಿಳಿದ, ಗ್ರಹಿಸಿದ ಅಥವಾ ನಮಗೆ ವೇದ್ಯವಾದ ಮಹಾಭಾರತವಷ್ಟೇ ನಿಜವಾದ ಮಹಾಭಾರತವೊ?

ಅಥವಾ ಅದರಿಂದ ಆಚೆ ಇನ್ನೂ ಅನೇಕ ಕಥೆಗಳು, ಪಾತ್ರಗಳಿವೆಯೋ? ವ್ಯಾಸರ ಮೂಲ ಭಾರತದಲ್ಲಿ ಏನಿದೆ? ವ್ಯಾಸರು ಈ ಕಥೆಗಳನ್ನು ಮೊದಲು ಯಾರಿಗೆ ಹೇಳಿದ್ದು? ಹೀಗೆ ಮಹಾಭಾರತ ಕುರಿತು ನಮಗೆ ಅನೇಕ ಪ್ರಶ್ನೆಗಳು, ಗೊಂದಲಗಳು ಮೊದಲಿಂದಲೂ ಇರುತ್ತವೆ ಅಲ್ಲವೆ?

ಈ ನಿಟ್ಟಿನಲ್ಲಿ ನಮ್ಮ ಅನೇಕ ಅಸ್ಪಷ್ಟತೆಗಳಿಗೆ, ನಮ್ಮ ಗೊಂದಲಗಳಿಗೆ ಸೂಕ್ತ ಉತ್ತರವಾಗಿ 'ಮಹಾಭಾರತದ ರಹಸ್ಯಗಳು' ಎಂಬ ವಿಶೇಷ ಸರಣಿ ಕಾರ್ಯಕ್ರಮವೊಂದು ಮೂಡಿಬರುತ್ತಿದೆ. 'ಗೌರೀಶ್ ಅಕ್ಕಿ ಸ್ಟುಡಿಯೋ' ಯೂಟ್ಯೂಬ್ ಚಾನೆಲ್ ಪ್ರಸ್ತುತ ಪಡಿಸುತ್ತಿರುವ ಈ ಕಾರ್ಯಕ್ರಮದಲ್ಲಿ ವಿದ್ವಾನ್ 'ಜಗದೀಶ ಶರ್ಮಾ ಸಂಪ' ಅವರು ಬಹಳ ಸೊಗಸಾಗಿ, ಮನೋಜ್ಞವಾಗಿ ಅನೇಕ ಮಾಹಿತಿಗಳನ್ನು, ಮಹಾಭಾರತದ ಸ್ವಾರಸ್ಯಕರ ಸಂಗತಿಗಳನ್ನು ತಿಳಿಸಿಕೊಡುತ್ತಿದ್ದಾರೆ.

ರವೀನಾ ಟಂಡನ್‌ಗೆ ವಿಶೇಷವಾಗಿ ವಿಶ್ ಮಾಡಿದ ಪ್ರಶಾಂತ್ ನೀಲ್

ಈಗಾಗಲೇ ಬಿತ್ತರವಾಗಿರುವ 25 ಸಂಚಿಕೆಗಳೂ ಅನೇಕರ ಪ್ರೀತಿಗೆ ಪಾತ್ರವಾಗಿದೆ. ಮಹಾಭಾರತವನ್ನು ಈ ರೀತಿಯಾಗಿ ಹೊಸನೋಟಕ್ರಮದಿಂದ ವಿಶ್ಲೇಷಿಸುತ್ತಿರುವ, ತಿಳಿಸಿಕೊಡುತ್ತಿರುವ ಮತ್ತೊಂದು ಕಾರ್ಯಕ್ರಮ ಇಲ್ಲ ಎಂತಲೇ ವೀಕ್ಷಕರ ಅಭಿಪ್ರಾಯ. ಹಾಗಾಗಿ ಇದು ಗೌರೀಶ್ ಅಕ್ಕಿ ಸ್ಟುಡಿಯೋದ ವಿಶೇಷ ಕಾರ್ಯಕ್ರಮ ಸರಣಿ. ಹೆಮ್ಮೆಯ ಪ್ರಸ್ತುತಿ.

