Asianet Suvarna News Asianet Suvarna News

BBK10 ಸೂಪರ್ ಸಂಡೇ: ದೊಡ್ಮನೆ ಸದಸ್ಯರ ಮನ ಗೆದ್ದ ಸಂಗೀತಾಗೆ ಮೆಚ್ಚುಗೆಯ ಸುರಿಮಳೆ..!

ಬಿಗ್ ಮನೆಯ ಸದಸ್ಯರು ಕಿಚ್ಚ ಸುದೀಪ್ ಆರ್ಡರ್‌ನಂತೆ ಮಿಕ್ಕ ಸ್ಪರ್ಧಿಗಳಿಗೆ ಹೀರೋ, ವಿಲನ್ ಮತ್ತು ಖಾಲಿಡಬ್ಬ ಎಂಬ ಸ್ಟಿಕ್ಕರ್ ಹಚ್ಚಬೇಕಿತ್ತು. ಆ ಟಾಸ್ಕ್‌ನಲ್ಲಿ ಅತಿ ಹೆಚ್ಚು ಹೀರೋ ಇಮೋಜಿ ಸ್ಟಿಕ್ಕರ್ ಗಳಿಸಿರುವ ಸಂಗೀತಾ ಎಲ್ಲರ ಅಚ್ಚುಮೆಚ್ಚಿನ ನಾಯಕಿ ಅಂತ ಸೆಲೆಕ್ಟ್ ಆದರು.

Sangeetha Srungeri received appreciation from Bigg Boss house members srb
Author
First Published Oct 16, 2023, 7:08 PM IST

ಬಿಗ್ ಬಾಸ್ ಕನ್ನಡ ಸೀಸನ್ 10 ಮೊದಲನೇ ವಾರ ಮುಕ್ತಾಯವಾಗಿದೆ. ವೀಕೆಂಡ್ 'ಕಿಚ್ಚನ ಪಂಚಾಯಿತಿ' ಮತ್ತು 'ಸೂಪರ್ ಸಂಡೇ ವಿತ್ ಸುದೀಪ' ಶೋ ಎಪಿಸೋಡ್‌ಗಳು ನಿನ್ನೆ ಪ್ರಸಾರವಾಗಿವೆ. ಮೊದಲನೇ ಎಲಿಮಿನೇಶನ್ ಆಗಿ ಸ್ನೇಕ್ ಶಾಮ್ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ. ಇದೆಲ್ಲದರ ನಡುವೆ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ಸಂಗೀತಾ ಶೃಂಗೇರಿ 'ಅಳು' ಬಹಳಷ್ಟು ವೀಕ್ಷಕರ ಗಮನಸೆಳೆದಿದೆ. ಹೌದು, ನಿನ್ನೆ ಸಂಗೀತಾ ಶೃಂಗೇರಿ ಬಿಗ್ ಬಾಸ್ ಮನೆಯಲ್ಲಿ ಕಣ್ಣೀರು ಹಾಕಿದ್ದಾರೆ. ಕಾರಣ, ಅವರಿಗೆ ಸಂತೋಷ ತಡೆದುಕೊಳ್ಳಲು ಸಾಧ್ಯವಾಗದೇ ಆನಂದಭಾಷ್ಪ ಸುರಿಸಿದ್ದಾರೆ. 

ಬಿಗ್ ಮನೆಯ ಸದಸ್ಯರು ಕಿಚ್ಚ ಸುದೀಪ್ ಆರ್ಡರ್‌ನಂತೆ ಮಿಕ್ಕ ಸ್ಪರ್ಧಿಗಳಿಗೆ ಹೀರೋ, ವಿಲನ್ ಮತ್ತು ಖಾಲಿಡಬ್ಬ ಎಂಬ ಸ್ಟಿಕ್ಕರ್ ಹಚ್ಚಬೇಕಿತ್ತು. ಆ ಟಾಸ್ಕ್‌ನಲ್ಲಿ ಅತಿ ಹೆಚ್ಚು ಹೀರೋ ಇಮೋಜಿ ಸ್ಟಿಕ್ಕರ್ ಗಳಿಸಿರುವ ಸಂಗೀತಾ ಎಲ್ಲರ ಅಚ್ಚುಮೆಚ್ಚಿನ ನಾಯಕಿ ಅಂತ ಸೆಲೆಕ್ಟ್ ಆದರು. ಅದನ್ನು ಸುದೀಪ್ ಅನೌನ್ಸ್ ಮಾಡಿದಾಗ ಗೌರವ ಸ್ವೀಕರಿಸಲು ಎದ್ದುನಿಂತ ಸಂಗೀತಾ ಸಂತೋಷ ತಡೆಯಲಾಗದೇ ಕಣ್ಣೀರು ಹಾಕಿದರು. ಈ ವೇಳೆ ಸಂಗೀತಾಗೆ ತಮ್ಮ ಗೆಲುವನ್ನು ನಂಬಲಾಗಲೇ ಇಲ್ಲ. 

