Asianet Suvarna News Asianet Suvarna News

ಬಿಗ್​ಬಾಸ್​ ಮನೆಯಲ್ಲಿ 'ರಾಣಿ'! ಕಿಸ್​ ಪಡೆದ ತುಕಾಲಿ ಸುಸ್ತೋ ಸುಸ್ತು: ದೊಡ್ಮನೆಯಲ್ಲಿ ಏನಾಗ್ತಿದೆ?

ಬಿಗ್​ಬಾಸ್​ ಫಿನಾಲೆ ಬೆನ್ನಲ್ಲೇ ತುಕಾಲಿ ಸಂತೋಷ್​ಗೆ ರಾಣಿ ಬಂದು ಕಿಸ್​ ಕೊಟ್ಟಿದ್ದಾಳೆ. ಏನಿದು ಹೊಸ ವಿಷಯ? 
 

Rani came and kissed Tukali Santhosh ahead of Bigg Boss finale suc
Author
First Published Jan 26, 2024, 4:09 PM IST

ಬಿಗ್​ಬಾಸ್​ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಮತ್ತು ನಾಡಿದ್ದು ಅಂದರೆ ಜನವರಿ 27 ಮತ್ತು 28ರಂದು ನಡೆಯಲಿರುವ ಫಿನಾಲೆಗಾಗಿ ಬಿಗ್​ಬಾಸ್​ ಪ್ರೇಮಿಗಳೆಲ್ಲಾ ತುದಿಗಾಲಿನಲ್ಲಿ ಕಾದು ಕುಳಿತಿದ್ದಾರೆ. 16 ವಾರಗಳಿಂದ ನಡೆದ ಜರ್ನಿಯಲ್ಲಿ 19 ಸ್ಪರ್ಧಿಗಳು ಭಾಗಿಯಾಗಿದ್ದರು. ಸದ್ಯ  6 ಜನ ಫೈನಲ್ ಲಿಸ್ಟ್‌ನಲ್ಲಿ ಇದ್ದಾರೆ. ಬಿಗ್ ಬಾಸ್ ಪ್ರತಾಪ್‌ಗೆ ಎಲಿಮಿನೇಷನ್ ಶಾಕ್ ಕೊಟ್ಟಾಗಿದೆ. ಇದರ ಜೊತೆಗೆ ಈ ಸಲ ಐದು ಜನ ಅಲ್ಲ, ಆರು ಜನ ಫೈನಲ್‌ ಲಿಸ್ಟ್‌ನಲ್ಲಿ ಇರ್ತಾರೆ ಅಂತಲೂ ಆಶ್ಚರ್ಯ ಮೂಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೊಡ್ಮನೆಯಲ್ಲಿ ಭಾರೀ ಕುತೂಹಲ ಮೂಡಿರುವ ನಡುವೆಯೇ ಫೈನಲ್​ಗೆ ಗಂಟೆ ಲೆಕ್ಕವಿದೆ. 

ಈ ಫಿನಾಲೆ ವಾರದಲ್ಲಿ  ಅಂತಿಮ ಸ್ಪರ್ಧಿಗಳಾಗಿ ಸಂಗೀತಾ ಶೃಂಗೇರಿ, ವಿನಯ್ ಗೌಡ, ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್, ತುಕಾಲಿ ಸ್ಟಾರ್ ಸಂತೋಷ್, ವರ್ತೂರು ಸಂತೋಷ್ ಸೇರಿ ಒಟ್ಟು ಆರು ಸದಸ್ಯರು ಇದ್ದಾರೆ. ಸತತ 16 ವಾರಗಳು ಟಾಪ್​ ಟಿಆರ್​ಪಿಯಲ್ಲಿಯೇ  ಮುಂದುವರೆದಿರುವ ‘ಬಿಗ್‌ ಬಾಸ್‌ ಕನ್ನಡ ಸೀಸನ್‌ 10’  ಫಿನಾಲೆ ವೇದಿಕೆಯಲ್ಲಿ ಕಿಚ್ಚ ಸುದೀಪ್‌ ಒಬ್ಬರ ಕೈಯನ್ನು ಎತ್ತಿ ಹಿಡಿಯಲಿದ್ದಾರೆ. ಬಿಗ್‌ ಬಾಸ್ ಮನೆಯೊಳಗೆ ರಾರಾಜಿಸುತ್ತಿರುವ ಕಪ್ ಅವರ ಕೈ ಸೇರಲಿದೆ. ಇವರಲ್ಲಿ ಯಾರಿಗೆ ಬಿಗ್ ಬಾಸ್ ವಿನ್ನರ್ ಪಟ್ಟ ಸಿಗಲಿದೆ ಎಂಬುದಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ.

16 ವಾರ, 19 ಸ್ಪರ್ಧಿಗಳು, 6 ಫೈನಲಿಸ್ಟ್​.... ಬಿಗ್​ಬಾಸ್​ ಜರ್ನಿ ಹೇಗಿತ್ತು? ಕುತೂಹಲದ ಪ್ರೊಮೊ ಬಿಡುಗಡೆ

