ರಚಿತಾ ರಾಮ್ ಜೊತೆ ಡ್ಯಾನ್ಸ್ ಮಾಡೋದಂದ್ರೆ ಸುಮ್ನೇನಾ..? ಅದೂ ಕಪಲ್ ಡ್ಯಾನ್ಸ್..! ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ಜೊತೆ ಡ್ಯಾನ್ಸ್ ಮಾಡೋ ಅವಕಾಶ ಪಡ್ಕೊಂಡಿದ್ದಾರೆ ಸೀರಿಯಲ್ ನಟರು.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಅನುಬಂಧ ಕಾರ್ಯಕ್ರಮಕ್ಕೆ ಬಂದ ರಚ್ಚು ಜೊತೆ ಸೀರಿಯಲ್ ನಟರು ಖುಷಿಯಿಂದ ಡ್ಯಾನ್ಸ್ ಮಾಡಿದ್ದಾರೆ. ನಟಿ ಕೂಡಾ ಹ್ಯಾಪಿಯಾಗಿ ಡ್ಯಾನ್ಸ್ ಮಾಡಿದ್ದು, ಕಲರ್ಸ್ ಕನ್ನಡ ವಾಹಿನಿ ಪ್ರೊಮೋ ವಿಡಿಯೋ ಶೇರ್ ಮಾಡಿಕೊಂಡಿದೆ.

ರಚಿತಾ ರಾಮ್ ಜೊತೆ ಡಾರ್ಲಿಂಗ್ ಕೃಷ್ಣ ಹೊಸ ಸಿನಿಮಾ

ಬ್ಲಾಕ್‌ & ವೈಟ್ ಸೀರೆಯುಟ್ಟು ಸ್ಟೈಲಿಷ್ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಆಕ್ಸೆಡೈಸ್ ಜ್ಯುವೆಲ್ಲರಿ ಧರಿಸಿ ಮತ್ತೆ ಮಳೆಯಾಗಿದೆ ಸಾಂಗ್‌ಗೆ ಡ್ಯಾನ್ಸ್ ಮಾಡಿದ್ದಾರೆ. ಎಲ್ಲ ನಟರೊಂದಿಗೂ ರೊಮ್ಯಾಂಟಿಕ್ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ.