ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ರಿಯಾಲಿಟಿ ಶೋ ಬಿಗ್‌‌ಬಾಸ್‌-7 ಈಗಾಗಲೇ 50 ದಿನಗಳನ್ನು ಪೂರೈಸಿದೆ. ಸ್ಪರ್ಧಿಗಳ ಬಿಂದಾಸ್ ಆಟ ಹಾಗೂ ಟಾಸ್ಕ್‌ನಿಂದ ಎಲ್ಲರೂ ಎಂಜಾಯ್ ಮಾಡುವಂತಾಗಿದೆ. ಅದರೊಟ್ಟಿದೆ ಈ ಸಾರಿ ವಿಭಿನ್ನ ಪ್ರಯತ್ನವೊಂದಕ್ಕೆ ಈ ಶೋ ಕೈ ಹಾಕಿದ್ದು, ವೀಕ್ಷಕರಲ್ಲಿ ಸಿಕ್ಕಾಪಟ್ಟೆ ಕುತೂಹಲ ಸೃಷ್ಟಿಸಿದೆ. 

ಎಲ್ಲಿರಿಗೂ ತಿಳಿದಿರುವ ಹಾಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಲ್ಮಾನ್‌ ಖಾನ್‌ಗೆ ಎದುರಾಗಿ 'ದಬಾಂಗ್-3' ಚಿತ್ರದಲ್ಲಿ ಬಲ್ಲೀಸಿಂಗ್ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಪಾತ್ರದ ಖದರ್‌ ಹೆಚ್ಚಿಸಲೆಂದು ಸುದೀಪ್ ಸಿಕ್ಕಾಪಟ್ಟೆ ವರ್ಕೌಟ್ ಮಾಡಿಕೊಂಡು, ದೇಹವನ್ನೂ ದಂಡಿಸಿದ್ದಾರೆ.  

ಸುದೀಪ್‌ ಮಗಳ ಆಸೆ ಈಡೇರಿಸಿದ ಸಲ್ಮಾನ್ ಖಾನ್!

ವಾರ-ವಾರ ನಡೆಯುವ 'ವೀಕೆಂಡ್‌ ವಿತ್ ಸುದೀಪ್‌'ನಲ್ಲಿ ಸಲ್ಮಾನ್‌ ಖಾನ್‌, ಪ್ರಭುದೇವ್‌ ಮತ್ತು ದಬಾಂಗ್‌-3 ಟೀಂ ಅನ್ನು ಕಿಚ್ಚ ನೇರವಾಗಿ ಸಂದರ್ಶಿಸಿದ್ದಾರೆ. ಬಿಗ್‌ಬಾಸ್‌-ಹಿಂದಿ ಸೀಸನ್ 13 ಕಾರ್ಯಕ್ರಮದಲ್ಲಿ ಸಲ್ಮಾನ್‌ ಭಾಗಿಯಾಗಿದ್ದರು. ಕನ್ನಡ ಬಿಗ್‌ಬಾಸ್‌ನಲ್ಲಿ ಶೂಟಿಂಗ್‌‌ನಲ್ಲಿದ್ದರು ಸುದೀಪ್‌. ಬೇರೆ ಬೇರೆ ಸೆಟ್‌ನಿಂದಲೇ ವಿಡಿಯೋ ಕಾಲ್‌ ಮೂಲಕ ಈ ಇಬ್ಬರು ನಟರು ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ಸಲ್ಮಾನ್ ಕನ್ನಡದಲ್ಲಿ ' ಬಿಗ್ ಬಾಸ್‌ ಅಪೇಕ್ಷಿಸುತ್ತಾರೆ...' ಎಂದು ಹೇಳಿರುವ ಪ್ರೋಮೋವನ್ನು ಕಲರ್ಸ್ ಕನ್ನಡ ಶೇರ್ ಮಾಡಿ ಕೊಂಡಿದೆ.

"