ಸಂಗೀತಾ ಕುರಿತು ಕಾರ್ತಿಕ್​ಗೆ​ ಮಕ್ಕಳು ಹೀಗೆ ಪ್ರಶ್ನೆ ಕೇಳೋದಾ? ಪ್ರಶ್ನೆಗಳಿಗೆ ಬಿಗ್​ಬಾಸ್​ ವಿನ್ನರ್​ ಸುಸ್ತೋ ಸುಸ್ತು!

ಸಂಗೀತಾ ಶೃಂಗೇರಿ ಕುರಿತು ಬಿಗ್​ಬಾಸ್​ ವಿನ್ನರ್​ ಕಾರ್ತಿಕ್​ಗೆ ಹೀಗೆ ಪ್ರಶ್ನೆ ಕೇಳಿದ ಬಾಲಕಿ: ಸುಸ್ತಾದ ಕಾರ್ತಿಕ್​- ಅಷ್ಟಕ್ಕೂ ಅವಳು ಕೇಳಿದ್ದು ಏನು ಪ್ರಶ್ನೆ? 
 

girl asked Bigg Boss winner Karthik about Sangeeta Sringeris friendship fans reacts suc

ಬಿಗ್​ಬಾಸ್​ ಸೀಸನ್​ 10 ಮುಗಿದು ಹಲವು ದಿನಗಳೇ ಕಳೆದಿದ್ದರೂ ಇದರ ಗುಂಗಿನಿಂದ ಫ್ಯಾನ್ಸ್​ ಹೊರಕ್ಕೆ ಬರಲಿಲ್ಲ.  ಈ ರಿಯಾಲಿಟಿ ಷೋ ಪುಟ್ಟ ಮಕ್ಕಳಿಗೂ ಇಷ್ಟವಾಗಿದೆ. ಇದೇ ಕಾರಣಕ್ಕೆ ಬಿಗ್​ಬಾಸ್​ ಮನೆಯಿಂದ ಬಂದ ಸ್ಪರ್ಧಿಗಳೆಲ್ಲರೂ ಬಹುದೊಡ್ಡ ಸೆಲೆಬ್ರಿಟಿಗಳಾಗಿ ಬದಲಾಗುತ್ತಾರೆ. ಅವರನ್ನು ಒಂದಿಷ್ಟು ಜನರು ನೋಡುವ ದೃಷ್ಟಿಯೇ ಬದಲಾಗುತ್ತದೆ.   ಅದರಲ್ಲಿಯೂ   ಬಿಗ್​ಬಾಸ್ ವಿನ್ನರ್​ ಎಂದರೆ ಅವರ ರೇಂಜೇ ಬೇರೆ. ಅವರ ಅಭಿಮಾನಿಗಳು ಖುಷಿ ಪಡುವ ರೀತಿಯೇ ಬೇರೆ.  ಅದೇ ರೀತಿ ಇದೀಗ ಬಿಗ್​ಬಾಸ್​ ಸೀಸನ್​ 10 ವಿನ್ನರ್​ ಕಾರ್ತಿಕ್​ ಮಹೇಶ್​ ಅವರು ಬಹುದೊಡ್ಡ ಸೆಲೆಬ್ರಿಟಿಯಾಗಿದ್ದಾರೆ. ಆರಂಭದಲ್ಲಿ ಬಿಗ್​ಬಾಸ್​ ಅನ್ನು ಒಪ್ಪಿಕೊಳ್ಳದೇ ಕೊನೆಕ್ಷಣದಲ್ಲಿ ಒಪ್ಪಿಕೊಂಡು ಹೋಗಿದ್ದ ಕಾರ್ತಿಕ್​ ಅವರಿಗೆ ಈ ಗೆಲುವು ವಿಶೇಷ ಅನುಭವವನ್ನೂ ನೀಡಿದೆ. 

