ನಿವೇದಿತಾ ಜೊತೆ ಬೇರ್ಪಟ್ಟ ಚಂದನ್ ಶೆಟ್ಟಿ, 10 ಕೆಜಿ ತೂಕ ಇಳಿಸಿ ಹೊಸ ಲುಕ್‌ನಲ್ಲಿ ಮಿಂಚುತ್ತಿದ್ದಾರೆ. ಮೂರು ತಿಂಗಳ ಕಠಿಣ ಜಿಮ್ ವ್ಯಾಯಾಮ ಮತ್ತು ಮಾಂಸಾಹಾರಿ ಆಹಾರಕ್ರಮ ಪಾಲಿಸಿ ಫಿಟ್ನೆಸ್ ಮೇಲೆ ಗಮನ ಹರಿಸಿದ್ದಾರೆ. ಚಿತ್ರರಂಗಕ್ಕೆ ಮರಳಲು ಸಜ್ಜಾಗಿರುವ ಚಂದನ್, 'ಕಾಟನ್ ಕ್ಯಾಂಡಿ' ಹಾಡಿನ ಸಂಗೀತ ಕದ್ದ ಆರೋಪ ಎದುರಿಸುತ್ತಿದ್ದಾರೆ.

ನಟಿ ನಿವೇದಿತಾ ಗೌಡ (Actress Nivedita Gowda) ಜೊತೆ ಬ್ರೇಕ್ ಅಪ್ ಆದ್ಮೇಲೆ ಸಿಂಗಲ್ ಆಗಿರುವ ರ್ಯಾಪರ್ ಚಂದನ್ ಶೆಟ್ಟಿ (rapper Chandan Shetty), ಸ್ಯಾಂಡಲ್ವುಡ್ ನಲ್ಲಿ ಹವಾ ಕ್ರಿಯೇಟ್ ಮಾಡೋಕೆ ಸಜ್ಜಾಗಿದ್ದಾರೆ. ಈಗಾಗಲೇ ಅವರು ಆಕ್ಟಿಂಗ್ ಫೀಲ್ಡ್ ಗೆ ಇಳಿದಾಗಿದೆ. ಮಾಜಿ ಪತ್ನಿ ನಿವೇದಿತಾ ಜೊತೆ ಅವರ ಮತ್ತೊಂದು ಚಿತ್ರ ತೆರೆಗೆ ಬರಲಿದೆ. ಈ ಮಧ್ಯೆ ಫಿಟ್ನೆಸ್ (fitness) ಗೆ ಹೆಚ್ಚು ಆದ್ಯತೆ ನೀಡ್ತಿರುವ ಚಂದನ್ ಶೆಟ್ಟಿಯ ಫಿಟ್ನೆಸ್ ಫೋಟೋ ಒಂದು ವೈರಲ್ ಆಗಿದೆ. ಕಳೆದ ಮೂರು ತಿಂಗಳಿಂದ ಜಿಮ್ ನಲ್ಲಿ ಬೆವರಿಳಿಸ್ತಿರುವ ಚಂದನ್ ಹೊಸ ಅವತಾರದಲ್ಲಿ ಬರಲು ಸಿದ್ಧವಾದಂತಿದೆ. ಚಂದನ್ ಶೆಟ್ಟಿ ಟ್ರೈನರ್ ಇನ್ಸ್ಟಾದಲ್ಲಿ ಅವರ ಫೋಟೋ ಹಂಚಿಕೊಂಡಿದ್ದಲ್ಲದೆ, ಜಿಮ್ ಹಾಗೂ ಡಯಟ್ ಗೆ ಚಂದನ್ ದೇಹ ಹೇಗೆ ಪ್ರತಿಕ್ರಯಿಸ್ತಿದೆ, ಚಂದನ್ ಏನೆಲ್ಲ ತಿನ್ನುತ್ತಿದ್ದಾರೆ, ಮೂರು ತಿಂಗಳಲ್ಲಿ ಎಷ್ಟು ಕೆ.ಜಿ ತೂಕ ಇಳಿಸಿದ್ದಾರೆ ಎಂಬುದನ್ನು ಹೇಳಿದ್ದಾರೆ. 

