ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮನಸೆಲ್ಲಾ ನೀನೇ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿ ಆಗಿದ್ದ ರಶ್ಮಿ ಪ್ರಭಾಕರ್ ಹೊರ ನಡೆದಿದ್ದಾರೆ.  ವೈಯಕ್ತಿಕ ಕಾರಣಗಳಿಂದ ಹೊರ ಬಂದಿರುವುದಾಗಿಯೂ ಹೇಳಿ ಕೊಂಡಿದ್ದಾರೆ.

ರಶ್ಮಿ ಮಾತುಗಳು:
'ಮನಸ್ಸಿಗೆ ಭಾರವಾದರೂ, ನಿಮ್ಮೆಲ್ಲರ ಬಳಿ ಹೇಳಲೇ ಬೇಕಾದ ವಿಷಯ. ಮನಸೆಲ್ಲಾ ನೀನೇ ರಾಗಳಾಗಿ ನನ್ನ ಅಧ್ಯಾಯ ಕಾರಣಾಂತರಗಳಿಂದ ಮುಗಿದಿದೆ. ಹೊಸ ರಾಗ ನಿಮ್ಮೆಲ್ಲರ ಮುಂದೆ ಆದಷ್ಟು ಬೇಗ ಬರ್ತಾಳೆ. ನನ್ನ ಹೊಸ ಪಾತ್ರಕ್ಕೆ ಇಷ್ಟು ಪ್ರೀತಿ ಕೊಟ್ಟ ನಿಮಗೆ ಧನ್ಯೋಸ್ಮಿ.  ಸ್ಟಾರ್ ಸುವರ್ಣ ವಾಹಿನಿ ಹಾಗೂ ನಿರ್ಮಾಣ ಸಂಸ್ಥೆಗೆ ನಾನು ಸದಾ ಋಣಿಯಾಗಿರುವೆ.  ರಾಗಾ ಧರಿಸುತ್ತಿದ್ದ ವಸ್ತ್ರಗಳನ್ನು ನಾನು ತುಂಬಾನೇ ಮಿಸ್ ಮಾಡಿಕೊಳ್ಳುವೆ. Univers has its own way of getting things done, everything happens for a reason' ಎಂದು ರಶ್ಮಿ ಬರೆದುಕೊಂಡಿದ್ದಾರೆ. 

'ಲಕ್ಷ್ಮಿ ಬಾರಮ್ಮ' ಚಿನ್ನು ಈಗ 'ಮನಸೆಲ್ಲಾ ನೀನೇ' ಅಂತಿದ್ದಾರೆ; ಯಾರಿಗೆ ಗೊತ್ತಾ? 

ಆರಂಭದಿಂದಲೂ ರಶ್ಮಿ ಪಾತ್ರಕ್ಕೆ ಅಭಿಮಾನಿಗಳು ಹೊಂದಿ ಕೊಂಡಿದ್ದರು. ರಶ್ಮಿ ಇಲ್ಲದೇ ಧಾರಾವಾಹಿ ನೋಡಲು ಮನಸ್ಸಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.  ಭರತನಾಟ್ಯ ಕಲಾವಿದೆ ರಶ್ಮಿ 'ಲಕ್ಷ್ಮಿ ಬಾರಮ್ಮ'ಧಾರಾವಾಹಿಯಲ್ಲಿ ಚಿನ್ನು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.