Asianet Suvarna News Asianet Suvarna News

ಸಂಪೂರ್ಣ ಬೆತ್ತಲಾದ ರಣಬೀರ್​ ರಾಮನಾದ ಬಳಿಕ ಈಗ ಅರೆಬೆತ್ತಲ ರಾಣಿ ಅಂಜಲಿ ಸೀತಾಮಾತೆ! ಭಾರಿ ಆಕ್ರೋಶ

ಕಚ್ಚಾ ಬದಾಮ್​ ಖ್ಯಾತಿಯ ಅಂಜಲಿ ರಾಮಾಯಣದಲ್ಲಿ ಸೀತಾಮಾತೆಯಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹರದಿದ್ದು, ಸಿನಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ಯಾರೀಕೆ?
 

Anjali Arora famous Kaccha Badam and making  vulgar dance play the role of Maa Seeta suc
Author
First Published May 7, 2024, 3:35 PM IST

ರಾಮಾಯಣವನ್ನು ಆಧರಿಸಿ ಅದೆಷ್ಟು ಸೀರಿಯಲ್​ಗಳು, ಚಿತ್ರಗಳು ಬಂದು ಹೋದವೋ ಗೊತ್ತಿಲ್ಲ. ಇದೀಗ ರಣಬೀರ್​ ಕಪೂರ್​ ಅಭಿನಯದ ರಾಮಾಯಣವೂ ಬರುವುದರಲ್ಲಿದೆ. ಇದರಲ್ಲಿ ಸಾಯಿ ಪಲ್ಲವಿ ಸೀತೆಯಾಗಿ, ಕನ್ನಡದ ಯಶ್​ ರಾವಣನಾಗಿ ಕಾಣಿಸಿಕೊಳ್ಳಲಿದ್ದು, ಇದರ ಬಿಡುಗಡೆಯಾಗಿ ಸಿನಿ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಇದೀಗ ಮತ್ತೊಂದು ರಾಮಾಯಣ ತೆರೆ ಮೇಲೆ ಬರಲು ರೆಡಿಯಾಗಿದ್ದು, ಇದರಲ್ಲಿನ ಸೀತಾಮಾತೆಯ ನಟಿ ಫಿಕ್ಸ್​ ಆಗಿದ್ದಾರೆ. ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ಅನಿಮಲ್​ ಚಿತ್ರದಲ್ಲಿ ಸಂಪೂರ್ಣ ಬೆತ್ತಲಾಗಿ ನಟಿಸುವ ಮೂಲಕ ಭಾರಿ ಜನಪ್ರಿಯತೆ ಗಳಿಸಿರುವ ರಣಬೀರ್​ ಕಪೂರ್​ ಅವರನ್ನು ರಾಮಾಯಣದಲ್ಲಿ ರಾಮನಾಗಿ ಆಯ್ಕೆ ಮಾಡಿದಾಗಲೇ ಭಾರಿ ವಿರೋಧವಾಗಿತ್ತು. ಅದೀಗ ತಣ್ಣಗಾಗುತ್ತಿದ್ದಂತೆಯೇ ಸೀತಾಮಾತೆಯಾಗಿ ಅಂಜಲಿ ಅರೋರಾ ಅವರನ್ನು ಆಯ್ಕೆ ಮಾಡಿದೆ. 

ಅಷ್ಟಕ್ಕೂ, ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಹಲ್​ಚಲ್​ ಸೃಷ್ಟಿಸಿದವರು ಅಂಜಲಿ ಅರೋರಾ. ಎರಡು ವರ್ಷಗಳ ಹಿಂದೆ ಪ್ರತಿಯೊಬ್ಬ ರೀಲ್ಸ್​ ಮಾಡುವವರಿಗೆ ಇಷ್ಟವಾಗಿದ್ದ ಕಚ್ಚಾ ಬದಾಮ್​ ಹಾಡಿನಿಂದ ಫೇಮಸ್​ ಆಗಿದ್ದ ಅಂಜಲಿ ಬರುಬರುತ್ತಾ ಅರೆ ಬೆತ್ತಲಾಗಿ ಕೊನೆಗೆ ಟಾಪ್​ಲೇಸ್​ ಆಗಿ ಕಾಣಿಸಿಕೊಂಡು ಪಡ್ಡೆ ಹುಡುಗರ ಹುಚ್ಚೆಬ್ಬಿಸಿದವರು. ಬೀದಿ ಬದಿಯಲ್ಲಿ ಕಡಲೆಕಾಯಿ ಮಾರುವ ಪಶ್ಚಿಮ ಬಂಗಾಳದ ಭುಬನ್ ಭಡ್ಯಾಕರ್ ಅವರ ಕಚ್ಚಾ ಬದಾಮ್​ ಹಾಡಿನಲ್ಲಿ ಈಕೆ ಡೀಸೆಂಟ್​ ಆಗಿಯೇ ಡ್ರೆಸ್​ ಮಾಡಿಕೊಂಡಿದ್ದರು. ಆದರೆ ಇದರಿಂದ ಅವರು ಸಕತ್​ ಫೇಮಸ್​ ಆದರು. ಜೊತೆಗೆ ರೀಲ್ಸ್​ ಹುಚ್ಚು ಏರುತ್ತಲೇ ಇನ್ನಷ್ಟು ಜನಪ್ರಿಯತೆ ಗಳಿಸಲು ಬೆತ್ತಲಾಗುತ್ತಾ ಬಂದರು. ರಾತ್ರೋರಾತ್ರಿ ಫೇಮಸ್​ ಆದರು,