ಸಾಮಾನ್ಯವಾಗಿ ನಮಗೆಲ್ಲ ಕೌರವರು, ಪಾಂಡವರು, ಕುರುಕ್ಷೇತ್ರ ಯುದ್ಧ, ಜೂಜಾಟ, ದ್ರೌಪದಿ ವಸ್ತ್ರಾಪಹರಣ, ಪಾಂಡವರ ವನವಾಸ, ಅಜ್ಞಾತವಾಸ; ದ್ರುಪದ, ಕೃಷ್ಣ, ಕರ್ಣ, ಶಕುನಿ ಹೀಗೆ ಪ್ರಮುಖವಾದ ಪಾತ್ರಗಳು ಮತ್ತು ಇವರ ಸುತ್ತ ಸಾಗುವ ಕಥನ, ಘಟನಾವಳಿಗಳ ಬಗ್ಗೆ ಅಷ್ಟೇ ಗೊತ್ತಿರುತ್ತದೆ. ಆದರೆ ಮಹಾಭಾರತಂಥ ಬೃಹತ್ ಕೃತಿಯಲ್ಲಿರುವ ಎಷ್ಟೋ ವಿಷಯಗಳು, ಎಷ್ಟೋ ಪಾತ್ರಗಳು, ಮುಖ್ಯ ಘಟನೆಗಳು ನಮಗೆ ತಿಳಿದೇ ಇರುವುದಿಲ್ಲ. ಅವು ಹಿನ್ನೆಲೆಯಲ್ಲೇ ಉಳಿದುಹೋಗಿರುತ್ತವೆ. ನಾವು ಸಹ ಅವನ್ನು ತಿಳಿಯುವ ಪ್ರಯತ್ನ ಮಾಡಿರುವುದಿಲ್ಲ.

ಉದಾಹರಣೆಗೆ - ನಮಗೆಲ್ಲ ದುಶ್ಯಂತ ಮತ್ತು ಶಕುಂತಲೆಯರ ಪ್ರೇಮಕಥೆ ಗೊತ್ತು. ಆದರೆ ರುರು ಮತ್ತು ಪ್ರಮದ್ವರಾ ಯಾರು? ಕಚ ಮತ್ತು ದೇವಯಾನಿ ಯಾರು? ಅವರ ಪ್ರೇಮಕಥೆಗಳೇನು ಎಂಬುದು ಗೊತ್ತಿರುವುದಿಲ್ಲ. ಕೃಷ್ಣನ ಜನ್ಮರಹಸ್ಯ ಗೊತ್ತು. ಆದರೆ ಭೀಷ್ಮರ ಹುಟ್ಟಿನ ಹಿಂದಿನ ರಹಸ್ಯ ಗೊತ್ತಿರುವುದಿಲ್ಲ. ಹೀಗೆ ಸಾಗುತ್ತ.. ಇಲ್ಲಿ ಪ್ರತಿಯೊಬ್ಬರ ಹುಟ್ಟಿಗೂ ಒಂದು ಉದ್ದೇಶವಿದೆಯಾ? ಅವರದೇ ಕರ್ತವ್ಯ ಇದೆಯಾ? ಅವರ ಹುಟ್ಟಿನ ಹಿಂದೆ ಅವರ ಕರ್ಮ ಹುದುಗಿದೆಯಾ? ಇಂಥ ಎಷ್ಟೋ ಪ್ರಶ್ನಗಳಿಗೆ ನಮ್ಮಲ್ಲಿ ಉತ್ತರವಿಲ್ಲ.

ನ.19ಕ್ಕೆ ರಮೇಶ್‌ ಅರವಿಂದ್‌ ನಟನೆಯ 100 ಚಿತ್ರ ಬಿಡುಗಡೆ

ಈ ಎಲ್ಲ ವಿಚಾರಗಳ ಸಾರ ನಮಗೆ ಅಸ್ಪಷ್ಟ. ಮಹಾಭಾರತವನ್ನು ಬಹುತೇಕ ತಿಳಿದೆವು ಎಂದುಕೊಂಡರೂ ಅದರಲ್ಲಿ ನಮಗೆ ದಕ್ಕದ ಇನ್ನೇನೊ ಒಂದು ಅನೂಹ್ಯ ಜಗತ್ತು ಹಾಗೇ ಉಳಿದಿರುತ್ತದೆ. "ಮಹಾಭಾರತದ ರಹಸ್ಯಗಳು" ಕಾರ್ಯಕ್ರಮದ ಮಹತ್ವ ಅರಿವಾಗುವುದೇ ಇಲ್ಲಿ. ಅಂಥ ಅನೇಕ ನಮಗೆ ಗೊತ್ತಿರದ ಪಾತ್ರಗಳ ಬಗ್ಗೆ, ಗೊತ್ತಿದ್ದೂ ಇನ್ನೂ ತಿಳಿಯಬಹುದಾದ ಪಾತ್ರಗಳ ಬಗ್ಗೆ, ಘಟನೆಗಳ ಬಗ್ಗೆ ಅಷ್ಟೆ ಅಲ್ಲದೇ ಅದರ ಸಾರಾಂಶ, ತಾತ್ಪರ್ಯವನ್ನು ಸಹ ಈ ಕಾರ್ಯಕ್ರಮದ ಮೂಲಕ ನಾವು ತಿಳಿಯಬಹುದು. 

