ಬೆಸ್ಟ್​ ಅತ್ತೆ ಪ್ರಶಸ್ತಿ ಪಡೆದ ಶ್ರೀರಸ್ತು ಶುಭಮಸ್ತು ತುಳಸಿ: ರಿಯಲ್​ ಮಗಳು ಅಮ್ಮನನ್ನು ನೋಡಿ ಹೇಳಿದ್ದೇನು?

ಜೀ ಕುಟುಂಬ ಅವಾರ್ಡ್​ನಲ್ಲಿ ಶ್ರೀರಸ್ತು ಶುಭಮಸ್ತು ತುಳಸಿ ಉರ್ಫ್​ ಸುಧಾರಾಣಿ ಬೆಸ್ಟ್​ ಅತ್ತೆ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಮ್ಮನ ಬಗ್ಗೆ ಮಗಳು ನಿಧಿ ಹೇಳಿದ್ದೇನು?
 

Shreerastu Shubhamastu Tulsi urf Sudharani  Zee Kutumba best mother in law award suc

ವಯಸ್ಸು 51 ಆದರೂ ನಟಿ ಸುಧಾರಾಣಿ ಇನ್ನೂ 21ರ ಯುವತಿಯೇ. ಅದೇ ಚೆಲುವು, ಅದೇ ಮೈಮಾಟವನ್ನು ಮೆಂಟೇನ್​ ಮಾಡಿದ್ದಾರೆ ನಟಿ. ಅವರಿನ್ನೂ ಸಿಂಪಲ್​ ಬ್ಯೂಟಿ. ವಯಸ್ಸು ಎನ್ನುವುದು ಒಂದು ಸಂಖ್ಯೆಯಷ್ಟೇ ಎನ್ನುವುದು ಸುಧಾರಾಣಿ ಅವರಿಗೆ ನೋಡಿದರೆ ತಿಳಿಯುತ್ತದೆ. ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು-ಶುಭಮಸ್ತುವಿನಲ್ಲಿ ಎಲ್ಲರ ಬಾಯಲ್ಲೂ ತುಳಸಿಯಮ್ಮಾನೇ ಆಗಿದ್ದಾರೆ. ರಿಯಲ್​ ಲೈಫ್​ನಲ್ಲಿ ಓರ್ವ ಮಗಳಿದ್ದರೆ, ಸೀರಿಯಲ್​ನಲ್ಲಿ ಮದುವೆಯಾದ ಮಕ್ಕಳ ಅಮ್ಮ. ಇನ್ನೇನು ಅಜ್ಜಿಯಾಗುವ ಕಾಲ.  ತಮ್ಮ ಅದ್ಭುತ ನಟನೆಯಿಂದ ಮನಸೂರೆಗೊಳ್ಳುತ್ತಿದ್ದಾರೆ ನಟಿ ಸುಧಾರಾಣಿ. ಸದ್ಯ ಸೀರಿಯಲ್​ನಲ್ಲಿ ಗರ್ಭಿಣಿಯಾಗುವ ಮೂಲಕ ಬಹುದೊಡ್ಡ ಪ್ರೇಕ್ಷಕ ವರ್ಗದಿಂದ ನಟಿ ಅಸಮಾಧಾನಕ್ಕೂ ಗುರಿಯಾಗಿದ್ದಾರೆ. ಒಂದೊಳ್ಳೆ ಸಂದೇಶ ನೀಡುವ ಸಲುವಾಗಿ ಈ ಟ್ವಿಸ್ಟ್​ ಸೇರಿಸಲಾಗಿದೆ ಎನ್ನಲಾಗುತ್ತಿದ್ದರೂ ಹೆಚ್ಚಿನ ವೀಕ್ಷಕರಿಗೆ ಇದು ಇಷ್ಟವಾಗುತ್ತಿಲ್ಲ.

