Asianet Suvarna News Asianet Suvarna News

ಒಂದೊಂದು ಫೋಟೋ ಒಂದೊಂದು ಕಥೆ... ಫಿನಾಲೆ ಸನೀಹದಲ್ಲಿಯೇ ಕಾರ್ತಿಕ್​ ಫೋಟೋಗಳು ಹೇಳ್ತಿರೋದೇನು?

ಬಿಗ್​ಬಾಸ್​ ಫಿನಾಲೆ ಸಮೀಪಿಸುತ್ತಿದ್ದಂತೆಯೇ ಕಾರ್ತಿಕ್​ ಫೋಟೋ ಕಲೆಕ್ಷನ್​ ತೋರಿಸಿ ಅನುಭವ ಹಂಚಿಕೊಂಡಿದ್ದಾರೆ. ಫೋಟೋಗಳು ಹೇಳ್ತಿರೋದೇನು? 
 

As the Bigg Boss finale approaches Karthik shares experience by showing  photos suc
Author
First Published Jan 25, 2024, 7:58 PM IST | Last Updated Jan 25, 2024, 7:58 PM IST

ಬಿಗ್​ಬಾಸ್​ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಫಿನಾಲೆ ಹತ್ತಿರವಾಗುತ್ತಿದ್ದಂತೆಯೇ,  ಮನೆಯೊಳಗಿನ ಸದಸ್ಯರ ನಡುವಿನ ಜಟಾಪಟಿಯೂ ಭರ್ಜರಿಯಾಗಿ ನಡೆಯುತ್ತಿದೆ.  ಮಾಡು ಇಲ್ಲವೇ ಮಡಿ ಹಂತದಲ್ಲಿ ಇದ್ದಾರೆ ಸ್ಪರ್ಧಿಗಳು. ಈ ಹಿನ್ನೆಲೆಯಲ್ಲಿ ಸಿಕ್ಕ ಅವಕಾಶವನ್ನು ತಮ್ಮ ಎದುರಾಳಿಗಳನ್ನು ಕುಗ್ಗಿಸುವುದಕ್ಕೆ, ಅಂತಿಮ ಸ್ಪರ್ಧೆಯ  ದಾರಿಯನ್ನು ಸುಗಮಗೊಳಿಸಿಕೊಳ್ಳುವುದನ್ನು ನೋಡುತ್ತಿದ್ದಾರೆ.  ಬಿಗ್​ಬಾಸ್​ ಮನೆಯಲ್ಲಿ ಸದ್ಯ ಆರು ಸ್ಪರ್ಧಿಗಳು ಇದ್ದು, ಅವರ ನಡುವೆ, ಕಿತ್ತಾಟ ಜೋರಾಗಿ ನಡೀತಿದೆ. ಈ ವಾರ ಮನೆಯಲ್ಲಿ ವಿನಯ್‌, ಸಂಗೀತಾ, ಪ್ರತಾಪ್‌, ಕಾರ್ತಿಕ್‌, ತುಕಾಲಿ ಸಂತೋಷ್‌, ವರ್ತೂರು ಸಂತೋಷ್‌ ಉಳಿದುಕೊಂಡಿದ್ದಾರೆ. ನಿನ್ನೆಯಷ್ಟೇ ಸಂಗೀತಾ ಶೃಂಗೇರಿಯನ್ನು ಶನಿ ಎಂದು ಕಾರ್ತಿಕ್​ ಹೇಳಿದ್ದರ ಬಗ್ಗೆ  ಬಹಳ ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಕಾರ್ತಿಕ್​ ಉಲ್ಟಾ ಹೊಡೆದಿದ್ದರು. ಕಿಚ್ಚನ ಪಂಚಾಯಿತಿಯಲ್ಲಿಯೂ  ಕಾರ್ತಿಕ್ ಮಾತಿಗೆ ಕಿಚ್ಚ ಗರಂ ಆಗಿದ್ದರು.  

ಇದರ ಬೆನ್ನಲ್ಲೇ ಬಿಗ್​ ಬಾಸ್​ ಸ್ಪರ್ಧಿಗಳು ಕನ್ನಡಿ ಮುಂದೆ ಕೂತು ತಮ್ಮನ್ನು ತಾವು ಮರಳಿ ಪಡೆದುಕೊಂಡರು.  ತಮ್ಮದೇ ಪ್ರತಿಬಿಂಬ ಕಂಡು ತಪ್ಪು–ಒಪ್ಪು, ಮನದಾಳದಲ್ಲಿ ಹುದುಗಿದ್ದ ನೋವು, ಇತರರಿಂದ ಹೇಳಿಸಿಕೊಂಡು ಅರಗಿಸಿಕೊಳ್ಳಲಾರದೆ ಉಳಿದುಕೊಡ ಮಾತುಗಳನ್ನು ಆಡಿಕೊಂಡಿದ್ದರು.  ‘ನನ್ನ ಕಾಣುವ ಹುಡುಕಾಟದಲ್ಲಿ ನನ್ನನ್ನು ಹುಡುಕಿಕೊಂಡಿರುವೆ. ಯಾರು ಜೊತೆಯಿಲ್ಲದಾಗ ನೀನಿದ್ದೆ’ ಎಂದು ಸಂಗೀತಾ ಹೇಳಿದ್ದರು. ನನ್ನಲ್ಲಿ ನಾನು ಏನನ್ನು ಹುಡುಕಿದ್ನೋ ಅದನ್ನು ನಾನು ಹುಡುಕಿಕೊಂಡಿದ್ದೇನೆ. ಬಿಗ್ ಬಾಸ್ ಮನೆಯಲ್ಲಿ ನನಗೆ ನನ್ನ ಪರಿಚಯ ಹೆಚ್ಚಾಗಿಯೇ ಆಗಿದೆ ಎಂದು ಕಣ್ಣೀರು ಹಾಕಿದ್ದರು. ಕನ್ನಡಿ ಎದುರು ಕುಳಿತ ಕಾರ್ತಿಕ್‌, ಸ್ನೇಹವನ್ನು ಬಳಸಿಕೊಳ್ಳುತ್ತೀಯಾ ಎನ್ನುವ ಆರೋಪ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.  ಡ್ರೋನ್ ಪ್ರತಾಪ್ ಕನ್ನಡಿ ಮುಂದೆ ಕುಳಿತು ನನ್ನನ್ನು ನಾನೇ ನೋಡಿಕೊಂಡಾಗ ಕೆಲವು ವಿಚಾರಗಳು ನನ್ನನ್ನು ಚುಚ್ಚುತ್ತಿದೆ ಎಂದರೆ, ವಿನಯ್, ಹಲೋ ಮಿಸ್ಟರ್ ವಿನಯ್ ಗೌಡ ಎಂದು ತನ್ನನ್ನು ತಾನೇ ಪರಿಚಯ ಮಾಡಿಕೊಂಡರು. ಈ ಸಂದರ್ಭದಲ್ಲಿ ಅವರು ಮೌನವಾಗಿದ್ದರು.

