ಮಹಾಮಾರಿ ಕೊರೋನಾ ವೈರಸ್‌ ಸಹ ಚೀನಿಯರ ಪ್ರಾಡೆಕ್ಟ್‌ ಆಗಿದ್ದು, ಇದು  Ever lasting ಎಫೆಕ್ಟ್‌ ನೀಡುತ್ತಿದೆ ಎಂದೆನಿಸುತ್ತದೆ. ಏಕೀ ಮಾತು? ಎಲ್ಲಾ ಸರಿ ಹೋಗ್ತಿದ್ಯಲಾ? ಎಂದು ನಿಮ್ಮಲ್ಲಿ ಪ್ರಶ್ನೆ ಮೂಡ ಬಹುದು. ಆದರೆ ಇದು ಹಾಗಲ್ಲ. ಇದರಿಂದ ಆರ್ಥಿಕವಾಗಿ ಅದೆಷ್ಟೋ ವಾಹಿನಿಗಳು, ಚಿತ್ರಮಂದಿರಗಳು ಹಾಗೂ ಪ್ರೊಡಕ್ಷನ್‌ ಹೌಸ್‌ಗಳು ಪೆಟ್ಟು ತಿನ್ನುತ್ತಿವೆ.

ಕಲರ್ಸ್‌ ಸೂಪರ್‌:
24 ಜುಲೈ 2016ರಲ್ಲಿ ಪ್ರಾರಂಭಗೊಂಡ ಕಲರ್ಸ್‌ ಸೂಪರ್‌ ಸತತ ಎರಡು ವರ್ಷಗಳಿಂದ ಕಿರುತೆರೆ ವೀಕ್ಷಕರನ್ನು ಮನೋರಂಜಿಸುತ್ತಲೇ ಇದೆ. ಕೆಲವೊಂದು ಇಂಟರ್ನಲ್‌ ಸೋರ್ಸ್‌ ಪ್ರಕಾರ ವಾಹಿನಿ ಬಂದ್‌ ಆದರೂ ಕೆಲವೊಂದು ತಿಂಗಳಲ್ಲಿಯೇ ಹೊಸ ತನದೊಂದಿಗೆ ಮತ್ತೊಂದು ಚಾನೆಲ್‌ ಆರಂಭ ಆಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.

ಲಾಕ್‌ಡೌನ್‌ನಲ್ಲಿ ದಾಂಪತ್ಯದ ಹಾದಿ ತುಳಿದ ಮಗಳು ಜಾನಕಿ ಸೀರಿಯಲ್‌ ನಟಿ!

ಕಲರ್ಸ್‌ ಸೂಪರ್‌ ಬಂದ್ ಆಗಲು ಪ್ರಮುಖ ಕಾರಣವೇ ಕೊರೋನಾ ವೈರಸ್‌ ಎಂದು ಹೇಳಲಾಗುತ್ತಿದೆ. ಚಿತ್ರೀಕರಣ ಮಾಡಲಾಗದೆ ಧಾರಾವಾಹಿಗಳು ಮರು ಪ್ರಸಾರ ಮಾಡಲಾಗುತ್ತಿದೆ, ಜನರು ಹೊಸತನವನ್ನು ಬಯಸುತ್ತಿದ್ದಾರೆ. ಇದರಿಂದ ವೀಕ್ಷಣೆಯೂ ಕಡಿಮೆ ಆಗಿದೆಯಂತೆ.

ಸೀರಿಲ್‌ ಸಂತೆ: 
ಕಲರ್ಸ್‌ ಸೂಪರ್‌ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮ ದಿನೆ ದಿನೇ ಜನರ ಗಮನ ಸೆಳೆಯುತ್ತಿತ್ತು. ಆದರೆ ಮರು ಪ್ರಸಾರ ಆಗುತ್ತಿರುವುದು ಕೊಂಚ ಬೋರಿಂಗ್ ಆಗಿದೆ ಎನ್ನುತ್ತಾರೆ ವೀಕ್ಷಕರು. ಲಾಕ್‌ಡೌನ್‌ನಿಂದಾಗಿ ಈ ಹಿಂದೆ ಸಿಕ್ಕಾಪಟ್ಟೆ ಪಾಪ್ಯುಲರ್ ಆದ ಧಾರಾವಾಹಿ ಅಶ್ವಿನಿ ನಕ್ಷತ್ರ, ರಾಧಾ ರಮಣ, ಸಿಲ್ಲಿ ಲಲ್ಲಿ ಹಾಗೂ ಈಗ ಎಲ್ಲರ ಗಮನ ಸೆಳೆಯುತ್ತಿರುವ ಕನ್ನಡ ಕೋಗಿಲೆ ಹಾಗೂ ಮಜಾಭಾರತ ಪ್ರಸಾರ ಮಾಡಲಾಗುತ್ತಿದೆ.

ಬಿಗ್ ಬಾಸ್‌ಯಿಂದ ಔಟ್‌ ಆದ್ಮೇಲೆ ಚೈತ್ರಾ ಕೊಟ್ಟೂರು 'ಶಾಂತಂ ಪಾಪಂ' ಅಂದಿದ್ಯಾಕೆ?

ಹಾಗಾದರೆ ಮಗಳು ಜಾನಕಿ?
ಟಿ ಎಸ್‌ ಸೀತಾರಾಮ್‌ ಅವರು ಕಥೆ- ಸಂಕಲ್ಪನೆಯಲ್ಲಿ ಮೂಡಿ ಬರುತ್ತಿರುವ ಧಾರಾವಾಹಿ ಮಗಳ ಜಾನಕಿ ತುಂಬಾನೇ ಟ್ವಿಸ್ಟ್‌ಗಳಿಂದ ಜನರ ಗಮನ ಸೆಳೆಯುವ ಹಂತದಲ್ಲಿತ್ತು. ಆದರೀಗ ಲಾಕ್‌ಡೌನ್‌ನಿಂದ ಅದನ್ನೂ ಮರು ಪ್ರಸಾರ ಮಾಡಲಾಗುತ್ತಿದೆ.  ಜನಪ್ರಿಯತೆ ಪಡೆದುಕೊಂಡಿರುವ ಧಾರಾವಾಹಿ ಮಾಯಾವಾದರೆ ಏನ್‌ ಮಾಡುವುದು? 

'ಪಾಪ ಪಾಂಡು'ವಿನ ಶ್ರೀಮತಿ ಇದ್ದಕ್ಕಿದ್ದಂತೆ ನಾಪತ್ತೆ!

ಕೆಲವೊಂದು ಮೂಲಗಳ ಪ್ರಕಾರ ಮಾಂಗಲ್ಯಂ ತಂತುನಾನೇನ, ಭೂಮಿ ತಾಯಾಣೆ ಹಾಗೂ ಸಿಲ್ಲಿ ಲಲ್ಲಿ ಧಾರಾವಾಹಿಗಳು ಮಾತ್ರ ನಿಲ್ಲಿಲಿವೆ ಎನ್ನಲಾಗಿದ್ದು, ಇನ್ನುಳಿದ ಪಟ್ಟಿ ಬಿಡುಗಡೆ ಮಾಡಿಲ್ಲ.