Asianet Suvarna News Asianet Suvarna News

ಇದು ಎಲೆಕ್ಷನ್ ಕುರ್ಚಿಯಲ್ಲ, ಸೆಲೆಕ್ಷನ್ ಕುರ್ಚಿ; ವೀಕೆಂಡ್ ಕುರ್ಚಿ ಬಗ್ಗೆ ರಮೇಶ್ ಅರವಿಂದ್ ಹೀಗಂದಿದ್ದೇಕೆ?

ವೀಕೆಂಡ್ ವಿತ್ ರಮೇಶ್ ಕುರ್ಚಿ ಬಗ್ಗೆ ರಮೇಶ್ ಅರವಿಂದ್ ಇದು ಎಲೆಕ್ಷನ್ ಕುರ್ಚಿಯಲ್ಲ, ಸೆಲೆಕ್ಷನ್ ಕುರ್ಚಿ ಎಂದು ಹೇಳಿದ್ದಾರೆ. 

Ramesh Aravind Says this is not Election Chair, selection Chair About Weekend with Ramesh chair sgk
Author
First Published Apr 5, 2023, 3:49 PM IST

ವೀಕೆಂಡ್ ವಿತ್ ರಮೇಶ್ ಸೀಸನ್ 5 ಯಶಸ್ವಿಯಾಗಿ ನಡೆಯುತ್ತಿದೆ. ಈಗಾಗಲೇ ಇಬ್ಬರು ಅತಿಥಿಗಳು ವೀಕೆಂಡ್ ಕುರ್ಚಿ ಏರಿದ್ದಾರೆ. ಮೊದಲ ಅತಿಥಿಯಾಗಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಕಾಣಿಸಿಕೊಂಡಿದ್ದರು. ಎರಡನೇ ಅತಿಥಿ ಖ್ಯಾತ ಡಾನ್ಸರ್, ನೃತ್ಯ ನಿರ್ದೇಶಕ, ನಿರ್ದೇಶಕ, ನಟ ಪ್ರಭುದೇವ ಕಾಣಿಸಿಕೊಂಡಿದ್ದರು. 3ನೇ ವಾರದ ಅತಿಥಿ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಇದೀಗ ಆ ಕುತೂಹಲಕ್ಕೂ ತೆರೆ ಬಿದ್ದಿದೆ. ಈ ವಾರ ವಿಶೇಷ ಎಂದರೆ ಇಬ್ಬರೂ ಅತಿಥಿಗಳು ವೀಕೆಂಡ್ ಕುರ್ಚಿ ಏರಿದ್ದಾರೆ. ಒಬ್ಬರು ವೈದ್ಯ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿರುವ ಡಾ.ಸಿ.ಎನ್. ಮಂಜುನಾಥ್ ಮತ್ತೊಬ್ಬರು ಹಿರಿಯ ನಟ ದತ್ತಣ್ಣ.

ದತ್ತಣ್ಣ ಮತ್ತು ಡಾ.ಮಂಜುನಾಥ್ ಅವರ ಸಂಚಿಕೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಇವರಿಬ್ಬರ ಸಾಧಕರ ಪ್ರೋಮೋ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದತ್ತಣ್ಣ ಎಂಟ್ರಿ ಕೂಡ ಕುತೂಹಲ ಮೂಡಿಸಿದೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಎಂಟ್ರಿ ದತ್ತಣ್ಣ ವೀಕೆಂಡ್ ಕುರ್ಚಿಯನ್ನು ಮುಟ್ಟಿ ಗಟ್ಟಿಯಾಗಿದಿಯಾ ಎಂದು ಪರೀಕ್ಷಿಸುತ್ತಾರೆ. ಕುಳಿತುಕೊಳ್ಳುವ ಮೊದಲು ಕುರ್ಚಿ ಗಟ್ಟಿಯಾಗಿದೆಯಾ ನೋಡಬೇಕು ಇಲ್ಲ ಅಂದರೆ ಬೀಳಿಸ್ತಾರೆ ಎಂದು ಹೇಳುತ್ತಾ ವೀಕೆಂಡ್ ಕುರ್ಚಿ ಏರುತ್ತಾರೆ. 

ದತ್ತಣ್ಣ ಮಾತಿಗೆ ರಮೇಶ್ ತಕ್ಷಣ, 'ಇದು ಎಲೆಕ್ಷನ್ ಕುರ್ಚಿಯಲ್ಲ ಸೆಲೆಕ್ಷನ್ ಕುರ್ಚಿ' ಎಂದು ಹೇಳಿದರು. ರಮೇಶ್ ಅವರ ಈ ಮಾತು ಅಭಿಮಾನಿಗಳ ಮೆಚ್ಚುಗೆ ಪಾತ್ರವಾಗಿದೆ. ಅಭಿಮಾನಿಗಳು ಕಾಮೆಂಟ್ ಮಾಡಿ ರಮೇಶ್ ಅರವಿಂದ್ ಅವರನ್ನು ಹೊಗಳುತ್ತಿದ್ದಾರೆ. ಅಭಿಮಾನಿಯೊಬ್ಬ ಕಾಮೆಂಟ್ ನೀವು ಹೇಳುವ ಒಂದೊಂದು ಮಾತಿನಲ್ಲೂ ಎಷ್ಟು ಅರ್ಥವಿದೆ ಎಂದು ಹೇಳಿದ್ದಾರೆ.

