ಬಿಗ್​ಬಾಸ್​ ಖ್ಯಾತಿಯ ಸಂಗೀತಾ ಶೃಂಗೇರಿ ಹೇರ್​ ಕಲರ್​ ಮಾಡಿಸಿಕೊಳ್ಳುವ ಸಮಯದಲ್ಲಿ ಎಡವಟ್ಟು ಆಗಿದ್ದು, ಅವರು ಗರಂ ಆಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು? 

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರಲ್ಲಿ ಬಹುತೇಕರ ಅಚ್ಚುಮೆಚ್ಚಿನ ಸ್ಪರ್ಧಿಯಾಗಿದ್ದವರು ಸಂಗೀತಾ ಶೃಂಗೇರಿ. ಬಿಗ್​​ಬಾಸ್​ನಿಂದ ಆಚೆ ಬಂದ ಬಳಿಕ ಸಂಗೀತಾ ಶೃಂಗೇರಿ ಅವರು ಯಾವುದೇ ಪ್ರಾಜೆಕ್ಟ್​ಗೆ ಕೈ ಹಾಕಿಲ್ಲ. ಆದರೆ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಸಂಗೀತಾ ಎಂದಾಕ್ಷಣ ಬಹುತೇಕರಿಗೆ ನೆನಪಾಗುವುದು, ಬಿಗ್​ಬಾಸ್-10ರ ಮನೆಯಲ್ಲಿ ಸದಾ ಕಿತ್ತಾಡುತ್ತಾ ಇದ್ದ ಸಂಗೀತಾ ಶೃಂಗೇರಿ ಮತ್ತು ತುಕಾಲಿ ಸಂತೋಷ್​ ಜೋಡಿ. ಬಿಗ್ ಬಾಸ್ ಮನೆಯ ಮೊದಲ ದಿನದಿಂದಲೂ ಇವರಿಬ್ಬರೂ ಅಷ್ಟೇನೂ ಮಾತನಾಡುತ್ತಾ ಇರಲಿಲ್ಲ. ಇದಕ್ಕೆ ಕಾರಣ, ಸಂಗೀತಾ ಮಾತನಾಡುವ ಮಾತುಗಳು ತುಕಾಲಿ ಸಂತೋಷ್‌ ಅವರಿಗೆ ಹಿಡಿಸುತ್ತಿರಲಿಲ್ಲ. ಆದ್ದರಿಂದ ಇಬ್ಬರ ನಡುವೆ ಸಾಕಷ್ಟು ವೈಮನಸ್ಸು ಇದ್ದವು. ಸದಾ ಇಬ್ಬರೂ ಕಾದಾಡುತ್ತಲೇ ಇದ್ದರು. ಅದು ಎಷ್ಟರ ಮಟ್ಟಿಗೆ ಆಯಿತು ಎಂದರೆ, ತುಕಾಲಿ ಸಂತೋಷ್ ಹೇಳುವ ಎಲ್ಲಾ ಮಾತುಗಳಿಗೂ ಸಂಗೀತಾ ರಿಯಾಕ್ಟ್ ಮಾಡಲು ಶುರು ಮಾಡಿದರು. ತಮಾಷೆಯಾಗಿ ಹೇಳಿದ್ದನ್ನು ಸೀರಿಯಸ್ಸಾಗಿ ತೆಗೆದುಕೊಂಡರು. ಆದರೆ ಈಗ ಎಲ್ಲವನ್ನೂ ಮರೆತು ಇಬ್ಬರೂ ಆನಂದದಿಂದ ಇದ್ದಾರೆ.

