ಛೀ ಛೀ...ಯುವಕನ ಜೊತೆಗಿರುವ ವಿಡಿಯೋ ವೈರಲ್: ಡಿವೋರ್ಸ್ ಗಾಸಿಪ್‌ಗೆ ಬ್ರೇಕ್ ಹಾಕಿದ ರೇಶ್ಮಾ ಆಂಟಿ!
ವೈರಲ್ ಆಯ್ತು ರೇಶ್ಮಾ ಆಂಟಿ ಮತ್ತು ನವೀನ್ ರೀಲ್ಸ್‌ಗಳು. ಕೆಟ್ಟದಾಗಿ ಕಾಮೆಂಟ್ ಮಾಡುತ್ತಿರವವರಿಗೆ ಉತ್ತರ ಕೊಟ್ಟಿದ್ದಾರೆ.....
ಹಾಯ್ ಫ್ರೆಂಡ್ಸ್...ಬಾಯ್ ಫ್ರೆಂಡ್ಸ್ ಎಂದುಕೊಂಡು ಜೋರಾಗಿ ಕೂಗಿ ಮನಸ್ಸಿನಲ್ಲಿ ಏನೂ ಮುಚ್ಚಿಕೊಳ್ಳದೆ ಮುಗ್ಧತೆಯಲ್ಲಿ ಮಾತನಾಡುವ ರೇಶ್ಮಾ ಆಂಟಿ ಇದೀಗ ಕ್ರಿಯೇಟರ್ ನವೀನ್ ಕುಮಾರ್ ಜೊತೆ ಕನ್ನಡದ ಹಾಡುಗಳಿಗೆ ಹೆಜ್ಜೆ ಕಾಕುತ್ತಿದ್ದಾರೆ, ಅಡುಗೆ ರೆಸಿಪಿಗಳನ್ನು ಜನರಿಗೆ ತೋರಿಸಿಕೊಡುತ್ತಿದ್ದಾರೆ. ಇಷ್ಟು ದಿನ ಒಂಟಿಯಾಗಿ ರೀಲ್ಸ್ ಮಾಡುತ್ತಿದ್ದ ರೇಶ್ಮಾ ಆಂಟಿ ಇದ್ದಕ್ಕಿದ್ದಂತೆ ಯುವಕನೊಬ್ಬನ ಜೊತೆ ರೀಲ್ಸ್ ಮಾಡುತ್ತಿರುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ನೆಗೆಟಿವ್ ಕಾಮೆಂಟ್ ಬರುತ್ತಿದೆ. ರೇಶ್ಮಾ ಆಯ್ತು ಇಲ್ಲ ಅವರ ಜೊತೆ ಯಾಸಿನ್ ಜೊತೆ ರೀಲ್ಸ್ ಆಗುತ್ತಿತ್ತು ಆದರೆ ಈಗ ನವೀನ್ ಕುಮಾರ್ ಎಂಟ್ರಿ ಕೊಟ್ಟಿದ್ದಕ್ಕೆ ಫ್ಯಾಮಿಲಿಯಲ್ಲಿ ಮನಸ್ಥಾಪ ಆಗಿದೆ ಡಿವೋರ್ಸ್ ಆಗಲಿದೆ ಎಂದು ಕೀಳು ಮಟ್ಟದಲ್ಲಿ ಕಾಲೆಳೆಯುತ್ತಿರುವ ನೆಟ್ಟಿಗರಿಗೆ ಉತ್ತರ ಕೊಟ್ಟಿದ್ದಾರೆ.
