Asianet Suvarna News Asianet Suvarna News

ಡಿಡಿಯಲ್ಲಿ ಮತ್ತೆ ಪ್ರಸಾರವಾಗಲಿದೆ ರಮಾನಂದ್‌ ಸಾಗರ್‌ 'ರಾಮಾಯಣ'!

ರಮಾನಂದ್ ಸಾಗರ್ ಅವರ ನಿರ್ದೇಶನದ ದೈವಿಕ ಕಥೆ ರಾಮಾಯಣ ಇಷ್ಟು ವರ್ಷಗಳ ನಂತರವೂ ಜನರ ಮೆಚ್ಚಿನ ಧಾರಾವಾಹಿಯಾಗಿ ಉಳಿದಿದೆ. ಈ ಕಾರ್ಯಕ್ರಮವನ್ನು ಮತ್ತೆ ಪ್ರಸಾರ ಮಾಡಲು ಸಾಕಷ್ಟು ಬೇಡಿಕೆ ಇದೆ. ಇದೇ ವೇಳೆ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಬಂದಿದೆ.
 

Ramayan To Return To Doordarshan Post Ram Mandir Pran Pratishtha san
Author
First Published Jan 31, 2024, 6:23 PM IST | Last Updated Jan 31, 2024, 7:22 PM IST

ಬೆಂಗಳೂರು (ಜ.31): ಪೌರಾಣಿಕ ಟಿವಿ ಸೀರಿಯಲ್‌ಗಳ ಪೈಕಿ, ರಾಮಾಯಣ ಹಾಗೂ ಮಹಾಭಾರತದ ಕಥೆಯನ್ನು ಒಳಗೊಂಡ ಸಾಕಷ್ಟು ಧಾರಾವಾಹಿಗಳು ಪ್ರಸಾರವಾಗಿದೆ. ಆದರೆ, ಈ ಎಲ್ಲಾ ಧಾರವಾಹಿಗಳ ಪೈಕಿ ಪ್ರಮುಖವಾಗಿ ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿರುವುದು ರಮಾನಂದ್‌ ಸಾಗರ್‌ ಅವರ ನಿರ್ದೇಶನದ ರಾಮಾಣ. ಈ ಮೆಗಾ ಧಾರಾವಾಹಿಯಲ್ಲಿ ನಟಿಸಿದ್ದ ಅರುಣ್‌ ಗೋವಿಲ್‌, ದೀಪಿಕಾ ಚಿಕಾಲಿಯಾ ಹಾಗೂ ಸುನೀಲ್‌ ಲೆಹ್ರಿ ಅವರನ್ನು ಇಂದಿಗೂ ಜನರು ರಾಮ, ಸೀತೆ ಹಾಗೂ ಲಕ್ಷ್ಮಣರಾಗಿ ಗುರುತಿಸುತ್ತಾರೆ. ಇತ್ತೀಚೆಗೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೂ ಈ ಮೂವರಿಗೆ ಟ್ರಸ್ಟ್‌ ಅಧಿಕೃತ ಆಹ್ವಾನ ನೀಡಿತ್ತು. ದೇಶದಲ್ಲಿ ಶ್ರೀರಾಮನ ಬಗ್ಗೆ ಸೆಳೆತ ಹೆಚ್ಚಾಗಿರುವ ಹೊತ್ತಿನಲ್ಲಿ ದೇಶದ ಸರ್ಕಾರಿ ಟಿವಿ ದೂರದರ್ಶನ, ಮತ್ತೊಮ್ಮೆ ರಮಾನಂದ್‌ ಸಾಗರ್‌ ಅವರ ದೂರದರ್ಶನವನ್ನು ಪ್ರಸಾರ ಮಾಡುವುದಾಗಿ ತಿಳಿಸಿದೆ.

