ಹುಡುಗಿಗಾಗಿ ಬಿಹಾರದಲ್ಲಿ ರಾವುಲ್ಲಾ! ಲೈವ್ನಲ್ಲಿ ಬೆಳ್ಳುಳ್ಳಿ ಕಬಾಬ್ ಚಂದ್ರು, ಆ್ಯಂಕರ್ ಜಾಹ್ನವಿ- ಏನೆಲ್ಲಾ ಹೇಳಿದ್ರು ಕೇಳಿ..
ಸವಿರುಚಿ ಕಾರ್ಯಕ್ರಮದ ಆ್ಯಂಕರ್ ಜಾಹ್ನವಿ ಮತ್ತು ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು ನೇರಪ್ರಸಾರದಲ್ಲಿ ಬಂದು ಏನೆಲ್ಲಾ ಮಾತನಾಡಿದರು ಕೇಳಿ...
ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಸವಿರುಚಿ ಕಾರ್ಯಕ್ರಮ, ಇದೀಗ ನೂರನೆಯ ಕಂತನ್ನು ಪೂರೈಸಿದ್ದು, ಈ ಸಂಭ್ರಮವನ್ನು ಹಂಚಿಕೊಳ್ಳಲು ಕಾರ್ಯಕ್ರಮದ ಆ್ಯಂಕರ್ ಜಾಹ್ನವಿ ಹಾಗೂ ಕಾರ್ಯಕ್ರಮ ನಡೆಸಿಕೊಡುತ್ತಿರುವ ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು ನೇರಪ್ರಸಾರದಲ್ಲಿ ಬಂದು ಕೆಲವು ಮಾಹಿತಿಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಸವಿರುಚಿ ಕಾರ್ಯಕ್ರಮದಲ್ಲಿ ಇದಾಗಲೇ ನೂರಾರು ಬಗೆಯ ಅಡುಗೆಗಳನ್ನು ಮಾಡಲಾಗಿದ್ದು, ಅವುಗಳ ಬಗ್ಗೆ ತಿಳಿಸುವಂತೆ ಜಾಹ್ನವಿ ಕೋರಿದ್ದಾರೆ. ಅದೇ ರೀತಿ ಮತ್ಯಾವ ಅಡುಗೆಗಳನ್ನು ಮಾಡಿ ತೋರಿಸಬೇಕು ಎಂಬ ಬಗ್ಗೆ ಸವಿರುಚಿ ಇನ್ಸ್ಟಾಗ್ರಾಮ್ ಪುಟದಲ್ಲಿ ಬಂದು ಮೆಸೇಜ್ ಕಳಿಸುವಂತೆ ತಿಳಿಸಿದ್ದಾರೆ. ಯಾವುದಾದರೂ ಅಡುಗೆಗೆ ಮನವಿ ಮಾಡಿದರೆ, ಅದನ್ನು ಕೂಡ ಮಾಡಿ ತೋರಿಸುವುದಾಗಿ ಹೇಳಿದ್ದಾರೆ.
ನೇರಪ್ರಸಾರದಲ್ಲಿ ಹಲವಾರು ಮಂದಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿನ ಅಡುಗೆ ನೋಡಿ ತಾವೂ ಅಡುಗೆ ಮಾಡಿರುವುದಾಗಿ ತಿಳಿಸಿದರು. ಅದರ ಜೊತೆಗೆ ಕೆಲವರು ವೆಜ್ ಅಡುಗೆಗಳನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ತೋರಿಸುವಂತೆ ತಿಳಿಸಿದರು. ಯಾವ ಬಗೆಯ ಅಡುಗೆ ಬೇಕು ಎಂದು ಕಮೆಂಟ್ ಮಾಡಿದರೆ ಅದನ್ನು ಕಲಿತಾದರೂ ಮಾಡಿ ತೋರಿಸುವುದಾಗಿ ಚಂದ್ರು ಅವರು ಹೇಳಿದರು. ಇದೇ ವೇಳೆ, ಈ ಷೋನಲ್ಲಿ ಚಂದ್ರು ಅವರನ್ನು ಹೊರತುಪಡಿಸಿದರೆ, ಕೆಲವು ಸೆಲೆಬ್ರಿಟಿಗಳು ಮಾತ್ರ ಅಡುಗೆ ಮಾಡಿ ತೋರಿಸುತ್ತಾರೆ. ಆದರೆ ಸಾಮಾನ್ಯ ಜನರಿಗೂ ಅವಕಾಶ ಕೊಡಿ ಎಂದು ಮಹಿಳೆಯೊಬ್ಬರು ಕೋರಿಕೊಂಡರು. ಮುಂಬರುವ ದಿನಗಳಲ್ಲಿ ಆ ಬಗ್ಗೆ ಯೋಚಿಸಲಾಗುವುದು ಎಂದು ಜಾಹ್ನವಿ ಹೇಳಿದರು.