ಇದೀಗ ಕಲರ್ಸ್​ ಕನ್ನಡ ವಾಹಿನಿಯ ನಮ್ಮಮ್ಮ ಸೂಪರ್​ಸ್ಟಾರ್​ ವೇದಿಕೆಯಲ್ಲಿ ಕಾರ್ತಿಕ್​ ಅವರು ಅಮ್ಮ ಮೀನಾಕ್ಷಿಯವರ ಜೊತೆ ಗೆಸ್ಟ್​ ಆಗಿ ಬಂದಿದ್ದಾರೆ.  ಭಾಗ್ಯಲಕ್ಷ್ಮಿ ಸೀರಿಯಲ್​ ಖ್ಯಾತಿಯ ನಿರೂಪಕಿ ಸುಷ್ಮಾ ಅವರು ಇದಾಗಲೇ ಹಲವು ಬಾರಿ ಕಾರ್ತಿಕ್​ ಅವರ ಕಾಲೆಳೆದಿದ್ದಾರೆ. ಅಮ್ಮನಿಗೆ ಕಾರ್ತಿಕ್​ ಅವರ ಕುರಿತು ಕೆಲವೊಂದು ಪ್ರಶ್ನೆಗಳನ್ನು ಕೇಳುವ ಮೂಲಕ ಕಾರ್ತಿಕ್​ ಬಗ್ಗೆ ಹಲವು ವಿಷಯಗಳನ್ನು ಅವರು ಕೆದಕಿದ್ದಾರೆ.  ಇದೀಗ ಮಕ್ಕಳು ಕೂಡ ಕಾರ್ತಿಕ್​ ಅವರಿಗೆ ಕೆಲವೊಂದು ಪ್ರಶ್ನೆ ಕೇಳುವ ಮೂಲಕ, ಕಾರ್ತಿಕ್​ ಅವರನ್ನು ಪೆಚ್ಚು ಮಾಡಿದ್ದಾರೆ, ಬೇಸ್ತು ಬೀಳಿಸಿದ್ದಾರೆ. ಕೆಲವೊಂದು ಪರ್ಸನಲ್​ ಪ್ರಶ್ನೆಗಳನ್ನು ಕೇಳಿದರೆ, ಇನ್ನೊಂದಿಷ್ಟು ಬಿಗ್​ಬಾಸ್​ನ ಪ್ರಶ್ನೆ ಕೇಳಿ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದ್ದಾರೆ. ಈ ಮಕ್ಕಳನ್ನು ಜರ್ನಲಿಸ್ಟ್​ ಎಂದು ಕರೆಯಲಾಗಿದ್ದು, ಅವರಿಗೆ ಪ್ರಶ್ನೆ ಕೇಳಲು ಬಿಡಲಾಗಿದೆ. 

ಕಾರ್ತಿಕ್​ ಲೈಫ್​ ಪಾರ್ಟನರ್​ ಇವ್ರೇನಾ? 'ಎಸ್'​ ಎಂದ ಅಮ್ಮ! ಕುಣಿದು ಕುಪ್ಪಳಿಸ್ತಿರೋ ಫ್ಯಾನ್ಸ್​

ಮೊದಲಿಗೆ ಪುಟಾಣಿಯೊಬ್ಬಳು ಬಿಗ್​ಬಾಸ್​  ಮನೆಯಲ್ಲಿ ಡೇಲಿ ಮೇಕಪ್​  ಮಾಡೋಕೆ ಬಿಡ್ತಾರಾ ಎಂದು ಕೇಳಿದ್ದಾಳೆ. ಅದಕ್ಕೆ ಕಾರ್ತಿಕ್​ ಮಾಡಬಹುದು ಎಂದಾಗ, ಪುಟಾಣಿ ಹಾಗಿದ್ರೆ ನಾನು ದೊಡ್ಡವಳಾದ ಮೇಲೆ ಬಿಗ್​ಬಾಸ್​ಗೆ ಹೋಗತೀನಿ ಎನ್ನುವ ಮೂಲಕ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದ್ದಾಳೆ. ನಂತರ ಕಾರ್ತಿಕ್​ ಅವರು ತಮ್ಮ ತಂಗಿಯ ಪಾಪುಗೆ ಏನು ಹೆಸರಿಟ್ಟಿದ್ದಾರೆ ಎಂದು ಇನ್ನೋರ್ವ ಪುಟಾಣಿ ಕೇಳಿದ್ದಾನೆ. ಇನ್ನೂ ಹೆಸರು ಇಡಲಿಲ್ಲ, 9 ತಿಂಗಳಿಗೆ ಇಡೋದು ಎಂದಾಗ ನನ್ನ ಹೆಸರು ವಿಯಾನ್​, ಅದನ್ನೇ ಇಟ್ಟುಬಿಡಿ ಎಂದಿದ್ದಾನೆ. 

