Asianet Suvarna News Asianet Suvarna News

ಮಾಡಿದ್ದುಣ್ಣೋ ಮಹಾರಾಯ ಎನ್ನೋದು ಇದಕ್ಕೆನಾ? ಲಿಂಬೆ ಹಣ್ಣು ಹಿಡಿದು ಮಾಟ ಮಾಡಿಸಿದ್ದ ರಾಜಿಗೆ ಆತ್ಮದ ಕಾಟ!

ಸಹನಾಳ  ಆತ್ಮ ರಾತ್ರಿಯ ವೇಳೆ ಬಂದು ರಾಜಿಗೆ ಕಾಟ ಕೊಟ್ಟಿದೆ. ಜೀವ ಉಳಿದರೆ ಸಾಕು ಎಂದುಕೊಂಡು ರಾಜಿ ಪುಟ್ಟಕ್ಕನ ಬಳಿ ಹೋಗಿ ಕ್ಷಮೆ ಕೋರಿದ್ದಾಳೆ. ಮುಂದೇನು?
 

Sahanas spirit came at night and threatened Raji in Puttakkana Makkalu fans reacts suc
Author
First Published Jun 25, 2024, 12:01 PM IST

ಮಾಡಿದ್ದುಣ್ಣೋ ಮಹಾರಾಯ ಎನ್ನುವುದು ತಲೆತಲಾಂತರಗಳಿಂದ ಬಂದಿರುವ ಗಾದೆ ಮಾತು. ಬೇರೆಯವರಿಗೆ ತೊಂದರೆ ಕೊಡಲು ಹೋಗಿ ಎಷ್ಟೋ ಮಂದಿಯ ಸಂಕಷ್ಟಕ್ಕೆ ಕಾರಣರಾದವರು ಒಂದಲ್ಲ ಒಂದು ದಿನ ಅನುಭವಿಸಲೇಬೇಕು, ಅವರು ಮಾಡಿರುವ ತೊಂದರೆ ಅವರಿಗೇ ತಿರುಗೇಟು ನೀಡುವುದು ನಿಶ್ಚಿತ ಎನ್ನುವ ಮಾತಿದೆ. ಈ ಮೊದಲೆಲ್ಲಾ ಮುಂದಿನ ಜನ್ಮದಲ್ಲಿ ಯಾವುದೇ ಕಷ್ಟವಿಲ್ಲದ ಜೀವನ ಪಡೆಯಬೇಕಾದರೆ, ಈ ಜನ್ಮದಲ್ಲಿ ಪುಣ್ಯ ಮಾಡಬೇಕು ಎನ್ನಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ, ಈ ಜನ್ಮದಲ್ಲಿ ಮಾಡಿರುವ ಪಾಪಗಳನ್ನು ಈ ಜನ್ಮದಲ್ಲಿಯೇ ಅನುಭವಿಸಬೇಕು ಎಂದು ಬಲ್ಲವರು ಹೇಳುತ್ತಲೇ ಇರುತ್ತಾರೆ. ಇದನ್ನೇ ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿಯೂ ಸೂಚ್ಯವಾಗಿ ತೋರಿಸಲಾಗಿದೆ. ಪುಟ್ಟಕ್ಕನ ಮಗಳು ಸಹನಾಳ ಆತ್ಮವನ್ನು ಕರೆಸಲು ಲಿಂಬೆ ಹಣ್ಣು ಹಿಡಿದು ಮಾಟ ಮಂತ್ರ ಮಾಡಿಸಿರುತ್ತಾಳೆ. ಆದರೆ ರಾತ್ರಿ ಮಲಗಿದ ವೇಳೆ ಸಹನಾಳ  ಆತ್ಮ ಆಕೆಯನ್ನು ಸಾಯಿಸಲು ಬಂದಿದೆ!

