Asianet Suvarna News Asianet Suvarna News

BBK9 ಹೆಂಡ್ತಿ ಕಾಲಿಗೆ ಬಿದ್ದಿದ್ದೆ ತಪ್ಪಾಯ್ತಾ? ರೂಪೇಶ್ ರಾಜಣ್ಣ ಹಿಗ್ಗಾಮುಗ್ಗಾ ಟ್ರೋಲ್

 ತಡರಾತ್ರಿ ಬಿಬಿ ಮನೆಗೆ ಎಂಟ್ರಿ ಕೊಟ್ಟ ಪತ್ನಿ ನೋಡಿ ರೂಪೇಶ್ ರಾಜಣ್ಣ ಶಾಕ್. ಕಾಲಿಗೆ ನಮಸ್ಕರಿಸಿದ  ವಿಡಿಯೋ ವೈರಲ್.....

Colors Kannada Bigg boss 9 Roopesh Rajanna trolled for taking blessings from wife vcs
Author
First Published Dec 2, 2022, 1:12 PM IST

ಕಲರ್ಸ್‌ ಕನ್ನಡ ಬಿಗ್ ಬಾಸ್ ಸೀಸನ್ 9 ದಿನದಿಂದ ದಿನಕ್ಕೆ ವಿಭಿನ್ನವಾಗಿ ಮೂಡಿ ಬರುತ್ತಿದೆ. ಈ ವಾರದ ಕ್ಯಾಪ್ಟನ್ ಆಗಿ ರಾಕೇಶ್ ಅಡಿಗ ಆಯ್ಕೆ ಆಗಿದ್ದಾರೆ. ಮನೆಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ ಕೂಡ. ಸ್ಪರ್ಧಿಗಳು ತಮ್ಮ ಮನೆಯವರನ್ನು ಈ ವಾರ ಭೇಟಿ ಮಾಡಲು ಬಿಗ್ ಬಾಸ್ ಅವಕಾಶ ಮಾಡಿಕೊಟ್ಟಿದ್ದರು ಆದರೆ ಭೇಟಿ ಮಾಡಲು ಸಮಯ ನಿಗಧಿ ಮಾಡಲಾಗಿತ್ತು ಜೊತೆಗೆ ಟಾಸ್ಕ್‌ ನೀಡಿದ್ದರು. ಮನೆ ಸದಸ್ಯರು ಟಾಸ್ಕ್‌ ಗೆದ್ದರೆ ಮಾತ್ರವಷ್ಟೇ  ಲೀವಿಂಗ್ ಏರಿಯಾದಲ್ಲಿರುವ ಬ್ಯಾಟರಿ ಚಾರ್ಚ್‌ ಅಗುತ್ತದೆ, ಬ್ಯಾಟರಿಗೆ ತಕ್ಕಂತೆ ತಮಗೆ ಬೇಕಾಗಿರುವ ಸಮಯವನ್ನು ಆಯ್ಕೆ ಮಾಡಿಕೊಳ್ಳಬಹುದು. 10% ಅಂದ್ರೆ 3 ನಿಮಿಷ 20 % ಅಂದ್ರೆ 10 ನಿಮಿಷ...ಹೀಗೆ ಸಮಯವಿತ್ತು...

ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ 40% ಆಯ್ಕೆ ಮಾಡಿ 20 ನಿಮಿಷ ಸಮಯ ಪಡೆದುಕೊಂಡರು. ಪತ್ನಿ ಬರ್ಲಿ ಬರ್ಲಿ ಅಂತ ದಿನವಿಡೀ ಕಾಯುತ್ತಿದ್ದರು ಯಾರೂ ಮನೆಯಿಂದ ಬರದ ಕಾರಣ ಹೋಗಿ ನಿದ್ರೆ ಮಾಡಿದ್ದರು. ರಾತ್ರಿ 1 ಗಂಟೆ ಸುಮಾರಿಗೆ ಮುಖ್ಯ ದ್ವಾರದಿಂದ ರೂಪೇಶ್ ರಾಜಣ್ಣ ಪತ್ನಿ ... ಎಂಟ್ರಿ ಕೊಡುತ್ತಾರೆ.  ಶ್ರೀಲಕ್ಷ್ಮಿ ಅವರನ್ನು  ಸ್ವಾಗತಿಸಿಕೊಂಡ ಅಮೂಲ್ಯ ಮತ್ತು ರಾಕೇಶ್‌ ಮಾಸ್ಟರ್ ಪ್ಲ್ಯಾನ್ ಕ್ರಿಯೇಟ್ ಮಾಡುತ್ತಾರೆ.  ಕತ್ತಲೆಯ ಜಾಗದಲ್ಲಿ ಶ್ರೀಲಕ್ಷ್ಮಿ ಅವರನ್ನು ಕೂರಿಸಿ ರಾಜಣ್ಣ ಅವರಿಗೆ ಬಾತ್‌ರೂಮ್‌ ಕ್ಲಿನ್ ಮಾಡಿಲ್ಲ ದೊಡ್ಡ ಜಗಳ ನಡೆಯುತ್ತಿದೆ ಬನ್ನಿ ಎಂದು ಕರೆದುಕೊಂಡು ಹೋಗುತ್ತಾರೆ. ಆಗ ಅಲ್ಲಿ ಕುಳಿತಿದ್ದ ಪತ್ನಿಯನ್ನು ನೋಡಿ ರೂಪೇಶ್ ರಾಜಣ್ಣ ಶಾಕ್ ಆಗಿ ಇಡೀ ಮನೆ ಒಂದು ರೌಂಡ್ ಸುತ್ತುತ್ತಾರೆ ಅ ನಂತರ ಪತ್ನಿ ಕಾಲು ಮುಟ್ಟಿ ನಮಸ್ಕಾರ ಮಾಡುತ್ತಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. 