mutant_raghu ತಮ್ಮ ಇನ್ಸ್ಟಾ ಖಾತೆಯಲ್ಲಿ ಚಂದನ್ ಶೆಟ್ಟಿ ಫೋಟೋ ಪೋಸ್ಟ್ ಮಾಡಿದ್ದಾರೆ. ಅದ್ರ ಜೊತೆ ದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. 3 ತಿಂಗಳುಗಳಾಗಿವೆ. ಚಂದನ್ ಶೆಟ್ಟಿ ಈಗ ನಿಖರವಾಗಿ 10 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ನಾನು ನನ್ನ ಫಿಟ್‌ನೆಸ್ ದಿನಚರಿಯನ್ನು ಎಂದಿಗೂ ಸಂಕೀರ್ಣಗೊಳಿಸುವುದಿಲ್ಲ. ಅವರು ಮಾಂಸಾಹಾರಿ ಆಹಾರಕ್ರಮವನ್ನು ಅನುಸರಿಸುತ್ತಿದ್ದಾರೆ. ಅದು ಅದ್ಭುತವಾಗಿದೆ. ಯಾವುದೇ ಕ್ರ್ಯಾಶ್ ಡಯಟ್ ಇಲ್ಲ. ಉಪ್ಪು ಸೇವನೆಗೆ ನಿಬಂಧನೆ ಇಲ್ಲ. ಫ್ಯಾನ್ಸಿ ಫಾರ್ಮುಲಾ ಇಲ್ಲ, ಸರಳವಾದ ರುಚಿಕರವಾದ ಮನೆ ಆಹಾರ ಮತ್ತು ಶಿಸ್ತು ಪಾಲಿಸಲಾಗ್ತಿದೆ. ಲ್ಯಾಕ್ಟೋಸ್ ಸಮಸ್ಯೆ ಇರುವ ಕಾರಣ ಹಾಲೊಡಕು ಪ್ರೋಟೀನ್ ಅವರಿಗೆ ಸರಿಹೊಂದುವುದಿಲ್ಲ. ಹಾಗಾಗಿ ನಾನು ಅವರಿಗೆ ಪ್ರತಿದಿನ 3 ಗ್ರಾಂ ಕ್ರಿಯೇಟೈನ್ ತೆಗೆದುಕೊಳ್ಳಲು ಸೂಚಿಸಿದ್ದೇನೆ. ಇದು ಸರಳವಾಗಿದೆ. ಈ ಹೊಸ ಪ್ಲಾನ್ ಅವರ ದೇಹದ ಮೇಲೆ ಕೆಲಸ ಮಾಡುತ್ತಿದೆ. ಇನ್ನಷ್ಟು ಫಿಟ್ ಆಗಲಿದ್ದಾರೆ ಎಂದು ಶೀರ್ಷಿಕೆ ಹಾಕಿದ್ದಾರೆ.

ಟ್ಯೂನ್ ಕದ್ದ ಆರೋಪಕ್ಕೆ ಚಂದನ್ ಶೆಟ್ಟಿ ಕಿಡಿ, ಮಾನನಷ್ಟ ಮೊಕದ್ದಮೆಗೆ ಮೊರೆ?

