Asianet Suvarna News Asianet Suvarna News

Kantara: ಕಿರುತೆರೆಯಲ್ಲೂ ಇತಿಹಾಸ ಸೃಷ್ಟಿಸಿದ ರಿಷಬ್ ಶೆಟ್ಟಿ ಸಿನಿಮಾ

ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾ ಕಿರುತೆರೆಯಲ್ಲೂ ಇತಿಹಾಸ ಸೃಷ್ಟಿಸಿದೆ.

Rishab Shetty starrer Kantara World Television Premiere records highest TRPs sgk
Author
First Published Jan 28, 2023, 2:22 PM IST

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಮಾಡಿರುವ ಬ್ಲಾಕ್ ಬಸ್ಟರ್ ಕಾಂತಾರ ಸಿನಿಮಾ ಕಿರುತೆರೆಯಲ್ಲೂ ದಾಖಲೆ ಬರೆದಿದೆ. ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಿ ಗೆದ್ದು ಬೀಗಿದ್ದ ಕಾಂತಾರ ಇತ್ತೀಚಿಗಷ್ಟೆ ಟಿವಿಯಲ್ಲಿ ಪ್ರಸಾರವಾಗಿತ್ತು. ಮೊದಲ ಬಾರಿಗೆ ಕಾಂತಾರ ಸಿನಿಮಾ ಟಿವಿಯಲ್ಲಿ ಪ್ರಸಾರವಾಗಿದ್ದು ಇತಿಹಾಸ ಸೃಷ್ಟಿಸಿದೆ. ಟಿವಿ ಟಿವಿಆರ್ ಇತಿಹಾಸದಲ್ಲೇ ಕಾಂತಾರ ದಾಖಲೆ ಬರೆದಿದೆ. ಅತೀ ಹೆಚ್ಚು ರೇಟಿಂಗ್ ಪಡೆದುಕೊಂಡಿದೆ ಎನ್ನುವ ಮಾಹಿತಿ ವೈರಲ್ ಆಗಿದೆ. 

ಕಾಂತಾರ ಸಿನಿಮಾ ಇತ್ತೀಚಿಗಷ್ಟೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಸ್ಟಾರ್ ಸುವರ್ಣ ಇತಿಹಾಸದಲ್ಲಿಯೇ ಅತೀ ಹೆಚ್ಚು ರೇಟಿಂಗ್ ಪಡೆದ ಸಿನಿಮಾ 'ಕಾಂತಾರ'ವಾಗಿದೆ. SD ಹಾಗೂ HD ಎರಡರಿಂದಲೂ 'ಕಾಂತಾರ'ಗೆ 15.8 TVR ಗಿಟ್ಟಿಸಿಕೊಂಡಿದೆ. ಈ ಹಿಂದೆ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗಿದ್ದ ರೆಬಲ್ ಸ್ಟಾರ್ ಅಂಬರೀಶ್ ಅಭಿನಯದ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ 10+ TVR ಪಡೆದುಕೊಂಡಿತ್ತು. ಇದೀಗ ಕಾಂತಾರ ಈ ಎಲ್ಲಾ ದಾಖಲೆಗಳನ್ನು ಬ್ರೇಕ್ ಮಾಡಿ ಮುನ್ನುಗ್ಗಿದೆ.  ಎರಡೂ ಸಿನಿಮಾಗಳಿಗಿಂತಲೂ ಹೆಚ್ಚು ಟಿಆರ್‌ಪಿ 'ಕಾಂತಾರ'ಗೆ ಸಿಕ್ಕಿದೆ. ಈ ಮೂಲಕ ರಿಷಬ್ ಶೆಟ್ಟಿ ಸಿನಿಮಾ ಕಿರುತೆರೆಯಲ್ಲೂ ಹೊಸ ಇತಿಹಾಸ ಸೃಷ್ಟಿಸಿದೆ.

ಕಾಂತಾರ ಭರ್ಜರಿ ಸಕ್ಸಸ್: ರಿಷಬ್ ಶೆಟ್ಟಿ ಜೇಬು ಸೇರಿದ ಸಂಭಾವನೆ ಎಷ್ಟು ಗೊತ್ತಾ?