ಈ ಕಾರ್ಯಕ್ರಮ ವೀಕ್ಷಿಸುತ್ತಿರುವವರೆಲ್ಲರೂ ಕುತೂಹಲದಿಂದ ಮುಂದಿನ ಸಂಚಿಕೆಗಾಗಿ ಕಾಯುವಂತೆ, ಗೌರೀಶ್ ಅಕ್ಕಿ ಹಾಗೂ ಜಗದೀಶ್ ಶರ್ಮಾ ಸಂಪ ಅವರ ಸಂವಾದ ಅತ್ಯಂತ ಸೊಗಸಾಗಿ ಮೂಡಿಬರುತ್ತಿದೆ. ಮಹಾಭಾರತದ ಹಿಂದೆ ಎಂದೊ ನಡೆದು ಹೋದ ಕಥೆಯಲ್ಲ ಅದು ಇಂದಿಗೂ ಪ್ರಸ್ತುತ. ಅಲ್ಲಿನ ಪಾತ್ರಗಳ ವ್ಯಕ್ತಿತ್ತ್ವ, ವರ್ತನೆಗಳು ಏನಿವೆ ಸಮಾಜದಲ್ಲಿ ನಾವು ಇಂದಿಗೂ ಕಾಣಬಹುದಾಂಥವು. ಸಮಾಜಕ್ಕೆ ಹತ್ತಿರವಾದವು. ಆಗಿನ ಕಥೆಯಾದರೂ ಈಗಲೂ ಅದರ ತಂತು ನಮ್ಮ ಬದುಕಿನೊಡನೆ ಬೆಸೆದುಕೊಂಡಿದೆ ಎಂಬುದನ್ನು
ಜಗದೀಶ್ ಶರ್ಮಾ ಸಂಪ ಅವರ ವಿಶ್ಲೇಷಣೆಗಳಲ್ಲಿ ನಾವು ಮನಗಾಣಬಹುದು.

ಕಾರ್ಯಕ್ರಮ ನೋಡುತ್ತಿದ್ದಷ್ಟೂ ಹೊತ್ತು ಸಮಯ ಹೋಗುವ ಪರಿವೇ ತಿಳಿಯದು. ಈ ಮಾತುಗಳನ್ನು ಮತ್ತಷ್ಟು ಕೇಳಬೇಕು, ಅರ್ಥೈಸಿಕೊಳ್ಳಬೇಕು ಎನಿಸುತ್ತದೆ. ಮಹಾಭಾರತದ ಕಥೆಯನ್ನು ಪೂರ ಓದುವ ತಿಳಿದುಕೊಳ್ಳುವ ಅವಕಾಶ, ಸಂಯಮ, ಆಸೆ ಎಷ್ಟು ಜನರಿಗಿರುತ್ತದೊ ತಿಳಿಯದು. ಒಂದೊಮ್ಮೆ ಓದಿ ತಿಳಿದುಕೊಂಡರೂ ಈ ರೀತಿಯ ದೃಷ್ಟಿಕೋನದಿಂದ ಅರ್ಥೈಸಿಕೊಳ್ಳುವುದು ಸುಲಭಸಾಧ್ಯವಲ್ಲ. ಹಾಗಾಗಿ ಈ ಕಾರ್ಯಕ್ರಮವನ್ನು ಎಲ್ಲರೂ ಖಂಡಿತ ವೀಕ್ಷಿಸಬೇಕು. ವಿಚಾರಯುಕ್ತ ಹಾಗೂ ಅರ್ಥಪೂರ್ಣ ಕಾರ್ಯಕ್ರಮದ ಪಯಣಕೆ ನೀವೆಲ್ಲ ಜೊತೆಯಾಗಬೇಕು. ಖಂಡಿತ ಇದೊಂದು ಉಪಯುಕ್ತ ವೀಕ್ಷಣೆ. ಇದು ನಮ್ಮ ಇತಿಹಾಸದ ಬಗೆಗೆ ತಿಳಿಯುವ ಸದವಕಾಶವೂ ಹೌದು.

ಈ ಕಾರ್ಯಕ್ರಮವನ್ನು ವೀಕ್ಷಿಸುವುದು, ಮಹಾಭಾರತದ ಬಗ್ಗೆ ತಿಳಿಯುವುದು ನಿಜಕ್ಕೂ ಒಂದು ರೋಮಾಂಚಕಾರಿ ಅನುಭವ. ಇನ್ನೂ ನೋಡಿರದಿದ್ದವರೂ ಒಮ್ಮೆ ಈ ಜಗತ್ತಿಗೆ ಭೇಟಿಕೊಡಿ. ಕಥಾಜಗತ್ತಿನ ಕಥನ ಕುತುಹೂಲಕ್ಕೆ ಸಾಕ್ಷಿಯಾಗಿ. ಈ ಕಾರ್ಯಕ್ರಮ ಸರಣಿ ಕಾರ್ಯಕ್ರಮ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ.

Follow Us:
Download App:
  • android
  • ios