ಸತ್ಯ ಧಾರಾವಾಹಿ ನಟ ಸಾಗರ್ ಬಿಳಿಗೌಡ ಅವರು ಪತ್ನಿ ಸಿರಿ ರಾಜು ಬಗ್ಗೆ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. ಸಿರಿ ಅವರು ಪುಟ್ಟ ಮಗುವನ್ನು ಮನೆಯಲ್ಲಿ ಬಿಟ್ಟು ವಿದೇಶಕ್ಕೆ ಹೋಗಿರೋದು ಕೆಲವರಿಗೆ ಚಿಂತೆ ಆಗಿದೆ. ಈ ಚಿಂತೆಯನ್ನು ಸಾಗರ್ ಕಡಿಮೆ ಮಾಡಿದ್ದಾರೆ ಎನ್ನಬಹುದು.
‘ಸತ್ಯ’ ಧಾರಾವಾಹಿ ನಟ ಸಾಗರ್ ಬಿಳಿಗೌಡ ಪತ್ನಿ ಸಿರಿ ರಾಜು ಅವರು ಮಗುವನ್ನು ಬಿಟ್ಟು ಹಾಲಿಡೇ ಕಳೆಯಲು ಹೋಗಿದ್ದರು. ಈ ಬಗ್ಗೆ ಕೆಲವರು ನೆಗೆಟಿವ್ ಮಾತನಾಡಿದ್ದರು. ಈ ವಿಚಾರವಾಗಿ ಸಾಗರ್ ಅವರು ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ.
ಸಾಗರ್ ಬಿಳಿಗೌಡ ಪೋಸ್ಟ್ ಏನು?
ನನ್ನ ಪತ್ನಿ ಸಿರಿ ರಾಜು, ನಮ್ಮ ಪುಟ್ಟ ಮಗುವನ್ನು ಮನೆಯಲ್ಲಿಯೇ ಬಿಟ್ಟು ಟ್ರಾವೆಲಿಂಗ್ ಮಾಡುತ್ತಿದ್ದಾಳೆ ಎಂದು ಕೆಲವರಿಗೆ ಚಿಂತೆಯಾಗಿದೆ. ನಿಮ್ಮ ಕಾಳಜಿಗೆ ಧನ್ಯವಾದಗಳು. ನಮ್ಮ ಮಗುವನ್ನು ನೋಡಿಕೊಳ್ಳಲು ಅವಳ ತಂದೆ, ಅಜ್ಜಿ-ತಾತ ಎಲ್ಲರೂ ಇದ್ದಾರೆ. ಮಗುವನ್ನು ನೋಡಿಕೊಳ್ಳುವ ಸಾಮರ್ಥ್ಯ ಇದೆ.
ಮಗುವನ್ನು ಮನೆಯಲ್ಲಿಯೇ ಬಿಟ್ಟು ಹೊರಗಡೆ ಹೋಗಲು ತಾಯಿಗೆ ದೊಡ್ಡ ನಂಬಿಕೆ ಬೇಕು. ನಾನು ಆ ನಂಬಿಕೆಯನ್ನು ಗಳಿಸಿದ್ದೇನೆ ಎಂದು ಭಾವಿಸ್ತೀನಿ. ನನ್ನ ಪತ್ನಿಗೂ ಹಾಲಿಡೇ ಬೇಕು, ಅವಳಿಗೂ ಸ್ವಲ್ಪ ರಿಲ್ಯಾಕ್ಸ್ ಆಗೋಕೆ ಸಮಯ ಬೇಕು.
ಶಿಶಿರ್‌ನ ಸೇಫ್ ಮಾಡಲು ಶೋಭಾ ಶೆಟ್ಟಿ ಹೊರ ಬಂದಿದ್ದಾ?; ತ್ರಿವಿಕ್ರಮ್- ಗೌತಮಿ ಕೋಡ್ ವರ್ಡ್‌ನಲ್ಲಿದೆ ದೊಡ್ಡ ರಹಸ್ಯ
ನಾವು ಮಗು ಮಾಡಿಕೊಳ್ಳಬೇಕು ಎಂದು ನಿರ್ಧಾರ ಮಾಡಿದಾಗಿನಿಂದ ಇಲ್ಲಿಯವರೆಗೆ ಮನೆ ಕೆಲಸಗಳನ್ನು ಮಾಡಿಕೊಳ್ಳುತ್ತ, ಮಗುವಿನ ಆರೈಕೆಯನ್ನು ಮಾಡೋದು ಸುಲಭ ಅಲ್ಲ, ಅದನ್ನು ಸಿರಿ ತುಂಬ ನೀಟ್ ಆಗಿ ಮಾಡಿದ್ದಾಳೆ. ಆಗ ನಾನಂತೂ ಏಕಕಾಲಕ್ಕೆ ಎರಡು ಶೋಗಳನ್ನು ಮಾಡುತ್ತಿದ್ದೆ, ಟ್ರಾವೆಲ್ ಕೂಡ ಮಾಡುತ್ತಿದ್ದೆ.
