ಅಮ್ಮಂಗೆ ಬ್ರೇನ್ ಟ್ಯೂಮರ್ ಅಲ್ಲ, ಪಾಪು ಬರೋ ಹೊತ್ತು ಅನ್ನೋದು ಸಮರ್ಥ್ಗೂ ಗೊತ್ತಾಗೋಯ್ತು... ಮುಂದೆ?
ಅಮ್ಮನಿಗೆ ಇರೋದು ಬ್ರೇನ್ ಟ್ಯೂಮರ್ ಅಲ್ಲ, ಆಕೆ ಗರ್ಭಿಣಿ ಎನ್ನುವ ಸತ್ಯ ಸಮರ್ಥ್ಗೆ ತಿಳಿದಿದೆ. ಮುಂದೇನು?
ತಾನು ಅಮ್ಮ ಆಗ್ತಿರೋ ವಿಷಯ ಯಾರು ಒಪ್ಪಿಕೊಳ್ತಾರೋ, ಬಿಡ್ತಾರೋ ಆದ್ರೆ ಮಗ ಸಮರ್ಥ್ ಮಾತ್ರ ಒಪ್ಪಿಕೊಂಡಿದ್ದಾನೆ ಎನ್ನುವ ಖುಷಿಯಲ್ಲೇ ಇದ್ದಳು ತುಳಸಿ. ಆಸ್ಪತ್ರೆಯ ನರ್ಸ್ಗಳು ಮಾಡಿರುವ ಎಡವಟ್ಟಿನಿಂದ ತುಳಸಿಗೆ ಬ್ರೇನ್ ಟ್ಯೂಮರ್ ಎಂದು ಸಮರ್ಥ್ ತಿಳಿದುಕೊಂಡಿದ್ದಾನೆ! ಅಮ್ಮ ಶ್ರೀಮಂತರ ಮನೆಗೆ ಮದುವೆಯಾಗಿ ಹೋದಾಗಿನಿಂದಲೂ ಅವಳನ್ನು ಕಂಡರೆ ಗುರ್ ಎನ್ನುತ್ತಿದ್ದ ಸಮರ್ಥ್ಗೆ ಈಗ ತಾಯಿ ಸತ್ತೇ ಹೋಗುತ್ತಾಳೆ ಎನ್ನುವ ಭೀತಿ. ಅವನು ಯಾವುದೇ ಕಾರಣಕ್ಕೂ ಅಮ್ಮನನ್ನು ಬಿಟ್ಟುಕೊಡುವವನಲ್ಲ. ಇದೇ ಕಾರಣಕ್ಕೆ ಅವನು ಓಡೋಡಿ ತುಳಸಿಯ ಮನೆಗೆ ಬಂದಿದ್ದ. ಅಮ್ಮಾ ಎಂದು ಓಡಿ ಬಂದು ತುಳಸಿಯನ್ನು ಅಪ್ಪಿಕೊಂಡಿದ್ದ. ತುಳಸಿ ಮದುವೆಯಾಗಿ ಹೋದಾಗಿನಿಂದಲೂ ಮೇಡಂ ಎಂದು ಕರೆಯುತ್ತಿದ್ದ ಸಮರ್ಥ್, ಇದ್ದಕ್ಕಿದ್ದಂತೆಯೇ ಅಮ್ಮಾ ಎಂದು ಕರೆದದ್ದನ್ನು ನೋಡಿ ತುಳಸಿಗೆ ರೋಮಾಂಚರ, ಆಶ್ಚರ್ಯ ಆಗಿತ್ತು. ಇಷ್ಟು ದಿನ ನೀವು ಪ್ರೀತಿ ತೋರುತ್ತಿದ್ದರೂ ನಾನು ಅರ್ಥ ಮಾಡಿಕೊಳ್ಳದೇ ನಿಮ್ಮ ಮನಸ್ಸಿಗೆ ನೋವು ಉಂಟು ಮಾಡಿದೆ ಎಂದು ಕಣ್ಣೀರು ಹಾಕಿದ್ದ.