ಹೌದು. ಸಹನಾ ಬದುಕಿದ್ದಾಳೆ.  ಆದರೆ ಮನೆಯಲ್ಲಿ ಯಾರಿಗೂ ಗೊತ್ತಿಲ್ಲ. ಆಕೆ ಸತ್ತೇ ಹೋಗಿದ್ದಾಳೆ ಎಂದುಕೊಂಡಿದ್ದಾರೆ. ಆದರೆ ಸಹನಾ ದೇವಸ್ಥಾನ ಒಂದರಲ್ಲಿ ಕೆಲಸಕ್ಕಿದ್ದುಕೊಂಡು ಅಲ್ಲಿ ಸೇವೆ ಸಲ್ಲಿಸುತ್ತಿದ್ದಾಳೆ. ಸತ್ತಿದ್ದು ಸಹನಾ ಅಲ್ಲ, ಆದರೆ ಅವಳ ಬ್ಯಾಗ್​ ಕದ್ದುಕೊಂಡು ಹೋಗಿದ್ದ ಕಳ್ಳಿ. ಮನೆ ಬಿಟ್ಟ ಸಹನಾ ಬಸ್​ನಲ್ಲಿ ಹೋಗುವಾಗ ಪಕ್ಕದಲ್ಲಿಯೇ ಇದ್ದಳು ಈ ಕಳ್ಳಿ. ಸಹನಾ ನಿದ್ದೆಗೆ ಜಾರಿದಾಗ ಅವಳ ಎಲ್ಲಾ ಬ್ಯಾಗ್​ ಸೇರಿದಂತೆ ಎಲ್ಲಾ ಸಾಮಾನು ತೆಗೆದುಕೊಂಡು ಓಡಿ ಹೋಗಿದ್ದಾಳೆ. ಓಡಿ ಹೋಗುವ ಸಮಯದಲ್ಲಿ ಅಪಘಾತವಾಗಿ ಅವಳು ಸತ್ತುಹೋಗಿದ್ದಾಳೆ. ಮುಖ ಚಚ್ಚಿದ್ದರಿಂದ ಅವಳ ಗುರುತು ಹಿಡಿಯಲು ಯಾರಿಗೂ ಸಾಧ್ಯವಾಗಲಿಲ್ಲ. ಅವಳ ಬಳಿ ಸಹನಾಗೆ ಸೇರಿದ ಎಲ್ಲಾ ವಸ್ತುಗಳು ಇದ್ದುದರಿಂದ ಪೊಲೀಸರು ಇದು ಸಹನಾ ಇರಬಹುದು ಎಂದಾಗ, ಖುದ್ದು ಪುಟ್ಟಕ್ಕನೇ ಸಹನಾ ಎಂದು ಗುರುತಿಸಿ, ಅಂತ್ಯಕ್ರಿಯೆ ಮಾಡಲಾಗಿದೆ.

ಮದ್ವೆ ದಿನವೇ ಸೋನಾಕ್ಷಿ ಪತಿ ಫುಲ್​ ಟೈಟ್​ ? ವಿಡಿಯೋ ನೋಡಿ... ಮುಗೀತು ನಿನ್​ ಕಥೆ ಅಂತಿರೋ ಫ್ಯಾನ್ಸ್​!

ಇದೀಗ ಮನೆಯಲ್ಲಿ ಸಹನಾಳ ಶ್ರಾದ್ಧಕಾರ್ಯ ನಡೆಯುತ್ತಿದೆ. ಯಾರ ಕಣ್ಣಿಗೂ ಬೀಳಬಾರದು ಎಂದುಕೊಂಡ ಸಹನಾ ಬೆಂಗಳೂರಿನಲ್ಲಿ ಬೀದಿ ಬದಿಯ ವ್ಯಾಪಾರ ಮಾಡುತ್ತಿರುತ್ತಾಳೆ. ಆದರೆ ವ್ಯಾಪಾರ ಮಾಡಲು ಲೈಸೆನ್ಸ್​ ಬೇಕಿರುತ್ತದೆ. ಅದಕ್ಕಾಗಿ ಆಧಾರ್​ ಕಾರ್ಡ್​ ತರಲು ಹೇಳುತ್ತಾರೆ ಅಧಿಕಾರಿಗಳು. ಮನೆಗೆ ಮಾಸ್ಕ್​ ಹಾಕಿಕೊಂಡು ಬರುವ ಸಹನಾ ಅಲ್ಲಿ ತನ್ನದೇ ಶ್ರದ್ಧಾಕಾರ್ಯ ನಡೆಯುತ್ತಿರುವುದನ್ನು ನೋಡುತ್ತಾಳೆ. ಅವಳಿಗೆ ಏನು ಮಾಡುವುದು ತಿಳಿಯುವುದಿಲ್ಲ. ಅಲ್ಲಿಯೇ ಇದ್ದ ಪುಟ್ಟಕ್ಕನ ಸವತಿ ರಾಜಿ ಸಹನಾ ಬಗ್ಗೆ ಇಲ್ಲಸಲ್ಲದ್ದನ್ನು ಮಾತನಾಡುತ್ತಾಳೆ. ಅವಳ ಶೀಲವನ್ನು ಶಂಕಿಸುವಂಥ ಮಾತನಾಡುತ್ತಾಳೆ. ಸಾಲದು ಎನ್ನುವುದಕ್ಕೆ ಪುಟ್ಟಕ್ಕನ ಮನಸ್ಸನ್ನು ನೋಯಿಸುತ್ತಾಳೆ.