ನಾನು ಈ ಥರ ಪತ್ನಿಗೆ ಥ್ಯಾಂಕ್ಯು ಹೇಳುತ್ತಿದ್ದೇನೆ. ಪಾಲಕರಾಗಿ, ಪತಿಯಾಗಿ, ನನ್ನ ಮಗಳ ಜೊತೆ ಸಮಯ ಕಳೆಯಲು ಅವಕಾಶ ಸಿಕ್ಕಿದೆ. ಇದಕ್ಕೆಲ್ಲ ನನ್ನ ತಂದೆ-ತಾಯಿ ಹಾಗೂ ಅವರ ಆಲೋಚನೆಗಳೇ ಕಾರಣ.
ಮೆಚ್ಚುಗೆ ಸೂಚಿಸಿದ್ದಾರೆ.
ಅಂದಹಾಗೆ ಸಿರಿ ರಾಜು ಅವರು ವಿಯೆಟ್ನಾಂಗೆ ಹೋಗಿದ್ದು, ಅಲ್ಲಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸಾಗರ್ ಬಿಳಿಗೌಡ ಅವರ ಪೋಸ್ಟ್‌ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಕೆಲ ಸೆಲೆಬ್ರಿಟಿಗಳು ಕೂಡ ಕಾಮೆಂಟ್ ಮಾಡಿ ತಮ್ಮ ಒಪ್ಪಿಗೆ ಸೂಚಿಸಿದ್ದಾರೆ. ಪತಿಯ ಪೋಸ್ಟ್ ನೋಡಿ ಸಿರಿ ರಾಜು ಅವರು, “ಇದನ್ನು ಓದಿ ನನ್ನ ಕಣ್ಣಲ್ಲಿ ನೀರು ಬಂತು” ಎಂದು ಹೇಳಿದ್ದಾರೆ.
ಕೊನೆಗೂ ಸತ್ಯ ಸೀರಿಯಲ್ ಎಂಡ್: ನಿನ್ ಕೂದ್ಲು ಬೆಳೀಲೇ ಇಲ್ವಲ್ಲ ತಾಯಿ ಎಂದ ಫ್ಯಾನ್ಸ್
ಅದ್ದೂರಿ ಬೇಬಿ ಬಂಪ್ ಫೋಟೋಶೂಟ್
2023ರ ಜನವರಿಯಲ್ಲಿ ಸಾಗರ್ ಬಿಳಿಗೌಡ ಹಾಗೂ ಸಿರಿ ರಾಜು ಮದುವೆ ಆಗಿತ್ತು. 2024 ಏಪ್ರಿಲ್‌ನಲ್ಲಿ ಈ ಜೋಡಿ ಮಗುವನ್ನು ಬರಮಾಡಿಕೊಂಡಿತ್ತು. ಇನ್ನು ಸಿರಿ ಅವರು ಪತಿ ಜೊತೆಗೆ ವಿಶೇಷ ಬೇಬಿಬಂಪ್ ಫೋಟೋಶೂಟ್ ಕೂಡ ಮಾಡಿಸಿಕೊಂಡಿತ್ತು. ಇನ್ನು ಮಗಳಿಗೆ ಪ್ರಹರ್ಷ ಎಂದು ಹೆಸರಿಡಲಾಗಿದೆ. ಅದ್ದೂರಿಯಾಗಿ ನಾಮಕರಣ ಮಾಡಿದ್ದು, ಅನೇಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸತ್ಯ ಧಾರಾವಾಹಿ ಹೀರೋ!
ಸಾಗರ್ ಬಿಳಿಗೌಡ ಅವರು ʼಸತ್ಯʼ ಧಾರಾವಾಹಿಯಲ್ಲಿ ಕಾರ್ತಿಕ್ ಪಾತ್ರದಲ್ಲಿ ನಟಿಸಿದ್ದರು. ಕಾರ್ತಿಕ್ ಅಮೂಲ್ ಬೇಬಿ ಥರ ಇರುತ್ತಾನೆ. ಇವನಿಗೆ ಮೆಕ್ಯಾನಿಕ್ ಆಗಿರೋ ಹುಡುಗಿ ಸತ್ಯ ಸಿಕ್ಕಿ ಅವಳ ಜೊತೆ ಮದುವೆ ಆಗುತ್ತದೆ. ಈ ಜೋಡಿ ಹೇಗೆ ಪ್ರೀತಿಯಲ್ಲಿ ಬೀಳುತ್ತದೆ? ಹೇಗೆ ಸಮಸ್ಯೆಗಳನ್ನು ಎದುರಿಸುತ್ತದೆ ಎನ್ನೋದು ಈ ಧಾರಾವಾಹಿ ಕಥೆಯಲ್ಲಿತ್ತು.
ಸಾಗರ್ ಬಿಳಿಗೌಡ ಅವರು ನಟನೆ ಜೊತೆಗೆ ರೆಸ್ಟೋರೆಂಟ್ ಕೂಡ ಆರಂಭಿಸಿದ್ದು ಉದ್ಯಮಿಯೂ ಆಗಿದ್ದಾರೆ.