ಬಿಗ್​ಬಾಸ್​ ಸೀಸನ್​ 7 ಸ್ಪರ್ಧಿಗಳ ಸಮ್ಮಿಲನ ಮಾಡಿದ್ದಾರೆ ನಟಿ ಚೈತ್ರಾ ವಾಸುದೇವನ್!

ಇದೀಗ ಕಾರ್ತಿಕ್​ ಬಿಗ್​ಬಾಸ್​ ಮನೆಯ ಜರ್ನಿಯ ಫೋಟೋಗಳ ಕುರಿತು ಮಾಹಿತಿ ನೀಡಿರುವ ಪ್ರೊಮೋ ಅನ್ನು ಕಲರ್ಸ್​ ಕನ್ನಡ ಶೇರ್​ ಮಾಡಿಕೊಂಡಿದೆ. ನನಗೆ ಡೌಟ್​ ಇದ್ದಾಗ ಸಿರಿಯಕ್ಕ ಸಹಾಯ ಮಾಡ್ತಿದ್ರು, ಮನೆಯಲ್ಲಿ ಏನೇ ವಿಷಯ ಇದ್ದರೂ ಶೇರ್​ ಮಾಡಿಕೊಳ್ಳಲು ತನಿಷಾ ಇದ್ದಳು, ಯಾವತ್ತಿಗೂ ಬಿಟ್ಟುಕೊಡುತ್ತಿರಲಿಲ್ಲ, ವಿನಯ್​ ಅಷ್ಟೆಲ್ಲಾ ಟೆಸ್ಟ್​ ಮಾಡಿಲ್ಲ ಅಂದಿದ್ರೆ ನನ್ನೊಳಗೆ ಇರುವ ಪೇಷನ್ಸ್​ ಗೊತ್ತಾಗುತ್ತಿರಲಿಲ್ಲ. ಇಷ್ಟೆಲ್ಲಾ ಜಗಳವಾದ್ರೂ ಕೊನೆಗೂ ಇವತ್ತಿಗೂ ಒಟ್ಟಿಗೇ ಇದ್ದೇವೆ ಎನ್ನುವುದಕ್ಕೆ ಇದೊಂದೇ ಫೋಟೋ ಸಾಕ್ಷಿ ಎನ್ನುತ್ತಲೇ ಕಾರ್ತಿಕ್​ ಹಲವಾರು ಫೋಟೋಗಳನ್ನು ತೋರಿಸಿದರು. ಅದರಲ್ಲಿ ಇಬ್ಬರೂ ನಾಟು ನಾಟುಗೆ ಸ್ಟೆಪ್​ ಹಾಕಿದ್ದಾರೆ. 

ಹೀಗೆ ಒಂದೊಂದು ಫೋಟೋಗಳಲ್ಲಿ ಒಂದೊಂದು ಕಥೆಯಿದ್ದು, ಅವುಗಳನ್ನು ಬಣ್ಣಿಸಿದ್ದಾರೆ. ಇವುಗಳ ಪೈಕಿ ನಿಮ್ಮ ಇಷ್ಟದ ಫೋಟೋ ಯಾವುದು ಎನ್ನುವ ಪ್ರೊಮೋ ಒಂದನ್ನು ಕಲರ್ಸ್​ ಕನ್ನಡ ವಾಹಿನಿ ಶೇರ್​ ಮಾಡಿಕೊಂಡು ಪ್ರಶ್ನಿಸಿದೆ. ಎಲ್ಲಾ ಫೋಟೋ ನೋಡಿದ ಮೇಲೆ ನಿಮ್ಮ ಅನಿಸಿಕೆ ಹೇಳುವಂತೆ  ಕೇಳಿದೆ. 

ಹೇಳಿಕೆ ತಿರುಚಲಾಗುತ್ತಿದೆ ಎನ್ನುತ್ತಲೇ ಗುಡ್‌ ನ್ಯೂಸ್‌ ಕೊಟ್ಟ ಬಿಗ್‌ಬಾಸ್‌ ಬುಲೆಟ್‌ ರಕ್ಷಕ್‌

Latest Videos
Follow Us:
Download App:
  • android
  • ios