 
ಇದನ್ನು ತೆರೆಮನೆಯಲ್ಲಿ ನೋಡುತ್ತಿದ್ದ ಸಹನಾಗೆ ಸಿಟ್ಟು ಬರುತ್ತದೆ. ಹೇಗಾದರೂ ಮಾಡಿ ರಾಜಿಗೆ ಬುದ್ಧಿಕಲಿಸಬೇಕು ಎಂದುಕೊಳ್ಳುತ್ತಾಳೆ. ರಾತ್ರಿ ರಾಜಿ ಮಲಗಿದಾಗ ಮನೆ ಬಾಗಿಲು ಬಡಿಯುತ್ತಾಳೆ. ರಾಜಿ ಹೊರಕ್ಕೆ ಬಂದಾಗ ಯಾರೂ ಕಾಣಿಸುವುದಿಲ್ಲ. ಅವಳು ವಾಪಸ್​ ಹೋಗುವಾಗ ಸಹನಾ ಅವಳ ಜಡೆ ಹಿಡಿದು ಎಳೆಯುತ್ತಾಳೆ. ಭಯದಿಂದ ಹಿಂದಿರುಗಿ ನೋಡಿದ ರಾಜಿ ಸಹನಾಳನ್ನು ನೋಡಿ ದಿಗ್ಭ್ರಮೆಗೊಳ್ಳುತ್ತಾಳೆ. ಏಕೆಂದರೆ ಅವಳು ಕೂಡ ಸಹನಾ ಸತ್ತು ಹೋಗಿದ್ದಾಳೆ ಎಂದುಕೊಂಡಿರುತ್ತಾಳೆ. ಇನ್ನು ನನ್ನ ಅವ್ವನ ಮನೆಯವರಿಗೆ ತೊಂದರೆ ಕೊಟ್ಟರೆ ನಿನ್ನನ್ನು ಸುಮ್ಮನೇ ಬಿಡುವುದಿಲ್ಲ ಎಂದು ಹೆದರಿಸುತ್ತಾಳೆ ಸಹನಾ. ಜೀವ ಇದ್ದರೆ ಸಾಕು ಎಂದುಕೊಳ್ಳುವ ರಾಜಿ ಆಯ್ತು ಏನೂ ಮಾಡುವುದಿಲ್ಲ ಎನ್ನುತ್ತಾಳೆ. ಕೊನೆಗೆ ರಾಜಿ ಸಹನಾಳ ಆತ್ಮ ಕರೆಸಲು ಮಾಟಮಂತ್ರ ಮಾಡಿಸುತ್ತಾಳೆ. ಇದನ್ನು ಅರಿತ ಸಹನಾ ರಾತ್ರಿ ರಾಜಿಯನ್ನು ಉಸಿರುಕಟ್ಟಿ ಸಾಯಿಸುವ ರೀತಿ ನಾಟಕ ಮಾಡುತ್ತಾಳೆ. ಸತ್ತೆನೋ ಬಿದ್ದೆನೋ ಎಂದುಕೊಂಡ ರಾಜಿ ಮಾರನೆಯ ದಿನ ಹೋಗಿ ಪುಟ್ಟಕ್ಕನ ಕಾಲಿಗೆ ಬಿದ್ದು ಕ್ಷಮೆ ಕೋರುತ್ತಾಳೆ. ಸಹನಾಳಿಂದ ಮುಕ್ತಿಕೊಡಿಸು ಎನ್ನುತ್ತಾಳೆ. ಏನೂ ಅರಿಯದ ಪುಟ್ಟಕ್ಕ ಗಾಬರಿಯಾಗುತ್ತಾಳೆ. 

ಸ್ಟಾರ್​ ನಟನ ಅಡುಗೆಯವನಿಗೆ ದಿನಕ್ಕೆ 2 ಲಕ್ಷ ರೂ. ಸಂಬಳ! ಇದು ಹಕ್ಕಿ ತಿನ್ನುವ ಆಹಾರ ಇದಂತೆ...
 

Latest Videos
Follow Us:
Download App:
  • android
  • ios