ಈ ಪೋಸ್ಟ್ ನೋಡಿದ ಚಂದನ್ ಶೆಟ್ಟಿ ಫ್ಯಾನ್ಸ್ ಲೈಕ್ ಜೊತೆ ಕಮೆಂಟ್ ಶುರು ಮಾಡಿದ್ದಾರೆ. ಬ್ರೇಕ್ ಅಪ್ ಅಥವಾ ಡಿವೋರ್ಸ್ ಆದ್ಮೇಲೆ ಹುಡುಗ್ರಿಂದ ಉತ್ತಮವಾದದ್ದು ಹೊರಗೆ ಬರುತ್ತೆ ಎಂದು ಕಮೆಂಟ್ ಮಾಡಿದ್ದಾರೆ. ಬ್ರೇಕ್ ಅಪ್ ಹುಡುಗನನ್ನು ಬಾಡಿ ಬಿಲ್ಡರ್ ಮಾಡಿದೆ, ಬಿಟ್ಟು ಹೋಗುವವಳ ಮೇಲಿನ ಪ್ರೀತಿಗಿಂತ ನಿಮ್ಮ ದೇಹದ ಮೇಲೆ ನಿಮಗಿರುವ ಪ್ರೀತಿ ಒಳ್ಳೆಯದು, ಶಕ್ತಿ ಬರೀ ದೇಹದಿಂದ ಬರುವಂತಹದ್ದಲ್ಲ, ಅದು ಮನಸ್ಸಿಗೂ ಸಂಬಂಧಿಸಿದೆ, ಚಂದನ್ ಶೆಟ್ಟಿ ಹೊಸ ಪ್ರಾಜೆಕ್ಟ್ ಗೆ ಸಿದ್ಧವಾಗ್ತಿದ್ದಾರೆ, ಥೈಲ್ಯಾಂಡ್ ಗೆ ಹೋಗೋಕೆ ಸಿದ್ಧವಾಗಿದ್ದಾರೆ, ದಿನ ದಿನಕ್ಕೂ ಮಿಂಚುತ್ತಿದ್ದೀರಾ, ಬೆಂಕಿ ಹೀಗೆ ಫ್ಯಾನ್ಸ್ ಚಂದನ್ ಶೆಟ್ಟಿ ಲುಕ್ ಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಹಾಗೆಯೇ ಕೆಲವರು, ಸರಿಯಾಗಿ ಟೆಸ್ಟ್ ಮಾಡ್ಕೊಂಡು ಆಹಾರ, ಪ್ರೋಟೀನ್ ಸೇವನೆ ಮಾಡಿ. ಇಲ್ಲ ಅಂದ್ರೆ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಎಂದು ಸಲಹೆ ಕೂಡ ನೀಡಿದ್ದಾರೆ. 

ಚಂದನ್ ಶೆಟ್ಟಿ ಮೇಲೆ ಟ್ಯೂನ್ ಕದ್ದ ಆರೋಪ, 'ಕಾಟನ್ ಕ್ಯಾಂಡಿ' ಪಾರ್ಟಿ ಸಾಂಗ್‌ ಇನ್ ಟ್ರಬಲ್!

ಸದ್ಯ ಚಂದನ್ ಶೆಟ್ಟಿ ಕಾಟನ್ ಕ್ಯಾಂಡಿ ಟ್ಯೂನ್ ಕದ್ದ ವಿಚಾರಕ್ಕೆ ಚರ್ಚೆಯಲ್ಲಿದ್ದಾರೆ. ಯುವರಾಜ್ ತಮ್ಮ ಟ್ಯೂನನ್ನು ಚಂದನ್ ಕದ್ದಿದ್ದಾರೆಂದು ಆರೋಪ ಮಾಡಿದ್ದಾರೆ. ಕಳೆದ ವರ್ಷ ಡಿಸೆಂಬರ್ 27, 2024ರಲಿ ಈ ಆಲ್ಬಂ ಸಾಂಗ್ ರಿಲೀಸ್ ಆಗಿದ್ದು, ಟ್ರೆಂಡ್ ನಲ್ಲಿದೆ. ಆದ್ರೆ ಈಗ ಟ್ಯೂನ್ ಕದ್ದ ಆರೋಪ ಬರ್ತಿದ್ದಂತೆ ಅದನ್ನು ಚಂದನ್ ಶೆಟ್ಟಿ ನಿರಾಕರಿಸಿದ್ದಾರೆ. ನಾನು ಯುವರಾಜ್ ಟ್ಯೂನ್ ಕೇಳಿಲ್ಲ ಎಂದಿದ್ದಾರೆ. 

View post on Instagram