ಈ ನಡುವೆಯೇ ಕೂದಲಿಗೆ ಬಣ್ಣ ಹಾಕಿಸಿಕೊಳ್ಳಲು ಹೋದ ಸಂಗೀತಾ ಶೃಂಗೇರಿ ಹೇರ್​ ಡ್ರೆಸರ್​ ಮೇಲೆ ಗರಂ ಆಗಿದ್ದಾರೆ. ಇದಕ್ಕೆ ಕಾರಣ, ಅವರು ತಮ್ಮ ಕೂದಲಿಗೆ ಆ್ಯಷ್​ ಕಲರ್​ ಹಾಕುವಂತೆ ಹೇಳಿದ್ದರು. ಇದರ ವಿಡಿಯೋ ಮಾಡುತ್ತಿದ್ದರು. ಆದರೆ ಹೇರ್​ ಡ್ರೆಸ್ಸರ್​ ಪಿಂಕ್​ ಕಲರ್​ ಹಾಕಿದ್ದಾರೆ. ಇದನ್ನು ನೋಡಿ ಸಂಗೀತಾ ಗರಂ ಆದಂತೆ ಕಂಡುಬರುತ್ತಿದೆ. ಆದರೆ ಹೇರ್​ ಡ್ರೆಸ್ಸರ್ ಮಾತ್ರ ನಗುತ್ತಿದ್ದಾರೆ. ಇದು ತಮಾಷೆಗೋ ಅಥವಾ ನಿಜವಾಗಿಯೂ ಎಡವಟ್ಟು ಆಗಿದ್ಯೋ ಗೊತ್ತಿಲ್ಲ. ಒಟ್ಟಿನಲ್ಲಿ ಇದಕ್ಕೆ ಥಹರೇವಾರಿ ಕಮೆಂಟ್ಸ್​ ಬರುತ್ತಿವೆ. ಬಿಗ್​ಬಾಸ್​ ಒಳಗೆ ಜಗಳ ಕಾಯುವ ಹಾಗೆ ಹೊರಗಡೆಯೂ ಬಿಟ್ಟಿಲ್ವಾ? ಅಲ್ಲಿ ತುಕಾಲಿ ಇಲ್ಲಿ ಪಾಪ ಹೇರ್​ ಡ್ರೆಸ್ಸರ್​ ಎಂದು ಕೆಲವರು ತಮಾಷೆ ಮಾಡುತ್ತಿದ್ದಾರೆ. 

ಪುಟಾಣಿ ಸಿಹಿ ಮುದ್ದಾಡಿ ತಮ್ಮ ಅಪ್ಪ-ಅಮ್ಮನನ್ನು ಸ್ಮರಿಸಿದ ರವಿಚಂದ್ರನ್​: ಪ್ರಶಸ್ತಿ ವೇದಿಕೆಯಲ್ಲಿ ಭಾವುಕ ಸನ್ನಿವೇಶ

ಕೆಲ ದಿನಗಳ ಹಿಂದೆ, ಕಲರ್ಸ್​ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್​ ವೇದಿಕೆ ಮೇಲೆ ತುಕಾಲಿ ಸಂತೋಷ್​ ಮತ್ತು ಸಂಗೀತಾ ಶೃಂಗೇರಿ ಕಾಣಿಸಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ಬಿಗ್​ಬಾಸ್​ ಸೀಸನ್​ 10 ಎಲ್ಲಾ ಸ್ಪರ್ಧಿಗಳು ಈ ಅವಾರ್ಡ್​ ಫಂಕ್ಷನ್​ಗೆ ಆಗಮಿಸಿದ್ದರು. ತುಕಾಲಿ ಸಂತೋಷ್​ ಕೂಡ ಬಂದಿದ್ದರು. ಇವರನ್ನು ನೋಡಿದ ಆ್ಯಂಕರ್​ ಅನುಪಮಾ ಗೌಡ ಅವರು, ಇಬ್ಬರ ಕಾಲೆಳೆದಿದ್ದರು. ಬಿಗ್​ಬಾಸ್​​ ಮುಗಿದ ಮೇಲೆ ಸಂಗೀತಾರನ್ನು ಎಷ್ಟು ಮಿಸ್​ ಮಾಡಿಕೊಂಡ್ರಿ ಎಂದು ಪ್ರಶ್ನಿಸಿದ್ದರು. . ಅದಕ್ಕೆ ತುಕಾಲಿ ಜೋರಾಗಿ ನಗುತ್ತಾ ಚೆನ್ನಾಗಿ ಹಾಕಿಕೊಟ್ರಿ ಎಂದಿದ್ದರು. ಆಗ ಸಂಗೀತಾ, ತುಕಾಲಿ ಅವ್ರೇ, ಮನೆಗೆ ಹೋದ ಮೇಲೆ ಎಲ್ಲಾ ಎಪಿಸೋಡ್​ ನೋಡಿದೆ ಎಂದರು. ಅದಕ್ಕೆ ತುಕಾಲಿ ತುಂಬಾ ಚೆನ್ನಾಗಿತ್ತು ಎಂದರು, ಅದಕ್ಕೆ ಸಂಗೀತಾ ಹೌದು. ತುಂಬಾನೇ ಚೆನ್ನಾಗಿತ್ತು, ನೋಡ್ಕೋತೀನಿ ಎಂದು ತಮಾಷೆ ಮಾಡಿದರು.