ಅದೇನೇ ಇದ್ದರೂ ಸೀರಿಯಲ್​ ವಿಷಯಕ್ಕೆ ಬರುವುದಾದರೆ ನಟಿ ಬೆಸ್ಟ್​ ಅತ್ತೆಯೇ. ಸಿರಿಯ ಅತ್ತೆಯಾಗಿ, ಈಗ ಮೂವರು ಮಕ್ಕಳಿಗೆ ಅಮ್ಮನಾಗಿ ಎಲ್ಲ ನೋವನ್ನು ಸಹಿಸಿಕೊಂಡು ಹೋಗುತ್ತಿದ್ದಾಳೆ. ಇದೇ  ಕಾರಣಕ್ಕೆ ತುಳಸಿಗೆ ಈಗ ಬೆಸ್ಟ್​ ಅತ್ತೆ ಪ್ರಶಸ್ತಿ ಸಿಕ್ಕಿದೆ. ಹೌದು. ಜೀ ಕನ್ನಡದ ಜೀ ಕುಟುಂಬ ಅವಾರ್ಡ್​ನಲ್ಲಿ ಸುಧಾರಾಣಿ ಅವರು ಬೆಸ್ಟ್​ ಅತ್ತೆ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ವೇಳೆ ಅವರಿಗೆ ಸರ್​ಪ್ರೈಸ್​ ಮಾಡಲಾಗಿದೆ. ಅದೇನೆಂದರೆ ಅವರ ಮಗಳು ನಿಧಿ ವೇದಿಕೆಗೆ ಬಂದಿದ್ದಾರೆ. ನೀವಿಬ್ಬರೂ ಅಕ್ಕ-ತಂಗಿಯಂತೆ ಕಾಣಿಸುತ್ತಿದ್ದೀರಿ ಎಂದು ಆ್ಯಂಕರ್​ ಹೇಳಿದಾಗ, ಅದಕ್ಕೆ ನಿಧಿ ಕೂಡ ಒಪ್ಪಿಕೊಂಡಿದ್ದಾರೆ. ನೀವು ನನಗಿಂತಲೂ ಯಂಗ್​ ಆಗಿ ಕಾಣಿಸುತ್ತಿದ್ದೀರಿ ಎಂದು ಅಮ್ಮನನ್ನು ನಿಧಿ ಶ್ಲಾಘಿಸಿದ್ದಾರೆ. 

38 ವರ್ಷಗಳ ಬಳಿಕ 'ಆನಂದ್'​ ಚಿತ್ರದ ಟುವ್ವಿ ಟುವ್ವಿ ಹಾಡಿಗೆ ಶಿವಣ್ಣ-ಸುಧಾರಾಣಿ ರೊಮ್ಯಾಂಟಿಕ್​ ಸ್ಟೆಪ್​!