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

ಈ ವಾರದ 'ವೀಕೆಂಡ್‌ ವಿತ್ ರಮೇಶ್‌'ನಲ್ಲಿ ಇಬ್ಬರು ಸಾಧಕರು; ಒಬ್ಬರು ವೈದ್ಯರಾದ್ರೆ ಮತ್ತೊಬ್ಬರು ಹಿರಿಯ ನಟ

ದತ್ತಣ್ಣ ಬಗ್ಗೆ 

80 ವರ್ಷದ ನಟ ದತ್ತಣ್ಣ ಸಿನಿಮಾ ನಟರಾಗುವ ಮೊದಲು ಏರ್ ಫೋರ್ಸ್‌ನಲ್ಲಿ ಕೆಲಸ ಮಾಡಿದ್ದರು. ಆರಂಭಿಕ ದಿನಗಳಿಂದನೂ ನಟನೆಯಲ್ಲಿ ಆಪರ ಆಸಕ್ತಿ ಹೊಂದಿದ್ದ ದತ್ತಣ್ಣ ಅನೇಕ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. 1988ರಲ್ಲಿ ಮೊದಲ ಬಾರಿಗೆ ಸಿನಿಮಾದಲ್ಲಿ ಮಿಂಚಿದರು. ಟಿಎಸ್ ನಾಗಾಭರಣ ಅವರ ಆಸ್ಪೋಟ ಸಿನಿಮಾದಲ್ಲಿ ಕಾಣಿಸಿಕೊಂಡರು. ಮೊದಲ ಸಿನಿಮಾಗೆ ರಾಜ್ಯ ಪ್ರಶಸ್ತಿ ಗೆದ್ದುಕೊಂಡರು. ಅಲ್ಲಿಂದ ಪ್ರಾರಂಭವಾದ ಸಿನಿಮಾ ಜರ್ನಿ ಇಂದಿಗೂ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಕನ್ನಡದ ಜೊತೆಗೆ ದತ್ತಣ್ಣ ಹಿಂದಿಯಲ್ಲೂ ನಟಿಸಿದ್ದಾರೆ. ಕನ್ನಡ ಸಿನಿಮಾರಂಗಕ್ಕೆ ಅಪಾರ ಕೊಡುಗೆ ನೀಡಿರುವ ದತ್ತಣ್ಣ ಅವರನ್ನು ಸಾಧಕರ ಕುರ್ಚಿಯಲ್ಲಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. 

ಪುಣ್ಯಾತ್ಮ, ಕನ್ನಡಿಗರ ಹೆಮ್ಮೆ, ಸೂಪರ್ ಗೆಸ್ಟ್: ವೀಕೆಂಡ್ ಕುರ್ಚಿಯಲ್ಲಿ ಡಾ. ಸಿ ಎನ್ ಮಂಜುನಾಥ್

ಖ್ಯಾತ ವೈದ್ಯ ಡಾ.ಸಿ ಎನ್ ಮಂಜುನಾಥ್ 

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ನಿರ್ದೇಶಕರಾಗಿರುವ ಡಾ.ಸಿ.ಎನ್. ಮಂಜುನಾಥ್ ಮಾಜಿ ಪ್ರಧಾನಿ ದೇವೇಗೌಡರ ಅಳಿಯ.  ಇವರು ತಮ್ಮ ವ್ಯಕ್ತಿತ್ವ, ಕೆಲಸ, ಶಿಸ್ತು, ಸೂಕ್ತ ನಿರ್ದೇಶನ, ಮಾರ್ಗದರ್ಶನ ಸೇರಿದಂತೆ ಉತ್ತಮ ಗುಣಗಳಿಂದ ಗುರುತಿಸಿಕೊಂಡಿರುವ ನೆಚ್ಚಿನ ನಿರ್ದೇಶಕರು. ವೈದ್ಯಕೀಯ ಕ್ಷೇತ್ರಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ವೀಕೆಂಡ್ ವಿತ್ ಕಾರ್ಯಕ್ರಮಕ್ಕೆ ಕೇವಲ ಸಿನಿಮಾ ಸಾಧಕರನ್ನು ಮಾತ್ರ ಕರೆತಾರುತ್ತಾರೆ, ಕನ್ನಡ ಮಾತಾಡೋಕ್ಕೆ ಬರದೇ ಇರುವವರನ್ನು ಕರೆತರುತ್ತೀರಾ ಎಂದು ಪ್ರೇಕ್ಷಕರು ಬೇಸರ ಹೊರಹಾಕುತ್ತಿದ್ದರು. ಆದರೆ ಈಗ ವೀಕೆಂಡ್ ಕುರ್ಚಿಯಲ್ಲಿ ಡಾ.ಸಿ ಎನ್ ಮಂಜುನಾಥ್ ಮತ್ತು ದತ್ತಣ್ಣ ಅವರನ್ನು ನೋಡಿ ಪ್ರೇಕ್ಷಕರು ಫುಲ್ ಖುಷ್ ಆಗಿದ್ದಾರೆ. 

Follow Us:
Download App:
  • android
  • ios