Asianet Suvarna News Asianet Suvarna News

BBK9 ನಾನು ಕಳುಹಿಸುತ್ತಿರುವ ವಸ್ತುಗಳು ರೂಪೇಶ್‌ಗೆ ತಲುಪಿಸುತ್ತಿಲ್ಲ: ಬಿಗ್ ಬಾಸ್ ವಿರುದ್ಧ ಸಾನ್ಯ ಆರೋಪ

ಬಿಗ್ ಬಾಸ್ ವಿರುದ್ಧವೇ ಆರೋಪ ಮಾಡುತ್ತಿರುವ ಸಾನ್ಯ ಐಯ್ಯರ್. ರೂಪಿ ನೀನು ಸ್ಟ್ರಾಂಗ್ ಆಗಿರು ಎಂದ ಸುಂದರಿ..... 
 

Sanya Iyer red shirt gifts not received by roopesh dissapointed with bigg boss team vcs
Author
First Published Dec 4, 2022, 8:53 AM IST

ಬಿಗ್ ಬಾಸ್ ಸೀಸನ್ 9 ಇದೀಗ ಫಿನಾಲೆ ಹಂತಕ್ಕೆ ಹತ್ತಿರವಾಗಿದೆ. ರೂಪೇಶ್ ರಾಜಣ್ಣ ಮನೆಯ ಕ್ಯಾಪ್ಟನ್ ಆಗುವ ಮೂಲಕ 70ನೇ ದಿನಕ್ಕೆ ಚಾಲನೆ ಕೊಟ್ಟಿದ್ದಾರೆ. ಈ ವಾರ ಅರುಣ್ ಸಾಗರ್ ಅತ್ಯುತ್ತಮ ಪಡೆದುಕೊಂಡರೆ ಪ್ರಶಾಂತ್ ಸಂಬರಗಿ ಕಳಪೆ ಪಡೆದು ಜೈಲು ಸೇರಿದ್ದಾರೆ. ಬಿಬಿ ಮನೆಯಲ್ಲಿ ಎಲ್ಲವೂ ಕೂಲ್ ಕೂಲ್ ಅಗಿ ನಡೆಯುತ್ತಿರುವಾಗ ಹೊರಗಡೆ ಸಾನ್ಯ ಬೇಸರದಲ್ಲಿದ್ದಾರೆ. ಅದುವೇ ರೂಪಿ ವಿಚಾರಕ್ಕೆ,...

ಸಾನ್ಯ ಪೋಸ್ಟ್:

'ರೂಪಿ ನೀನು ಸ್ಟ್ರಾಂಗ್ ಆಗಿರು ಆಯ್ತಾ? ನಾನು ಕಳುಹಿಸುತ್ತಿರುವ ಶರ್ಟ್‌ಗಳನ್ನು ನಿನಗೆ ತಲುಪಿಸುತ್ತಿಲ್ಲ ಆದರೆ ಪಾರ್ಸಲ್ ಸ್ವೀಕರಿಸಿರುವುದಾಗಿ ಹೇಳುತ್ತಿದ್ದಾರೆ. ಆದರೆ ನನ್ನ ಪಾಸಿಟಿವಿಟಿ ಮತ್ತು ಸಪೋರ್ಟ್‌ನ ಕಳುಹಿಸುತ್ತಿರುವೆ, ಇದನ್ನು ಯಾರಿಂದಲ್ಲೂ ಸ್ಟಾಪ್ ಮಾಡಲು ಆಗುವುದಿಲ್ಲ ಆಯ್ತಾ. ನನ್ನ ಬೆಸ್ಟಿ ಸದಾ ಶೈನ್ ಆಗುತ್ತಿರಬೇಕು'  ಎಂದು ಸಾನ್ಯ ಬರೆದುಕೊಂಡಿದ್ದಾರೆ. 

Sanya Iyer red shirt gifts not received by roopesh dissapointed with bigg boss team vcs

ಹೌದು! ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ 6ನೇ ಸ್ಪರ್ಧಿ ಸಾನ್ಯ ಐಯ್ಯರ್. ಸಾನ್ಯ ಹೊರ ಬರುವಾಗ ಬೆಸ್ಟ್‌ ಫ್ರೆಂಡ್‌ ರೂಪೇಶ್ ಶೆಟ್ಟಿ ಒಂದು ಮಾತು ತೆಗೆದುಕೊಳ್ಳುತ್ತಾರೆ, ಪ್ರತಿ ವಾರವೂ ನನಗೆ ರೆಡ್‌ ಶರ್ಟ್‌ ಅಥವಾ ಟೀ-ಶರ್ಟ್‌ ಕಳುಹಿಸಬೇಕು ಅದರಲ್ಲಿ ನಿನ್ನ ಪ್ರೀತಿ ತುಂಬಿರಬೇಕು ಎಂದು. ಒಂದು ವಾರ ಬಟ್ಟೆ ಕಳುಹಿಸಿ ಸಾನ್ಯ ಮಾತು ಉಳಿಸಿಕೊಳ್ಳುತ್ತಾರೆ. ಎರಡನೇ ವಾರದಿಂದ ಯಾವ ಡ್ರೆಸ್‌ ಕೂಡ ಬರುವುದಿಲ್ಲ. ಇದನ್ನು ರೂಪೇಶ್‌ ಮಾತ್ರವಲ್ಲ ಪ್ರತಿ ದಿನ ಎಪಿಸೋಡ್‌ ನೋಡುತ್ತಿರುವವರಿಗೂ ಗಮನಕ್ಕೆ ಬಂದಿದೆ. 