ಈ ವೇಳೆ ಮಾತನಾಡಿದ ಸಂಗೀತಾ "ನನಗೆ ಲೈಫ್‌ನಲ್ಲಿ ಯಾವತ್ತೂ ಗೆಲುವು ಸಿಗಲೇ ಇಲ್. ನಾನು ಯಾವುದೇ ಕೆಲಸ ಮಾಡಿದರೂ ನನಗೆ ಜನಬೆಂಬಲ ಸಿಗುತ್ತಿರಲಿಲ್ಲ. ಸಿನಿಮಾದಲ್ಲಿ ನಟಿಸಿದರೂ ನನಗೆ ರಿಕಗ್ನೈಸೇಷನ್ ಸಿಗಲೇ ಇಲ್ಲ. ಈಗ ಇಲ್ಲಿ ಎಲ್ಲರೂ ನನ್ನನ್ನು ಇಷ್ಟಪಟ್ಟಿದ್ದಾರೆ, ನನಗೆ ಹೀರೋ ಪಟ್ಟ ನೀಡಿದ್ದಾರೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಸಂತೋಷದಿಂದ ನನಗೆ ಅಳು ತಡೆಯಲಾಗುತ್ತಿಲ್ಲ" ಎಂದು ಹೇಳುತ್ತ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಸಂಗೀತಾ ಮಾತು ಹಾಗೂ ನಡೆ ಭಾರೀ ಮೆಚ್ಚುಗೆ ಗಳಿಸಿದೆ. 

BBK10 ಹೊಸ ವಾರ ಶುರು: ಸಾಯುತ್ತೇವೆ ಎಂದು ಗೊತ್ತಿದ್ದರೂ ಬದುಕುವ ಹಾಗೆ ಮತ್ತೆ ಹೊಸ ಆಟ ಶುರು!

ಬಿಗ್ ಬಾಸ್ ಮನೆಯಲ್ಲಿ ನಿನ್ನೆ 'ಸೂಪರ್ ಸಂಡೆ' ಇದ್ದರೂ ಸ್ನೇಕ್ ಶ್ಯಾಮ್ ಪಾಲಿಗೆ ಬಿಗ್ ಬಾಸ್ ಮನೆಯಲ್ಲಿ ಅದೇ ಕೊನೆಯ ಸಂಡೇ ಆಯ್ತು. ಮುಂದಿನ ವಾರೆ ಮತ್ತೊಬ್ಬರಿಗೆ ಬಿಗ್ ಬಾಸ್ ಮನೆಯಲ್ಲಿ ಕೊನೆಯ ಸೂಪರ್ ಸಂಡೇ ಆಗಲಿದೆ. ರಿಯಲ್ ಲೈಫ್ ಹೇಗೋ ಹಾಗೇ ಬಿಗ್ ಬಾಸ್‌ ಮನೆಯಲ್ಲಿ ಕೂಡ ಜೀವನ ನಡೆಯುತ್ತದೆ. ಅದನ್ನು ಗಮನಿಸಿ ನೋಡಿದರೆ ಸ್ಪಷ್ಟವಾಗಿಯೇ ಗುರುತಿಸಬಹುದು. ಅವರವರ ಸ್ಟಾಪ್ ಬಂದಾಗ ಎಲ್ಲರೂ ಇಳಿದು ಹೋಗಲೇಬೇಕು. ಆದರೆ, ತಮ್ಮ ಸ್ಟಾಪ್ ಯಾವಾಗ ಬರುತ್ತದೆ ಎಂದು ಗೊತ್ತಿಲ್ಲದ ಕಾರಣಕ್ಕೆ ಹಾರಾಟ-ಹೋರಾಟಗಳು ನಡೆಯುತ್ತ ಜೀವನ ಸಾಗುತ್ತದೆ.

BBK10 ಸ್ಪರ್ಧಿ ಸ್ನೇಕ್ ಶ್ಯಾಮ್: ಭೂಮಿಗೆ ಬರುವಾಗ್ಲೇ ಟಿಕೆಟ್ ತಂದಿರ್ತೀವಿ, ತತ್ಕಾಲ್‌ನಲ್ಲಿ ಇರ್ತೀವಿ ಅಷ್ಟೇ.

ಇರಲಿ, ಈ ವಾರದ ಬಿಗ್ ಬಾಸ್ ಆಟ ಶುರುವಾಗಿದೆ. ಈ ವಾರದ ಆಟದ ರೋಚಕ ಘಳಿಗೆಗಳು, ಅದರ ಫಲಿತಾಂಶ ಎಲ್ಲವನ್ನೂ ಬಿಗ್‌ಬಾಸ್‌ ಕನ್ನಡದ ಉಚಿತ ನೇರಪ್ರಸಾರ ಮಾಡುತ್ತಿರುವ 'JioCinema'ದಲ್ಲಿ ನೋಡಬಹುದು. ಶುಕ್ರವಾರದ 'ಫನ್ ಫ್ರೈಡೇ' ಸೆಗ್ಮೆಂಟ್‌ನಲ್ಲಿ ಆ ದಿನದ ವಿಶೇಷತೆಗಳನ್ನು (https://jiocinema.onelink.me/fRhd/z17wt8x0) ನಲ್ಲಿ ಎಕ್ಸ್‌ಕ್ಲೂಸಿವ್ ಆಗಿ ನೋಡಬಹುದು. ಜತೆಗೆ, ಬಿಗ್‌ಬಾಸ್ ಕನ್ನಡ ಶೋನ 24 ಗಂಟೆ ನೇರಪ್ರಸಾರವನ್ನು 'JioCinema'ದಲ್ಲಿ ಉಚಿತವಾಗಿ ನೋಡಬಹುದು. ಶನಿವಾರ-ಭಾನುವಾರದ ವೀಕೆಂಡ್‌ ಎಪಿಸೋಡ್‌ಗಳನ್ನು Colors Kannada ವಾಹಿನಿಯಲ್ಲಿ ರಾತ್ರಿ 9ಕ್ಕೆ ವೀಕ್ಷಿಸಬಹುದು. 

Follow Us:
Download App:
  • android
  • ios