ಹೈ ಫೈ ಮೊಟ್ಟೆ ಫ್ರೈ ಮಾಡುತ್ತಲೇ ಬದುಕಿನ ಬಹು ದೊಡ್ಡ ನಿರ್ಧಾರ ತಿಳಿಸಿದ ಚಂದನ್ ಶೆಟ್ಟಿ!
ನೇರಪ್ರಸಾರದಲ್ಲಿ ಬಂದವರಲ್ಲಿ ಒಬ್ಬರು ರಾವುಲ್ಲಾ ಎಲ್ಲಿ ಎಂದು ಪ್ರಶ್ನಿಸಿದರು. ಷೋನಲ್ಲಿ ಅವರು ಕಾಣಿಸುತ್ತಿಲ್ಲ ಎಂದರು. ಅದಕ್ಕೆ ಚಂದ್ರು ಅವರು, ಶೀಘ್ರವೇ ಅವನನ್ನು ಕರೆಸಲಾಗುತ್ತದೆ. ಅವನು ಹುಡುಗಿ ನೋಡಲು ಬಿಹಾರಕ್ಕೆ ಹೋಗಿದ್ದಾನೆ. ಬೆಂಗಳೂರಿನಲ್ಲಿಯೇ ಮದುವೆ ಮಾಡಿಸುತ್ತೇವೆ ಎಂದರು. ಹೀಗೆ ನೇರಪ್ರಸಾರದಲ್ಲಿ ಹಲವಾರು ಮಂದಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಸವಿರುಚಿ ಕಾರ್ಯಕ್ರಮದಲ್ಲಿ, ಇದಾಗಲೇ ಹಲವಾರು ಸೆಲೆಬ್ರಿಟಿಗಳು ಬಂದು ಹೋಗಿದ್ದಾರೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ವೈದ್ಯರು ಕೂಡ ಕಷಾಯ, ಮನೆಮದ್ದುಗಳನ್ನು ತಿಳಿಸಿದ್ದಾರೆ. ಇದೀಗ ಷೋ 100ನೇ ಕಂತನ್ನು ಪೂರೈಸಿದೆ. ಟಿಆರ್ಪಿ ರೇಟಿಂಗ್ನಲ್ಲಿ ತಮ್ಮ ಷೋ ನಂಬರ್ 1 ಸ್ಥಾನದಲ್ಲಿ ಇದೆ ಎಂದು ಜಾಹ್ನವಿ ಹೇಳಿದರು. ಇದೇ ರೀತಿ ನಿಮ್ಮ ಬೆಂಬಲ ಸೂಚಿಸಿ ಎಂದು ವೀಕ್ಷಕರಲ್ಲಿ ಇಬ್ಬರೂ ಮನವಿ ಮಾಡಿಕೊಂಡರು.
ಸಿಕ್ಕಾಪಟ್ಟೆ ಕಾಡುವ ಕೆಮ್ಮಿಗೆ ದಿವ್ಯ ಔಷಧ ಮನೆಯಲ್ಲೇ! ಡಾ.ಕಾರ್ತಿಕ್ ವಿಡಿಯೋ ಮಾಹಿತಿ...