1987ರಲ್ಲಿ ಪ್ರಸಾರ ಆರಂಭಿಸಿದ್ದ ರಮಾನಂದ ಸಾಗರ್‌ ಅವರ ರಾಮಾಯಣ, ಪ್ರಸಾರ ಆರಂಭಿಸಿದ ಕೆಲವೇ ಹೊತ್ತಿನಲ್ಲಿ ದೇಶಾದ್ಯಂತ ಪ್ರಸಿದ್ಧವಾಗಿತ್ತು. ಆ ನಂತರ ತ್ರೇತಾಯುಗಕ್ಕೆ ಸಂಬಂಧ ಪಟ್ಟ ಈ ಕಥೆಯನ್ನು ಮೂಲವಾಗಿಟ್ಟುಕೊಂಡ ಹಲವಾರು ಕಾರ್ಯಕ್ರಮಗಳು ಬಂದರೂ, ಯಾವುದೂ ಕೂಡ ರಮಾನಂದ ಸಾಗರ್‌ ಅವರ ರಾಮಾಯಣದಷ್ಟು ಪ್ರಸಿದ್ಧಿ ಹಾಗೂ ಪ್ರಖ್ಯಾತಿಯನ್ನು ಪಡೆದುಕೊಂಡಿರಲಿಲ್ಲ. ಪ್ರೇಕ್ಷಕರು ಕೂಡ ಅದೆಷ್ಟು ಬಾರಿ ರಾಮಾಯಣವನ್ನು ಪ್ರಸಾರ ಮಾಡಿದರೂ ನೋಡುವ ಉತ್ಸಾಹವನ್ನು ತೋರಿಸಿದ್ದಾರೆ. ಇದರ ನಡುವೆ ದೂರದರ್ಶನ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದೆ. ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯ ಬಳಿಕ ಭಾರತದ ಪ್ರೇಕ್ಷಕರು ಮತ್ತೊಮ್ಮೆ ಈ ಪೌರಾಣಿಕ ದೃಶ್ಯಕಾವ್ಯವನ್ನು ಟಿವಿಯಲ್ಲಿ ನೋಡಲು ಉತ್ಸುಕರಾಗಿದ್ದಾರೆ.

ದೂರದರ್ಶನ ಈ ಕುರಿತಾಗಿ ತನ್ನ ಟ್ವಿಟರ್‌ನಲ್ಲಿ ಮಾಹಿತಿ ನೀಡಿದೆ. ಕಿರುತೆರೆಯಲ್ಲಿ ರಾಮಾಯಣ ಮತ್ತೊಮ್ಮೆ ಮರಳಲಿದೆ ಎಂದು ತಿಳಿಸಿದೆ. 'ಧರ್ಮ, ಪ್ರೀತಿ, ಮತ್ತು ಸಮರ್ಪಣಾ ಭಾವದ ಅನನ್ಯ ಸಾಹಸಗಾಥೆ... ಮತ್ತೊಮ್ಮೆ ಇಡೀ ಭಾರತದ ಅತ್ಯಂತ ಜನಪ್ರಿಯ ಕಾರ್ಯಕ್ರಮ 'ರಾಮಾಯಣ' ಬರಲಿದೆ, ಶೀಘ್ರದಲ್ಲೇ ಡಿಡಿ ನ್ಯಾಷನಲ್‌ನಲ್ಲಿ ವೀಕ್ಷಿಸಿ,' ಎಂದು ಟ್ವೀಟ್ ಮಾಡಿದೆ. ಆದರೆ, ಕಾರ್ಯಕ್ರಮದ ಪ್ರಸಾರದ ದಿನಾಂಕವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

Ramayana: ಯಶ್ 'ರಾಮಾಯಣ'ದ ಬಗ್ಗೆ ಬಂತು ಮತ್ತೊಂದು ಸುದ್ದಿ..! ತಮ್ಮನಾಗಿ ಅಭಿನಯಿಸುತ್ತಾರ ವಿಜಯ್ ಸೇತುಪತಿ..?

ಅಧಿಕೃತ ಪೋಸ್ಟ್‌ ಬಂದ ಬೆನ್ನಲ್ಲಿಯೇ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಹೆಚ್ಚಿನವರು ಕಾಮೆಂಟ್‌ ಸೆಕ್ಷನ್‌ನಲ್ಲಿ ಜೈ ಶ್ರೀರಾಮ್‌ ಎಂದು ಬರೆದಿದ್ದಾರೆ. ರಾಮಾಯಣದೊಂದಿಗೆ ಶ್ರೀಕೃಷ್ಣನ ಕುರಿತಾದ ಟಿವಿ ಶೋಅನ್ನು ಮರಳಿ ಪ್ರಸಾರ ಮಾಡುವಂತೆ ಮನವಿ ಮಾಡಿದ್ದಾರೆ.ಈ ಎರಡೂ ಟಿವಿ ಶೋಗಳು ಕೋವಿಡ್‌ ಸಮಯದಲ್ಲಿ ಪ್ರಸಾರವಾಗಿದ್ದವು. ಅರುಣ್‌ ಗೋವಿಲ್‌, ದೀಪಿಕಾ ಚಿಕಾಲಿಯಾ ಅವರು ಭಗವಾನ್‌ ರಾಮ ಹಾಗೂ ಸೀತಾ ಮಾತೆಯ ರೂಪದಲ್ಲಿ ನೋಡುವುದನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಸೀತಾ ಮಾತೆಯ ಈ ಗುಣಗಳೂ ಪತ್ನಿಯಲ್ಲೂ ಇರಬೇಕೆಂದು ಬಯಸ್ತಾರೆ ಪುರುಷರು

Latest Videos
Follow Us:
Download App:
  • android
  • ios