Colors Kannada Bigg boss 9 Roopesh Rajanna trolled for taking blessings from wife vcs

'ಪ್ರೀತಿಯಿಂದ ತಮ್ಮ ಪತ್ನಿಗೆ ಏನ್ ಬೇಕಿದ್ದರೂ ಮಾಡಿಕೊಳ್ಳುತ್ತಾರೆ ನಿಮಗ್ಯಾಕೆ ಇದೆಲ್ಲಾ ಒಂದು ಒಬ್ಬರು ಕಾಮೆಂಟ್ ಮಾಡಿದ್ದರೆ ಮತ್ತೊಬ್ಬರು ಇದು ನಿಜವಾದ ಪ್ರೀತಿ ಮತ್ತು ಗೌರವ ಕೊಡುವ ಶೈಲಿ' ಎಂದಿದ್ದಾರೆ. ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿರುವುದು ಒಂದೇ ಕಾರಣಕ್ಕೆ ಅದುವೇ ಓವರ್ ಆಕ್ಟಿಂಗ್‌, 'ಅಲ್ಲ ರಾಜಣ್ಣ ಹೆಂಡ್ತಿ ಕಾಲಿಗೆ ನಮಸ್ಕಾರ ಮಾಡೋಷ್ಟು ಲವ್ ಇದ್ರೆ ದೀಪಿಕಾ ದಾಸ್ ಹಿಂದೆ ಯಾಕೆ ಹೋಗ್ತೀರಾ, ರಾಜಣ್ಣ ಇದೆಲ್ಲಾ ಓವರ್ ಆಯ್ತು ಹೆಂಡ್ತಿ ಕಾಲಿಗೆ ಬೀಳುವುದು ಇದರಿಂದ ಬೇರೆ ಅವರು ಡಿಮ್ಯಾಂಡ್ ಮಾಡುತ್ತಾರೆ' ಎಂದಿದ್ದಾರೆ.

BBK9: ಪೊಲೀಸ್ ಕಾನ್ಸ್ಟೇಬಲ್ ಜೇಬಿನಿಂದ 100 ರೂಪಾಯಿ ಕದ್ದ ರೂಪೇಶ್ ರಾಜಣ್ಣ; ಬಾಸುಂಡೆ ಬಿದ್ದ ಕಥೆ ಇದು...

ಶ್ರೀಲಕ್ಷ್ಮಿ ಮಾತು:

