Asianet Suvarna News Asianet Suvarna News

BBK9; 31 ವರ್ಷಗಳಲ್ಲೇ ಮೊದಲ ಬಾರಿಗೆ ತಂದೆಯನ್ನು ಹಗ್ ಮಾಡಿದ ರೂಪೇಶ್ ಶೆಟ್ಟಿ ಭಾವುಕ

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ತಂದೆಯನ್ನು ಹಗ್ ಮಾಡಿ ಭಾವುಕರಾದ ರೂಪೇಶ್ ಶೆಟ್ಟಿ. ಮೊದಲ ಬಾರಿಗೆ ತಂದೆಯನ್ನು ಹಗ್ ಮಾಡಿರುವುದು ಎಂದು ಹೇಳಿದ್ದಾರೆ. 

roopesh shetty hugs his father for the first time in life in Bigg Boss Kannada 9 sgk
Author
First Published Dec 2, 2022, 5:05 PM IST

ಬಿಗ್ ಬಾಸ್ ಸೀಸನ್ 9 ಈ ವಾರ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು. ಮನೆಯಿಂದ ಬಂದ ಸಂಬಂಧಿಕರನ್ನು ನೋಡಿ ಸ್ಪರ್ಧಿಗಳು ಭಾವುಕರಾದರು, ಸಂತಸ ಪಟ್ಟರು, ಮನೆಯವರ ಜೊತೆ ಹಾಡಿ ಕುಣಿದರು. ಅಂದಹಾಗೆ ಮನೆಯಿಂದ 9ನೇ ವಾರ ವಿನೋದ್ ಗೊಬ್ಬರಗಾಲ ಎಲಿಮಿನೇಟ್ ಆಗಿ ಹೊರ ಹೋದರು. 10ನೇ ವಾರ ಬಿಗ್ ಮನೆಗೆ ಸ್ಪರ್ಧಿಗಳ ಮನೆಯವರು ಕೂಡ ಎಂಟ್ರಿ ಕೊಟ್ಟಿರುವುದು ವಿಶೇಷವಾಗಿತ್ತು. ಮನೆಯವರ ಸರ್ಪ್ರೈಸ್ ಎಂಟ್ರಿಯಿಂದ ಪ್ರೇಕ್ಷಕರು ಸಂತಸ ಪಟ್ಟಿದ್ದಾರೆ. ಅಂದಹಾಗೆ ನಿನ್ನೆ (ಡಿಸೆಂಬರ್ 1) ಬಿಗ್ ಮನೆಗೆ ರೂಪೇಶ್ ರಾಜಣ್ಣ ತಂದೆ ಎಂಟ್ರಿಕೊಟ್ಟರು. ಅಪ್ಪ ಬರುತ್ತಿದ್ದಂತೆ ಫುಲ್ ಖುಷ್ ಆದ ರೂಪೇಶ್ ಹಗ್ ಮಾಡಿ ಸಂತಸ ಹಂಚಿಕೊಂಡರು. ಅಂದಹಾಗೆ ರೂಪೇಶ್ ಶೆಟ್ಟಿ ಬಿಗ್ ಬಾಸ್ ಒಟಿಟಿ ಬಳಿಕ ನೇರವಾಗಿ ಟಿವಿ ಬಿಗ್ ಬಾಸ್ 9ಗೆ ಕಾಲಿಟ್ಟಿದ್ದರು. ಹಾಗಾಗಿ ಕುಟುಂಬದವರ ಜೊತೆ ರೂಪೇಶ್ ಅವರಿಗೆ ಸಮಯ ಕಳೆಯಲು ಸಾಧ್ಯವಾಗಿರಲಿಲ್ಲ. ಇದೀಗ 100 ದಿನಗಳ ಬಳಿಕ ತಂದೆಯನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. 

ತನ್ನ ತಂದೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವುದನ್ನು ನೋಡಿ ಉತ್ಸುಕರಾದ ರೂಪೇಶ್ ಶೆಟ್ಟಿ ತನ್ನ ತಂದೆಯ ಬಳಿಗೆ ಓಡಿ ಅವರನ್ನು ಸ್ವಾಗತಿಸಿದರು. ರೂಪೇಶ್ ತನ್ನ ಸಹ ಸ್ಪರ್ಧಿಗಳಿಗೆ ತನ್ನ ತಂದೆಯನ್ನು ಪರಿಚಯಿಸಿದನು. ಬಿಗ್ ಬಾಸ್ ಮನೆಯೊಳಗೆ ತನ್ನ ತಂದೆಯೊಂದಿಗೆ ಸಾಕಷ್ಟು ಸಮಯವನ್ನು ಕಳೆದರು. ಬಳಿಕ ರೂಪೇಶ್ ಶೆಟ್ಟಿ  ತಂದೆಯನ್ನು ಅಪ್ಪಿಕೊಂಡರು. ಪ್ರೀತಿಯ ಅಪ್ಪನಿಗೆ ನಮಸ್ಕರಿಸಿ ಮತ್ತು ಅವರ ಆಶೀರ್ವಾದ ಪಡೆದು ಬೀಳ್ಕೊಟ್ಟರು.  