ಆದರೆ ಸಮರ್ಥ್ನ ಈ ಏಕಾಏಕಿ ಬದಲಾವಣೆಗೆ ಕಾರಣ ಮಾತ್ರ ಯಾರಿಗೂ ತಿಳಿದೇ ಇಲ್ಲ. ತಾನು ಗರ್ಭಿಣಿಯಾಗಿರುವ ಸುದ್ದಿಯನ್ನು ಸಮರ್ಥ್ ಒಪ್ಪಿಕೊಂಡಿದ್ದಾನೆ ಎಂದು ತುಳಸಿ ತಿಳಿದುಕೊಂಡ ಬಿಟ್ಟಿದ್ದಾಳೆ. ಏಕೆಂದರೆ, ಸಮರ್ಥ್ ತನ್ನ ಅಮ್ಮನಿಗೆ ಸಮಾಧಾನಪಡಿಸಿದ ರೀತಿಯೇ ಹಾಗಿತ್ತು. ನಿಮ್ಮ ಜೊತೆ ನಾನಿದ್ದೇನೆ. ಭಯಪಡಬೇಡಿ ಎನ್ನುತ್ತಲೇ ಆಕೆಯ ಕೈಹಿಡಿದು ಮನೆಗೆ ಕರೆದುಕೊಂಡು ಬಂದಿದ್ದ. ಇಷ್ಟು ದಿನವಾದರೂ ಅಮ್ಮ ತುಳಸಿಯನ್ನು ಆದಷ್ಟು ದಿನ ಬದುಕಿಸಿಕೊಳ್ಳಬೇಕು, ಪ್ರೀತಿಯಿಂದ ಕಾಪಾಡಬೇಕು ಎಂದೇ ಮನೆಯವರೆಲ್ಲರ ಜೊತೆ ಒಂದಾಗಿದ್ದ. ಆದರೆ ಈಗ ಆಗಿದ್ದೇ ಬೇರೆ!
ರಶ್ಮಿಕಾ ಮಂದಣ್ಣ ಈಗ ಸೈಬರ್ ಕ್ರೈಂ ರಾಷ್ಟ್ರೀಯ ರಾಯಭಾರಿ! ಲೈವ್ನಲ್ಲಿ ಬಂದ ನಟಿ ಹೇಳಿದ್ದೇನು?
ತುಳಸಿ ಗರ್ಭಿಣಿ ಎನ್ನುವ ಸತ್ಯ ಶಾರ್ವರಿಯಿಂದ ಎಲ್ಲರಿಗೂ ತಿಳಿದು ಹೋಗಿದೆ. ಮೊಮ್ಮಕ್ಕಳನ್ನು ನೋಡುವ ಕಾಲದಲ್ಲಿ ಮಗು ಆಗುತ್ತಿರುವುದಕ್ಕೆ ಶಾರ್ವರಿ ಛೀಮಾರಿ ಹಾಕುತ್ತಿದ್ದಾಳೆ. ತನ್ನ ಅಮ್ಮನ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡುತ್ತಿರುವುದಕ್ಕೆ ಸಮರ್ಥ್ ಶಾರ್ವರಿ ವಿರುದ್ಧ ಕಿಡಿ ಕಾರಿದ್ದ. ಕೊನೆಗೆ ನನ್ನ ಅಮ್ಮನಿಗೆ ಬ್ರೇನ್ ಟ್ಯೂಮರ್ ಇದೆ, ಹೀಗೆಲ್ಲಾ ಹೇಳಬೇಡಿ ಎಂದಿದ್ದ. ಆಗ ಮಹೇಶ್ ಇಲ್ಲಾ ನೀನು ತಪ್ಪು ತಿಳಿದುಕೊಂಡಿರುವಿ. ತುಳಸಿ ಗರ್ಭಿಣಿಯಾಗಿದ್ದಾರೆ ಎಂದಿದ್ದಾನೆ. ಇದನ್ನು ಕೇಳಿ ಸಮರ್ಥ್ಗೆ ಶಾಕ್ ಆಗಿದೆ. ಇದನ್ನು ಆತ ನಂಬಲು ಸಾಧ್ಯವೇ ಇಲ್ಲ. ಓಡಿ ಬಂದು ಅಮ್ಮನ ಬಳಿ ಶಾರ್ವರಿ ಹೇಳ್ತಿರೋ ವಿಷಯ ನಿಜನಾ ಕೇಳಿದ್ದಾನೆ. ತನ್ನ ಸತ್ಯ ಮಗನಿಗೆ ಗೊತ್ತು ಎಂದು ತಿಳಿದುಕೊಂಡಿರೋ ತುಳಸಿಗೆ ಆತನ ಮಾತು ಕೇಳಿ ಅಚ್ಚರಿಯಾಗಿದೆ. ಈಗ ಮುಂದೇನು ಎನ್ನುವುದು ಸದ್ಯಕ್ಕಿರುವ ಕುತೂಹಲ.