ಇನ್ನು  ಸುಧಾರಾಣಿ ಅವರ ಕುರಿತು ಹೇಳುವುದಾದರೆ, ಈಕೆ ಭರತನಾಟ್ಯ ಕಲಾವಿದೆ ಕೂಡ ಹೌದು. ಭರತನಾಟ್ಯ ಮಾತ್ರವಲ್ಲದೇ ಕೂಚುಪುಡಿ ಕಲಾವಿದೆ ಕೂಡ. ಇವರು ಕನ್ನಡ ಚಿತ್ರರಂಗವಲ್ಲದೇ, ಮಲಯಾಳಂ, ತೆಲುಗು ಹಾಗೂ ತಮಿಳಿನಲ್ಲೂ ನಟಿಸಿದ್ದಾರೆ.   'ಕಿಲಾಡಿ ಕಿಟ್ಟು', 'ರಂಗನಾಯಕಿ' ಮುಂತಾದ ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿರುವ ಇವರು  ಕೂಚಿಪುಡಿ ಹಾಗೂ ಭರತನಾಟ್ಯ ಕಲಾವಿದೆ. ತಮ್ಮ 13ನೇ ವಯಸ್ಸಿನಲ್ಲೇ  ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ನಟಿ  ರಾಜ್ ನಿರ್ಮಾಣ ಸಂಸ್ಥೆಯ ಮೂಲಕವಾಗಿ ಶಿವರಾಜಕುಮಾರ್ ನಟನೆಯ  'ಆನಂದ್' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಮನ ಮೆಚ್ಚಿದ ಹುಡುಗಿ, ಆಸೆಗೊಬ್ಬ ಮೀಸೆಗೊಬ್ಬ, ಸಿರಿಗಂಧ, ಪಂಚಮವೇದ, ಮನೆದೇವ್ರು, ಅರಗಿಣಿ, ಸ್ವಾತಿ, ಅವನೇ ನನ್ನ ಗಂಡ, ಮೈಸೂರು ಮಲ್ಲಿಗೆ, ಮಿಡಿದ ಶೃತಿ, ಮಹಾಕ್ಷತ್ರಿಯ, ಅನುರಾಗ ಸಂಗಮ, ದೇವತಾ ಮನುಷ್ಯ, ಜೀವನ ಚೈತ್ರ, ಮನ ಮೆಚ್ಚಿದ ಹುಡುಗಿ, ಸಮರ, ಅಸೆಗೊಬ್ಬ ಮೀಸೆಗೊಬ್ಬ ಮುಂತಾದ ಹಲವಾರು ಯಶಸ್ವಿ ಚಿತ್ರಗಳಲ್ಲಿ ಸುಧಾರಾಣಿ ನಟಿಸಿದ್ದಾರೆ.

ಸುಧಾರಾಣಿ ಮತ್ತು ಗೋವರ್ಧನ್ ವಿವಾಹ 2000 ನೇ ಇಸವಿಯಲ್ಲಿ ನಡೆಯಿತು.   2001ರಲ್ಲಿ ಜನಿಸಿದ ಪುತ್ರಿ  ನಿಧಿ ಜನಿಸಿದ್ದು, ಕಳೆದ ವರ್ಷವಷ್ಟೇ ಅವರ ಭರತನಾಟ್ಯ ರಂಗಪ್ರವೇಶ ಆಗಿದೆ. ಸುಧಾರಾಣಿಯವರು ತಮ್ಮ ಮುದ್ದಿನ ಮಗಳನ್ನು ಪ್ರೀತಿಯಿಂದ ಸುಬ್ಬಿ ಕುಟ್ಟಿ ಎನ್ನುತ್ತಾರೆ. ಸಂಗೀತ, ನೃತ್ಯದಲ್ಲಿ ಪ್ರವೀಣೇಯಾಗಿದ್ದಾರೆ. ಇದೀಗ ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ಸುಧಾರಾಣಿಯವರು ಮಗ ಅಭಿಗಾಗಿ ಡ್ರೈವಿಂಗ್​, ನೃತ್ಯ, ಇಂಗ್ಲಿಷ್​ ಎಲ್ಲಾ ಕಲಿತು ಸೀರಿಯಲ್​ ಪ್ರೇಮಿಗಳ ಮನಸ್ಸನ್ನು ಕದಿಯುತ್ತಿದ್ದಾರೆ.  ಇವೆಲ್ಲಕ್ಕೂ ಭೇಷ್​ ಎಂದಿದ್ದ ಅಭಿಮಾನಿಗಳಿಗೆ ಗರ್ಭಿಣಿಯಾಗಿದ್ದು ಮಾತ್ರ ಸಹಿಸಿಕೊಳ್ಳಲು ಆಗ್ತಿಲ್ಲ. 

ಯಾರ ಕನಸ ಕನ್ಯೆಯೋ... ಎಂದು ಸುಧಾರಾಣಿ ಪೋಸ್​: ಪ್ಲೀಸ್​ ಮಗು ತೆಗೆಸಿ ಅಂತಿರೋ ಫ್ಯಾನ್ಸ್​!

Latest Videos
Follow Us:
Download App:
  • android
  • ios