BBK9 ಕತ್ತೆತ್ತದೆ ಆಮೆ ತರ ಸ್ವಿಮ್ಮಿಂಗ್ ಮಾಡ್ತೀನಿ; ಆರ್ಯವರ್ಧನ್‌ ಹಾರ್ಟ್‌ ಚೆನ್ನಾಗಿರಲು ಇದೇ ಕಾರಣ

ತನ್ನ ತಂದೆಗೆ ಭಾವನಾತ್ಮಕ ವಿದಾಯ ಹೇಳಿದ ರೂಪೇಶ್ ಶೆಟ್ಟಿ ತನ್ನ ಜೀವನದಲ್ಲಿ ಮೊದಲ ಬಾರಿಗೆ  ತಂದೆಯನ್ನು ತಬ್ಬಿಕೊಂಡಿರುವುದು ಎಂದು ಹೇಳಿದರು. ರೂಪೇಶ್ ಶೆಟ್ಟಿ ತಂದೆ ಮಗನ ವರ್ತನೆ ಬಗ್ಗೆ ಒಂದಿಷ್ಟು ಕಿವಿ ಮಾತು ಹೇಳಿದರು. ಕಳೆದ ಎರಡು ವಾರಗಳಿಂದ ತುಂಬಾ ಚೆನ್ನಾಗಿಯೇ ಆಡುತ್ತಿದ್ದೀಯಾ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಾನ್ಯಾ ಅಯ್ಯರ್ ಬಗ್ಗೆ ಹೇಳಿದರು. ಅಲ್ಲದೇ ಸಾನ್ಯಾ ಹೆಸರನ್ನು ತೆಲೆಗೆ ಕಟ್ಟಿಕೊಂಡು ಓಡಾಡುತ್ತಿದ್ದ ಬಗ್ಗೆಯೂ ರೂಪೇಶ್‌ ಅವರ ತಂದೆ ಪ್ರಸ್ತಾಪಿಸಿದರು. 

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು 

ಬಿಗ್‌ಬಾಸ್ 9 ಸೆಪ್ಟೆಂಬರ್ 24ರಿಂದ ಆರಂಭವಾಗಿದೆ. ಈ ಬಾರಿಯ ಬಿಗ್ ಬಾಸ್‌ನಲ್ಲಿ ಅರುಣ್ ಸಾಗರ್, ಅಶ್ವಿನಿ ನಕ್ಷತ್ರ ಧರಾವಾಹಿ ಖ್ಯಾತಿಯ ನಟಿ ಮಯೂರಿ, ದೀಪಿಕಾ ದಾಸ್, ನವಾಜ್,  ದಿವ್ಯಾ ಉರುಡುಗ, ದರ್ಶ್ ಚಂದ್ರಪ್ಪ, ಪ್ರಶಾಂತ್ ಸಂಬರಗಿ, ಅಮೂಲ್ಯ ಗೌಡ, ಸನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ವಿನೋದ್ ಗೊಬ್ರಗಾಲ (ಕಾಮಿಡಿ ಕಿಲಾಡಿಗಳು), ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನೇಹಾ ಗೌಡ,  ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎನ್ನುವ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಐಶ್ವರ್ಯಾ(ಬೈಕ್ ರೈಡರ್), ರೂಪೇಶ್ ರಾಜಣ್ಣ, ಮಂಗಳ ಗೌರಿಯ ಕಾವ್ಯಶ್ರೀ, ನಿರೂಪಕಿ ಅನುಪಮಾ ಗೌಡ ಸ್ಪರ್ಧಿಗಳಾಗಿ ಭಾಗಿಯಾಗಿದ್ದರು.

BBK9 ಹೆಂಡ್ತಿ ಕಾಲಿಗೆ ಬಿದ್ದಿದ್ದೆ ತಪ್ಪಾಯ್ತಾ? ರೂಪೇಶ್ ರಾಜಣ್ಣ ಹಿಗ್ಗಾಮುಗ್ಗಾ ಟ್ರೋಲ್

ಮನೆಯಿಂದ ಹೊರಹೋಗಿರುವ ಸ್ಪರ್ಧಿಗಳು

ಬಿಗ್ ಬಾಸ್ ಸೀಸನ್ 9ರ ಮೊದಲ ವಾರ ಐಶ್ವರ್ಯಾ ಪಿಸೆ ಮನೆಯಿಂದ ಹೊರಹೋಗಿದ್ದರು. 2ನೇ ವಾರ ನವಾಜ್ ಎಲಿಮಿನೇಟ್ ಆಗಿದ್ದಾರೆ. 3ನೇ ವಾರ ದರ್ಶ್ ಚಂದ್ರಪ್ಪ ಮನೆಯಿಂದ ಹೊರ ಹೋಗಿದ್ದಾರೆ. 4ನೇ ವಾರ ಮಯೂರಿ ಹಾಗೂ 5ನೇ ವಾರ ನೇಹಾ ಗೌಡ, 6ನೇ ವಾರ ಸಾನ್ಯಾ ಅಯ್ಯರ್ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. 7ನೇ ವಾರ ಎಲಿಮಿನೇಷನ್ ಇರದ ಕಾರಣ ಯಾರ ಮನೆಯಿಂದ ಹೊರಹೋಗಿಲ್ಲ. 8ನೇ ವಾರ ದೀಪಿಕಾ ದಾಸ್ ಮನೆಯಿಂದ ಹೊರಹೋಗಿ ವೈಲ್ಡ್ ಕಾರ್ಡ್ ಮೂಲಕ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. 9ನೇ ವಾರ ವಿನೋದ್ ಗೊಬ್ಬರಗಾಲ ಔಟ್ ಆಗಿದ್ದಾರೆ.  ಈ ವಾರ ಯಾರು ಹೋಗ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.  ಸದ್ಯ ಬಿಗ್ ಬಾಸ್ ಮನೆಯಲ್ಲಿ 11 ಮಂದಿ ಇದ್ದಾರೆ.


 

Follow Us:
Download App:
  • android
  • ios