ಅಷ್ಟಕ್ಕೂ, ಬಳಿಕ ತುಳಸಿ ಮಗುವನ್ನು ಹೆತ್ತರೆ ಆಕೆಯ ಜೀವಕ್ಕೆ ಅಪಾಯವಿದೆ, ಮಗುವನ್ನು ತೆಗೆಸಬೇಕು ಎಂದು ವೈದ್ಯರು ಹೇಳಿದ್ದಾರೆ. ಆದರೆ ಈಗ ಆಗಿದ್ದೇ ಬೇರೆ. ಇದೀಗ ತುಳಸಿ ಮಗು ಹೆರಲು ಮುಂದಾಗಿದ್ದಾಳೆ. ಆಕೆಗೆ ತನ್ನ ಪ್ರಾಣಕ್ಕಿಂತಲೂ ಮುಖ್ಯವಾಗಿದ್ದು ಪೂರ್ಣಿಯ ಮಡಿಲಿಗೆ ಕಂದನನ್ನು ಕೊಡುವುದು. ತಾನು ಮಗುವನ್ನು ಹೆತ್ತು ಅದನ್ನು ಪೂರ್ಣಿಯ ಮಡಿಲಿಗೆ ಹಾಕುವುದಾಗಿ ಹೇಳಿದ್ದಾಳೆ ತುಳಸಿ. ತುಳಸಿ ಮಗುವನ್ನು ಪೂರ್ಣಿಯ ಮಡಿಲಿಗೆ ಹಾಕಿ ಸಾವನ್ನಪ್ಪುತ್ತಾಳಾ ಎನ್ನುವ ಆತಂಕವೂ ಒಂದೆಡೆ ಅಭಿಮಾನಿಗಳನ್ನು ಕಾಡುತ್ತಿದೆ. ತುಳಸಿಯ ಪ್ರೆಗ್ನೆನ್ಸಿ ನೆಟ್ಟಿಗರಿಗೂ ನುಂಗಲಾಗದ ತುತ್ತಾಗಿದೆ. ಪೂರ್ಣಿಗೇ ಮಗುವನ್ನು ಹೆರುವಂತೆ ಮಾಡಿ, ಇಲ್ಲವೇ ಮಗುವನ್ನು ಆಕೆ ಅನಾಥಾಶ್ರಮದಿಂದ ದತ್ತು ಪಡೆದು ಇತರರಿಗೂ ಮಾದರಿಯಾಗುವಂತೆ ಮಾಡಿ ಎನ್ನುವುದು ನೆಟ್ಟಿಗರ ಮಾತು. ಮುಂದೇನಾಗುತ್ತೋ ಕಾದು ನೋಡಬೇಕಿದೆ.
ಬೂದಿ ಮುಚ್ಚಿದ ಕೆಂಡ ಕಿಡಿಕಾರಿಯೇ ಬಿಟ್ಟಿತು! ಸತ್ಯ ಬಯಲಾಗೋಯ್ತು.... ಪ್ಲೀಸ್ ಹೀಗೆ ಮಾಡ್ಬೇಡಿ ಅಂತಿರೋ ಫ್ಯಾನ್ಸ್...