ರಾಹುಲ್​ ಗಾಂಧಿ ವಿಡಿಯೋ ವೈರಲ್​: ಥೂ ನಾಚಿಕೆ ಆಗ್ಬೇಕು, ದೇಶ ಬಿಟ್ಟು ಹೋಗಿ ಎಂದ ನಟಿ ಮೇಘಾ!

ಅದೆಷ್ಟರ ಮಟ್ಟಿಗೆ ಎಂದರೆ,  ಸೋಷಿಯಲ್​ ಮೀಡಿಯಾ ಇನ್‌ಫ್ಲೂಯೆನ್ಸರ್‌ ಆದರು. ಬೆತ್ತಲಾಗುತ್ತಲೇ ಟ್ರೋಲ್​ ಕೂಡ ಆದರು. ಇಂಥವರನ್ನೇ ಹುಡುಕುವ ಬಿಗ್​ಬಾಸ್​ಗೂ ಆಯ್ಕೆ ಆದರು. ಅದೆಷ್ಟರ ಮಟ್ಟಿಗೆ ಜನಪ್ರಿಯತೆ ಗಳಿಸಿದರು ಎಂದರೆ 2022ರಲ್ಲಿ ಗೂಗಲ್ ನಲ್ಲಿ ಅತೀ ಹೆಚ್ಚು ಬಾರಿ ಹುಡುಕಲಾದ ಸೆಲೆಬ್ರಿಟಿಗಳ ಸ್ಥಾನದಲ್ಲಿ ಇವರೂ  ಕಾಣಿಸಿಕೊಂಡರು. ಲಾಕ್ ಅಪ್ ರಿಯಾಲಿಟಿ ಶೋನಲ್ಲಿ ಕೂಡ ಸ್ಥಾನ ಗಿಟ್ಟಿಸಿಕೊಂಡರು. ಏಕಾಏಕಿ ನಾಲ್ಕು ಕೋಟಿ ಮನೆಯ ಒಡತಿಯಾದರು ಈ 24 ವರ್ಷದ ಬೆಡಗಿ.  

ಇದೀಗ ರಾಮಾಯಣದಲ್ಲಿ ಸೀತಾಮಾತೆಯಾಗಿ ಆಯ್ಕೆಯಾಗಿದ್ದಾರೆ. ರಣಬೀರ್​, ಯಶ್​ ಅವರ ರಾಮಾಯಣ ಶೂಟಿಂಗ್​ ಶುರುವಾಗಿದ್ದರೆ, ಅಂಜಲಿ ಸೀತೆಯಾಗಿ ನಟಿಸುತ್ತಿರೋ ಸಿನಿಮಾ ಇನ್ನೂ  ಶುರುವಾಗಬೇಕಿದೆ.  ಅಭಿಷೇಕ್ ಸಿಂಗ್ ನಿರ್ದೇಶನದ ಚಿತ್ರಕ್ಕೆ ಪ್ರಕಾಶ್ ಮತ್ತು ಸಂಜಯ್ ನಿರ್ಮಾಪಕರಾಗಿದ್ದಾರೆ. ಇದರಲ್ಲಿ ರಾಮ, ರಾವಣ ಎಲ್ಲಾ ಇನ್ನೂ ಆಯ್ಕೆಯಾಗಿಲ್ಲ. ಆದರೆ ಬೆತ್ತಲರಾಣಿ ಅಂಜಲಿ ಸೀತೆಯಾಗಿ ಆಯ್ಕೆಯಾಗಿದ್ದಾರೆ ಎಂದು ಸುದ್ದಿಯಾಗಿದ್ದು ಜನರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.  ಈ ಸಿನಿಮಾ ಆರಂಭವಾಗುವುದು ಯಾವತ್ತು, ರಾಮನ ಪಾತ್ರಕ್ಕೆ ಬಣ್ಣ ಹಚ್ಚುವವರು ಯಾರು ಎಂಬ ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಇನ್ನೂ ಸಿಗಬೇಕಿದೆ.

ಸಂಪೂರ್ಣ ಬೆತ್ತಲಾದ ಸಮಂತಾ ಫೋಟೋ ವೈರಲ್​! ಟ್ರೋಲಿಗರಿಗೆ ನಟಿ ಹೇಳಿದ್ದೇನು?
 

Latest Videos
Follow Us:
Download App:
  • android
  • ios