'ಈಗನ ಕಾಲದಲ್ಲಿ ಅಣ್ಣ ತಂಗಿ ಜೊತೆಗೆ ಹೋಗುತ್ತಿದ್ದರು ಜನರಿಗೆ ಅವರಿಬ್ಬರು ಅಣ್ಣ ತಂಗಿ ಎಂದು ಅರ್ಥ ಆಗುವುದಿಲ್ಲ. ಓ ಬಾಯ್‌ಫ್ರೆಂಡ್ ಇರಬೇಕು ಲವರ್ ಇರಬೇಕು ಎಂದು ಹೆಸರಿಡುತ್ತಾರೆ. ಅವರಿಬ್ಬರು ಯಾರು? ಯಾಕೆ ಜೊತೆಯಲ್ಲಿ ವಿಡಿಯೋ ಮಾಡುತ್ತಿದ್ದಾರೆ? ಯಾಕೆ ಈ ರೀತಿ ವಿಡಿಯೋ ಕ್ರಿಯೇಟ್ ಮಾಡುತ್ತಿದ್ದಾರೆ ಎಂದು ತಿಳಿದುಕೊಂಡು ಮಾತನಾಡುವುದು ಒಳ್ಳೆಯದು. ಈಗ ನಾನು ಹಲವರ ಜೊತೆ ಆಕ್ಟಿಂಗ್ ಮಾಡುತ್ತಿದ್ದೀನಿ..ಒಬ್ಬ ಹುಡುಗ ಜೊತೆ ಆಕ್ಟಿಂಗ್ ಮಾಡಿದ ತಕ್ಷಣ ಅವರು ನನ್ನ ಗಂಡ ಆಗಲ್ಲ. ನನ್ನ ಗಂಡನ ಹೆಸರು ಯಾಸಿನ್ ರಾಜ...ನನ್ನ ಜೊನೆ ಉಸಿರು ಇರುವವರೆಗೂ ಅವರೇ ನನ್ನ ಗಂಡ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ರೀಲ್ಸ್ ರೇಶ್ಮಾ ಕ್ಲಾರಿಟಿ ನೀಡಿದ್ದಾರೆ.
ಮೂಗೇ ಇಲ್ಲ ಆದ್ರೂ ಮೂಗಿನ ಮೇಲೆ ಕೋಪನಾ; ಮೋಕ್ಷಿತಾ ಪೈ ಕಾಲೆಳೆದ ನೆಟ್ಟಿಗರು
ನವೀಕ್ ಕುಮಾರ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿದ್ದಾರೆ. ತಮ್ಮ ಜೀವನದಲ್ಲಿ ಮರೆಯಲಾಗದ ನೋವು ಎದುರಿಸುತ್ತಿರುವಾಗ ಅದರಿಂದ ಹೊರ ಬರಲು ಕ್ರಿಯೇಟ್ ಆಗಿ ಯೊಚನೆ ಮಾಡುತ್ತಾರೆ. ಒಮ್ಮೆ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋಗೆ ಭೇಟಿ ನೀಡಿದಾಗ ರೇಶ್ಮಾ ನಂಬರ್ ಪಡೆಯುತ್ತಾರೆ. ಆಗಾಗ ರೇಶ್ಮಾ ಜೊತೆ ಮಾತನಾಡುತ್ತಿದ್ದಂತೆ. ಹುಷಾರಿಲ್ಲದೆ ರೇಶ್ಮಾ ಆಸ್ಪತ್ರೆಗೆ ಸೇರಿರುವುದನ್ನು ನೋಡಿ ತಮ್ಮನ ಸ್ಥಾನದಲ್ಲಿ ನಿಂತು ಭೇಟಿ ನೀಡಿದ್ದರಂತೆ. ಅದಾದ ಮೇಲೆ ರೇಶ್ಮಾ ಅವರಲ್ಲಿ ಇರುವ ಮುಗ್ಧತೆ ಮತ್ತು ಟ್ಯಾಲೆಂಟ್ ಜನರಿಗೆ ತಿಳಿಯಬೇಕು ಎಂದು ನವೀನ್ ಕುಮಾರ್ ಐಡಿಯಾಗಳನ್ನು ಇಟ್ಟುಕೊಂಡು ವಿಡಿಯೋ ಕ್ರಿಯೇಟ್ ಮುಂದಾಗುತ್ತಾರೆ. ರೇಶ್ಮಾ ಅವರಿಗೆ ನನ್ನ ಜೋವನದಲ್ಲಿ ಅಕ್ಕನ ಸ್ಥಾನ ಕೊಟ್ಟಿದ್ದೀನಿ ಯಾವತ್ತಿದ್ದರೂ ಅವರು ನನ್ನ ಅಕ್ಕನೇ ಎಂದು ನವೀನ್ ಕುಮಾರ್ ಹೇಳಿದ್ದಾರೆ.
'ಹುಡುಗರು' ಮಾಡುವವರೆಗೂ ಪುನೀತ್ ರಾಜ್‌ಕುಮಾರ್ ಬಗ್ಗೆ ಬೇರೆನೇ ಅಭಿಪ್ರಾಯ ಇತ್ತು: