ಕೊನೆಗೂ ಸಿಕ್ಕ ಒರಿಜಿನಲ್​ ರಾವುಲ್ಲಾ! ಬೆಳ್ಳುಳ್ಳಿ ಕಬಾಬ್​ ಓನರ್​ ಜೊತೆ ಕರಿಮಣಿ ಮಾಲೀಕನ ಎಂಟ್ರಿ!

ಕರಿಮಣಿ ಮಾಲಿಕ ನೀನಲ್ಲ, ರಾವುಲ್ಲಾ... ಹಾಡಿನಲ್ಲಿ ಬೆಳ್ಳುಳ್ಳಿ ಕಬಾಬ್​ ಮಾಲೀಕನ ಜೊತೆ ರಿಯಲ್​ ರಾವುಲ್ಲಾ ಎಂಟ್ರಿ. ವಿಡಿಯೋ ವೈರಲ್​
 

Real Ravulla and Bellullu Kabab owner entry in Karimani Malika Neenalla Ravulla song suc

ಈಗ ಸೋಷಿಯಲ್​ ಮೀಡಿಯಾದಲ್ಲಿ ಕರಿಮಣಿ ಮಾಲೀಕನದ್ದೇ ಹವಾ. ಏನಿಲ್ಲ... ಏನಿಲ್ಲ... ಕರಿಮಣಿ ಮಾಲಿಕ ನೀನಲ್ಲ ಎಂದು ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ರೀಲ್ಸ್​ ಮಾಡುತ್ತಿದ್ದಾರೆ. ಉಪೇಂದ್ರ ನಾಯಕನಾಗಿ ನಟಿಸಿದ್ದ 'ಉಪೇಂದ್ರ' ಸಿನಿಮಾದ ಹಾಡುಗಳು ಒಂದು ಕಾಲದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದವು. ಪ್ರೇಮ, ರವೀನಾ ಟಂಡನ್ ಹಾಗೂ ದಾಮಿನಿ ಈ ಸಿನಿಮಾದಲ್ಲಿ ನಾಯಕಿಯರಾಗಿ ನಟಿಸಿದ್ದರು. ಈ ಸಿನಿಮಾದಲ್ಲಿ ಒಬ್ಬೊಬ್ಬ ನಾಯಕಿಗೆ ಒಂದೊಂದು ಹಾಡನ್ನು ಇಡಲಾಗಿತ್ತು. ಅದರಲ್ಲಿ ಉಪ್ಪಿ ಹಾಗೂ ಪ್ರೇಮಗೆ ಅಂತ ಕಂಪೋಸ್ ಮಾಡಿದ್ದ ಹಾಡೇ 'ಏನಿಲ್ಲ.. ಏನಿಲ್ಲ..'. ಆಗತಾನೇ 'ಎ' ಸಿನಿಮಾಗೆ ಭರ್ಜರಿ ಮ್ಯೂಸಿಕ್ ಕೊಟ್ಟು ಗೆದ್ದಿದ್ದ ಗುರುಕಿರಣ್ 'ಉಪೇಂದ್ರ'ಗೂ ಮಸ್ತ್ ಟ್ಯೂನ್ ಹಾಕಿದ್ದರು. ಇದೀಗ ಮತ್ತೆ 25 ವರ್ಷಗಳ ಬಳಿಕ ಹಲ್​ಚಲ್​ ಸೃಷ್ಟಿಸುತ್ತಿದೆ. 
 
ಅದರ ಜೊತೆಗೆನೇ 'ಬೆಳ್ಳುಳ್ಳಿ ಕಬಾಬ್' ಎನ್ನುವುದು ಇನ್ನೊಂದೆಡೆ ಸಾಕಷ್ಟು ವೈರಲ್​ ಆಗುತ್ತಿದೆ.  ಚಂದ್ರು ಎನ್ನುವವರು ಯೂಟ್ಯೂಬ್ ಚಾನಲ್‌ನಲ್ಲಿ ಬೆಳ್ಳುಳ್ಳಿ ಕಬಾಬ್ ರೆಸಿಪಿ ವಿಡಿಯೋ ಮಾಡಿದ್ದರು. ರಾಹುಲ್ ಎನ್ನುವ ತಮ್ಮ ಸಹಾಯಕನನ್ನು ಅವರು ಕರೆದಿದ್ದ ರೀತಿ ಸಖತ್ ವೈರಲ್ ಆಗಿತ್ತು. ರಾವುಲ್ಲಾ ಎಂದು ಆಡುಭಾಷೆಯಲ್ಲಿ ಅವರು ಕರೆದಿದ್ದು ಟ್ರೆಂಡ್ ಹುಟ್ಟುಹಾಕಿದೆ. ಇಂಥ ವೈರಲ್​ ಕಂಟೆಂಟ್​ ಸಿಕ್ಕ ಮೇಲೆ ರೀಲ್ಸ್​ ಮಾಡುವವರು ಸುಮ್ಮನೆ ಬಿಡುತ್ತಾರೆಯೆ?

ಸಂಗೀತಾ ಕುರಿತು ಕಾರ್ತಿಕ್​ಗೆ​ ಮಕ್ಕಳು ಹೀಗೆ ಪ್ರಶ್ನೆ ಕೇಳೋದಾ? ಪ್ರಶ್ನೆಗಳಿಗೆ ಬಿಗ್​ಬಾಸ್​ ವಿನ್ನರ್​ ಸುಸ್ತೋ ಸುಸ್ತು!

ಅದರಲ್ಲಿಯೂ ನಾನು ನಂದಿನಿ ಖ್ಯಾತಿಯ ವಿಕ್ರಮ್​ (ವಿಕಿಪಿಡಿಯಾ ಎಂದೇ ಫೇಮಸ್​ ಆಗಿದ್ದಾರೆ) ಕರಿಮಣಿ ಮಾಲಿಕ ಹಾಗೂ ಬೆಳ್ಳುಳ್ಳಿ ಕಬಾಬ್​ ಎರಡನ್ನೂ ಸೇರಿಸಿ ಒಂದು ರೀಲ್ಸ್​  ಮಾಡಿದ್ದರು.  ಸ್ಪೆಷಲ್ ಸ್ಕಿಟ್ ತಯಾರಿಸಿದ್ದರು.  ಉಪೇಂದ್ರ ಬರೆದ ಕರಿಮಣಿ ಮಾಲಿಕ ಹಾಡಿಗೆ ಗುರು ಕಿರಣ ಸಂಗೀತ ಕೊಟ್ಟಿದ್ದಾರೆ. ಈ ಹಾಡಿನ ಸಾಲುಗಳನ್ನು ವಿಕ್ಕಿ ಮತ್ತವರ ತಂಡ ಸ್ಕಿಟ್​ ಜೊತೆ  ಡೈಲಾಗ್ ಮಾಡಿಕೊಂಡಿದೆ.  ಕರಿಮಣಿ ಮಾಲೀಕಾ ನೀನಲ್ಲ. ನನ್ನ ಈ ಕರಿಮಣಿ ಮಾಲಿಕ ರಾವುಲ್ಲಾ ಎಂದು ತಮಾಷೆಯಾಗಿ ತೋರಿಸಿದ್ದರು. ಬೆಳ್ಳುಳ್ಳಿ ಕಬಾಬ್​ ಹಿಡಿದುಕೊಂಡು ಬಂದ ಯುವಕನನ್ನು ತೋರಿಸುತ್ತಾ, ಆತನೇ ರಾವುಲ್ಲಾ ಎಂದಿದ್ದರು.

ಈ ಹಾಡು ಸಕತ್​ ಟ್ರೆಂಡಿ ಆಗಿರುವ ಮಧ್ಯೆಯೇ ರಿಯಲ್​ ರಾವುಲ್ಲಾ ಮತ್ತು ಬೆಳ್ಳುಳ್ಳಿ ಕಬಾಬ್​ ಮಾಲಿಕ ಚಂದ್ರು ರೀಲ್ಸ್​ಗೆ ಎಂಟ್ರಿ ಕೊಟ್ಟಿದ್ದಾರೆ.  ಚಂದ್ರ ಇದರಲ್ಲಿ ಪಂಚಿಂಗ್​ ಡೈಲಾಗ್ ಹೇಳಿದ್ದಾರೆ. ಜನ ತುಂಬಾ ಕೇಳುತ್ತಿದ್ದಾರೆ. ಆ ಕರಿಮಣಿ ಮಾಲಿಕ ಯಾರು? ಬೇಗ ಹೇಳಮ್ಮ ಎನ್ನುತ್ತಾರೆ.  ಅದಕ್ಕೆ ನಂದಿನಿ (ವಿಕ್ರಮ್​) "ಒಂದು ಹಾಡಿನ ಮೂಲಕ ಹೇಳ್ಲ?" ಎಂದು ಹೇಳುತ್ತಾರೆ. ಒಂದು ಸಾಂಗ್‌ ಮುಖಾಂತರ ಹೇಳ್ಲಾ? ಎಂದು ಪ್ರಶ್ನಿಸುತ್ತಾರೆ. "ಬೇಡ ಕಸ್ಟಮರ್ಸ್‌ ಇದ್ದಾರೆ, ಕಷ್ಟ ಆಗುತ್ತೆ" ಎಂದು ಚಂದ್ರು ಹೇಳಿದಾಗ ನಂದಿನಿ ಪ್ಲೀಸ್‌ ಎನ್ನುತ್ತಾರೆ. "ಓಕೆ ಎಂಜಾಯ್‌ ಮಾಡಿ" ಎಂದು ಚಂದ್ರು ಹೇಳಿದಾಗ ಹಾಡು ಮುಂದುವರೆಯುತ್ತದೆ.
 
"ಮನಸಿನೊಳಗೆ ಖಾಲಿ ಖಾಲಿ... ನೀ ಮನದೊಳಗೇ ಇದ್ದರು.. ಮಲ್ಲಿಗೆ.. ಸಂಪಿಗೆ ತರದೇ ಹೋದರೂ ನೀ ನನಗೆ, ಓ ನಲ್ಲ, ನೀನಲ್ಲ ಕರಿಮಣಿ ಮಾಲಿಕ ನೀನಲ್ಲ" ಎನ್ನುತ್ತಾಳೆ."ಮತ್ಯಾರು" ಎಂದು ಚಂದ್ರು ಪ್ರಶ್ನಿಸಿದಾಗ "ಕರಿಮಣಿ ಮಾಲಿಕ ರಾವುಲ್ಲಾ.. ರಾವುಲ್ಲಾ ರಾವುಲ್ಲಾ.. ಕರಿಮಣಿ ಮಾಲಿಕ ರಾವುಲ್ಲಾ.. ರಾವುಲ್ಲಾ ರಾವುಲ್ಲಾ ಕರಿಮಣಿ ಮಾಲಿಕ ರಾವುಲ್ಲ" ಎಂದು ಹಾಡುತ್ತಾಳೆ. ಹಿನ್ನೆಲೆಯಲ್ಲಿ ಒರಿಜಿನಲ್‌ ರಾವುಲ್ಲಾ ಕಬಾಬ್‌ಪ್ಲೇಟ್‌ ಹಿಡಿದುಕೊಂಡಿರುವುದನ್ನು ನೋಡಬಹುಉ. ಇದನ್ನು ನೋಡಿ ನೆಟ್ಟಿಗರು ಬಿದ್ದೂ ಬಿದ್ದೂ ನಗುತ್ತಿದ್ದಾರೆ. 

ನೆಲದ ಮೇಲೆಯೇ ಅನ್ನಪ್ರಸಾದ ಸ್ವೀಕರಿಸಿದ ಡ್ರೋನ್​ ಪ್ರತಾಪ್​: ಆಹಾ! ಎರಡು ಕಣ್ಣು ಸಾಲದು ಎಂದ ಫ್ಯಾನ್ಸ್​

Latest Videos
Follow Us:
Download App:
  • android
  • ios