'ನೀವು ಆಟ ಚೆನ್ನಾಗಿ ಆಡಬೇಕು ಪ್ರತಿಯೊಬ್ಬ ಕನ್ನಡಿಗನೂ ನಿಮ್ಮನ್ನು ಇಷ್ಟ ಪಡ್ತಿದ್ದಾರೆ. ನಿಮ್ಮನ್ನು ನೋಡಿದ ಖುಷಿಯಲ್ಲಿ ನನಗೆ ಮಾತು ಬರುತ್ತಿಲ್ಲ. ಅಮ್ಮ ಭಾವ ನನ್ನ ತಾಯಿ ಪ್ರತಿಯೊಬ್ಬರು ಚೆನ್ನಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನೀವು ತುಂಬಾನೇ ಕೂಲ್ ಆಗಿರಬೇಕು ತುಂಬಾ ತಾಳ್ಮೆಯಿಂದ ಶಾಂತಿಯಿಂದ ಇರಬೇಕು...ಎಲ್ಲರ ಜೊತೆ ಚೆನ್ನಾಗಿ ಆಟ ಅಡುತ್ತಿದ್ದೀರಾ ..ನಾಳೆ ರೂಪೇಶ್ ಏನ್ ಮಾಡ್ತಾರೆ ಹೇಗೆಲ್ಲಾ ಮಾಡ್ತಾರೆ ಅನ್ನೋ ಯೋಚನೆ ಬರುತ್ತಿದೆ. ಮನೆಯಲ್ಲಿ ಯಾರೂ ನಿಮ್ಮನ್ನು ವೈಯಕ್ತಿಕವಾಗಿ ದ್ವೇಷ ಮಾಡುತ್ತಿಲ್ಲ ನೀವು ಒಳ್ಳೆಯವರು ಅಂತಾನೇ ಎಲ್ಲರೂ ಮಾತನಾಡುತ್ತಾರೆ. ಯಾರು ಏನೇ ಮಾತನಾಡಿದ್ದರು ಎಷ್ಟು ಬೇಕು ಅಷ್ಟು ತೆಗೆದುಕೊಳ್ಳಿ ಎಷ್ಟು ಬೇಕು ಅಷ್ಟು ಬಿಡಿ ಆಮೇಲೆ ಪ್ರ್ಯಾಂಕ್‌ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳಬೇಡಿ ನೀವು ಯಾವಾಗ ಪ್ರ್ಯಾಂಕ್‌ ಎಲ್ಲಾ ನಂಬುವುದಕ್ಕೆ ಶುರು ಮಾಡಿದ್ದು? ಟಾಸ್ಕ್‌ ಮಾಡುವ ಮುಂಚೆ ಓದುತ್ತಾರೆ ಅಲ್ವಾ ಆಗ ಸಮಯ ತೆಗೆದುಕೊಂಡು ಅರ್ಥ ಮಾಡಿಕೊಳ್ಳಿ. ನೀವು ಇವತ್ತು ಮಾಡಿದ ಕೆಲಸದಿಂದ ಇಡೀ ಮನೆಗೆ ಲಕ್ಷ್ಯೂರಿ ಬಜೆಟ್ ಹೋಗಿದೆ ನಿಮಗೆ ಮಾತ್ರವಲ್ಲ ಇಡೀ ಮನೆಗೆ ಬೇಸರ ಆಗಿದೆ. ಪ್ರತಿಯೊಬ್ಬರ ಜೊತೆ ಖುಷಿಯಾಗಿರಬೇಕು ನೀವು. ಗೇಮ್ ಆಡುವಾಗ ಓವರ್ ಆಗಿ ಎಕ್ಸೈಟ್ ಆಗಬೇಡಿ ನೀವು ..ನಿಮ್ಮ ಟೋನ್ ಮ್ಯಾಟರ್ ಆಗುತ್ತದೆ. ಸುದೀಪ್ ಸರ್ ಎಷ್ಟು ಸಲ ಹೇಳುತ್ತಾರೆ ಟೋನ್ ನೋಡಿಕೊಳ್ಳಿ ಅಂತ. ನೀವು ಪ್ರಾಮಾಣಿಕವಾಗಿದ್ದೀರಿ ಹಾಗೇ ನಿಮ್ಮ ಮೂರವ ಗೆಳೆತನ ಚೆನ್ನಾಗಿ ಕಾಪಾಡಿಕೊಳ್ಳಿ ಜನರಿಗೆ ಇಷ್ಟ ಆಗುತ್ತಿದೆ...ಅಪ್ಪ ಚಿಕ್ಕಪ್ಪ- ಮಗ ಆಗಿದ್ದೀರಿ. ಪ್ರಶಾಂತ್ ಸರ್ ಜೊತೆ ಚೆನ್ನಾಗಿರಿ ಎಷ್ಟು ತೆಗೆದುಕೊಳ್ಳಬೇಕು ಅಷ್ಟು ತೆಗೆದುಕೊಳ್ಳಿ. ನೀವು ದೀಪಿಕಾ ದಾಸ್ ಜೊತೆಗಿದ್ದರೆ ನಾನು ಯಾಕೆ ಕಾಲೆಳೆಯುತ್ತೀನಿ? ಕರ್ನಾಟಕದ ಜನತೆ ಮುಂದೆ ನನ್ನ ಬಗ್ಗೆ ಯಾಕೆ ಈ ರೀತಿ ಹೇಳುತ್ತೀರಿ? ಹೊರಗೆ ನಾನು ಎಲ್ಲಾ ನೋಡಿಕೊಳ್ಳುತ್ತೀನಿ..ಸಿಕ್ಕಿರುವ ಒಂದು ಅವಕಾಶವಿದು..ಇಲ್ಲಿ ನೀವು ನೋಡಿಕೊಳ್ಳಬೇಕು' ಎಂದು ಶ್ರೀಲಕ್ಷ್ಮಿ ಪತಿಗೆ ಸಲಹೆ ನೀಡುತ್ತಾರೆ.
 

Follow Us:
Download App:
  • android
  • ios