ಇದೇನಪ್ಪ ಪ್ರೀತಿ ಕಡಿಮೆ ಆಗಿರಬೇಕು ಅದಿಕ್ಕೆ ಕೆಂಪು ಶರ್ಟ್‌ ಬರುತ್ತಿಲ್ಲ ಎಂದು ವೀಕ್ಷಕರು ಭಾವಿಸಿದ್ದರು ಆದರೆ ಈಗ ಸಾನ್ಯ ಹಾಕಿರುವ ಪೋಸ್ಟ್‌ ನೋಡಿ ಎಲ್ಲರಿಗೂ ಕ್ಲಾರಿಟಿ ಸಿಕ್ಕಿದೆ. 

ಬದಲಾಗಲು ಸಾಧ್ಯವೇ ಇಲ್ಲ ರೂಪಿ..ನನ್ನ ರಾಕ್‌ಸ್ಟಾರ್ ನೀನು; ರೂಪೇಶ್ ಬಗ್ಗೆ ಸಾನ್ಯಾ ಪೋಸ್ಟ್

ಸಾನ್ಯ ಇಲ್ಲದೆ ರೂಪಿ ಸ್ಯಾಡ್:

''ರೂಪೇಶ್ ಶೆಟ್ಟಿ ಅವರೇ ತುಂಬಾ ಬೇಸರ ಆದಾಗ ನಾವು ಇಷ್ಟ ಪಟ್ಟವರು ದೂರ ಆದರು ಅಂದುಕೊಂಡಾಗ ದಾಡಿ ಬಿಡದವರು ದಾಡಿ ಬಿಡುತ್ತಾರೆ ನಿದ್ರೆ ಮಾಡುವವರು ನಿದ್ರೆ ಬಿಡುತ್ತಾರೆ ಅನ್ನ ತಿನ್ನೋರು ಅನ್ನ ಬಿಡುವುದನ್ನು ನೋಡಿದ್ದೀನಿ ಆದರೆ ಈಗ ಎರಡು ಎರಡು ತಟ್ಟೆ ಅನ್ನ ತಿನ್ನೋವರು ಅವರ ಹೆಸರಿನಲ್ಲಿ ಊಟ ಮಾಡುವುದು ಹೊಟ್ಟೆ ತುಂಬಾ ತಿನ್ನುವುದು ...ಅದು ಅತ್ಕೊಂಡು ಅತ್ಕೊಂಡು ಹೆಸರು ಹೇಳ್ಕೊಂಡು ತಿನ್ನೋದು ....ನಿಮ್ಮದೊಂದು ಪ್ಲೇಟ್‌ ಪಕ್ಕದಲ್ಲಿ ಒಂದು ಪ್ಲೇಟ್ ..ನನಗೆ ಏನ್ ಅರ್ಥ ಅಗುತ್ತಿಲ್ಲ ಅಂದ್ರೆ ನಾವೆಲ್ಲ ಊಟ ಬಿಟ್ಟು ನಿದ್ರೆ ಬಿಟ್ಟು ಎಷ್ಟು ಯಾಮಾರಿ ಬಿಟ್ವಿ ಲೈಫಲ್ಲಿ. ಎಲ್ಲರಿಗೂ ಇದೊಂದು ಉದಾಹರಣೆ ಸರ್...ಒಬ್ಬರನ್ನು ಮಿಸ್ ಮಾಡಿಕೊಂಡರೆ ಈ ರೀತಿ ಮಿಸ್ ಮಾಡಿಕೊಳ್ಳಬೇಕು ಅಂತ...ಅವರ ಭಾಗದ ಮೊಟ್ಟೆ ಸ್ವಾಹ ಪ್ರೀತಿಯಲ್ಲಿ ಅವರ ಅನ್ನ ಸ್ವಾಹ ..ಎಮೋಷನ್‌ನಲ್ಲಿ ಎರಡು ತಟ್ಟೆ ಇಟ್ಟಾಗ ಯಾರೂ ಕೇಳುವಂತಿಲ್ಲ...ಸ್ವಾಹ...' ಎಂದು ಸುದೀಪ್ ಹೇಳಿದ್ದಾರೆ.

'ಸುದೀಪ್ ಸರ್ ನಾನು ಎರಡು ತಟ್ಟೆ ಬಳಸುತ್ತಿದೆ ನಿಜ ಆದರೆ ನನ್ನ ತಟ್ಟೆಯಿಂದ ಸ್ವಲ್ಪ ತೆಗೆದು ಆ ತಟ್ಟೆಗೆ ಹಾಕುತ್ತಿದ್ದೆ. ಇಲ್ಲ ಸರ್ ನಾನು ದಾಡಿ ಬಿಟ್ಟಿದ್ದೀನಿ ನೋಡಿ..ನಿದ್ರೆ ಕಡಿಮೆ ಮಾಡೋದು ನಾನು. ನಾನು ಊಟ ಬಿಟ್ರೂ ಊಟ ನನ್ನನ್ನು ಬಿಡುವುದಿಲ್ಲ ಹೀಗಾಗಿ ಜಾಸ್ತಿ ತಿನ್ನುತ್ತೀನಿ..' ಎಂದು ರೂಪಿ ಹೇಳಿದ್ದರು. 

Follow Us:
Download App:
  • android
  • ios