ಇನ್ನು ಸಂಗೀತಾ ಅವರ ಕುರಿತು ಹೇಳುವುದಾದರೆ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿವರಾದ ನಟಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. 2016ರಲ್ಲಿ ಸ್ಟಾರ್ ಸುವರ್ಣ ವಾಹಿನಿಯ 'ಹರ ಹರ ಮಹಾದೇವ' ಕನ್ನಡ ಧಾರವಾಹಿ ಮೂಲಕ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿಕೊಟ್ಟ ಇವರು, ಪಾವರ್ತಿ ಪಾತ್ರದ ಮೂಲಕ ಖ್ಯಾತಿ ಗಳಿಸಿದರು. ಎ+ ಸಿನಿಮಾ ಮೂಲಕ ಸ್ಯಾಂಡಲ್​ವುಡ್​​ಗೆ ಎಂಟ್ರಿ ಕೊಟ್ಟರು. ಬಳಿಕ ಸಾಲಗಾರರ ಸಹಕಾರ ಸಂಘ, 777 ಚಾರ್ಲಿ, ಲಕ್ಕಿಮ್ಯಾನ್, ಶಿವಾಜಿ ಸುರತ್ಕಲ್ 2 ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಾರ್ಲಿ ಚಿತ್ರದಿಂದ ಇವರಿಗೆ ದೊಡ್ಡ ಬ್ರೇಕ್​ ಸಿಕ್ಕಿತು. ಎರಡು ಸಾವಿರಕ್ಕೂ ಹೆಚ್ಚು ಜನರು '777 ಚಾರ್ಲಿ' ಚಿತ್ರದ ನಾಯಕಿ ಪಾತ್ರಕ್ಕೆ ಆಡಿಷನ್ ಕೊಟ್ಟಿದ್ದರು. ಆದರೆ ಎಲ್ಲರನ್ನು ಮೀರಿ ಸಂಗೀತಾ ಗೆದ್ದಿದ್ದರು. ಒಳ್ಳೆ ಅವಕಾಶ ಪಡೆದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ರಿಲೀಸ್ ಆಗಿ ಸದ್ದು ಮಾಡಿದೆ ಚಿತ್ರ ಜೊತೆಗೆ ಹಲವು ಅವಾರ್ಡ್​ಗಳನ್ನು ಬಾಚಿಕೊಂಡಿದೆ.

ಬೆಸ್ಟ್​ ಅತ್ತೆ ಪ್ರಶಸ್ತಿ ಪಡೆದ ಶ್ರೀರಸ್ತು ಶುಭಮಸ್ತು ತುಳಸಿ: ರಿಯಲ್​ ಮಗಳು ಅಮ್ಮನನ್ನು ನೋಡಿ ಹೇಳಿದ್ದೇನು?

View post on Instagram