ನಂತರ ಇನ್ನೋರ್ವ ಬಾಲಕ, ಬ್ರೋ ನಿಮಗೆ ಅಪ್ಪ ಇಷ್ಟನೋ, ಅಮ್ಮ ಇಷ್ಟನೋ ಎಂದು ಕೇಳಿದ್ದಾನೆ. ಆಗ ಕಾರ್ತಿಕ್​ ಇಬ್ಬರೂ ಇಷ್ಟನೇ. ಆದ್ರೆ ಈಗ ನನ್ನಮ್ಮ ಸೂಪರ್​ಸ್ಟಾರ್​ಗೆ ಬಂದಿರುವ ಕಾರಣ ಅಮ್ಮ ಇಷ್ಟ ಎಂದಿದ್ದಾರೆ. ಇನ್ನೋರ್ವ ಬಾಲಕ, ನೀವು ಯಾವಾಗಾದ್ರೂ ನಿಮ್ಮಮ್ಮಂಗೆ ಸುಳ್ಳು ಹೇಳಿದ್ರಾ ಎಂದಾಗ ಬೇಸ್ತು ಬಿದ್ದ ಕಾರ್ತಿಕ್​, ಹೀಗೆಲ್ಲಾ ಪ್ರಶ್ನೆ ಕೇಳಬಾರದು ಎಂದು ಜೋರಾಗಿ ನಕ್ಕಿದ್ದಾರೆ. ಆಗ ಅವರ ಅಮ್ಮ ಮೀನಾಕ್ಷಿ ಅವರೂ ಜೋರಾಗಿ ನಕ್ಕಿದ್ದಾರೆ. ಇಷ್ಟೆಲ್ಲಾ ಆಗುವ ಹೊತ್ತಿಗೆ ಇನ್ನೋರ್ವ ಬಾಲಕಿ ಎದ್ದು ನಿಂತು ಸಂಗೀತಾ ಅವರ ಪ್ರಶ್ನೆ ಕೇಳಿ ಕಾರ್ತಿಕ್​ ಅವರನ್ನು ಗೊಂದಲಕ್ಕೆ ಸಿಲುಕಿಸಿದಳು. ಸಂಗೀತಾ ನಿಮಗೆ ಫ್ರೆಂಡಾ ಅಥ್ವಾ ಎನಿಮಿನಾ ಎಂದು ಕೇಳಿದ್ದಾಳೆ. ಇದನ್ನು ಕೇಳಿ ಕಾರ್ತಿಕ್​ ಸುಸ್ತಾಗಿ ಹೋಗಿದ್ದಾರೆ. ಅವರು ಏನು ಉತ್ತರ ಹೇಳಿದ್ದಾರೆ ಎನ್ನುವುದನ್ನು ಷೋ ನೋಡಿಯೇ ತಿಳಿಯಬೇಕು. ಅಷ್ಟಕ್ಕೂ ಬಿಗ್​ಬಾಸ್​ನಲ್ಲಿ ವಿನಯ್ ಮತ್ತು ಸಂಗೀತಾ ಸಂಬಂಧ ಬಿಗ್​ಬಾಸ್​ ಪ್ರೇಮಿಗಳಿಗೆ ತಿಳಿದದ್ದೇ. ಕಾರ್ತಿಕ್​ ಅವರ ಲೈಫ್​ ಪಾರ್ಟನರ್​ ಬಿಗ್​ಬಾಸ್​-10ನಲ್ಲೇ ಇದ್ದಾರೆಯೇ ಎಂದು ನಿರೂಪಕಿ ಸುಷ್ಮಾ ಈ ಮೊದಲು ಕಾರ್ತಿಕ್​ ಅಮ್ಮ ಅವರಿಗೆ ಕೇಳಿದಾಗ ಅವರು  ಎಸ್​ ಎನ್ನುವ ಬೋರ್ಡ್​ ತೋರಿಸಿದ್ದರು. 

ಬಿಗ್​ಬಾಸ್​ನಲ್ಲಿ ಸಂಗೀತಾ-ಕಾರ್ತಿಕ್​ ದೂರವಾಗಿದ್ದೇಕೆ? ಹೊರಬಂದ್ಮೇಲೆ ಹೇಗಿದೆ ಸಂಬಂಧ? ವಿನ್ನರ್​ ಹೇಳಿದ್ದೇನು ಕೇಳಿ...

Latest Videos
Follow Us:
Download App:
  • android
  • ios