ಕಾಂತಾರ ಸಿನಿಮಾವನ್ನು ಚಿತ್ರಮಂದಿರ ಹಾಗೂ ಒಟಿಟಿಯಲ್ಲಿ ನೋಡಲು ಮಿಸ್ ಮಾಡಿಕೊಂಡವರು ಮನೆಯಲ್ಲೇ ಕುಳಿತು ಸಿನಿಮಾ ವೀಕ್ಷಿಸಿ ಆನಂದಿಸಿದ್ದಾರೆ. ಕಾಂತಾರ ಸಿನಿಮಾ ದಾಖಲೇಗಳ ಮೇಲೆ  ದಾಖಲೆ ಬರೆದಿತ್ತು. ಮೊದಲು ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿದ್ದ ಕಾಂತಾರ ಸಿನಿಮಾ ಇಲ್ಲಿ ಸಕ್ಸಸ್ ಆಗುತ್ತಿದ್ದಂತೆ ಬೇರೆ ಭಾಷೆಗಳಲ್ಲಿ ಬೇಡಿಕೆ ಹೆಚ್ಚಾಯಿತು. ಬಳಿಕ ದಕ್ಷಿಣದ ಎಲ್ಲಾ ಭಾಷೆಯ ಜೊತೆಗೆ ಹಿಂದಿಯಲ್ಲೂ ರಿಲೀಸ್ ಮಾಡಲಾಯಿತು. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. 

ಎಲ್ಲಾ ಭಾಷೆಯ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಂಡರು. ಆಡಿಯನ್ಸ್ ಜೊತೆಗೆ ಸಿನಿಮಾ ಗಣ್ಯರು ಕಾಂತಾರ ಮೆಚ್ಚಿಕೊಂಡಿದ್ದಾರೆ. ರಜನಿಕಾಂತ್, ಕಮಲ್ ಹಾಸನ್, ಧನುಷ್, ಪ್ರಭಾಸ್, ಅನುಷ್ಕಾ ಶೆಟ್ಟಿ, ಪೃಥ್ವಿರಾಜ್, ಕಾರ್ತಿ, ನಾನಿ, ಕಾಂಗನಾ, ಅನುಪಮ್ ಖೇರ್, ಶಿಲ್ಪಾ ಶೆಟ್ಟಿ ಸೇರಿದಂತೆ ಅನೇಕರು ಕಾಂತಾರ ನೋಡಿ ಹಾಡಿಹೊಗಳಿದ್ದಾರೆ. ರಿಷಬ್ ನಟನೆಯನ್ನು ಮೆಚ್ಚಿಕೊಂಡಿದ್ದಾರೆ. 

ಕಾಂತಾರ 2 ಸ್ಕ್ರಿಪ್ಟ್ ರೆಡಿಯಾಗ್ತಿದೆ; ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ನಿರ್ಮಾಪಕ ವಿಜಯ್ ಕಿರಗಂದೂರು

ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬೆರಿದ್ದ ಕಾಂತಾರ ಇದೀಗ ಟಿವಿಯಲ್ಲೂ ಇತಿಹಾಸ ಸೃಷ್ಟಿಸಿದ್ದು ಸಿನಿಮಾತಂಡಕ್ಕೆ ಖುಷಿಯಾಗಿದೆ. ಈ ಸಿನಿಮಾದಲ್ಲಿ ರಿಷಬ್ ನಾಯಕನಾಗಿ ಕಾಣಿಸಿಕೊಂಡರೆ ಸಪ್ತಮಿ ಗೌಡ ನಾಕಿಯಾಗಿ ಕಾಣಿಸಿಕೊಂಡಿದ್ದರು. ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಕಿಶೋರ್ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ರಿಷಬ್ ಶೆಟ್ಟಿ ಮುಂದಿನ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಕಾಂತಾರ -2 ಮೂಲಕ ರಿಷಬ್ ಮತ್ತೆ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ರಿಷಬ್ ಎಲ್ಲಿಯೂ ಬಹಿರಂಗ ಪಡಿಸಿಲ್ಲ. 


 

Follow Us:
Download App:
  • android
  • ios