ಇದರ ನಡುವೆಯೇ, ಬಿಗ್​ಬಾಸ್​ನಲ್ಲಿ ರಾಣಿಯ ಎಂಟ್ರಿಯಾಗಿದೆ! ರಾಣಿ ಬಂದು ತುಕಾಲಿಗೆ ಕಿಸ್​ ಕೊಟ್ಟಿದ್ದು, ತುಕಾಲಿಗೆ ಸುಸ್ತೋ ಸುಸ್ತು... ಅಷ್ಟಕ್ಕೂ ಆಗಿರೋದು ಏನೆಂದರೆ, ಫಿನಾಲೆ ಬೆನ್ನಲ್ಲೇ ಬಿಗ್​ಬಾಸ್​ ಆರು ಸ್ಪರ್ಧಿಗಳಿಗೆ ವಿಶೇಷವಾದ ಅವಕಾಶವನ್ನು  ನೀಡಿದ್ದಾರೆ. ತುಕಾಲಿ ಸಂತೋಷ್​ ಎಂದರೆ ಮೊದಲಿನಿಂದಲೂ ಹಾಸ್ಯದವರೇ. ಅದಕ್ಕಾಗಿ ಅವರಿಗೆ ಹಾಸ್ಯದ ರೂಪದಲ್ಲಿಯೇ ಅವಕಾಶ ನೀಡಲಾಗಿದೆ.  ಕೆಲವು ದಿನಗಳ ಹಿಂದೆ ಬಿಗ್‌ಬಾಸ್‌, ಮನೆಯಲ್ಲಿರುವ ಆರು ಸ್ಪರ್ಧಿಗಳಿಗೆ ಅವರ ಆಸೆಗಳನ್ನು ಕೇಳಿದ್ದರು.  ಈಗ  ಆಸೆಗಳನ್ನೆಲ್ಲ ಒಂದೊಂದಾಗಿ ಈಡೇರಿಸಲಾಗುತ್ತಿದೆ. ತುಕಾಲಿಗೆ ರಾಜನಂತೆ ಬದುಕಬೇಕು ಎಂದಿದ್ದಾರೆ. ‘ತುಕಾಲಿಯವರೆ  ಕೆಲಸಮಯಕ್ಕೆ ರಾಜನಂತೆ ಬದುಕಬೇಕು’ ಎಂದು ಬಿಗ್‌ಬಾಸ್‌ ಅಪ್ಪಣೆ ಬಂದಿದೆ.

ಇದೇ ವೇಳೆ ಡ್ರೋನ್​ ಪ್ರತಾಪ್​ ಡ್ರೋನ್​ ತರುವ ಆಸೆ ವ್ಯಕ್ತಪಡಿಸಿದ್ದರು. ಅದರಂತೆಯೇ ಬಿಗ್​ಬಾಸ್​ ಮನೆಯಲ್ಲಿ ಡ್ರೋನ್​ ತಂದುಕೊಡಲಾಗಿದೆ. ಇದರಿಂದ ಪ್ರತಾಪ್​ ಸಕತ್​ ಖುಷಿಯಾಗಿದ್ದಾರೆ. ಅಷ್ಟೊತ್ತಿಗಾಗಲೇ ತುಕಾಲಿ ರಾಜ ಆಗುತ್ತಿದ್ದಂತೆಯೇ ಸೀರೆಯುಟ್ಟ ರಾಣಿಯ ಪ್ರವೇಶವಾಗಿದೆ. ಯಾರೋ ರಾಣಿ ಬರುತ್ತಿದ್ದಾಳೆ ಎಂದಿದ್ದಾರೆ. ಆಗ ರಾಣಿ ಬಂದೇ ಬಿಟ್ಟು ತುಕಾಲಿಯನ್ನು ಅಪ್ಪಿಕೊಂಡು ಕಿಸ್​ ಮಾಡಿಯೇ ಬಿಟ್ಟಿದ್ದಾಳೆ! ಅಷ್ಟಕ್ಕೂ ಈ ರಾಣಿ ಬೇರೆ ಯಾರೂ ಅಲ್ಲ. ಕಾರ್ತಿಕ್​!  ಹೌದು. ರಾಜನಂತೆ ಬದುಕುವ ಆಸೆ ಇದ್ದ ತುಕಾಲಿ ಪಿಲ್ಲೊವನ್ನು ತೆಗೆದುಕೊಂಡು  ಬೀಸು’ ಎಂದು ಕಾರ್ತಿಕ್‌ಗೆ ಅಪ್ಪಣೆ ಮಾಡುತ್ತಿದ್ದಂತೆಯೇ, ರಾಣಿ ಬಂದಿದ್ದಾಳೆ.  ಅಪ್ಪಣೆ ಮಾಡುವ ಮುನ್ನವೇ ತುಕಾಲಿ ಅವರಿಗೆ ಅವಸರವಸರವಾಗಿ ಕಿಸ್​ ಮಾಡಿ ಸುಸ್ತು ಮಾಡಿದ್ದಾಳೆ! ಕಾರ್ತಿಕ್​ ಈ ವೇಷ ನೋಡಿ ಅಲ್ಲಿದ್ದವರು ಬಿದ್ದೂ ಬಿದ್ದೂ ನಕ್ಕಿದ್ದಾರೆ.  ಎಷ್ಟು ಆತುರದಿಂದ ಕಾಯುತ್ತಿದ್ದೀಯಾ ಎಂದು ಈಗ ಗೊತ್ತಾಯ್ತು ಎಂದು ರಾಜ ತುಕಾಲಿ ಹೇಳಿದ್ದಾರೆ. 

ಒಂದೊಂದು ಫೋಟೋ ಒಂದೊಂದು ಕಥೆ... ಫಿನಾಲೆ ಸನೀಹದಲ್ಲಿಯೇ ಕಾರ್ತಿಕ್​ ಫೋಟೋಗಳು ಹೇಳ್ತಿರೋದೇನು?

Follow Us:
Download App:
  • android
  • ios